UGADI 2026 STATUS

Ugadi Wishes 2026: ಆಪ್ತರಿಗೆ ವಿಶ್ ಮಾಡೋಕೆ 25+ ಯುಗಾದಿ ಹಬ್ಬದ ಸ್ಟೇಟಸ್, ಮೆಸೇಜ್, ಶುಭಾಶಯದ ಸಾಲುಗಳು

Categories:
WhatsApp Group Telegram Group

ಮುಖ್ಯಾಂಶಗಳು (Highlights)

  • 2026ರ ಹೊಸ ಯುಗಾದಿ ವಾಟ್ಸಾಪ್ ಸ್ಟೇಟಸ್ ಮತ್ತು ಮೆಸೇಜ್‌ಗಳು.
  • ಸ್ನೇಹಿತರು, ಕುಟುಂಬಸ್ಥರಿಗೆ ಕಳುಹಿಸಲು ಟಾಪ್ 25 ಶುಭಾಶಯಗಳು.
  • ಕಾಪಿ-ಪೇಸ್ಟ್ ಮಾಡಲು ಸುಲಭವಾದ ಅರ್ಥಗರ್ಭಿತ ಕನ್ನಡ ಸಾಲುಗಳು.

ಯುಗಾದಿ ಹಬ್ಬ ಹತ್ತಿರ ಬರ್ತಿದ್ದ ಹಾಗೆ, ವಾಟ್ಸಾಪ್‌ನಲ್ಲಿ ಎಲ್ಲರಿಗಿಂತ ಮೊದಲು ವಿಶ್ ಮಾಡಬೇಕು ಅಂತ ಕಾಯ್ತಿದ್ದೀರಾ? ಹಬ್ಬದ ದಿನ ಬೆಳಗ್ಗೆ ಎದ್ದು ಬರೀ ‘ಹ್ಯಾಪಿ ಯುಗಾದಿ’ ಅಂತ ಎರಡೇ ಪದ ಕಳಿಸಿದ್ರೆ ಮಜಾ ಇರಲ್ಲ ಅಲ್ವಾ? ಅದಕ್ಕಾಗಿಯೇ, ಈ ಹೊಸ ವರ್ಷ ನಿಮ್ಮ ಸ್ನೇಹಿತರು, ಸಂಬಂಧಿಕರು ಹಾಗೂ ಪ್ರೀತಿಪಾತ್ರರ ಮುಖದಲ್ಲಿ ನಗು ತರಿಸುವಂತಹ ಅರ್ಥಗರ್ಭಿತ ಶುಭಾಶಯಗಳ (Ugadi Wishes in Kannada) ಲಿಸ್ಟ್ ಅನ್ನು ನಾವಿಲ್ಲಿ ಕೊಟ್ಟಿದ್ದೇವೆ.

ಬೆಲ್ಲದ ಸಿಹಿ, ಬೇವಿನ ಕಹಿಯ ಜೊತೆಗೆ, ಈ ಸುಂದರ ಸಾಲುಗಳನ್ನು ನಿಮ್ಮವರಿಗಾಗಿ ಶೇರ್ ಮಾಡಿ ಹಬ್ಬದ ಸಂಭ್ರಮವನ್ನು ಇಮ್ಮಡಿಗೊಳಿಸಿ.

ವಾಟ್ಸಾಪ್ ಸ್ಟೇಟಸ್‌ಗೆ ಹೇಳಿಮಾಡಿಸಿದ ಸಾಲುಗಳು

  • ಯುಗಾದಿ ಸಂಭ್ರಮದಲ್ಲಿ ನಿಮ್ಮ ಜೀವನದಲ್ಲಿ ಬೇವು ಕಡಿಮೆಯಾಗಿ ಬೆಲ್ಲ ಜಾಸ್ತಿ ಆಗಲಿ, ನಿಮ್ಮೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು.
  • ಹೊಸ ಭರವಸೆಯೊಂದಿಗೆ ನಿಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭವಾಗಲಿ, ಹ್ಯಾಪಿ ಯುಗಾದಿ.
  • ಬೆಲ್ಲದೊಂದಿಗೆ ಬೇವು ಬೆರೆತಂತೆ ಕಹಿ – ಸಿಹಿ ಸಮಾನವಾಗಿ ಸ್ವೀಕರಿಸುವ ಧೈರ್ಯ ನಿಮ್ಮದಾಗಲಿ.
  • ಈ ಯುಗಾದಿಯು 2026ನೇ ವರ್ಷ ಪೂರ್ತಿ ಸಂತೋಷ, ಆರೋಗ್ಯ, ಸಂಪತ್ತು ಮತ್ತು ಅದೃಷ್ಟವನ್ನು ತರಲಿ.

ಸ್ನೇಹಿತರು ಮತ್ತು ಕುಟುಂಬದವರಿಗೆ ಕಳುಹಿಸಲು

  1. ಜೀವನದ ಎಲ್ಲ ಕಹಿಗಳು ಸರಿದು, ಬೆಲ್ಲದಂತಹ ಸಿಹಿ ನಿಮ್ಮ ಬಾಳಲ್ಲಿ ಮೂಡಲಿ.
  2. ನಿಮ್ಮ ಜೀವನದಲ್ಲಿನ ಸವಾಲುಗಳು ಹಾಗೂ ಕಷ್ಟಗಳನ್ನು ಮೆಟ್ಟಿ ನಿಲ್ಲುವ ಧೈರ್ಯ ನಿಮ್ಮದಾಗಲಿ.
  3. ದೇವರು ನಿಮಗೆ ಮತ್ತು ನಿಮ್ಮ ಕುಟುಂಬದವರಿಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಯುಗಾದಿ ಹಬ್ಬದ ಶುಭಾಶಯಗಳು.
  4. ಹೊಸ ಹೂವು, ಹೊಸ ಚಿಗುರು, ಹೊಸ ಸಂಭ್ರಮ ನಿಮ್ಮ ಬಾಳಿನಲ್ಲೂ ಪ್ರಕೃತಿಯಂತೆ ಹೊಸ ಚೈತನ್ಯ ಮೂಡಲಿ.
  5. ಮತ್ತೆ ಬಂದಿದೆ ಯುಗಾದಿ, ತಂದಿದೆ ಹೊಸ ಭರವಸೆಯ ಹಾದಿ. ಈ ಪರಾಭವ ಸಂವತ್ಸರ ನಿಮ್ಮ ಜೀವನಕ್ಕೆ ಭದ್ರ ಬುನಾದಿ ಹಾಕಲಿ. 2026ರ ಯುಗಾದಿ ಹಬ್ಬದ ಶುಭಾಶಯಗಳು!
  6. ಬೇವು-ಬೆಲ್ಲದ ಸಮ್ಮಿಲನದಂತೆ, ಕಷ್ಟ-ಸುಖಗಳನ್ನು ಸಮಾನವಾಗಿ ಸ್ವೀಕರಿಸುವ ಮನಸ್ಥಿತಿ ನಿಮ್ಮದಾಗಲಿ. ಈ 2026ರ ಯುಗಾದಿ ನಿಮ್ಮ ಬಾಳಲ್ಲಿ ಸಿಹಿಯನ್ನೇ ಹೆಚ್ಚು ತರಲಿ!
  7. ಈ ಹೊಸ ವರ್ಷದಲ್ಲಿ ನಿಮ್ಮ ಬದುಕಿನ ಕಷ್ಟಗಳೆಲ್ಲ ಕರಗಿ, ನಗುವಿನ ಕಾರಂಜಿ ಸದಾ ಚಿಮ್ಮುತ್ತಿರಲಿ. ಹ್ಯಾಪಿ ಯುಗಾದಿ 2026.
  8. ನಾಡಿನ ಸಮಸ್ತ ಜನತೆಗೆ ‘ಪರಾಭವ ನಾಮ ಸಂವತ್ಸರ’ದ ಭಕ್ತಿಪೂರ್ವಕ ಶುಭಾಶಯಗಳು. ಈ ಹೊಸ ವರ್ಷ ಎಲ್ಲರಿಗೂ ಆಯುರಾರೋಗ್ಯ ಮತ್ತು ಒಳಿತನ್ನು ಮಾಡಲಿ.
  9. ನಿಮ್ಮ ಜೀವನದ ನೋವು-ನಲಿವುಗಳನ್ನು ಸಮನಾಗಿ ತೂಗುವ ಶಕ್ತಿ ದೇವರು ನಿಮಗೆ ಕರುಣಿಸಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  10. ಬದುಕಿನ ಹೊಸ ಪುಟ ತೆರೆಯುವ ಈ ಶುಭ ಗಳಿಗೆಯಲ್ಲಿ, ನಿಮ್ಮೆಲ್ಲಾ ಕನಸುಗಳು ನನಸಾಗಲಿ. 2026ರ ಯುಗಾದಿ ನಿಮ್ಮ ಪಾಲಿಗೆ ಅದೃಷ್ಟ ತರಲಿ!
  11. ಹಳೆಯ ಕಹಿ ನೆನಪುಗಳು ಮರೆಯಾಗಲಿ, ಹೊಸ ವರ್ಷದ ಸಿಹಿ ನಿರೀಕ್ಷೆಗಳು ಚಿಗುರೊಡೆಯಲಿ. ಎಲ್ಲರಿಗೂ ಯುಗಾದಿಯ ಶುಭಾಶಯಗಳು.
  12. ಪ್ರಕೃತಿಯೇ ಹೊಸ ರೂಪ ತಾಳುವ ಈ ಹೊತ್ತಿನಲ್ಲಿ, ನಿಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಹೊಸ ಚೈತನ್ಯ ಮೂಡಲಿ.
  13. ಬೇವು ಕಹಿಯಾದರೂ ಆರೋಗ್ಯಕ್ಕೆ ಮದ್ದು, ಬೆಲ್ಲ ಸಿಹಿಯಾದರೂ ಮಿತಿಯಲ್ಲಿರಬೇಕು; ಇದೇ ಬದುಕಿನ ಸತ್ಯ. ಹ್ಯಾಪಿ ಯುಗಾದಿ.
  14. ನಿಮ್ಮೆಲ್ಲಾ ಅಡೆತಡೆಗಳು ದೂರವಾಗಿ, ಯಶಸ್ಸಿನ ಬಾಗಿಲು ತೆರೆಯುವಂತಾಗಲಿ. 2026ರ ಯುಗಾದಿ ಹಬ್ಬದ ಶುಭಾಶಯಗಳು.
  15. ಕಷ್ಟಗಳಿಗೆ ಕುಗ್ಗದೆ, ಸುಖಗಳಿಗೆ ಹಿಗ್ಗದೆ ಮುನ್ನಡೆಯುವ ದಾರಿದೀಪವಾಗಲಿ ಈ ಯುಗಾದಿ.
  16.  ನಿಮ್ಮ ಬದುಕಿನಿಂದ ಕಹಿಯೆಂಬ ಕಷ್ಟಗಳೆಲ್ಲಾ ದೂರಾಗಲಿ..
    ಬರೀ ಖುಷಿಯ ಸಿಹಿಯಷ್ಟೇ ತುಂಬಿರಲಿ.. 2025ರ ಯುಗಾದಿ ಹಬ್ಬದ ಶುಭಾಶಯಗಳು
  17. .ಸರ್ವರಿಗೂ ಹಿಂದೂಗಳ ಹೊಸ ವರ್ಷ ಯುಗಾದಿ ಹಬ್ಬದ ಶುಭಾಶಯಗಳು.
  18. ಯುಗಾದಿಯಿಂದ ಆರಂಭವಾಗುವ ಹಿಂದೂ ಹೊಸ ವರ್ಷ ನಿಮ್ಮೆಲ್ಲಾ ಕನಸುಗಳನ್ನು ನನಸು ಮಾಡಲಿ.
  19. ನಿಮಗೆ ಸಕಲ ಶಕ್ತಿ, ಐಶ್ವರ್ಯ, ಸಂಪತ್ತು, ಸಮೃದ್ಧಿ ನೀಡಿ ಆಶೀರ್ವದಿಸಲಿ.. ಯುಗಾದಿ 2026ರ ಶುಭಾಶಯಗಳು.
  20. 2026ರ ಈ ಯುಗಾದಿ ನಿಮ್ಮ ಬಾಳಲ್ಲಿ ಸಂತೋಷ, ಸಮೃದ್ಧಿ ಮತ್ತು ಸುಖವನ್ನು ತರಲಿ.. ಯುಗಾದಿಯ ಶುಭಾಶಯಗಳು.
  21. ಬದುಕಿನಲ್ಲಿ ಸಿಹಿ – ಕಹಿಯನ್ನು ಸಮನಾಗಿ ಸ್ವೀಕರಿಸಬೇಕು ಎಂದು ಸಾರುವ ಹಬ್ಬವೇ ಯುಗಾದಿ.. ಯುಗಾದಿ 2026ರ ಶುಭಾಶಯಗಳು.
  22. ತೊಲಗಲಿ ದುಃಖ.. ತೊಲಗಲಿ ಮತ್ಸರ
    ಪ್ರೀತಿಗೆ ಮೀಸಲು ಈ ನವ ಸಂವತ್ಸರ
    ಯುಗಾದಿ 2026ರ ಶುಭಾಶಯಗಳು.
  23. ಹೊಸ ವರ್ಷವು ನಿಮಗೆ ಹೊಸ ಅವಕಾಶಗಳು ಮತ್ತು ಅಂತ್ಯವಿಲ್ಲದ ಆಶೀರ್ವಾದಗಳನ್ನು ತರಲಿ. ಯುಗಾದಿಯ ಶುಭಾಶಯಗಳು.
