ಮಾರುಕಟ್ಟೆಗೆ ಬರಲಿದೆ ಹೊಸ ಕಾರ್. ಇಂದು ಜಗತ್ತಿನಲ್ಲಿ ಎಲೆಕ್ಟ್ರಿಕ್ ಮೇಲಿನ ಅವಲಂಬನೆ ಹೆಚ್ಚಾಗಿದೆ. ಅದರಲ್ಲೂ ಇಂದು ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ( Eletric Vehicles ) ಹವಾ ಬಹಳ ಇದೆ. ಎಲೆಕ್ಟ್ರಿಕ್ ಬೈಕ್ ಗಳಂತೂ ವಿವಿಧ ಬೈಕ್ ಗಳನ್ನು ಹಿಂದಿಕ್ಕುವಂತೆ ಇಂದು ಮಾರುಕಟ್ಟೆಯಲ್ಲಿ ಪೈಪೋಟಿಯನ್ನು ನೀಡುತ್ತಿವೆ. ಭಾರತದ ಅತ್ಯುನ್ನತ ಕಂಪನಿಯಾದ ಟಾಟಾ ತನ್ನ ಹೊಸ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ. ಹೌದು ಟಾಟಾ ಕರ್ವ್ ಎಲೆಕ್ಟ್ರಿಕ್ ಕಾರ್ ಬಗ್ಗೆ ಈ ಕೆಳಗೆ ಕೊಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳದ್ದೆ ಸದ್ದು
ಇಂದು ಪೆಟ್ರೋಲ್ ಬದಲಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಪ್ರತಿ ನಿತ್ಯ ನಮ್ಮ ಎದುರು ಎಲೆಕ್ಟ್ರಿಕ್ ವಾಹನಗಳನ್ನು ನಾವು ಕಾಣುತ್ತೇವೆ. ಯಾಕೆಂದರೆ ಇಂದು ಪೆಟ್ರೋಲ್ ಬೆಲೆ ಹೆಚ್ಚಾಗಿದೆ. ಪೆಟ್ರೋಲ್ ಅನ್ನು ಹೊರ ದೇಶಗಳಿಂದ ಆಮದು ಮಾಡಿಕೊಳ್ಳಲು ಬಹಳ ದುಡ್ಡು ಬೇಕಾಗುತ್ತದೆ. ಅದರ ಬದಲಾಗಿ ಇಂದು ನಮ್ಮ ದೇಶದಲ್ಲಿ ಎಲೆಕ್ಟ್ರಿಕ್ ಮೂಲಕ ಚಾಲನೆ ಆಗುವ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದ್ದಾರೆ. ಇಂದು ದಿನಕ್ಕೊಂದು ಮಾಡೆಲ್ ನ ವಾಹನಗಳು ಗ್ರಾಹಕರನ್ನು ಸೆಳೆಯುತ್ತಿದ್ದು. ಮಾರುಕಟ್ಟೆಗೆ ಹೊಸ ಹೊಸ ವಾಹನಗಳು ಲಗ್ಗೆ ಇಡುತ್ತಿವೆ. ಅದರಲ್ಲೂ ಇದೀಗ ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಕಾರು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆ ಗೆ ಬರಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
ಟಾಟಾ ಕರ್ವ್ ಇವಿ ( Curvv EV )

ಈ ಟಾಟಾ ಎಲೆಕ್ಟ್ರಿಕ್ ಕಾರ್ ನ ( Tata Electric Car ) ಬಗ್ಗೆ ಹೇಳುವುದಾದರೆ, ಇದು ಎಲೆಕ್ಟ್ರಿಕ್ ವಾಹನಗಳಿಗೆ ಟಕ್ಕರ್ ನೀಡುವಂತೆ ರೆಡಿ ಆಗುತ್ತಿದೆ. ಹೌದು ಯಾಕೆಂದರೆ ಈ ಕಾರ್ ನಲ್ಲಿ ಮೊದಲು ಇದ್ದ ವಾಹಗಳ ಅಂಶಗಳನ್ನು ಹೊರತು ಪಡಿಸಿ ಇನ್ನು ಹಲವು ಬದಲಾವಣೆಯನ್ನು ಈ ವಾಹನದಲ್ಲಿ ಕಾಣಬಹುದು. ಈ ಕಾರ್ ಅನ್ನು ಪರ್ಚೆಸ್ ಮಾಡಲು ಜನರು ಕಾತುರ ದಿಂದ ಕಾಯುತ್ತಿದ್ದಾರೆ.
