PM Kisan: ಪಿಎಂ ಕಿಸಾನ್ 13 ನೇ ಕಂತಿಗೆ ಈ ರೈತರು ಅರ್ಹರು ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೇಯಾ ಈಗಲೇ ಪರೀಕ್ಷಿಸಿ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಪ್ರತಿ ವರ್ಷ 6000 ರೂಪಾಯಿ ನೀಡಲಾಗುತ್ತದೆ. ಪ್ರತಿ ನಾಲ್ಕು
ತಿಂಗಳಿಗೊಮ್ಮೆ ರೈತರ ಖಾತೆಗೆ 2,000 ರೂಪಾಯಿಗಳನ್ನು ಆನ್‌ಲೈನ್‌ನಲ್ಲಿ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನಾ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಇದಕ್ಕೆ ಶೇಕಡಾ 100ರಷ್ಟು ಹಣಕಾಸು ಅನುದಾನವನ್ನು ಭಾರತ ಸರ್ಕಾರವೇ ಭರಿಸುತ್ತದೆ.

ಇದನ್ನೂ ಓದಿ : ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

2018ನೇ ಇಸವಿಯ ಡಿಸೆಂಬರ್ 1ರಂದು ಆರಂಭಗೊಂಡ ಈ ಯೋಜನೆಯಡಿ 2 ಹೆಕ್ಟೇರ್​ ತನಕ ಒಟ್ಟಾರೆಯಾಗಿ ಭೂಮಿ ಇರುವ ಅಥವಾ ಮಾಲೀಕತ್ವ ಹೊಂದಿರುವ ಸಣ್ಣ ಹಾಗೂ ಕಿರು ರೈತರ ಕುಟುಂಬಗಳಿಗೆ ವಾರ್ಷಿಕವಾಗಿ 6000 ರೂಪಾಯಿಯನ್ನು ತಲಾ 2 ಸಾವಿರದಂತೆ ಮೂರು ಕಂತಿನಲ್ಲಿ ಪಾವತಿಸಲಾಗುತ್ತದೆ. ಮೊತ್ತವು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ವರ್ಗಾವಣೆ ಆಗುತ್ತದೆ.

ರೈತರನ್ನು ಆರ್ಥಿಕವಾಗಿ ಸದೃಢರನ್ನಾಗಿಸಲು ಆರಂಭಿಸಿರುವ ಈ ಯೋಜನೆಯ ಲಾಭವನ್ನು ದೇಶದ 10 ಕೋಟಿಗೂ ಹೆಚ್ಚು ರೈತರು
ಪಡೆಯುತ್ತಿದ್ದಾರೆ. ಈ ಯೋಜನೆಯಡಿ ಇದುವರೆಗೆ ಸರಕಾರ ರೈತರಿಗೆ 12 ಕಂತುಗಳಲ್ಲಿ ಎರಡು ಸಾವಿರ ರೂ. ಇದೀಗ ಸರ್ಕಾರ 13ನೇ
ಕಂತನ್ನು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.

ಇದನ್ನೂ ಓದಿ : ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ

ಪಿ ಎಮ್ ಕಿಸಾನ್ ಯೋಜನೆ ಅಡಿ ವರ್ಷದ ಮೊದಲ ಕಂತನ್ನು ಏಪ್ರಿಲ್ ಒಂದರಿಂದ ಜುಲೈ 31ರವರೆಗೆ ರೈತರಿಗೆ
ನೀಡಲಾಗುತ್ತದೆ ಮತ್ತು ಎರಡನೇ ಕಂತನ್ನು ಅಗಸ್ಟ್1 ರಿಂದ ನವೆಂಬರ್ 31 ವರೆಗೆ ನೀಡಲಾಗುತ್ತದೆ ಅದೇ ಸಮಯದಲ್ಲಿ
ಮೂರನೇ ಕಂತಿನ ಹಣವನ್ನು ಡಿಸೆಂಬರ್ 1 ಮತ್ತು ಮಾರ್ಚ್ 31ರ ನಡುವೆ ವರ್ಗಾಯಿಸಲಾಗುತ್ತದೆ. ಇದರ ಪ್ರಕಾರ ಪಿಎಂ
ಕಿಸಾನ್ 12ನೇ ಕಂತು ಅಕ್ಟೊಬರ್ 17 ರಂದು ರೈತರ ಖಾತೆಗೆ ಬಂದಿದೆ. 13 ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ವರ್ಗಾವಣೆಯಾಗಲಿದೆ.

13 ನೇ ಕಂತಿನ ಅರ್ಹ ರೈತರ ಪಟ್ಟಿ ನೋಡುವುದು ಹೇಗೆ ?

Step 1: ಮೊದಲು ಕಿಸಾನ್ ಸಮ್ಮಾನ್​ ಯೋಜನೆಯ ಅಧಿಕೃತ ವೆಬ್​ಸೈಟ್​ https://pmkisan.gov.in/ ಗೆ ಭೇಟಿ ನೀಡಿ.

Step 2: ವೆಬ್​ಸೈಟ್​ನ ಹೋಮ್​ ಪೇಜ್​ನಲ್ಲಿ ಫಾರ್ಮರ್ಸ್​ ಕಾರ್ನರ್​ ಮೇಲೆ ಕ್ಲಿಕ್ ಮಾಡಬೇಕು.

WhatsApp Image 2022 10 26 at 6.10.01 AM

Step 3: ನಂತರ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿಗಳ ಪಟ್ಟಿ) ಆಯ್ಕೆ ಮೇಲೆ ಕ್ಲಿಕ್ ಮಾಡು.

ಇದನ್ನೂ ಓದಿ : ರೈತರ ಸಾಲ ಮನ್ನಾ : ಮತ್ತೇ ಅಧಿಕಾರಕ್ಕೆ ಬಂದರೆ 3 ಲಕ್ಷದವರೆಗೆ ಸಾಲ ಮನ್ನಾ : ಸಿ ಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ

Step 4: ರಾಜ್ಯ, ಜಿಲ್ಲೆ/ಉಪಜಿಲ್ಲೆ, ಬ್ಲಾಕ್​ ಮತ್ತು ಹಳ್ಳಿ ಈ ಮಾಹಿತಿಯನ್ನು ಸರಿಯಾಗಿ ಆರಿಸಿ.
Get Report ಎಂಬ ಆಯ್ಕೆ ಕಾಣಿಸುತ್ತದೆ ಮತ್ತು ಅದರ ಮೇಲೆ ಕ್ಲಿಕ್ ಮಾಡಬೇಕು.

WhatsApp Image 2022 10 26 at 6.10.02 AM

Step 4: ಸ್ಕ್ರೀನ್ ಮೇಲೆ ಕಾಣುವ ಬೆನಿಫಿಷಿಯರಿ ಲಿಸ್ಟ್ (ಫಲಾನುಭವಿ ಪಟ್ಟಿ) ಅನ್ನು ಸೆಲೆಕ್ಟ್ ಮಾಡಿರಿ. ಜೊತೆಗೆ ಹೆಸರನ್ನು
ಪರಿಶೀಲಿಸಿ, ಖಾತ್ರಿ ಪಡಿಸಬೇಕು.

ಇಂತಹ ಮುಖ್ಯವಾದ ಮಾಹಿತಿಯನ್ನು ನಿಮ್ಮ ಎಲ್ಲಾ ರೈತ ಮಿತ್ರರಿಗೆ ಶೇರ್ ಮಾಡಿ. ಧನ್ಯವಾದಗಳು.

 

Leave a Reply

Your email address will not be published. Required fields are marked *