ಸೋಲಾರ್ ಪಂಪ್ ಸೆಟ್ ಖರೀದಿಗೆ 50% ಸಬ್ಸಿಡಿ ವಿತರಣೆಗೆ ಅರ್ಜಿ ಅಹ್ವಾನ. ಇಲ್ಲಿದೆ ಅರ್ಜಿ ಲಿಂಕ್

subsidy for solar

ರೈತರ ಏಳಿಗೆಯೇ ದೇಶದ ಏಳಿಗೆ(Farmers Development is a Nation Development). ಹಳ್ಳಿಯ ರೈತನ ಕೈಯಲ್ಲಿ ದೇಶದ ಭವಿಷ್ಯ ಇದೆ. ಹೌದು, ಈ ಮಾತು ಖಂಡಿತ ಸತ್ಯ. ಏಕೆಂದರೆ, ನಮ್ಮ ದೇಶದ ಆಹಾರ ಭದ್ರತೆ ರೈತರ ಕೈಯಲ್ಲಿದೆ. ಅವರ ಶ್ರಮದಿಂದಲೇ ನಮಗೆ ಊಟಕ್ಕೆ ಅನ್ನ ಬರುತ್ತದೆ ಅಲ್ಲವೇ, ಆದರಿಂದ ಸರ್ಕಾರವು ರೈತರ ಏಳಿಗೆಗೆ ಅಂತೆಯೇ ಸರ್ಕಾರದ ಯೋಜನೆಗಳನ್ನೂ (Government Schemes) ನೀಡುತ್ತಿದ್ದೆ.
ರೈತರ ಏಳಿಗೆಗೆ ಸರ್ಕಾರದ ಯೋಜನೆಗಳು ಸಾಮಾನ್ಯವಾಗಿ ಹೇಗೆಲ್ಲಾ ಇರುತ್ತದೆ ಅಂದರೆ,

ಕೃಷಿ ಸಾಲ ರಿಯಾಯಿತಿ: ರೈತರಿಗೆ ಸಾಲ ನೀಡಿ, ಅವರ ಬಡ್ಡಿ ಹೊರೆ ಕಡಿಮೆ ಮಾಡುವುದರಿಂದ ಅವರಿಗೆ ಆರ್ಥಿಕ ಭದ್ರತೆ ಸಿಗುತ್ತದೆ.

ಬೆಂಬಲ ಬೆಲೆ ಯೋಜನೆ: ರೈತರಿಗೆ ಉತ್ಪನ್ನಗಳಿಗೆ ಉತ್ತಮ ಬೆಲೆ ಸಿಗುವಂತೆ ಖಾತ್ರಿಪಡಿಸುವುದರಿಂದ ಅವರಿಗೆ ಲಾಭ ಖಚಿತ. 

ಮಣ್ಣು ಪರೀಕ್ಷೆ, ಬೀಜ ವಿತರಣೆ, ಕೃಷಿ ಸಲಹೆ: ರೈತರಿಗೆ ಉತ್ತಮ ಬೀಜ, ಗೊಬ್ಬರ, ತಂತ್ರಜ್ಞಾನ ಒದಗಿಸುವುದರಿಂದ ಉತ್ಪಾದನೆ ಹೆಚ್ಚಾಗುತ್ತದೆ.

ನೀರಾವರಿ ಯೋಜನೆಗಳು: ಕೆರೆ, ಕಾಲುವೆ, ಬಾವಿಗಳನ್ನು ನಿರ್ಮಿಸುವುದರಿಂದ ರೈತರಿಗೆ ನೀರಿನ ಖಾತರಿ ಸಿಗುತ್ತದೆ.

