ಸೈಬರ್ ವಂಚನೆಗಳು (Cyber Crime) ಈಗ ಹೊಸ ಹೊಸ ವಿಧಾನಗಳಲ್ಲಿ ನಡೆಯುತ್ತಿವೆ. ಪ್ರತಿದಿನ ಸಾವಿರಾರು ಜನ ಈ ವಂಚನೆಗಳಿಗೆ ಬಲಿಯಾಗುತ್ತಿದ್ದಾರೆ. ಇದರಲ್ಲಿ ಬೀಳುವವರು ಕೇವಲ ಅಜ್ಞಾನಿಗಳು ಮಾತ್ರವಲ್ಲ, ಉನ್ನತ ಶಿಕ್ಷಣ ಹೊಂದಿದವರು ಮತ್ತು ಉದ್ಯೋಗಿಗಳೂ ಸೇರಿದ್ದಾರೆ. ಇತ್ತೀಚೆಗೆ, ರಜೆಯ ಸಮಯದಲ್ಲಿ ಮೈಸೂರು ಪ್ರವಾಸಕ್ಕೆ ಹೋದ ಒಂದು ಕುಟುಂಬ ಸೈಬರ್ ವಂಚಕರ ಬಲೆಗೆ ಸಿಕ್ಕು ಹಣಕಾಸಿನ ನಷ್ಟ ಅನುಭವಿಸಿದೆ.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರಿನ ಕುಟುಂಬದ ಪಜೀತಿ
ಚಿಕ್ಕಮಗಳೂರಿನ (Chikkamagaluru) ಮಹೇಶ್ ಎಂಬುವರು ತಮ್ಮ ಕುಟುಂಬದೊಂದಿಗೆ ಮೈಸೂರಿಗೆ (Mysuru) ರಜಾ ಪ್ರವಾಸಕ್ಕೆ ಹೋಗಿದ್ದರು. ಅಲ್ಲಿ GRS ಫ್ಯಾಂಟಸಿ ಪಾರ್ಕ್ ಗೆ ಭೇಟಿ ನೀಡಲು ಆನ್ಲೈನ್ ಟಿಕೆಟ್ ಬುಕ್ ಮಾಡಲು ಅವರು ಇಂಟರ್ನೆಟ್ ಹುಡುಕಿದರು. ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವಾಗಕಂಡುಬಂದ ಒಂದು ಲಿಂಕ್ ಅನ್ನು ಕ್ಲಿಕ್ ಮಾಡಿದ ನಂತರ, ಅದು ಅವರನ್ನು ಒಂದು ನಕಲಿ ವೆಬ್ ಸೈಟ್ ಗಳನ್ನು ಕರೆದೊಯ್ಯಿತು. ಅಲ್ಲಿ ಅವರು ಪಾರ್ಕ್‌ನ ವಿವಿಧ ಆಟಗಳ ಬಗ್ಗೆ ಮಾಹಿತಿ ನೋಡಿ, ಟಿಕೆಟ್ ಬುಕ್ ಮಾಡಲು ತಮ್ಮ ಹೆಸರು, ಇಮೇಲ್, ಮೊಬೈಲ್ ನಂಬರ್ ಮತ್ತು ಪಿನ್ ಕೋಡ್ ನಮೂದಿಸಿದರು. ನಂತರ, ಗೂಗಲ್ ಪೇ (Google Pay) ಮೂಲಕ ಪಾವತಿ ಮಾಡಲು ಪ್ರಯತ್ನಿಸಿದಾಗ, “ತಪ್ಪಾದ UPI ಪಿನ್” ಎಂದು ಸಂದೇಶ ಬಂದಿತು.
