ಉಚಿತ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ..! ಹೀಗೆ ಅರ್ಜಿ ಸಲ್ಲಿಸಿ

murarji desai school application

1 ರಿಂದ 5 ನೇ ತರಗತಿ ಮುಗಿಸಿದ ವಿದ್ಯಾರ್ಥಿಗಳಿಗೆ ಇದೀಗ ಗುಡ್ ನ್ಯೂಸ್ ತಿಳಿದು ಬಂದಿದೆ. ಹೌದು ಅದೇನೆಂದ್ರೆ 2024-25ನೇ ಸಾಲಿನಲ್ಲಿ ಕೆಆರ್‌ಇಐಎಸ್‌ ( KREIS ) ವಸತಿ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯಲು ನಡೆಸಲಾಗುವ ಎಂಟ್ರಾನ್ಸ್‌ ಟೆಸ್ಟ್‌ಗೆ ( Entrens Exam ) ಇದೀಗ ಅರ್ಜಿ ಆಹ್ವಾನಿಸಲಾಗಿದೆ. ಅದರ ಬಗ್ಗೆ ಮಾಹಿತಿ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

2024-25ನೇ ಸಾಲಿನಲ್ಲಿ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶ ಪಡೆಯುವರಿಗೆ ಇದೀಗ ಅರ್ಜಿ ಆಹ್ವಾನಿಸಿದೆ. ಈ ಶಾಲೆಗಳಲ್ಲಿ ಪ್ರವೇಶ ಪಡೆಯಲು ಅವರಿಗೆ ಅರ್ಹತಾ ಪರೀಕ್ಷೆ ನಡೆಸುತ್ತಾರೆ. ಈ ಒಂದು ಎಂಟ್ರ್ಯಾನ್ಸ್‌ ಪರೀಕ್ಷೆ(entrance exam) ಬರೆಯುವ ಮೂಲಕ ಇಲ್ಲಿ ತಿಳಿಸಿರುವ ಶಾಲೆಗಳಲ್ಲಿ ಅಡ್ಮಿಷನ್‌ ( Admission ) ಪಡೆಯಲು ಅವಕಾಶ ಪಡೆಯಬಹುದು.

ಹಲವು ಶಾಲೆಗಳಲ್ಲಿ 6ನೇ ತರಗತಿಗೆ ಪ್ರವೇಶಕ್ಕೆ ಎಂಟ್ರೆನ್ಸ್ ಪ್ರವೇಶ ಪರೀಕ್ಷೆ ಮತ್ತು ಕೌನ್ಸಿಲಿಂಗ್(counseling) ಅನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಲಿದೆ. ಆ ಶಾಲೆಗಳ ಹೆಸರುಗಳು ಹೀಗಿವೆ :

ಮೊರಾರ್ಜಿ ದೇಸಾಯಿ ವಸತಿ ಶಾಲೆ
ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ
ಏಕಲವ್ಯ ಮಾದರಿ ವಸತಿ ಶಾಲೆ
ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ
ಶ್ರೀಮತಿ ಇಂದಿರಾ ಗಾಂಧಿ ವಸತಿ ಶಾಲೆ
ಡಾ ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ
ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಸತಿ ಶಾಲೆ
ಸಂಗೊಳ್ಳಿ ರಾಯಣ್ಣ ವಸತಿ ಶಾಲೆ
ಕವಿರನ್ನ ವಸತಿ ಶಾಲೆ
1ಗಾಂಧಿತತ್ವ ವಸತಿ ಶಾಲೆ
ಶ್ರೀ ನಾರಾಯಣ ಗುರು ಮುಂತಾದ ವಸತಿ ಶಾಲೆಗಳು

ಈ ಪರೀಕ್ಷೆಯನ್ನು ಬರೆಯಲು ಈ ಕೆಳಗೆ ನೀಡಿರುವ ಅರ್ಹತೆಗಳು ( Qualifications ) ಇರಬೇಕಾಗುತ್ತವೆ. ಅವುಗಲೆಂದರೆ :

vasati schools

ಪ್ರಸಕ್ತ ಸಾಲಿನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು ತಮ್ಮ ಮಕ್ಕಳ ಪರವಾಗಿ ಅರ್ಜಿ ಸಲ್ಲಿಸಬಹುದು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.2,50,000 ಮೀರಿರಬಾರದು.
ಹಿಂದುಳಿದ ವರ್ಗದ ಪ್ರವರ್ಗ-1 ರ ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.2,50,000 ಮೀರಿರಬಾರದು.
ಹಿಂದುಳಿದ ವರ್ಗದ 2A, 2B, 3A, 3B ವಿದ್ಯಾರ್ಥಿಗಳ ಕುಟುಂಬದ ವಾರ್ಷಿಕ ಆದಾಯ ರೂ.1,00,000 ಮೀರಿರಬಾರದು.

ಎಂಟ್ರೆನ್ಸ್ ಪರೀಕ್ಷೆ ಬರೆಯಲು ಪ್ರಮುಖ ದಿನಾಂಕಗಳನ್ನು ( Important Dates ) ನಿಗದಿಪಡಿಸಿದ್ದಾರೆ. ಆ ದಿನಾಂಕಗಳ ವಿವರ ಈ ಕೆಳಗಿನಂತಿದೆ :

ವಿದ್ಯಾರ್ಥಿಗಳು ಪೋಷಕರು ಡಿಸೆಂಬರ್ 7 ರಿಂದ 31 ರವರೆಗೆ ಅಂದರೆ ಇವತ್ತೇ ಕೊನೆಯ ದಿನವಾಗಿದ್ದು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದೀಪಡಿಸಿದ ದಿನಾಂಕ : 07-12-2023 ರ ಬೆಳಿಗ್ಗೆ 11 ಗಂಟೆಯಿಂದ ಪ್ರಾಂಭವಾಗಿದೆ.

ಹಾಗೆಯೇ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 31-12-2023 ರ ರಾತ್ರಿ 11-59 ಗಂಟೆವರೆಗೆ ಇರುತ್ತದೆ.

ಹಾಗೆಯೇ ಪ್ರವೇಶ ಪರೀಕ್ಷೆಗೆ ಅಡ್ಮಿಟ್ ಕಾರ್ಡ್‌ ಬಿಡುಗಡೆ ಮಾಡುವ ದಿನಾಂಕ : 01-02-2024 ಆಗಿರುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಎಂಟ್ರೆನ್ಸ್ ಎಕ್ಷಾಮ್ ಬರೆಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವರಾಗಿದ್ದರೆ ಅವರಿಗೆ ಕೆಲವು ಸೂಚನೆಗಳ ನೀಡಿದ್ದಾರೆ.

ವಿದ್ಯಾರ್ಥಿಯು 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಶಾಲೆಯಿಂದ :
SATS ಸಂಖ್ಯೆ
ಇತ್ತೀಚಿನ ಭಾವಚಿತ್ರ
ಮೀಸಲಾತಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳನ್ನು ಅಥವಾ ಜೆರಾಕ್ಸ್‌ ಪ್ರತಿಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವ ಸಮಯದಲ್ಲಿ ಸಂಬಂಧಿತ ವಸತಿ ಶಾಲೆ / ಕಾಲೇಜಿನ ಮುಖ್ಯಸ್ಥರನ್ನು ಸಂಪರ್ಕಿಸಬೇಕು.
ವಿದ್ಯಾರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವಾಗ ಯಾವ ಶಾಲೆಗಳಲ್ಲಿ ದಾಖಲಾತಿ ಬಯಸುತ್ತಾರೋ, ಅಂತಹ ಶಾಲೆಗಳನ್ನು ಆರ್ಡರ್ ಪ್ರಕಾರ ಅವರು ಮಾಡಿಕೊಳ್ಳಬೇಕು.
ಈ ಮೇಲೆ ನೀಡಿರುವ ಶಾಲೆಗಳಲ್ಲಿ ಮಾತ್ರ ಪರೀಕ್ಷೆಗೆ ಆದ್ಯತೆ ನೀಡುತ್ತಾರೆ.
ಹಾಗೆಯೇ ವಿದ್ಯಾರ್ಥಿಗಳು ತಮ್ಮ ಸೀಟು ಹಂಚಿಕೆ ಅವಕಾಶ ಹೆಚ್ಚಿಸಿಕೊಳ್ಳಲು ತಮ್ಮ ಜಿಲ್ಲೆಯಲ್ಲಿರುವ KREIS ನ ಮೇಲೆ ನೀಡಿರುವ ವಸತಿ ಶಾಲೆಗಲ್ಲಿ ಮಾತ್ರ ಪರೀಕ್ಷೆ ಪಡೆಯಲು ಅವಕಾಶ ಇರುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:

ವಿದ್ಯಾರ್ಥಿಗಳು / ಪೋಷಕರು ಅರ್ಜಿಯನ್ನು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ವಸತಿ ಶಾಲೆ / ಕಾಲೇಜುಗಳ ಮೂಲಕ ಆನ್‌ಲೈನ್‌ ನಲ್ಲಿ ಸಲ್ಲಿಸುವಂತೆ ಮಾಹಿತಿಯನ್ನು ನೀಡಲಾಗಿದೆ.

ಆನ್‌ಲೈನ್‌ ಅರ್ಜಿ ಲಿಂಕ್‌ ಗಾಗಿ ಭೇಟಿ ನೀಡಬೇಕಾದ ವೆಬ್‌ಸೈಟ್‌( ಜಾಲತಾಣ) ವಿಳಾಸಗಳು : http://kea.kar.nic.in / http://kreis.kar.nic.in

ಆದಷ್ಟು ಬೇಗ ವಿದ್ಯಾರ್ಥಿಗಳು ಈ ಮೇಲೆ ನೀಡಿರುವ ಶಾಲೆಗಲ್ಲಿ 6 ನೇ ತರಗತಿಯಲ್ಲಿ ಪ್ರವೇಶ ಪಡೆಯಬೇಕೆಂದರೆ ಆದಷ್ಟು ಬೇಗ ಆನ್ಲೈನ್ ಮೂಲಕ ಪ್ರವೇಶಕ್ಕೆ ನೀಡಿರುವ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು.

 ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app downloadPicsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!