ವಿಮಾ ಯೋಜನೆಗಳು: ಬೆಳೆ ವಿಮೆ, ಜೀವ ವಿಮೆ ಯೋಜನೆಗಳಿಂದ ರೈತರಿಗೆ ಅಪಾಯ ಭದ್ರತೆ ಸಿಗುತ್ತದೆ.
ಹೀಗೆ ಇನ್ನೂ ಅನೇಕ ಯೋಜನೆಗಳ ಮೂಲಕ ರೈತರಿಗೆ ಅನುಕೂಲ ಮಾಡಿಕೊಡುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ರೈತರ ಸ್ವಾವಲಂಬನೆ ಕೂಡಾ ಅಷ್ಟೇ ಮುಖ್ಯವಾಗಿರುತ್ತದೆ, ಹೌದು ಕೃಷಿ ಕಾಲೇಜುಗಳು(Agriculture colleges), ತರಬೇತಿ ಕೇಂದ್ರಗಳ (Training centers) ಮೂಲಕ ರೈತರಿಗೆ ಆಧುನಿಕ ಕೃಷಿ ತಂತ್ರಜ್ಞಾನದ ಬಗ್ಗೆ ಜಾಗೃತಿ ಮೂಡಿಸಬೇಕು.
ಸಹಕಾರ ಸಂಘಗಳ ಮೂಲಕ ರೈತರಿಗೆ ಉತ್ತಮ ಬೆಲೆಗೆ ಉತ್ಪನ್ನ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು.
ಕೃಷಿ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಆದಾಯ (High income) ಗಳಿಸಲು ಸಹಾಯವಾಗುತ್ತದೆ. ಇನ್ನು ಒಟ್ಟಿನಲ್ಲಿ, ರೈತರ ಏಳಿಗೆಗೆ ಸರ್ಕಾರ ಮತ್ತು ರೈತರು ಒಟ್ಟಾಗಿ ಕೆಲಸ ಮಾಡಬೇಕು. ರೈತರಿಗೆ ಅನುಕೂಲಕರವಾದ ವಾತಾವರಣ ನಿರ್ಮಿಸುವುದರಿಂದ ದೇಶದ ಆರ್ಥಿಕ ಸುಧಾರಣೆಗೆ ಖಂಡಿತ ಕಾರಣವಾಗುತ್ತದೆ.

ಆದರಿಂದ ಇದೀಗ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು(State and Central Government) ರೈತರ ಏಳಿಗೆಗಾಗಿ ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ, ಕೃಷಿ ಕಾರ್ಮಿಕರಿಗೆ ಅನುಕೂಲವಾಗುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿವೆ. ಇದೀಗ, ‘ಕುಸುಮ್ ಬಿ’ ಯೋಜನೆಯ (Kusam B Yojana) ಮೂಲಕ ರೈತರಿಗೆ ಸೌರ ಶಕ್ತಿಯ (Solar Energy) ವರವನ್ನು ಒದಗಿಸಲಾಗಿದೆ.

ಕುಸುಮ್ ಬಿ ಯೋಜನೆ: ರೈತರಿಗೆ ಸೂರ್ಯನ ಶಕ್ತಿಯ ವರ!

ಈ ಯೋಜನೆಯಡಿ, ರೈತರು ತಮ್ಮ ಜಮೀನುಗಳಲ್ಲಿ ಸೋಲಾರ್ ಪಂಪ್ ಸೆಟ್‌ಗಳನ್ನು (Solar Pump sets installation) ಅಳವಡಿಸಿಕೊಳ್ಳಲು ಸಹಾಯಧನ(Subsidy) ಪಡೆಯಬಹುದು. ಇದರಿಂದ, ವಿದ್ಯುತ್ ಖರ್ಚು ಗಣನೀಯವಾಗಿ ಕಡಿಮೆಯಾಗಿ, ಲಾಭದಾಯಕ ಕೃಷಿಗೆ ಅನುವು ಮಾಡಿಕೊಡಲಾಗುವುದು.

ಕುಸುಮ್ ಬಿ ಯೋಜನೆಯ(Kusam B Yojana) ಪ್ರಮುಖ ಲಕ್ಷಣಗಳು:

ಸಹಾಯಧನ: ರೈತರಿಗೆ ಸೋಲಾರ್ ಪಂಪ್ ಸೆಟ್‌ಗಳನ್ನು ಖರೀದಿಸಲು ಮತ್ತು ಅಳವಡಿಸಲು ಸಹಾಯಧನ ನೀಡಲಾಗುವುದು.
ಸುಲಭ ಅರ್ಜಿ ಪ್ರಕ್ರಿಯೆ: ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ವಿದ್ಯುತ್ ಖರ್ಚು ಕಡಿಮೆ: ಸೌರ ಶಕ್ತಿಯ ಬಳಕೆಯಿಂದ ವಿದ್ಯುತ್ ಖರ್ಚು ಗಣನೀಯವಾಗಿ ಕಡಿಮೆಯಾಗುತ್ತದೆ.
ಲಾಭದಾಯಕ ಕೃಷಿ: ವಿದ್ಯುತ್ ಖರ್ಚು ಕಡಿಮೆಯಾಗುವುದರಿಂದ ಲಾಭದಾಯಕ ಕೃಷಿಗೆ ಅನುವು ಮಾಡಿಕೊಡಲಾಗುತ್ತದೆ.

