blue star scholarship 2026

Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ

ಬ್ಲೂ ಸ್ಟಾರ್ ಫೌಂಡೇಶನ್ ವತಿಯಿಂದ ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಹಾಗೂ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಮೋಹನ್ ಟಿ ಅಡ್ವಾಣಿ ಶತಾಬ್ದಿ ಸ್ಕಾಲರ್‌ಶಿಪ್ 2026-27’ ಪ್ರಕಟಿಸಲಾಗಿದೆ. ಗರಿಷ್ಠ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ, ಅರ್ಹತೆ, ಆಯ್ಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ಆನ್‌ಲೈನ್ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿ ಇಲ್ಲಿದೆ..

ಪ್ರಮುಖ ಮುಖ್ಯಾಂಶಗಳು

  • ಇಂಜಿನಿಯರಿಂಗ್, ಆರ್ಕಿಟೆಕ್ಚರ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ.
  • ಅರ್ಹ ಅಭ್ಯರ್ಥಿಗಳಿಗೆ ಗರಿಷ್ಠ ₹1,00,000 ವರೆಗೆ ಆರ್ಥಿಕ ನೆರವು.
  • ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 15 ಆಗಸ್ಟ್ 2026. Date extended

ಇಂಜಿನಿಯರಿಂಗ್ ಹಾಗೂ ಆರ್ಕಿಟೆಕ್ಚರ್ ಕ್ಷೇತ್ರಗಳಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿರುವ ಆರ್ಥಿಕವಾಗಿ ಹಿಂದುಳಿದ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗುವ ಉದ್ದೇಶದಿಂದ ಬ್ಲೂ ಸ್ಟಾರ್ ಲಿಮಿಟೆಡ್‌ನ ಸಾಮಾಜಿಕ ಜವಾಬ್ದಾರಿ (CSR) ಅಂಗವಾದ ಬ್ಲೂ ಸ್ಟಾರ್ ಫೌಂಡೇಶನ್ ‘ಮೋಹನ್ ಟಿ ಅಡ್ವಾಣಿ ಶತಾಬ್ದಿ ಸ್ಕಾಲರ್‌ಶಿಪ್ ಪ್ರೋಗ್ರಾಂ 2026-27’ ಅನ್ನು ಪ್ರಕಟಿಸಿದೆ.

bluestar

ಈ ಯೋಜನೆಯಡಿ ದೇಶದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಥಮ ಹಾಗೂ ದ್ವಿತೀಯ ವರ್ಷದ B.E./B.Tech, B.Arch ಮತ್ತು ಡಿಪ್ಲೊಮಾ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಹ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ₹1,00,000 ವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು Buddy4Study ಪೋರ್ಟಲ್ ಮೂಲಕ 2026ರ ಆಗಸ್ಟ್ 8 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಲೇಖನದಲ್ಲಿ ಅರ್ಹತೆ, ವಿದ್ಯಾರ್ಥಿವೇತನದ ಮೊತ್ತ, ಆಯ್ಕೆ ಪ್ರಕ್ರಿಯೆ, ಅಗತ್ಯ ದಾಖಲೆಗಳು ಹಾಗೂ ಅರ್ಜಿ ಸಲ್ಲಿಸುವ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ.

ಶೈಕ್ಷಣಿಕ ಅರ್ಹತಾ ಮಾನದಂಡಗಳು (Eligibility Criteria)

ಈ ವಿದ್ಯಾರ್ಥಿವೇತನವನ್ನು ಎರಡು ವಿಭಾಗಗಳಲ್ಲಿ ನೀಡಲಾಗುತ್ತಿದ್ದು, ಅರ್ಹತೆಯ ವಿವರ ಇಲ್ಲಿದೆ:

1. ಇಂಜಿನಿಯರಿಂಗ್ ಮತ್ತು ಆರ್ಕಿಟೆಕ್ಚರ್ ಪದವಿ (Degree) ವಿದ್ಯಾರ್ಥಿಗಳಿಗೆ

  • ವ್ಯಾಸಂಗ: ಆರ್ಕಿಟೆಕ್ಚರ್ ಅಥವಾ ಇಂಜಿನಿಯರಿಂಗ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, IT, CS ಮತ್ತು ಸಂಬಂಧಿತ STEM ವಿಭಾಗಗಳು; ಸಿವಿಲ್ ಇಂಜಿನಿಯರಿಂಗ್ ಅಭ್ಯರ್ಥಿಗಳಿಗೆ ಅವಕಾಶವಿಲ್ಲ) ವಿಭಾಗದಲ್ಲಿ ಪ್ರಥಮ ಅಥವಾ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿರಬೇಕು.
  • ಶೈಕ್ಷಣಿಕ ಅಂಕಗಳು:
    • ಪ್ರಥಮ ವರ್ಷದ ಅಭ್ಯರ್ಥಿಗಳಿಗೆ: 10ನೇ ಮತ್ತು 12ನೇ ತರಗತಿ ಎರಡರಲ್ಲೂ ಕನಿಷ್ಠ 80% ಅಂಕಗಳನ್ನು ಪಡೆದಿರಬೇಕು.
    • ದ್ವಿತೀಯ ವರ್ಷದ ಅಭ್ಯರ್ಥಿಗಳಿಗೆ: 12ನೇ ತರಗತಿಯಲ್ಲಿ ಕನಿಷ್ಠ 80% ಹಾಗೂ ಪ್ರಥಮ ವರ್ಷದ ಪದವಿಯಲ್ಲಿ 75% (7.5 CGPA) ಅಂಕಗಳನ್ನು ಪಡೆದಿರಬೇಕು.

2. ಡಿಪ್ಲೊಮಾ (Diploma) ವಿದ್ಯಾರ್ಥಿಗಳಿಗೆ

  • ವ್ಯಾಸಂಗ: ಆರ್ಕಿಟೆಕ್ಚರ್ ಅಥವಾ ಇಂಜಿನಿಯರಿಂಗ್ (ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಪ್ರೊಡಕ್ಷನ್; ಸಿವಿಲ್ ಇಂಜಿನಿಯರಿಂಗ್ ಹೊರತುಪಡಿಸಿ) ವಿಭಾಗದಲ್ಲಿ ಪ್ರಥಮ ಅಥವಾ ದ್ವಿತೀಯ ವರ್ಷದ ಡಿಪ್ಲೊಮಾ ವ್ಯಾಸಂಗ ಮಾಡುತ್ತಿರಬೇಕು.
  • ಶೈಕ್ಷಣಿಕ ಅಂಕಗಳು:
    • ಪ್ರಥಮ ವರ್ಷದ ಅಭ್ಯರ್ಥಿಗಳಿಗೆ: 10ನೇ ಅಥವಾ 12ನೇ ತರಗತಿಯಲ್ಲಿ ಕನಿಷ್ಠ 70% ಅಂಕಗಳನ್ನು ಪಡೆದಿರಬೇಕು.
    • ದ್ವಿತೀಯ ವರ್ಷದ ಅಭ್ಯರ್ಥಿಗಳಿಗೆ: ಪ್ರಥಮ ವರ್ಷದ ಡಿಪ್ಲೊಮಾದಲ್ಲಿ 75% (7.5 CGPA) ಅಂಕಗಳನ್ನು ಪಡೆದಿರಬೇಕು.

ಇತರೆ ಪ್ರಮುಖ ನಿಯಮಗಳು (General Rules & Eligibility)

  • ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ ₹6,00,000 ಗಳಿಗಿಂತ ಕಡಿಮೆಯಿರಬೇಕು (ಪಶ್ಚಿಮ ವಲಯದ ಕಾಲೇಜುಗಳಿಗೆ ಅಗತ್ಯಕ್ಕನುಗುಣವಾಗಿ ₹10,00,000 ವರೆಗೆ ಸಡಿಲಿಕೆ ಇರುತ್ತದೆ; ₹0-6 ಲಕ್ಷ ಆದಾಯವಿರುವವರಿಗೆ ಮೊದಲ ಆದ್ಯತೆ).
  • ಅನುಮೋದಿತ ಕಾಲೇಜುಗಳು: ಬ್ಲೂ ಸ್ಟಾರ್ ಫೌಂಡೇಶನ್‌ ಅನುಮೋದಿಸಿದ ಕಾಲೇಜುಗಳ ಪಟ್ಟಿಯಲ್ಲಿರುವ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿರಬೇಕು.
  • ವಿಶೇಷ ಆದ್ಯತೆ: ಮಹಿಳಾ ಅಭ್ಯರ್ಥಿಗಳಿಗೆ (Girl students) ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುವುದು.
  • Buddy4Study, Blue Star Limited ಹಾಗೂ Blue Star Foundation ಸಂಸ್ಥೆಯ ಉದ್ಯೋಗಿಗಳ ಮಕ್ಕಳಿಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.

ವಿದ್ಯಾರ್ಥಿವೇತನದ ಪ್ರಯೋಜನಗಳು (Benefits)

  • ಪದವಿ (Degree) ವಿದ್ಯಾರ್ಥಿಗಳಿಗೆ: ಗರಿಷ್ಠ ₹1,00,000 ಅಥವಾ ಶೈಕ್ಷಣಿಕ ಶುಲ್ಕದ (Academic fee) ಶೇ. 75% (ಯಾವುದು ಕಡಿಮೆಯೋ ಅದು).
  • ಡಿಪ್ಲೊಮಾ (Diploma) ವಿದ್ಯಾರ್ಥಿಗಳಿಗೆ: ಗರಿಷ್ಠ ₹40,000 ಅಥವಾ ಶೈಕ್ಷಣಿಕ ಶುಲ್ಕದ ಶೇ. 75% (ಯಾವುದು ಕಡಿಮೆಯೋ ಅದು).

ವಿಶೇಷ ಸೂಚನೆ: ವಿದ್ಯಾರ್ಥಿವೇತನದ ಮೊತ್ತವನ್ನು ನೇರವಾಗಿ ಅಭ್ಯರ್ಥಿಯ ಕಾಲೇಜಿನ ಖಾತೆಗೆ ಜಮೆ ಮಾಡಲಾಗುತ್ತದೆ. ಇದು ಕೇವಲ ಶೈಕ್ಷಣಿಕ ಶುಲ್ಕಗಳನ್ನು (ಟ್ಯೂಷನ್, ಪ್ರವೇಶ ಮತ್ತು ಪರೀಕ್ಷಾ ಶುಲ್ಕ) ಮಾತ್ರ ಭರಿಸಲಿದ್ದು, ಹಾಸ್ಟೆಲ್, ಮೆಸ್, ಲ್ಯಾಪ್‌ಟಾಪ್ ಅಥವಾ ಪುಸ್ತಕಗಳ ವೆಚ್ಚವನ್ನು ಒಳಗೊಂಡಿರುವುದಿಲ್ಲ.

ಅಗತ್ಯವಿರುವ ದಾಖಲೆಗಳು (Required Documents)

ಅರ್ಜಿ ಸಲ್ಲಿಸುವಾಗ ಈ ಕೆಳಗಿನ ದಾಖಲೆಗಳ ಸ್ಕ್ಯಾನ್ ಕಾಪಿಗಳನ್ನು ಅಪ್‌ಲೋಡ್ ಮಾಡಬೇಕು:

  1. ಅರ್ಜಿದಾರರ ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ.
  2. ಪ್ರವೇಶದ ಪುರಾವೆ (ಅಡ್ಮಿಷನ್ ಲೆಟರ್ / ಕಾಲೇಜು ಐಡಿ ಕಾರ್ಡ್).
  3. ಕಾಲೇಜಿನ ಶೈಕ್ಷಣಿಕ ಶುಲ್ಕ ಪಾವತಿಸಿದ ರಶೀದಿ / ಡಿಡಿ ಪ್ರತಿ.
  4. ಹಿಂದಿನ ಎರಡು ವರ್ಷಗಳ / ಸೆಮಿಸ್ಟರ್‌ಗಳ ಅಂಕಪಟ್ಟಿಗಳು.
  5. ಕುಟುಂಬದ ಆದಾಯದ ಪುರಾವೆ (ಆದಾಯ ಪ್ರಮಾಣಪತ್ರ / ITR / Form 16 / ಸ್ಯಾಲರಿ ಸ್ಲಿಪ್ / ಬಿಪಿಎಲ್ ಅಥವಾ ಪಡಿತರ ಚೀಟಿ).
  6. ಕೃಷಿ/ಪಶುಸಂಗೋಪನೆ ಆದಾಯವಿದ್ದಲ್ಲಿ ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರದ ಪ್ರಮಾಣಪತ್ರ.
  7. ಏಕ-ಪೋಷಕ ಅಥವಾ ಅನಾಥ ಅಭ್ಯರ್ಥಿಗಳಾಗಿದ್ದರೆ ಅಫಿಡವಿಟ್ ಪ್ರತಿ.
  8. ಮಾನ್ಯವಾದ ಗುರುತಿನ / ವಿಳಾಸದ ಪುರಾವೆ (ವೋಟರ್ ಐಡಿ, ಚಾಲನಾ ಪರವಾನಗಿ ಇತ್ಯಾದಿ).

ಅರ್ಜಿ ಸಲ್ಲಿಸುವುದು ಹೇಗೆ? (How to Apply)

Step 1: Buddy4Study ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step 2: ನಿಮ್ಮ ನೋಂದಾಯಿತ ಇಮೇಲ್/ಮೊಬೈಲ್/ಗೂಗಲ್ ಖಾತೆ ಬಳಸಿ ಲಾಗಿನ್ ಆಗಿ (ನೋಂದಣಿಯಾಗದಿದ್ದರೆ Sign up ಮಾಡಿ).

Step 3: “Mohan T Advani Centennial Scholarship Programme 2026-27” ಪುಟಕ್ಕೆ ತೆರಳಿ.

bluestar scholarship 2026

Step 4: ‘Start Application’ ಬಟನ್ ಕ್ಲಿಕ್ ಮಾಡಿ ಆನ್‌ಲೈನ್ ಅರ್ಜಿ ನಮೂನೆಯನ್ನು ತೆರೆಯಿರಿ.

Step 5: ಕೇಳಲಾದ ವೈಯಕ್ತಿಕ, ಶೈಕ್ಷಣಿಕ ಹಾಗೂ ಕಾಲೇಜಿನ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ.

Step 6: ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್‌ಲೋಡ್ ಮಾಡಿ.

Step 7: ನಿಯಮ ಮತ್ತು ಷರತ್ತುಗಳನ್ನು ಒಪ್ಪಿಕೊಂಡು ‘Preview’ ಬಟನ್ ಕ್ಲಿಕ್ ಮಾಡಿ ಪರಿಶೀಲಿಸಿ.

Step 8: ಎಲ್ಲ ವಿವರಗಳು ಸರಿಯಾಗಿದ್ದರೆ ‘Submit’ ಬಟನ್ ಕ್ಲಿಕ್ ಮಾಡಿ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಿ.

ಪ್ರಮುಖ ದಿನಾಂಕಗಳು ಹಾಗೂ ಸಂಪರ್ಕ ವಿವರ (Important Dates & Contact)

  • ಸಹಾಯವಾಣಿ ಸಂಖ್ಯೆ: 011-430-92248 (Ext – 352) (ಸೋಮವಾರದಿಂದ ಶುಕ್ರವಾರ – ಬೆಳಿಗ್ಗೆ 10:00 ರಿಂದ ಸಂಜೆ 06:00 ರವರೆಗೆ)
  • ಇಮೇಲ್ ಐಡಿ: [email protected]

Blue Star Scholarship 2026-27: Important Links

ವರದಿ: ಲಿಂಗರಾಜ, ನೀಡ್ಸ್ ಆಫ್ ಪಬ್ಲಿಕ್


WhatsApp Group Join Now
Telegram Group Join Now

21 responses to “Blue Star Scholarship 2026-27: ಇಂಜಿನಿಯರಿಂಗ್ ಹಾಗೂ ಡಿಪ್ಲೊಮಾ ವಿದ್ಯಾರ್ಥಿಗಳಿಗೆ ₹1 ಲಕ್ಷದವರೆಗೆ ವಿದ್ಯಾರ್ಥಿವೇತನ”

  1. Vinaya Yaligar Avatar

    Diploma
    Civil engineering

  2. Vijaykumar Dodamani Avatar
    Vijaykumar Dodamani

    Diploma

  3. Ajay Bilwa H R Avatar
    Ajay Bilwa H R

    Scholarship we do it

  4. Sinchana naik Avatar

    I am stadi in BA 1 year

  5. Sunaiy b p Avatar
    Sunaiy b p

    Please nange skolarship kodi please 🙏

  6. Yogesh Naik Avatar
    Yogesh Naik

    Kxnxnxn

  7. Praveen kumar Avatar
    Praveen kumar

    Diploma scholarship

Leave a Reply

Your email address will not be published. Required fields are marked *


Popular Categories