Home » ಟೆಕ್ ಟ್ರಿಕ್ಸ್ » ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ   ನಿಮ್ಮ ಮೊಬೈಲ್ ಫೋನಿನಲ್ಲಿ ನಿಮ್ಮ ವಿರ್ಚುವಲ್ ಆರ್ ಸಿ  ಕಾರ್ಡ್ ಮತ್ತು  ವಿರ್ಚುವಲ್ ಡಿಎಲ್ ಅನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ತಿಳಿಸಿಕೊಡಲಾಗುವುದು. ನಿಮಗೆಲ್ಲಾ ತಿಳಿದಿರುವಂತೆ ನಮ್ಮ ದೈನಂದಿಕ ಜೀವನದಲ್ಲಿ ಡಿಎಲ್ ಮತ್ತು ಆರ್ ಸಿ ಕಾರ್ಡ್ ಮುಖ್ಯವಾಗಿ ಅವಶ್ಯವಾಗಿದೆ. ಇವೆರಡನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ಫೋನಿನಲ್ಲಿ ಇಟ್ಟುಕೊಂಡರೆ ಎಲ್ಲಾ ರೀತಿಯ ಸಮಸ್ಯೆಗಳಿಂದ ಪಾರಾಗಬಹುದು.

ಇದನ್ನೂ ಓದಿ

SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ :

ಮೊದಲನೆಯದಾಗಿ ನಮ್ಮ ಮೊಬೈಲ್ ಫೋನಿನಲ್ಲಿ NextGen mParivahan ಎಂಬ ಅಪ್ಲಿಕೇಶನ್ ಅನ್ನು ನಾವು ಡೌನ್ಲೋಡ್ ಮಾಡಿಕೊಳ್ಳಬೇಕು.

NextGen mParivahan ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

100 1009816 png images buttons download red download button png

ಒಂದು ಸಾರಿ ನೀವು ಈ ಅಪ್ಲಿಕೇಶನ್ ಅನ್ನು ಇನ್ಸ್ಟಾಲ್ ಮಾಡಿಕೊಂಡ ನಂತರ ಅದನ್ನು ಓಪನ್ ಮಾಡಿಕೊಳ್ಳಿ ಅದರಲ್ಲಿ ಹಲವಾರು ಸ್ಲೈಡ್ಗಳು ದೊರೆಯುತ್ತದೆ ಅದನ್ನು ಸ್ಕಿಪ್ ಮಾಡಿ. ನಂತರ ಅದರಲ್ಲಿ ಮೊದಲನೆಯದಾಗಿ ನಾವು ಲಾಂಗ್ವೇಜ್ ಅನ್ನು ಸೆಟ್ ಮಾಡಿಕೊಳ್ಳಬೇಕಾಗುತ್ತದೆ. ಖುಷಿಯ ಸಂಗತಿ ಏನೆಂದರೆ ಇದರಲ್ಲಿ ಕನ್ನಡ ಭಾಷೆಯು ಕೂಡ ದೊರೆಯುತ್ತದೆ.

ಇದನ್ನೂ ಓದಿ

ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.

ಮೊದಲನೆಯದಾಗಿ ನಾವು ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಡಬೇಕು ಅಂದರೆ ಸೈನ್ ಇನ್ ಆಗುವುದು ಅವಶ್ಯಕತಯಿದೆ. ನಂತರ ಡ್ಯಾಶ್ ಕೋಡಿನಲ್ಲಿ ಮೂರು ಚುಕ್ಕೆಗಳು ಕಾಣಿಸಿಕೊಳ್ಳುತ್ತದೆ ಅದರ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಸೈನ್ ಇನ್ ಆಪ್ಷನ್ ದೊರೆಯುತ್ತದೆ. ಸೈನ್ ಅಪ್ ಆದ ನಂತರ ನಮ್ಮ ಮೊಬೈಲ್ ನಂಬರನ್ನು ಅಲ್ಲಿ ಎಂಟರ್ ಮಾಡಬೇಕು. ನಂತರ ನಿಮ್ಮ ನಂಬರಿಗೆ ಓಟಿಪಿ ಬರುತ್ತದೆ ಆ ಒಟಿಪಿ ನಂಬರನ್ನು ಎಂಟರ್ ಮಾಡಿ ಅಕೌಂಟ್ ಅನ್ನು ಕ್ರಿಯೇಟ್ ಮಾಡಿಕೊಳ್ಳಬೇಕು.