ಈ ಕಾರ್ ನ ಬಿಡುಗಡೆ ದಿನಾಂಕ ( Date ) :
ಸದ್ಯಕ್ಕೆ ಈ ಕಾರ್ ನ ಅನ್ನು 2024 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಕಂಪೆನಿಯು ನಿರ್ಧರಿಸಿದೆ. ಇದಕ್ಕೆ ಇನ್ನು ಸರಿಯಾದ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಎಂದು ಕಂಪೆನಿಯು ತಿಳಿಸಿದೆ.
ಈ ಕಾರ್ ನ ವಿನ್ಯಾಸದ ಬಗ್ಗೆ ನೋಡುವುದಾದರೆ :
ಟಾಟಾ ಕರ್ವ್ ಇವಿ ( Curvv EV ) ಕಾರ್ ಹೊಸ ರೂಪಾಂತರನ್ನು ಪಡೆದುಕೊಂಡಿದೆ. ಆಧುನಿಕ ಅಂಶಗಳನ್ನು ಒಳಗೊಂಡು ಈ ಕಾರನ್ನು ರೆಡಿ ಮಾಡಲಾಗಿದೆ. ಈ ಕಾರ್ ನಲ್ಲಿ ಆರಾಮದಾಯಕ ಜರ್ನಿಯನ್ನು ಮಾಡಬಹುದು. ಅದಕ್ಕಾಗಿ ಹಲವು ವಿಶಿಷ್ಟತೆಗಳನ್ನು ನೀಡಿದ್ದಾರೆ. ಅವುಗಳೆಂದರೆ :

1. ಸನ್‌ರೂಫ್ (Sunroof)
2. ಮಲ್ಟಿಫಂಕ್ಷನಲ್ ಸ್ಟೀರಿಂಗ್ ವೀಲ್ (Multifunctional Steering Wheel)
3. ಡಿಜಿಟಲ್ ಡ್ರೈವರ್ ಡಿಸ್‌ಪ್ಲೇ
4. LED ಬಾರ್‌ಗಳು
5. ಸ್ಪ್ಲಿಟ್ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು
6. ಪ್ರಯಾಣಿಕರ ಸುರಕ್ಷತೆಗಾಗಿ Curvv EV 6 ಏರ್‌ಬ್ಯಾಗ್‌ಗಳು
7. ಮತ್ತು DRL ಹಾಗೂ ತ್ರಿಕೋನ ಹೆಡ್‌ಲ್ಯಾಂಪ್ ವಿನ್ಯಾಸವನ್ನು ಮುಂತಾದ ವಿಶಿಷ್ಟ ವಿನ್ಯಾಸಗಳನ್ನು ಹೊಂದಿದೆ.
ಕಾರ್ ನ ವಿಶೇಷತೆ ಅಂದರೆ, ಜಿಪ್ಟ್ರಾನ್ ತಂತ್ರಜ್ಞಾನದೊಂದಿಗೆ ( Ziptran Technology ) ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಹಾಗೆಯೇ ಇದು 400 ರಿಂದ 550 ಕಿಲೋಮೀಟರ್ ವ್ಯಾಪ್ತಿಯೊಂದಿಗೆ ಡ್ರೈವ್ ಮಾಡಬಹುದಾಗಿದೆ. ಇನ್ನು ಈ ಕಾರ್ ನ ಬೆಲೆಯ ಬಗ್ಗೆ ನೋಡುವುದಾದರೆ, ರೂ 10.50 ಲಕ್ಷ ಆಗಿರುತ್ತದೆ. ಈ ಕಾರ್ ಅನ್ನು ಆದಷ್ಟು ಬೇಗ ಮಾರುಕಟ್ಟೆಗೆ ಬರಲಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ
ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group