ಕೆಲವೇ ನಿಮಿಷಗಳ ನಂತರ, ಮಹೇಶ್ ಅವರ ಬ್ಯಾಂಕ್ ಖಾತೆಯಿಂದ ₹90,000 ಮತ್ತು ₹5,000 ಎರಡು ಬಾರಿ ಡೆಬಿಟ್ ಆಗಿರುವ ಎಸ್ಎಂಎಸ್ ಬಂದಿತು. ಒಟ್ಟು ₹95,000 ಹಣ ಅವರ ಖಾತೆಯಿಂದ ಕಳವಾಗಿತ್ತು. ತಕ್ಷಣ ಅವರು ರಾಷ್ಟ್ರೀಯ ಸೈಬರ್ ಕ್ರೈಮ್ ಹೆಲ್ಪ್ಲೈನ್ 1930 ಗೆ ಕರೆ ಮಾಡಿ ದೂರು ನೀಡಿದರು. ಪೊಲೀಸರು ತಡರಹಿತ ಕ್ರಮ ತೆಗೆದುಕೊಂಡು ₹70,000 ಹಣವನ್ನು ಫ್ರೀಜ್ ಮಾಡಲು ಸಾಧ್ಯವಾಯಿತು.
ಹೇಗೆ ತಪ್ಪಿಸಬೇಕು ಸೈಬರ್ ವಂಚನೆ?
ಮೊಬೈಲ್ ಗೆ ಬರುವ ಅನುಮಾನಾಸ್ಪದ ಲಿಂಕ್ ಗಳನ್ನು ಕ್ಲಿಕ್ ಮಾಡಬೇಡಿ – ನೀವು ಬುಕ್ ಮಾಡುವ ಸೈಟ್ ಅಧಿಕೃತವಾದುದೇ ಎಂದು ಖಚಿತಪಡಿಸಿಕೊಳ್ಳಿ.
UPI/ನೆಟ್ ಬ್ಯಾಂಕಿಂಗ್ ಡಿಟೈಲ್ಸ್ ಕೊಡಬೇಡಿ – ಯಾವುದೇ ವೆಬ್ ಸೈಟ್ ನಿಮ್ಮ ಪಿನ್ ಅಥವಾ OTP ಕೇಳಿದರೆ ಸ್ಕ್ಯಾಮ್ ಎಂದು ಭಾವಿಸಿ.
ಟ್ರ್ಯಾಕ್ಷನ್ ಇಲ್ಲದ ವೆಬ್ ಸೈಟ್ ಗಳನ್ನು ನಂಬಬೇಡಿ – HTTPS ಮತ್ತು ಲಾಕ್ ಚಿಹ್ನೆ ಇರುವ ಸೈಟ್ಗಳನ್ನು ಮಾತ್ರ ಬಳಸಿ.
ಸೈಬರ್ ಕ್ರೈಮ್ ವಂಚನೆಗೆ ಒಳಗಾದರೆ ತಕ್ಷಣ 1930 ಗೆ ಕರೆ ಮಾಡಿ – ತಡಮಾಡದೆ ದೂರು ನೀಡಿದರೆ ಹಣವನ್ನು ಉಳಿಸಲು ಸಾಧ್ಯ.
ರಜಾ ಸಮಯದಲ್ಲಿ ಆನ್ಲೈನ್ ಟಿಕೆಟ್ ಬುಕಿಂಗ್, ಹೋಟೆಲ್ ರಿಸರ್ವೇಷನ್ ಮಾಡುವಾಗ ಹೆಚ್ಚು ಎಚ್ಚರಿಕೆ ವಹಿಸಬೇಕು. ಸೈಬರ್ ವಂಚಕರು ಹೊಸ ತಂತ್ರಗಳನ್ನು ಬಳಸುತ್ತಿರುವುದರಿಂದ, ಪ್ರತಿ ಒಂದು ಕ್ಲಿಕ್ ಮಾಡುವ ಮೊದಲು ದ್ವಿಮನಸ್ಸಿನಿಂದ ವರ್ತಿಸಿ. “ಕ್ಲಿಕ್ ಮಾಡುವ ಮೊದಲು ಯೋಚಿಸಿ, ಸುರಕ್ಷಿತರಾಗಿರಿ!”
ಎಚ್ಚರಿಕೆ: ಯಾವುದೇ ಸಂದೇಹಕರ ಲಿಂಕ್, ಕರೆ ಅಥವಾ ಮೆಸೇಜ್ ಬಂದರೆ, ತಕ್ಷಣ ಸೈಬರ್ ಕ್ರೈಮ್ ಅಧಿಕಾರಿಗಳನ್ನು ಸಂಪರ್ಕಿಸಿ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply