ಕರ್ನಾಟಕ ಬಾಡಿಗೆ ಕಾಯ್ದೆ ತಿದ್ದುಪಡಿ: ಅನಧಿಕೃತ ಉಪಬಾಡಿಗೆ, ಬ್ರೋಕರ್ ದುರುಪಯೋಗಕ್ಕೆ ಭಾರೀ ದಂಡ
ಕರ್ನಾಟಕದಲ್ಲಿ ಮನೆ ಬಾಡಿಗೆ (Room rent) ಮಾರುಕಟ್ಟೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದ್ದು, ನಗರ ಪ್ರದೇಶಗಳಲ್ಲಿ ಮನೆಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆಯೇ ಬಾಡಿಗೆ ದರಗಳ ಏರಿಕೆ, ಒಪ್ಪಂದ ಉಲ್ಲಂಘನೆ, ಅನಧಿಕೃತ ಉಪಬಾಡಿಗೆ ಹಾಗೂ ಬ್ರೋಕರ್ ಗಳು ಮಾಡುವ ದುರುಪಯೋಗದಂತಹ ಸಮಸ್ಯೆಗಳು ಸಹ ಹೆಚ್ಚಾಗುತ್ತಿವೆ. ವಿಶೇಷವಾಗಿ ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಮಾಲೀಕರು (Home owner’s) ಮತ್ತು ಬಾಡಿಗೆದಾರರ ನಡುವಿನ ಜಗಳಗಳು ಸಾಮಾನ್ಯವಾಗಿವೆ. ಈ ಹಿನ್ನೆಲೆಯಲ್ಲಿ, ಬಾಡಿಗೆ ಸಂಬಂಧಿತ ವ್ಯವಹಾರಗಳಿಗೆ ಶಿಸ್ತನ್ನು ತರಲು ಹಾಗೂ ಎರಡೂ ಪಕ್ಷಗಳ ಹಕ್ಕುಗಳನ್ನು ರಕ್ಷಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಬಾಡಿಗೆ ಕಾಯ್ದೆ, 1999ಕ್ಕೆ ಮಹತ್ವದ ತಿದ್ದುಪಡಿಗಳನ್ನು ತರಲು ಮುಂದಾಗಿದೆ. ಹೊಸ ತಿದ್ದುಪಡಿಗಳಲ್ಲಿ (In the new amendments) ಬಾಡಿಗೆ ಒಪ್ಪಂದಗಳ ನೋಂದಣಿ ಕಡ್ಡಾಯಗೊಳಿಸುವುದರಿಂದ ಹಿಡಿದು, ದಂಡದ ಮೊತ್ತವನ್ನು ಹಲವು ಪಟ್ಟು ಹೆಚ್ಚಿಸುವವರೆಗೆ ಹಲವು ಕ್ರಮಗಳನ್ನು ಒಳಗೊಂಡಿದ್ದು, ಬಾಡಿಗೆ ದರ ನಿಗದಿ ಮಾಡುವ ವಿಧಾನಕ್ಕೂ ಸರ್ಕಾರ (government) ಮಾರುಕಟ್ಟೆ ಆಧಾರಿತ ಮಾನದಂಡ ತರಲು ಚಿಂತನೆ ನಡೆಸುತ್ತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ಕರ್ನಾಟಕದಲ್ಲಿ ನಗರೀಕರಣ ವೇಗವಾಗಿ ಹೆಚ್ಚುತ್ತಿರುವುದರಿಂದ, ಮನೆ ಬಾಡಿಗೆ ಮಾರುಕಟ್ಟೆಯ ಮಹತ್ವ ದಿನೇ ದಿನೇ ಏರುತ್ತಿದೆ. ಬೆಂಗಳೂರಿನಂತಹ (Bangalore) ಮಹಾನಗರಗಳಿಂದ ಹಿಡಿದು ಜಿಲ್ಲಾಮಟ್ಟದ ನಗರಗಳವರೆಗೆ, ಮನೆ ಬಾಡಿಗೆ ಬೇಡಿಕೆ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮವಾಗಿ, ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವಿನ ಅಸಮಾಧಾನ, ಒಪ್ಪಂದ ಉಲ್ಲಂಘನೆ, ಹಾಗೂ ಬಾಡಿಗೆ ದರ ಏರಿಕೆ ಬಗ್ಗೆ ತಕರಾರುಗಳು ಹೆಚ್ಚಾಗಿವೆ.
ಈ ಹಿನ್ನಲೆಯಲ್ಲಿ, ಕರ್ನಾಟಕ ಸರ್ಕಾರವು(Karnataka government) 1999ರ ಬಾಡಿಗೆ ಕಾಯ್ದೆಗೆ ಮಹತ್ವದ ತಿದ್ದುಪಡಿ ತರಲು ನಿರ್ಧರಿಸಿದ್ದು, ಬಾಡಿಗೆ ವ್ಯವಹಾರದಲ್ಲಿ ಶಿಸ್ತು, ಪಾರದರ್ಶಕತೆ, ಮತ್ತು ನ್ಯಾಯವನ್ನು ಖಚಿತಪಡಿಸುವ ಉದ್ದೇಶ ಹೊಂದಿದೆ. ಈ ತಿದ್ದುಪಡಿ ಬಾಡಿಗೆದಾರರಿಗಷ್ಟೇ ಅಲ್ಲ, ಮನೆ ಮಾಲೀಕರಿಗೂ ಸಮಾನವಾಗಿ ಅನ್ವಯವಾಗಲಿದೆ.
ಮುಖ್ಯ ತಿದ್ದುಪಡಿ ಅಂಶಗಳು ಹೀಗಿವೆ:
1. ಅನಧಿಕೃತ ಉಪಬಾಡಿಗೆಗೆ ಭಾರೀ ದಂಡ:
ಬಾಡಿಗೆ ಮನೆಯನ್ನು (rent house) ಮನೆ ಮಾಲೀಕರ ಅನುಮತಿ ಇಲ್ಲದೆ ಮತ್ತೊಬ್ಬರಿಗೆ ಬಾಡಿಗೆಗೆ ನೀಡಿದರೆ, ಇದುವರೆಗಿನ ₹5,000 ದಂಡವನ್ನು ನೇರವಾಗಿ ₹50,000ಕ್ಕೆ ಹೆಚ್ಚಿಸಲಾಗುತ್ತಿದೆ.
ಇದು ಶೇಕಡಾ 90ರಷ್ಟು ಹೆಚ್ಚಳವಾಗಿದ್ದು, ಇಂತಹ ಅನಧಿಕೃತ ಕ್ರಮಗಳನ್ನು ತಡೆಯಲು ಕಠಿಣ ಹೆಜ್ಜೆಯಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
2. ಮಾಲೀಕರ ಮೇಲೂ ಹೊಣೆಗಾರಿಕೆ:
ಬಾಡಿಗೆ ಮನೆಯನ್ನು ಉಪಬಾಡಿಗೆಗೆ ನೀಡಲು ಅವಕಾಶ ನೀಡಿದ ಮನೆ ಮಾಲೀಕರಿಗೂ ದಂಡ ವಿಧಿಸಲಾಗುತ್ತದೆ.
ಇದುವರೆಗಿನ ₹3,000 ದಂಡವನ್ನು ₹30,000ಕ್ಕೆ ಹೆಚ್ಚಿಸಲಾಗುತ್ತಿದೆ.
ಜೈಲು ಶಿಕ್ಷೆಯ (Imprisonment) ಬದಲು ದಂಡದ ಮೊತ್ತವನ್ನು ಹೆಚ್ಚಿಸುವ ಮೂಲಕ ಹಣಕಾಸು ಆಧಾರಿತ ತಡೆ ಕ್ರಮಕ್ಕೆ ಒತ್ತು ನೀಡಲಾಗಿದೆ.