  24. ಯುಗಾದಿಯ ದೈವಿಕ ಆಶೀರ್ವಾದಗಳು ವರ್ಷವಿಡೀ ನಿಮಗೆ ಶಾಂತಿ ಮತ್ತು ಸಂತೋಷವನ್ನು ತರಲಿ.
  25. ದೇವರು ನಿಮಗೆ ಆಯುರಾರೋಗ್ಯ, ಸಂಪತ್ತು, ಶಾಂತಿ, ಸಮೃದ್ಧಿ ಕರುಣಿಸಲಿ. ಈ ಹೊಸ ವರ್ಷ ಸಂತೋಷದ ಹೊನಲಾಗಲಿ. ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
  26. ನಿಮ್ಮ ಬಾಳಲ್ಲಿ ಬೇವಿನ ಕಹಿಗಿಂತ ಬೆಲ್ಲದ ಸಿಹಿಯೇ ಹೆಚ್ಚಿರಲಿ. ಸುಖ, ಸಮೃದ್ಧಿ, ಶಾಂತಿ, ಸೌಹಾರ್ದತೆ ನಿಮ್ಮ ಜೀವನದಲ್ಲಿ ಹಾಲಿನಂತೆ ಉಕ್ಕಲಿ. ಯುಗಾದಿ ಹಬ್ಬದ ಶುಭಾಶಯಗಳು.
  27. ಯುಗಾದಿಯು ನಿಮಗೂ ನಿಮ್ಮ ಕುಟುಂಬಕ್ಕೂ ಮಂಗಳಕರವಾಗಿರಲಿ. ಹೊಸ ಸಂವತ್ಸರ ನಿಮ್ಮ ಜೀವನದಲ್ಲಿ ಹೊಸ ಹುರುಪು, ಹೊಸ ಭರವಸೆ, ಹೊಸ ಸಾಧನೆಯ ಕನಸು ಹಾಗೂ ಯಶಸ್ಸನ್ನು ತರಲಿ. ಯುಗಾದಿ ಹಬ್ಬದ ಶುಭಾಶಯಗಳು.
  28. ಯುಗಾದಿಯ ಬಣ್ಣಗಳು ನಿಮ್ಮ ಜೀವನವನ್ನು ಸಂತೋಷ ಮತ್ತು ಯಶಸ್ಸಿನಿಂದ ಬೆಳಗಿಸಲಿ. ಮುಂಬರುವ ಅದ್ಭುತ ವರ್ಷಕ್ಕೆ ಶುಭಾಶಯಗಳು!
  29. ಹೊಸ ಆರಂಭಗಳ ಸೌಂದರ್ಯವನ್ನು ಆಚರಿಸೋಣ ಮತ್ತು ವರ್ಷವನ್ನು ಉತ್ಸಾಹ ಮತ್ತು ಭರವಸೆಯೊಂದಿಗೆ ಸ್ವಾಗತಿಸೋಣ. ಯುಗಾದಿ ಹಬ್ಬದ ಶುಭಾಶಯಗಳು!
  30. ಈ ಯುಗಾದಿಯಲ್ಲಿ ನಿಮಗೆ ಅಂತ್ಯವಿಲ್ಲದ ಸಂತೋಷ, ಯಶಸ್ಸು ಮತ್ತು ಅದ್ಭುತ ನೆನಪುಗಳು ಸಿಗಲಿ ಎಂದು ಹಾರೈಸುತ್ತೇನೆ! ಈ ವರ್ಷವನ್ನು ಅವಿಸ್ಮರಣೀಯವಾಗಿಸೋಣ.

🚨 ಯಾವುದೇ ಬ್ರೇಕಿಂಗ್ ನ್ಯೂಸ್ ಮಿಸ್ ಮಾಡ್ಕೋಬೇಡಿ!

ಸರ್ಕಾರಿ ಯೋಜನೆಗಳು, ಉದ್ಯೋಗ ಮಾಹಿತಿ ಹಾಗೂ ದಿನನಿತ್ಯದ ಪ್ರಮುಖ ಸುದ್ದಿಗಳನ್ನು ನೇರವಾಗಿ ನಿಮ್ಮ ಮೊಬೈಲ್‌ನಲ್ಲೇ ಉಚಿತವಾಗಿ ಪಡೆಯಲು ನಮ್ಮ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ.

ಇಲ್ಲಿ ಕ್ಲಿಕ್ ಮಾಡಿ
💯 ಸಂಪೂರ್ಣ ಉಚಿತ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories