ಬ್ರೇಕಿಂಗ್ ನ್ಯೂಸ್ : ವಾಹನ ಸವಾರರೇ ಗಮನಿಸಿ, ಪೆಟ್ರೋಲ್ & ದರ ಇಳಿಕೆ, ಎಷ್ಟು ಗೊತ್ತಾ?

petrol price drop

ಕೇಂದ್ರ ಸರ್ಕಾರ(central government) ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಎರಡು ರೂಪಾಯಿ ಇಳಿಕೆ ಮಾಡಿದೆ. ಹೊಸ ಬೆಲೆಗಳು ಮಾರ್ಚ್ 15, ಅಂದರೆ ಇಂದು ಬೆಳಿಗ್ಗೆ 6 ರಿಂದ ಜಾರಿಗೆ ಬಂದಿದೆ. ಇದರ ಬಗ್ಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಮಾಹಿತಿಯನ್ನು ತಿಳಿಸಿದೆ. ಈ ಪೆಟ್ರೋಲ್ ಹಾಗೂ ಡೀಸೆಲ್ ಅನಿಲಗಳ ನಿಖರವಾದ ಬೆಲೆಯನ್ನು ಹಾಗೂ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪೆಟ್ರೋಲ್ ಬೆಲೆಯಲ್ಲಿ 2 ರೂಪಾಯಿ ಇಳಿಕೆ(Petrol price reduced by Rs 2) :

ವಾಹನ ಸಂಚಾಲಕರಿಗೆ ಇದೊಂದು ಖುಷಿಯ ವಿಷಯ ಎಂದೇ ಹೇಳಬಹುದು. ಲೋಕಸಭೆ ಚುನಾವಣೆಗೆ(lok sabha election) ಮುನ್ನ ಕೇಂದ್ರ ಸರ್ಕಾರ ದೇಶದ ಜನತೆಗೆ ಬೆಲೆ ಏರಿಕೆಯ ತತ್ತರದಿಂದ ಕೊಂಚ ನಿರಾಳತೆ ಎನಿಸುವ ಸುದ್ದಿಯನ್ನು ನೀಡಿದೆ, ದೇಶಾದ್ಯಂತ ಇಂದು ಶುಕ್ರವಾರದಿಂದ ಪೆಟ್ರೋಲ್ ಮತ್ತು ಡೀಸೆಲ್(diesel) ಬೆಲೆ ಲೀಟರ್‌ಗೆ 2 ರೂಪಾಯಿ ಇಳಿಕೆಯಾಗಿದೆ. ಈ ನಿರ್ಧಾರದ ಬಗ್ಗೆ ಪೆಟ್ರೋಲಿಯಂ ಸಚಿವ ಹರ್ದೀಪ್​ ಸಿಂಗ್​ ಪುರಿ ಪ್ರಧಾನಿ ಮೋದಿಯನ್ನು ಶ್ಲಾಘಿಸಿದ್ದಾರೆ. ಭಾರತವು ಇಂಧನ ಲಭ್ಯತೆ, ಕೈಗೆಟುಕುವಿಕೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಂಡಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗದೆ, ಇಳಿಕೆ ಕಂಡಿರುವ ಏಕೈಕ ದೇಶ ಭಾರತ ಎಂದು ಸಚಿವರು ಬರೆದಿದ್ದಾರೆ. ಇಂದು ಕರ್ನಾಟಕದ ರಾಜಧಾನಿಯಾದ ನಮ್ಮ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 99.94 ರೂಪಾಯಿ ಹಾಗೂ ಡೀಸೆಲ್ ಬೆಲೆ 85.89 ರೂಪಾಯಿಗೆ ಇಳಿಕೆಯನ್ನು ಕಂಡಿದೆ.

ಇತ್ತೀಚೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿತ್ತು. ಅಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಲ್‌ಪಿಜಿ ಹಾಗೂ ಸಿಎನ್‌ಜಿ ಬೆಲೆಯಲ್ಲಿ ಕಡಿತವಾಗಿತ್ತು. ಇದೀಗ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನೂ ಕಡಿತಗೊಳಿಸಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

whatss

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಬೆಲೆಯ ದರ :

ದೆಹಲಿಯಲ್ಲಿ 96.72 ರೂ.ನಿಂದ 94.72 ರೂ.ಗೆ ಇಳಿಕೆಯಾಗಿದೆ
ಬೆಂಗಳೂರಿನಲ್ಲಿ 101.94 ರೂ.ನಿಂದ 99.94 ರೂ.ಗೆ ಇಳಿಕೆಯಾಗಿದೆ
ಮುಂಬೈನಲ್ಲಿ ದರಗಳು 106.31 ರಿಂದ 104.21 ರೂ. ಗೆ ಇಳಿಕೆಯಾಗಿದೆ
ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 106.3 ರಿಂದ 103.94 ಕ್ಕೆ ಇಳಿಕೆಯಾಗಿದೆ
ಚೆನ್ನೈನಲ್ಲಿ ಪೆಟ್ರೋಲ್ ದರ 102.63 ರಿಂದ 100.75 ಕ್ಕೆ ಇಳಿಕೆಯಾಗಿದೆ

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!