Picsart 25 10 02 00 28 13 333 scaled

ಮೊಬೈಲ್‌ ಬಳಕೆದಾರರೇ ಎಚ್ಚರ: ಈ 10 ಅಪಾಯಕಾರಿ ನಂಬರ್‌ಗಳಿಂದ ಕರೆ ಬಂದರೆ ಸ್ವೀಕರಿಸಬೇಡಿ!

Categories:
WhatsApp Group Telegram Group

ಇಂದಿನ ಡಿಜಿಟಲ್ ಯುಗದಲ್ಲಿ (Digital Age) ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಆನ್‌ಲೈನ್ ವ್ಯವಹಾರ, ಬ್ಯಾಂಕಿಂಗ್, ಶಾಪಿಂಗ್, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಪ್ರತಿಯೊಂದು ದಿನನಿತ್ಯದ ಕಾರ್ಯವೂ ಈಗ ಮೊಬೈಲ್ ಫೋನ್‌ನಲ್ಲೇ ಸಾಗುತ್ತಿದೆ. ಆದರೆ, ತಂತ್ರಜ್ಞಾನದ ಈ ಸೌಲಭ್ಯವನ್ನು ದುರುಪಯೋಗಪಡಿಸಿಕೊಳ್ಳುವವರ ಕೊರತೆಯಿಲ್ಲ. ಸ್ಕ್ಯಾಮರ್‌ಗಳು (Scammers) ಹೊಸ-ಹೊಸ ತಂತ್ರಗಳನ್ನು ಬಳಸಿಕೊಂಡು ಜನರನ್ನು ಮೋಸಗೊಳಿಸುತ್ತಿದ್ದಾರೆ. ಹೆಚ್ಚಿನ ಸಂದರ್ಭಗಳಲ್ಲಿ, ಅವರು ಫೋನ್ ಕಾಲ್ ಅಥವಾ ಎಸ್‌ಎಂಎಸ್ ಮೂಲಕ ಭಾವನಾತ್ಮಕ ಒತ್ತಡ ಸೃಷ್ಟಿಸಿ, ಖಾತೆ ವಿವರಗಳು, OTP, ಪಾಸ್‌ವರ್ಡ್, ಡೆಬಿಟ್/ಕ್ರೆಡಿಟ್ ಕಾರ್ಡ್  ಬಲವಂತವಾಗಿ ಕಸಿದುಕೊಳ್ಳುತ್ತಾರೆ.

ಅಮೆರಿಕಾದ ಖ್ಯಾತ ಸಾಫ್ಟ್‌ವೇರ್ ಸಂಸ್ಥೆ BeenVerified ಇತ್ತೀಚೆಗೆ ಒಂದು ವರದಿಯನ್ನು ಬಿಡುಗಡೆ ಮಾಡಿದ್ದು, ಹಗರಣಕ್ಕಾಗಿ ಹೆಚ್ಚು ಬಳಸಲಾಗುತ್ತಿರುವ ಟಾಪ್ 10 ಫೋನ್ ಸಂಖ್ಯೆಗಳ ಪಟ್ಟಿಯನ್ನು ಬಹಿರಂಗಪಡಿಸಿದೆ. ಈ ಸಂಖ್ಯೆಗಳ ಮೂಲಕ ನಡೆಯುವ ಮೋಸ ಹಲವು ಬಗೆಯದ್ದಾಗಿದೆ. ಬ್ಯಾಂಕ್ ಖಾತೆ ಲಾಕ್(Bank Account Lock) ಆಗಿದೆ ಎನ್ನುವುದು, ಲಾಟರಿ ಗೆದ್ದಿದ್ದೀರಿ ಎನ್ನುವುದು, ಡೆಲಿವರಿ ವಿಫಲವಾಗಿದೆ ಎಂಬ ಸುಳ್ಳು ನೆಪ, ವಂಚಿತ ಉತ್ಪನ್ನಗಳ ಪ್ರಚಾರ ಮುಂತಾದವು.
ಹೀಗಾಗಿ, ನಿಮ್ಮ ಸುರಕ್ಷತೆಗಾಗಿ ಈ 10 ಅಪಾಯಕಾರಿ ನಂಬರ್‌ಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಈ ಸಂಖ್ಯೆಗಳಿಂದ ಕರೆ ಬಂದರೆ ಯಾವುದೇ ಸಂದರ್ಭದಲ್ಲೂ ರಿಸೀವ್ ಮಾಡಬಾರದು.

ಹಗರಣಕ್ಕೆ ಹೆಚ್ಚು ಬಳಸಲಾಗುತ್ತಿರುವ 10 ನಂಬರ್‌ಗಳು:

1. (865) 630-4266
ವೆಲ್ಸ್ ಫಾರ್ಗೋ ಬ್ಯಾಂಕ್ ಖಾತೆ (Bank Account) ತಾತ್ಕಾಲಿಕವಾಗಿ ಲಾಕ್ ಆಗಿದೆ ಎಂದು ಸುಳ್ಳು ಹೇಳಿ, ಮತ್ತೆ ಆಕ್ಟಿವೇಟ್ ಮಾಡಲು ತುರ್ತು ಕರೆ ಮಾಡಲು ಒತ್ತಾಯಿಸುತ್ತಾರೆ.

