ಅಯೋಧ್ಯೆಯ ರಾಮಮಂದಿರದ ಆ್ಯಪ್ ಬಿಡುಗಡೆ, ಅಯೋಧ್ಯೆಗೆ ಹೋಗೋರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ

divya ayodhya app

WhatsApp Group Telegram Group

ಇನ್ನೇನು ಕೆಲವೇ ದಿನಗಳಲ್ಲಿ ಶ್ರೀ ರಾಮ ಮಂದಿರ ( Shree Ram Mandir ) ಉದ್ಘಾಟನೆ ಆಗಲಿದೆ. ಇಂದೊಂದು ಖುಷಿಯ ವಿಚಾರ ಎನ್ನಬಹುದು. ಅಯೋಧ್ಯೆಯಲ್ಲಿ ಜನವರಿ 22 ( January 22nd ) ರಂದು ಶ್ರೀರಾಮ ಮಂದಿರದ ಉದ್ಘಾಟನೆ ನಡೆಯುತ್ತದೆ. ಈ ಉದ್ಘಾಟನೆಗೂ ಮೊದಲು ಇಲ್ಲಿಗೆ ಸಹಸ್ರಾರು ಪ್ರವಾಸಿಗರು, ವಿಶೇಷ ಅತಿಥಿಗಳು ಹಾಗೂ ವಿದೇಶಿ ಅತಿಥಿಗಳು ಆಗಮಿಸುತ್ತಾರೆ. ಹಾಗಾಗಿ ಅವರಿಗಾಗಿ ಸಿಎಂ ಯೋಗಿ ಆದಿತ್ಯನಾಥ್ ( CM Yogi Adithyanath ) ಅವರು ಹೊಸ ಆ್ಯಪ್ ( New App ) ಒಂದನ್ನು ಬಿಡುಗಡೆ ಮಾಡಿದ್ದಾರೆ. ದಿವ್ಯ ಅಯೋಧ್ಯಯ ( Divya Ayodhya ) ಹೆಸರಿನಲ್ಲಿ ಬಿಡುಗಡೆಯಾದ ಈ ಆ್ಯಪ್ ನಲ್ಲಿ ಒಂದೇ ಸ್ಥಳದಲ್ಲಿ ಹಲವು ಸೌಲಭ್ಯಗಳು ಲಭ್ಯವಾಗಲಿವೆ. ಅದರ ಬಗ್ಗೆ ಸಂಪೂರ್ಣ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 22 ರಂದು ಅಯೋಧ್ಯೆ ಶ್ರೀ ರಾಮ ಮಂದಿರ ಉದ್ಘಾಟನೆ :

ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದೆ. ಜನವರಿ 22 ರಂದು ರಾಮ ಮಂದಿರದ ಗರ್ಭ ಗೃಹದಲ್ಲಿ ಪ್ರಧಾನಿ ಮೋದಿ ( Narendra Modi ) ಅವರ ಸಾರಥ್ಯದಲ್ಲಿ ಶ್ರೀ ರಾಮನ ವಿಗ್ರಹ ( Shree Ram Statue ) ಪ್ರತಿಷ್ಠಾಪನೆ ಆಗಲಿದೆ. ಇದರ ಜೊತೆಯಲ್ಲೇ ಬರೋಬ್ಬರಿ 48 ದಿನಗಳ ಕಾಲ ಬ್ರಹ್ಮಕಲಶೋತ್ಸವ ಕೂಡಾ ನಡೆಯಲಿದೆ. ಇದೇ ಹೊತ್ತಲ್ಲಿ ಭಾರತ ದೇಶ ಮಾತ್ರವಲ್ಲ, ವಿಶ್ವಾದ್ಯಂತ ಹಿಂದೂ ಧರ್ಮೀಯರು ಮನೆ ಮನೆಗಳಲ್ಲಿ ದೀಪ ಬೆಳಗಿ ರಾಮ ನಾಮ ಸ್ಮರಣೆ ಮಾಡಲಿದ್ದಾರೆ. ಇನ್ನು ಉದ್ಘಾಟನೆಗೆ ಸಜ್ಜಾಗಿರುವ ಅಯೋಧ್ಯಾ ಶ್ರೀರಾಮ ಮಂದಿರ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಜೊತೆಯಲ್ಲೇ ಇಲ್ಲಿನ ಪೂಜೆ, ಪುನಸ್ಕಾರಗಳೂ ವಿಶಿಷ್ಟವಾಗಿ ನಡೆಯಲಿದೆ.