3. ಬೋಕರ್‌ಗಳಿಗೆ ಕಡ್ಡಾಯ ನೋಂದಣಿ:
ಬಾಡಿಗೆ ಮಾರುಕಟ್ಟೆಯಲ್ಲಿ ಅನಧಿಕೃತವಾಗಿ (unofficially) ಕಾರ್ಯನಿರ್ವಹಿಸುವ ಬೋಕರ್‌ಗಳಿಗೆ ಸರ್ಕಾರ “ಬಿಸಿ” ಮುಟ್ಟಿಸಿದೆ.
ಕಾಯ್ದೆಯ ಸೆಕ್ಷನ್ 20ರ ಪ್ರಕಾರ ನೋಂದಣಿ ಮಾಡಿಸದ ಬೋಕರ್‌ಗಳಿಗೆ ದಿನಕ್ಕೆ ₹25,000 ದಂಡ (ಹಿಂದಿನ ₹2,000 ಬದಲು) ವಿಧಿಸಲಾಗುತ್ತದೆ.
ಪುನಃ ತಪ್ಪು ಮಾಡಿದರೆ, ದಿನಕ್ಕೆ ಹೆಚ್ಚುವರಿ ₹20,000 ದಂಡ ಬೀಳಲಿದೆ.
4. ಆನ್‌ಲೈನ್ ನೋಂದಣಿ ಪೋರ್ಟಲ್ (Online registration portal) :
ಬಾಡಿಗೆ ಒಪ್ಪಂದಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ನೋಂದಾಯಿಸಲು ಸರ್ಕಾರ ಈಗಾಗಲೇ ಪೋರ್ಟಲ್ ಪ್ರಾರಂಭಿಸಿದೆ.
ಇದರಿಂದ ವ್ಯವಹಾರದಲ್ಲಿ ಪಾರದರ್ಶಕತೆ ಹೆಚ್ಚುವುದು, ದಾಖಲೆ ಪ್ರಮಾಣಿತವಾಗುವುದು ಹಾಗೂ ನ್ಯಾಯಾಂಗ ವ್ಯಾಜ್ಯಗಳ ಪ್ರಮಾಣ ಕಡಿಮೆಯಾಗುವುದು.
5. ಮಾರುಕಟ್ಟೆ ಆಧಾರಿತ ಬಾಡಿಗೆ ದರ:
ಸರ್ಕಾರ ಬಾಡಿಗೆ ದರವನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ನಿಗದಿಪಡಿಸುವ ವ್ಯವಸ್ಥೆ ತರಲು ಚಿಂತನೆ ನಡೆಸುತ್ತಿದೆ.
ಇದರಿಂದ ಮನೆ ಮಾಲೀಕರಿಗೆ ನ್ಯಾಯಯುತ ಬಾಡಿಗೆ ಸಿಗುವುದು ಹಾಗೂ ಬಾಡಿಗೆದಾರರ ಮೇಲೆ ಏಕಾಏಕಿ ಬಾಡಿಗೆ ಏರಿಕೆ ಮಾಡುವ ಒತ್ತಡ ಕಡಿಮೆಯಾಗುವುದು.
6. ನೋಟಿಸ್ ಕಡ್ಡಾಯ(notice compulsory) :
ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು ಸೂಕ್ತ ನೋಟಿಸ್ ನೀಡುವುದು ಕಡ್ಡಾಯವಾಗಲಿದೆ.
ಇದರಿಂದ ಬಾಡಿಗೆದಾರರಿಗೆ ಸ್ಥಳಾಂತರಕ್ಕೆ ಸಮಯ ಸಿಗುತ್ತದೆ.
7. ಕಡಿಮೆ ಬಾಡಿಗೆ ಮನೆಗಳಿಗೆ ಪ್ರೋತ್ಸಾಹ:
ಕಡಿಮೆ ಬಾಡಿಗೆಗೆ ಮನೆ ನೀಡುವ ಮನೆ ಮಾಲೀಕರಿಗೆ ತೆರಿಗೆ ವಿನಾಯಿತಿ ಮತ್ತು ಸಬ್ಸಿಡಿ ನೀಡುವ ವಿಚಾರ ಸರ್ಕಾರದ ಪರಿಶೀಲನೆಯಲ್ಲಿದೆ.
ಇದರ ಮೂಲಕ ಕಡಿಮೆ ಬೆಲೆಯ ಮನೆಗಳ ಲಭ್ಯತೆ ಹೆಚ್ಚಾಗುವ ನಿರೀಕ್ಷೆಯಿದೆ.
8. ವ್ಯಾಜ್ಯ ಪರಿಹಾರಕ್ಕೆ ಫಾಸ್ಟ್ ಟ್ರ್ಯಾಕ್ ವ್ಯವಸ್ಥೆFast track system for dispute resolution) :
ಬಾಡಿಗೆಗೆ ಸಂಬಂಧಿಸಿದ ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಲು ಫಾಸ್ಟ್ ಟ್ರ್ಯಾಕ್ ವ್ಯವಸ್ಥೆ ಜಾರಿಗೊಳ್ಳಲಿದೆ.
ಇದರಿಂದ ವರ್ಷಗಳಿಂದ ಬಾಕಿ ಇರುವ ಪ್ರಕರಣಗಳನ್ನು ಬೇಗ ಮುಗಿಸಲು ಸಾಧ್ಯವಾಗುತ್ತದೆ.
ಕಾನೂನು ಬದಲಾವಣೆಯ ಪ್ರಕ್ರಿಯೆ:
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ (Minister of Law and Parliamentary Affairs H.K. Patil) ಅವರ ನೇತೃತ್ವದ ಸಮಿತಿ ತಿದ್ದುಪಡಿ ಪ್ರಸ್ತಾವನೆಗೆ ಈಗಾಗಲೇ ಒಪ್ಪಿಗೆ ನೀಡಿದ್ದು, ಶೀಘ್ರದಲ್ಲೇ ವಿಧಾನಸಭೆಯಲ್ಲಿ ಮಂಡಿಸಲಾಗುವುದು.
ಒಟ್ಟಾರೆಯಾಗಿ, ಈ ತಿದ್ದುಪಡಿಗಳಿಂದ ಬಾಡಿಗೆ ಮಾರುಕಟ್ಟೆಯಲ್ಲಿ ಪಾರದರ್ಶಕತೆ, ಶಿಸ್ತು ಮತ್ತು ನ್ಯಾಯಯುತತೆ ಹೆಚ್ಚುವ ನಿರೀಕ್ಷೆಯಿದೆ. ಬಾಡಿಗೆದಾರರು ಮತ್ತು ಮನೆ ಮಾಲೀಕರು (Tenants and homeowners) ಇಬ್ಬರೂ ನಿಯಮ ಪಾಲನೆಗೆ ಬದ್ಧರಾಗಬೇಕಾದ ಅನಿವಾರ್ಯತೆ ಮೂಡಲಿದ್ದು, ಉಲ್ಲಂಘನೆ ಮಾಡಿದರೆ ಭಾರೀ ದಂಡವನ್ನು ಭರಿಸಬೇಕಾಗುತ್ತದೆ. ಸರ್ಕಾರದ ಉದ್ದೇಶ ಮನೆ ಮಾರುಕಟ್ಟೆಯನ್ನು ನಿಯಂತ್ರಿಸಿ, ನ್ಯಾಯಸಮ್ಮತ ಬಾಡಿಗೆ ವ್ಯವಸ್ಥೆ ಜಾರಿಗೆ ತರುವುದು.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.