2. (469) 709-7630
“ವಿಫಲವಾದ ವಿತರಣಾ ಪ್ರಯತ್ನ” ಎಂಬ ನೆಪದಲ್ಲಿ, ಬಲಿಯಾದವರ ಹೆಸರು ಅಥವಾ ಅವರ ಆಪ್ತರ ಹೆಸರನ್ನು ಉಲ್ಲೇಖಿಸಿ ಸುಳ್ಳು ಸಂದೇಶ ಕಳುಹಿಸುತ್ತಾರೆ.

3. (805) 637-7243
ವೀಸಾ ಕ್ರೆಡಿಟ್ ಕಾರ್ಡ್ (Credit Card) ವಂಚನೆ ವಿಭಾಗದಿಂದ ಕರೆ ಬಂದಿದೆ ಎಂದು ನಂಬಿಸುವ ಪ್ರಯತ್ನ.

4. (858) 605-9622
ನಿಮ್ಮ ಬ್ಯಾಂಕ್ ಖಾತೆಗಳನ್ನು ತಾತ್ಕಾಲಿಕವಾಗಿ ಫ್ರೀಜ್ (Temperarly freeze) ಮಾಡಲಾಗಿದೆ ಎಂಬ ಭಯ ಹುಟ್ಟುಹಾಕುವ ಸಂದೇಶ.

5. (863) 532-7969
ಯಾವುದೇ ನಿರ್ದಿಷ್ಟ ಬ್ಯಾಂಕ್ ಹೆಸರಿಲ್ಲದೇ “ನಿಮ್ಮ ಡೆಬಿಟ್ ಕಾರ್ಡ್ ಸ್ಥಗಿತಗೊಂಡಿದೆ” ಎಂದು ಎಚ್ಚರಿಸುವ ನಕಲಿ ಕರೆ.

6. (904) 495-2559
“AT&T ಲಾಟರಿ ಗೆದ್ದಿದ್ದೀರಿ” ಎಂದು ಸುಳ್ಳು ಮಾಹಿತಿ ನೀಡಿ ಹಣ ಕಸಿದುಕೊಳ್ಳುವ ಪ್ರಯತ್ನ.

7. (312) 339-1227
ಶಂಕಿತ ತೂಕ ಇಳಿಸುವ ಉತ್ಪನ್ನಗಳ ಜಾಹೀರಾತು ಹಾಗೂ ನಕಲಿ ಪಾರ್ಸೆಲ್ ಹಗರಣಗಳಿಗೆ ಬಳಸಲ್ಪಡುವ ನಂಬರ್.

8. (917) 540-7996
“Stream VI” ಹೆಸರಿನ ಸುಳ್ಳು ಮಾರುಕಟ್ಟಾ ತಂತ್ರದಲ್ಲಿ ಬಳಸಲ್ಪಟ್ಟಿದೆ.

9. (347) 437-1689
ಸಣ್ಣ ಮೊತ್ತದ ಹಣದ ಹಗರಣದಿಂದ ಹಿಡಿದು “ಉಚಿತ ಡೈಸನ್ ವ್ಯಾಕ್ಯೂಮ್ ಕ್ಲೀನರ್” (Free Disen Vacuum Cleaner) ಕೊಡುವುದಾಗಿ ಸುಳ್ಳು ಭರವಸೆ ನೀಡುವ ಮೋಸ.

10. (301) 307-4601
ಯುಎಸ್‌ಪಿಎಸ್ (USPS) ವಿತರಣಾ ಹಗರಣಕ್ಕೆ ಸಂಬಂಧಿಸಿದ ತಪ್ಪು ಸಂದೇಶಗಳನ್ನು ಕಳುಹಿಸುವ ನಂಬರ್.

ಮುನ್ನೆಚ್ಚರಿಕೆ ಸಲಹೆಗಳು ಹೀಗಿವೆ:

ಅಪರಿಚಿತ ಸಂಖ್ಯೆಯಿಂದ ಬಂದ ಕರೆ/ಮೆಸೇಜ್‌ಗಳಿಗೆ ಪ್ರತಿಕ್ರಿಯಿಸಬೇಡಿ.
OTP, ಬ್ಯಾಂಕ್ ವಿವರಗಳು, ಪಾಸ್‌ವರ್ಡ್ ಯಾರಿಗೂ ಹಂಚಬೇಡಿ.
“ಲಾಟರಿ”, “ಉಚಿತ ಗಿಫ್ಟ್” ಎಂಬ ಆಕರ್ಷಕ ಆಮಿಷಗಳಿಗೆ (Attractive offer’s) ಬಲಿಯಾಗಬೇಡಿ.
ಅನುಮಾನಾಸ್ಪದ ಕರೆ ಬಂದರೆ ತಕ್ಷಣ ಬ್ಲಾಕ್ ಮಾಡಿ, ಅಗತ್ಯವಿದ್ದರೆ ಸಂಬಂಧಿತ ಅಧಿಕಾರಿಗಳಿಗೆ ದೂರು ನೀಡಿ.

ಒಟ್ಟಾರೆಯಾಗಿ, ಇಂತಹ ಹಗರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರೂ (Mobile users) ಎಚ್ಚರಿಕೆ ವಹಿಸುವುದು ಅತ್ಯಗತ್ಯ. ಕಾಲ್ ಬಂದ್ರೆ ಎತ್ತವು ಎಂಬ ಅಭ್ಯಾಸವನ್ನು ಬಿಟ್ಟು, ಮೊದಲು ಆ ನಂಬರ್‌ ಸುರಕ್ಷಿತವೇ ಎಂಬುದನ್ನು ಪರಿಶೀಲಿಸಿ.

WhatsApp Image 2025 09 05 at 10.22.29 AM 13

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories