ಮನೆಯಲ್ಲಿ ಇಬ್ಬರು ಮಕ್ಕಳಿದ್ರೆ ಪೋಸ್ಟ್ ಆಫೀಸ್ ನ ಈ ಹೊಸ ಸ್ಕೀಮ್ ಬಗ್ಗೆ ತಿಳಿದುಕೊಳ್ಳಿ!

post office new scheme

ಪೋಷಕರೇ, ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತೀರಾ?. ಅವರ ಉನ್ನತ ಶಿಕ್ಷಣ, ಮದುವೆಗೆ ಹಣ ಒದಗಿಸಲು ಕಷ್ಟವಾಗುತ್ತಿದೆಯೇ?. ಚಿಂತಿಸಬೇಡಿ! ಪೋಸ್ಟ್ ಆಫೀಸ್ (Post Office) ನಿಮಗಾಗಿ ಒಂದು ಅದ್ಭುತ ಯೋಜನೆ ತಂದಿದೆ. ದಿನಕ್ಕೆ ₹6 ಉಳಿಸಿದರೆ ಸಾಕು, ನಿಮ್ಮ ಮಕ್ಕಳ ಖಾತೆಯಲ್ಲಿ ₹6 ಲಕ್ಷ ಜಮಾ ಆಗುತ್ತೆ. ಯಾವ ಯೋಜನೆ ಎಂದು ಯೋಚಿಸುತ್ತಿದ್ದೀರಾ?. ಈ ಯೋಜನೆಯ ಹೆಸರು ಬಾಲ ಜೀವನ್ ಭೀಮಾ ಯೋಜನೆ(Bal Jeevan Bhima Yojana). ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮುನ್ನ, ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುವುದು ಮುಖ್ಯ. ಈ ಯೋಜನೆಯ ಪ್ರಯೋಜನೆಗಳೇನು?, ಯೋಜನೆಯ ಲಾಭವನ್ನು ಪಡೆಯಲು ಅರ್ಜಿದಾರರ ಕುಟುಂಬ ಯಾವ ಅರ್ಹತೆಗಳನ್ನು ಪುರೈಸಿರಬೇಕು?. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಪ್ರಸುತ ವರದಿಯಾಗಿದೆ. ಪ್ರಸ್ತುತ ವರದಿಯು ಬಾಲ ಜೀವನ್ ಭೀಮಾ ಯೋಜನೆಯ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉಳಿತಾಯ: ಭವಿಷ್ಯದ ಭದ್ರತೆಗೆ ಉಳಿತಾಯ ಉತ್ತಮ ಆಯ್ಕೆ.

ಜೀವನದಲ್ಲಿ ಏನು ಬೇಕಾದರೂ ಅನಿರೀಕ್ಷಿತವಾಗಿ ಸಂಭವಿಸಬಹುದು. ಯಾವುದೇ ತೊಂದರೆ ಎದುರಾದಾಗ, ಕಷ್ಟಪಟ್ಟು ದುಡಿದ ಹಣವನ್ನು ಒಂದೇ ಸಮಯದಲ್ಲಿ ಖರ್ಚು ಮಾಡುವುದು ಅಸಾಧ್ಯ. ಉಳಿತಾಯದ ಮೂಲಕ ನಾವು ಭವಿಷ್ಯದ ಅಗತ್ಯಗಳಿಗಾಗಿ ಸಿದ್ಧರಾಗಿರಬಹುದು ಮತ್ತು ಆರ್ಥಿಕ ಭದ್ರತೆಯನ್ನು ಪಡೆಯಬಹುದು.

ಮಕ್ಕಳಿಗೆ ಯಾವುದೆ ತೊಂದರೆಯಾಗದಿರಲಿ ಎಂದು ಎಲ್ಲ ಪಾಲಕರು ಬಯಸ್ತಾರೆ. ಆದರೆ ಯಾವ ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂಬುದರ ಕುರಿತು ಗೊಂದಲ ಸಾಮಾನ್ಯ ಸಮಸ್ಯೆ. ಇಂತಹ ಸಮಾಯದಲ್ಲಿ ಕೆಲವೊಮ್ಮೆ ಹಣ ಡಬಲ್(money Double) ಆಗುವ ಯೋಜನೆಯಲ್ಲಿ ತಮ್ಮ ಹಣ ಹೂಡಿಕೆ ಮಾಡಿ ಮೋಸ ಹೋಗುತ್ತಾರೆ. ಆದರ ಬದಲಾಗಿ ಅಂಚೆ ಕಚೇರಿ ಸುರಕ್ಷಿತ ಯೋಜನೆಗಳ ಮೇಲೆ ಗಮನಿಸಬೇಕು. ಬ್ಯಾಂಕು(Banks)ಗಳಲ್ಲಿಯೂ ಉಳಿತಾಯ ಖಾತೆಗಳು(savings accounts) ಮತ್ತು ನಿಶ್ಚಿತ ಠೇವಣಿ(fixed deposits)ಗಳಂತಹ ವಿವಿಧ ಉಳಿತಾಯ ಯೋಜನೆಗಳನ್ನು ಒದಗಿಸುತ್ತವೆ. ಈ ಯೋಜನೆಗಳು ನಿಮ್ಮ ಹಣಕ್ಕೆ ಬಡ್ಡಿದರವನ್ನು ನೀಡುತ್ತವೆ, ಆದರೆ ಅಂಚೆ ಕಚೇರಿ ಉಳಿತಾಯ ಯೋಜನೆಗಳು ಹೆಚ್ಚಿನ ಬಡ್ಡಿದರಗಳನ್ನು ನೀಡುವ ಮೂಲಕ ಉತ್ತಮ ಆಯ್ಕೆಯಾಗಿರಬಹುದು. ಅಂತಹ ಯೋಜನೆಗಳಲ್ಲಿ ಬಾಲ ಜೀವನ್ ಭೀಮಾ ಯೋಜನೆ(Bal Jeevan Bhima Yojana) ಒಂದು ಉತ್ತಮ ಉದಾಹರಣೆ. ಈ ಯೋಜನೆಯು ಉಳಿತಾಯ ಮತ್ತು ವಿಮೆಯ ಸುಲಭ ಸಂಯೋಜನೆಯನ್ನು ಹೊಂದಿದೆ. ಮಕ್ಕಳ ಭವಿಷ್ಯಕ್ಕಾಗಿ ಉಳಿಸಲು ಮತ್ತು ಅವರಿಗೆ ಜೀವನ ವಿಮೆಯ ಭದ್ರತೆಯನ್ನು ಒದಗಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.

ಅಂಚೆ ಕಚೇರಿಯ ಬಾಲ ಜೀವನ ಭೀಮಾ ಯೋಜನೆ(Post Office Bal Jeevan Bhima Yojana): ಮಕ್ಕಳ ಭವಿಷ್ಯಕ್ಕಾಗಿ ಉತ್ತಮ ಯೋಜನೆ

ಮಕ್ಕಳ ಉತ್ತಮ ಭವಿಷ್ಯವನ್ನು ಖಚಿತಪಡಿಸಿಕೊಳ್ಳುವುದು ಪ್ರತಿಯೊಬ್ಬ ಪಾಲಕರ ಕನಸು. ಅವರ ಶಿಕ್ಷಣ ಮತ್ತು ಮದುವೆಗೆ ಹಣವನ್ನು ಉಳಿಸಲು, ಹೂಡಿಕೆ ಹಲವಾರು ಆಯ್ಕೆಗಳು ಲಭ್ಯವಿವೆ. ಅಂಚೆ ಕಚೇರಿಯ ಬಾಲ ಜೀವನ್ ಭೀಮಾ ಯೋಜನೆಯು ಉತ್ತಮ ಆಯ್ಕೆಯನ್ನು ಪಡೆದಿದೆ, ಇದು ಜೀವ ವಿಮಾ ರಕ್ಷಣೆಯ ಜೊತೆಗೆ ಉತ್ತಮ ಉಳಿತಾಯ ಮತ್ತು ಹೂಡಿಕೆ ಪ್ರಯೋಜನಗಳನ್ನು ನೀಡುತ್ತದೆ.

ಬಾಲ ಜೀವನ್ ಭೀಮಾ ಯೋಜನೆ: ಅರ್ಹತೆಯ ನಿಯಮಗಳು

ಅಂಚೆ ಕಚೇರಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ:

ಈ ಯೋಜನೆ ಪಾಲಕರು ತೆಗೆದುಕೊಳ್ಳಬೇಕು ಮತ್ತು ಮಕ್ಕಳು ನಾಮಿನಿಗಳಾಗಿರುತ್ತಾರೆ.

ಗರಿಷ್ಠ ಎರಡು ಮಕ್ಕಳಿಗೆ ಈ ಫಲಿತಾಂಶ ಪಡೆಯಬಹುದು.

ಮಕ್ಕಳ ವಯಸ್ಸು 5 ರಿಂದ 15 ವರ್ಷದ ನಡುವೆ ಇರಬೇಕು.

ಪಾಲಕರ ವಯಸ್ಸು 45 ವರ್ಷಕ್ಕಿಂತ ಹೆಚ್ಚಿರಬಾರದು.

ಅಗತ್ಯ ದಾಖಲೆಗಳು  :

ಅರ್ಜಿ ಜೊತೆ ಮಗು ಮತ್ತು ಪೋಷಕರ ಗುರುತಿನ ಪುರಾವೆ (ಆಧಾರ್ ಕಾರ್ಡ್, ರೇಷನ್ ಕಾರ್ಡ್, ಇತ್ಯಾದಿ).

ವಯಸ್ಸಿನ ಪುರಾವೆ (ಜನನ ಪ್ರಮಾಣಪತ್ರ, ಮೆಟ್ರಿಕ್ಯುಲೇಷನ್ ಪ್ರಮಾಣಪತ್ರ, ಆಧಾರ್ ಕಾರ್ಡ್, ಇತ್ಯಾದಿ).

ವಿಳಾಸ ಪುರಾವೆ (ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಇತ್ಯಾದಿ).

ಪಾಸ್ಪೋರ್ಟ್ ಗಾತ್ರದ ಫೋಟೋ ಅಗತ್ಯವಿರುತ್ತದೆ.

ಕನಿಷ್ಠ ಮೊತ್ತದ ಹೂಡಿಕೆ(Minimum Investment):

ಈ ಯೋಜನೆಯಲ್ಲಿ ಭಾಗವಹಿಸಲು ನಿಮ್ಮನ್ನು ಯಾವುದೇ ದೊಡ್ಡ ಮೊತ್ತದ ಹೂಡಿಕೆಗೆ ಒತ್ತಾಯಿಸಲಾಗುವುದಿಲ್ಲ. ದಿನಕ್ಕೆ ಕನಿಷ್ಠ 6 ರೂಪಾಯಿ ಹೂಡಿಕೆ ಮಾಡಿದರು ಮಕ್ಕಳ ಭವಿಷ್ಯ ಗಟ್ಟಿಯಾಗಿ ಇರಲಿದೆ. ದಿನಕ್ಕೆ ಕನಿಷ್ಠ 6 ರೂಪಾಯಿಯಿಂದ 18 ರೂಪಾಯಿವರೆಗೆ ಕಟ್ಟಬಹುದು. ನೀವು 6 ರೂಪಾಯಿ ಕಟ್ಟಿದರೆ ಮೆಚ್ಯುರಿಟಿ ಅವಧಿಯಲ್ಲಿ 1 ಲಕ್ಷ ರೂಪಾಯಿ  ಸಿಗಲಿದೆ ಅದೇ ರೀತಿ 18 ರೂಪಾಯಿ ಕಟ್ಟಿದರೆ 3 ಲಕ್ಷ ರೂಪಾಯಿ ಹಣ ಸಿಗಲಿದೆ. ಎರಡು ಮಕ್ಕಳಿಗೆ ಪ್ರತಿದಿನ 36 ರೂಪಾಯಿ ಉಳಿತಾಯ ಮಾಡುತ್ತಿದ್ದರೆ. ಈ ಉಳಿತಾಯದ ಯೋಜನೆಯ ಕೊನೆಯಲ್ಲಿ ಅವರಿಗೆ 6 ಲಕ್ಷ ರೂಪಾಯಿ ಜಮಾ ಅಗುತ್ತದೆ. ಎರಡು ಮಕ್ಕಳು ಈ ಉಳಿತಾಯ ಯೋಜನೆಯನ್ನು ಶಿಸ್ತುಬದ್ಧವಾಗಿ ಮುಂದುವರಿಸಿದರೆ, ಅವರು 6 ಲಕ್ಷ ರೂಪಾಯಿಗಳ ಗುರಿಯನ್ನು ತಲುಪಬಹುದು.

ಈ ಮಾಹಿತಿಗಳನ್ನು ಓದಿ


ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!