ಕುಸುಮ್ ಬಿ ಯೋಜನೆಯು ರೈತರಿಗೆ ಈ ಕೆಳಗಿನ ಪ್ರಯೋಜನಗಳನ್ನು ಒದಗಿಸುತ್ತದೆ:

ಆರ್ಥಿಕ ಉಳಿತಾಯ(Financial savings): ವಿದ್ಯುತ್ ಖರ್ಚು ಕಡಿಮೆಯಾಗುವುದರಿಂದ ರೈತರಿಗೆ ಆರ್ಥಿಕ ಉಳಿತಾಯವಾಗುತ್ತದೆ.
ಪರಿಸರ ಸ್ನೇಹಿ (Eco friendly): ಸೌರ ಶಕ್ತಿಯ ಬಳಕೆಯಿಂದ ಪರಿಸರ ಪ್ರದುಷನ ಕಡಿಮೆಯಾಗುತ್ತದೆ.
ನೀರಾವರಿ ಸಮಸ್ಯೆ ಪರಿಹಾರ: ಸೌರ ಪಂಪ್‌ಸೆಟ್‌ಗಳ ಮೂಲಕ ನಿರಂತರ ನೀರಾವರಿ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ.
ಕೃಷಿ ಉತ್ಪಾದನೆ ಹೆಚ್ಚಳ (Increase in agriculture growth): ಸಮರ್ಪಕ ನೀರಾವರಿ ವ್ಯವಸ್ಥೆಯಿಂದ ಕೃಷಿ ಉತ್ಪಾದನೆಯಲ್ಲಿ ಹೆಚ್ಚಳ ಕಾಣಬಹುದು.

ಇದಕ್ಕಾಗಿ ಕುಸುಮ್ ಬಿ ಯೋಜನೆಯ ಅಡಿಯಲ್ಲಿ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು(Installation of solar Pump sets) ಈಗ ನೀಡಲಾಗುತ್ತಿರುವ 30% ನಷ್ಟು ಸಬ್ಸಿಡಿ ಬದಲು 50% ಸಬ್ಸಿಡಿ ನೀಡಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಇಂಧನ ಸಚಿವ ಕೆಜೆ ಜಾರ್ಜ್ (minister KJ George) ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ಈ ಯೋಜನೆ ರೈತರಿಗೆ ಒಂದು ಅದ್ಭುತವಾದ ವರವಾಗಿದೆ, ರೈತರಿಗೆ ಸೋಲಾರ್ ಪ್ಯಾನಲ್‌(solar panel)ಗಳಿಗೆ ಸಬ್ಸಿಡಿ ಹೆಚ್ಚಳದಿಂದ, ಅವರು ಸುಲಭವಾಗಿ ತಮ್ಮ ಜಮೀನಿನಲ್ಲಿ ಸೋಲಾರ್ ಪಂಪ್‌ಗಳನ್ನು ಅಳವಡಿಸಿಕೊಂಡು, ಕೃಷಿಗೆ ಅಗತ್ಯವಾದ ನೀರನ್ನು ಪಡೆಯಬಹುದು.
ರಾಜ್ಯ ಸರ್ಕಾರದ ಈ ಯೋಜನೆ ತುಂಬಾ ಉತ್ತಮವಾಗಿದೆ ಮತ್ತು ಈಗಾಗಲೇ ಅನೇಕ ರೈತರು ಇದರ ಪ್ರಯೋಜನ ಪಡೆದಿದ್ದಾರೆ.
ಸಬ್ಸಿಡಿ ಹೆಚ್ಚಳದಿಂದ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯೇ ಸಂಭವಿಸದರು ಆಶ್ಚರ್ಯಪಟ್ಟರು ತಪ್ಪಿಲ್ಲ ಎನ್ನಬಹುದು, ಹೌದು ಸಬ್ಸಿಡಿ (Increase in Subsidy) ಹೆಚ್ಚಳದಿಂದ ಇನ್ನೂ ಹೆಚ್ಚಿನ ರೈತರಿಗೆ ಈ ಯೋಜನೆಯ ಲಾಭ ಪಡೆಯಲು ಸಾಧ್ಯವಾಗುತ್ತದೆ.

ಕುಸುಮ್ ಬಿ ಯೋಜನೆಯು ರಾಜ್ಯದ ರೈತ ಸಮುದಾಯದ ಏಳಿಗೆಗೆ ಮಹತ್ತರ ಕೊಡುಗೆ ನೀಡಲಿದೆ. ಈ ಯೋಜನೆಯ ಸದುಪಯೋಗ ಪಡೆದುಕೊಂಡು ರೈತರು ತಮ್ಮ ಜೀವನಮಟ್ಟವನ್ನು ಸುಧಾರಿಸಿಕೊಳ್ಳಬೇಕೆಂದು ಕೋರಲಾಗಿದೆ.

ಅಷ್ಟೇ ಅಲ್ಲದೆ ರೈತರಿಗೆ ಇನ್ನೊಂದು ಖುಷಿಯ ಸುದ್ದಿ! ಕೃಷಿ ಯಂತ್ರೋಪಕರಣಗಳಿಗೆ (Agriculture Equipments) ಭರ್ಜರಿ ಸಹಾಯಧನ!

ಹೌದು, ರಾಜ್ಯ ಸರ್ಕಾರದ ಕೃಷಿ ಇಲಾಖೆಯು ರೈತರಿಗೆ ಕೃಷಿ ಯಂತ್ರೋಪಕರಣಗಳ ಖರೀದಿಗೆ ಶೇ. 50 ಮತ್ತು ಶೇ. 90 ರಷ್ಟು ಸಹಾಯಧನ ನೀಡಲು ಯೋಜನೆ ರೂಪಿಸಿದೆ. ಎಲ್ಲ ವರ್ಗದ ರೈತರು ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆ ಅಡಿಯಲ್ಲಿ ಶೇ.5೦ರ ಸಹಾಯಧನದಲ್ಲಿ ಯಂತ್ರೋಪಕರಣ ಖರೀದಿಸಬಹುದು. ಪರಿಶಿಷ್ಟ ಜಾತಿ ಹಾಗೂ ಪಂಗಡದ ರೈತರಿಗೆ ಶೇ.9೦ರ ಸಹಾಯಧನ ನೀಡಲಾಗುತ್ತದೆ
ಈ ಯೋಜನೆಯಡಿ, ರೈತರು ಟ್ರಾಕ್ಟರ್‌ಗಳು, ಪವರ್ ಟಿಲ್ಲರ್‌ಗಳು, ರಿಪರ್‌ಗಳು, ಥ್ರೆಷರ್‌ಗಳು ಮತ್ತು ಇನ್ನೂ ಹಲವಾರು ಉಪಯುಕ್ತ ಯಂತ್ರೋಪಕರಣಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದು.

ಅರ್ಹತೆ(Eligibility) :

ರಾಜ್ಯದ ಖಾತರಿ ಜಮೀನು ಹೊಂದಿರುವ ರೈತರು ಈ ಯೋಜನೆಗೆ ಅರ್ಹರು.
ಒಂದು ಯಂತ್ರೋಪಕರಣಕ್ಕೆ ಒಂದು ಅರ್ಜಿ ಸಲ್ಲಿಸಬಹುದು.
ಈ ಹಿಂದೆ ಸರ್ಕಾರದಿಂದ ಯಂತ್ರೋಪಕರಣಗಳಿಗೆ ಸಹಾಯಧನ ಪಡೆದವರು ಈ ಯೋಜನೆಗೆ ಅರ್ಹರಲ್ಲ.

ಅರ್ಜಿ ಸಲ್ಲಿಸುವುದು ಹೇಗೆ(How to apply) :

ರೈತರು ತಮ್ಮ ಹತ್ತಿರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿ ಫಾರ್ಮ್‌ಗಳನ್ನು ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ಜೂನ್ 30, 2024 ರೊಳಗೆ ಕಚೇರಿಗೆ ಸಲ್ಲಿಸಬೇಕು.

ಹೆಚ್ಚಿನ ಮಾಹಿತಿಗಾಗಿ:
ರೈತರು ತಮ್ಮ ಹತ್ತಿರದ ಕೃಷಿ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಈ ಯೋಜನೆಯು ರೈತರಿಗೆ ತಮ್ಮ ಕೃಷಿ ಚಟುವಟಿಕೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಲಾಭದಾಯಕವಾಗಿ ಮಾಡಲು ಸಹಾಯ ಮಾಡುತ್ತದೆ.

whatss

ಯಾವ ಯಾವ ಯಂತ್ರಗಳ ಖರೀದಿಗೆ ಸಿಗುತ್ತೆ ಈ ಸಹಾಯಧನದಲ್ಲಿ ಎಂದು ನೋಡೋಣ ಬನ್ನಿ:

ಕಳೆ ಕತ್ತರಿಸುವ ಯಂತ್ರ
ಹುಲ್ಲು ಕತ್ತರಿಸುವ ಯಂತ್ರ
ರೋಟರಿ/ ಪವರ್ ವೀಡರ್
ಯಂತ್ರ ಚಾಲಿತ ಕೈಗಾಡಿಗಳು
ಔಷಧ ಸಿಂಪಡಣೆಗೆ ಎಚ್ಟಿಪಿ ಸ್ಪ್ರೇಯರ್ಸ್
ಕಾರ್ಬನ್ ಫೈಬರ್ ದೋಟಿ ಮತ್ತು ಏಣಿ
ಡಿಸೈಲ್ ಪಂಪ್ಸೆಟ್
ಗಂಡಿ ತೆಗೆಯುವ ಡಿಗ್ಗರ್
ರೋಟೋವೇಟರ್
ಭತ್ತ ನಾಟಿ ಮಾಡುವ ಯಂತ್ರ
ಭತ್ತ ಕಟಾವು ಮಾಡುವ ಯಂತ್ರ
ಪವರ್ ಟಿಲ್ಲರ್

ಈ ಯೋಜನೆ ಸೌಲಭ್ಯ ಪಡೆಯಲು ಒದಗಿಸಬೇಕಾದ ದಾಖಲಾತಿಗಳು :

ಅರ್ಜಿದಾರರ ಇತ್ತೀಚಿನ ಭಾವಚಿತ್ರ
ಅರ್ಜಿದಾರರ ಆಧಾರ್ ಕಾರ್ಡ್
ಹಿಡುವಳಿ ಪ್ರಮಾಣ ಪತ್ರ
20 ರೂ.ನ ಬಾಂಡ್
ಜಾತಿ ಪ್ರಮಾಣ ಪತ್ರ
ಬ್ಯಾಂಕ್ ಪಾಸ್ಬುಕ್

ಕಳೆದ ಮೂರು ವರ್ಷಗಳಲ್ಲಿ (From last three years) ಯೋಜನೆಯ ಸೌಲಭ್ಯ ಪಡೆದ ರೈತರು ಮತ್ತೆ ಅರ್ಜಿ ಸಲ್ಲಿಸಲು ಅರ್ಹರಲ್ಲ. ಸರ್ಕಾರದ ಉದ್ದೇಶ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡಿ, ಅವರಿಗೆ ನೆಮ್ಮದಿಯ ಜೀವನ ಒದಗಿಸುವುದೇ ಆಗಿದೆ. ಮತ್ತು ಈ ಉದ್ದೇಶವನ್ನು ಸಾಧಿಸಲು ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ರೈತರು ಈ ಯೋಜನೆಗಳ ಮಾಹಿತಿ ಪಡೆದು, ಸರಿಯಾದ ಸಮಯಕ್ಕೆ ಅರ್ಜಿ ಸಲ್ಲಿಸಿ ಲಾಭ ಪಡೆಯಬೇಕು.ಮತ್ತು ನಾವು ಕೂಡಾ ಇದೇ ಸಮಯದಲ್ಲಿ, ರೈತರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಕೋರುತ್ತೇವೆ.
ಮತ್ತು ಇಂತಹ ಉತ್ತಮವಾದ ಮಾಹಿತಿ ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

tel share transformed

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!