ಸಿಎಂ ಯೋಗಿ ಆದಿತ್ಯನಾಥ್ ಅವರಿಂದ ದಿವ್ಯ ಅಯೋಧ್ಯ ಹೆಸರಿನ ಆಪ್ ಬಿಡುಗಡೆ ( Divya Ayodhya App ) :

divya ayodhya tourist app

ಇದೀಗ ಸಿಎಂ ಯೋಗಿ ಆದಿತ್ಯನಾಥ್ ಅವರು ದಿವ್ಯ ಅಯೋಧ್ಯ ಹೆಸರಿನಲ್ಲಿ ಒಂದು ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ. ಈ ಒಂದು ಅಪ್ಲಿಕೇಶನ್ ಅನ್ನು ಬಳಸಿಕೊಂಡು ಭಕ್ತರು ಮತ್ತು ಪ್ರವಾಸಿಗರು ಅಯೋಧ್ಯೆಯನ್ನು ಸುಲಭವಾಗಿ ನ್ಯಾವಿಗೇಟ್ ( Navigate ) ಮಾಡಲು ಬಹಳ ಉಪಯುಕ್ತವಾಗಿದೆ. ಹಾಗೆಯೇ ಈ ಆಪ್ಲಿಕೇಶನ್ ಬಳಸಿಕೊಂಡು ಅಯೋಧ್ಯೆಯ ಸಾಂಸ್ಕೃತಿಕ ವೈಭವ, ಪ್ರಮುಖ ಹೆಗ್ಗುರುತುಗಳು, ದೇವಾಲಯಗಳು, ಮಠಗಳು ಮತ್ತು ಐತಿಹಾಸಿಕ ಸ್ಥಳಗಳ ವಿವರವಾದ ವಿವರಣೆಗಳು ಮತ್ತು ವೇಳಾಪಟ್ಟಿಗಳನ್ನು ಪಡೆಯಬಹುದು.

ಅಷ್ಟೇ ಅಲ್ಲದೆ ರಾಮನಗರ ಅಯೋಧ್ಯೆಯ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಸ್ಥಳಗಳು, ಹೋಟೆಲ್, ಕ್ಯಾಬ್ ಬುಕಿಂಗ್ ಇತ್ಯಾದಿಗಳ ಬಗ್ಗೆ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಈ ಆ್ಯಪ್ ನಲ್ಲಿ ಪ್ರವಾಸಿಗರು ಒಂದೇ ಸ್ಥಳದಲ್ಲಿ ಇ-ಕಾರ್, ಇ-ಬಸ್‌, ವೀಲ್ ಚೇರ್, ಗಾಲ್ಫ್ ಕಾರ್ಟ್ ಮುಂತಾದ ಹಲವು ಸೌಲಭ್ಯಗಳನ್ನು ಪಡೆಯಲು ಈ ಒಂದು ಆಪ್ ಸಹಾಯ ಮಾಡುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಿಂದ Divya Ayodhya ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ದಿವ್ಯ ಅಯೋಧ್ಯ ಅಪ್ಲಿಕೇಶನ್ ಅನ್ನು ಬಳಸುವ ವಿಧಾನ ( Steps for using App ) :

ಹಂತ 1: ಮೊದಲು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ನ ಪ್ಲೇ ಸ್ಟೋರ್ ಅಪ್ಲಿಕೇಶನ್ ನಲ್ಲಿ ಈ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.
ಹಂತ 2: ಡೌನ್‌ಲೋಡ್ ಮಾಡಿಕೊಂಡ ಅಪ್ಲಿಕೇಶನ್ ಅನ್ನು ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ತೆರೆಯಬೇಕು.
ಹಂತ 3: ನಂತರ ಆ ಅಪ್ಲಿಕೇಶನ್ ನ ಮುಖಪುಟದಲ್ಲಿ ನಿಮಗೆ ಹಲವು ರೀತಿಯ ಆಯ್ಕೆಗಳು ಕಾಣಸಿಗುತ್ತವೆ.
ಹಂತ 4: ಹಾಗೆಯೇ ನಿಮ್ಮ ಮೊಬೈಲ್ ಸಂಖ್ಯೆಯೊಂದಿಗೆ ನೀವು ಅಪ್ಲಿಕೇಶನ್‌ನಲ್ಲಿ ನೋಂದಾಯಿಸಿಕೊಳ್ಳಬೇಕು.
ಹಂತ 5: ಇದಾದ ನಂತರ, ನೀವು ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವ ಮೂಲಕ ಅಪ್ಲಿಕೇಶನ್‌ನ ಎಲ್ಲಾ ವೈಶಿಷ್ಟ್ಯಗಳನ್ನು ಆನಂದಿಸಲು ಸಾಧ್ಯವಾಗುತ್ತದೆ.
ಅಯೋಧ್ಯೆಗೆ ಬರುವ ಮೊದಲು ಅಯೋಧ್ಯೆ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.
ಮತ್ತು ಈ ಲೇಖನದಲ್ಲಿ ಮೇಲೆ ಹೇಳಿದಂತೆ ಈ ಅಪ್ಲಿಕೇಶನ್‌ನಲ್ಲಿ ನೀವು ಅಯೋಧ್ಯೆ ದೇವಾಲಯಗಳ ಆರತಿಯನ್ನು ಕಾಯ್ದಿರಿಸಲು, ಹೋಮ್-ಸ್ಟೇ ಇತ್ಯಾದಿಗಳನ್ನು ಕಾಯ್ದಿರಿಸಲು ಅಲ್ಲಿ ನೀಡಿದ ಎಲ್ಲ ಸೌಲಭ್ಯವನ್ನು ಪಡೆಯಬಹುದು.

WhatsApp Group Join Now
Telegram Group Join Now

Related Posts

Editor in Chief

Editor in Chief

Lingaraj Ramapur BCA, MCA, MA ( Journalism );as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.

Leave a Reply

Your email address will not be published. Required fields are marked *

error: Content is protected !!