WhatsApp Image 2022 10 25 at 6.00.28 PM

ನಂತರ ಡ್ಯಾಶ್ ಬೋರ್ಡಿನಲ್ಲಿ ಆರ್ ಸಿ ಡ್ಯಾಶ್ ಬೋರ್ಡ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ ಅಲ್ಲಿ ಸರ್ಚ್ ಬಾರಿನಲ್ಲಿ ನಿಮ್ಮ ಆರ್‌ಸಿ ನಂಬರ್ ಅನ್ನು ಎಂಟರ್ ಮಾಡಬೇಕು. ಹೀಗೆ ಆರ್‌ಸಿ ನಂಬರ್ ಅನ್ನು ಎಂಟರ್ ಮಾಡಿ ಸರ್ಚ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಆರ್ ಸಿ ಕಾರ್ಡಿನ ಸಂಪೂರ್ಣ ಮಾಹಿತಿ ದೊರೆಯುತ್ತದೆ.

ನಂತರ ಕೆಳಗಿನ ಭಾಗದಲ್ಲಿ ಆಡ್ ಟು ಡ್ಯಾಶ್ ಬೋರ್ಡ್ ಫಾರ್ ವಿರ್ಚುವಲ್ ಆರ್ ಸಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ನಿಮ್ಮ ಆರ್‌ಸಿ ಕಾರ್ಡ್ ನಲ್ಲಿರುವ ಚಾಸಿ ನಂಬರ್ ಅಂದರೆ ಕೊನೆಯ ನಾಲ್ಕು ಡಿಜಿಟ್ ಗಳನ್ನು ಎಂಟರ್ ಮಾಡಬೇಕು. ನಂತರ ಇಂಜಿನ್ ನಂಬರನ್ನು ಎಂಟರ್ ಮಾಡಬೇಕು. ಹೀಗೆ ಎಂಟರ್ ಮಾಡಿದ ನಂತರ ವೇರಿಫೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಇದಾದ ನಂತರ ನಿಮ್ಮ ವಿರ್ಚುವಲ್ ಆರ್ ಸಿ ಕಾರ್ ನಿಮಗೆ ಡೌನ್ಲೋಡ್ ಆಗುತ್ತದೆ. ಹಾಗೆಯೇ ಕ್ಯೂಆರ್ ಕೋಡ್ ಕೂಡ ಜನರೇಟ್ ಆಗಿರುತ್ತದೆ ಒಂದು ವೇಳೆ ಡೀಟೇಲ್ಸ್ ಬೇಕಾದಲ್ಲಿ ಸ್ಕ್ಯಾನ್ ಮಾಡಿದರೆ ಸಾಕು ಎಲ್ಲ ಮಾಹಿತಿ ದೊರೆಯುತ್ತದೆ. ಈ ಡೌನ್ಲೋಡ್ ಮಾಡಿದ ಆರ್ ಸಿ ಕಾರ್ಡ್ ಎಷ್ಟು ವ್ಯಾಲಿಡೇಂದರೆ ವರ್ಜಿನಲ್ ಆರ್ ಸಿ ಕಾರ್ಡಿನ ಪ್ರಾಮುಖ್ಯತೆಯನ್ನು ಇದು ಹೊಂದಿದೆ.

ಇದನ್ನೂ ಓದಿ

ಹಳೆಯ ವೋಟರ್ ಐಡಿಗಳನ್ನು ಹೇಗೆ ಡೌನ್ಲೋಡ್ ಮಾಡಿಕೊಳ್ಳುವುದು ?

ನಂತರ ಡಿಎಲ್ ಡ್ಯಾಶ್ ಬೋರ್ಡ್ ಮೇಲೆ ಕ್ಲಿಕ್ ಮಾಡಿದ ನಂತರ ಸರ್ಚ್ ಬಾರಿನಲ್ಲಿ ನೀವು ನಿಮ್ಮ ಡಿಎಲ್ ನಂಬರ್ ಅನ್ನು ಎಂಟರ್ ಮಾಡಬೇಕು. ನಂತರ ಸರ್ಚ್ ಮಾಡಿದ ಮೇಲೆ ನಿಮ್ಮ ಡಿಎಲ್ ಡೀಟೇಲ್ಸ್ ನಿಮಗೆ ಕಾಣಿಸುತ್ತದೆ. ನಂತರ ವಿರ್ಚುವಲ್ ಡಿಎಲ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮ್ಮ ಡೇಟ್ ಆಫ್ ಬರ್ತ್ಡೇ ಎಂಟರ್ ಮಾಡಿ ವೇರಿಫೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಹೀಗೆ ಎಂಟರ್ ಮಾಡಿದ ನಂತರ ನಿಮ್ಮ ಡಿಎಲ್ ಇಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೆ QR ಕೋಡ್ ಕೂಡ ದೊರೆಯುತ್ತದೆ. ವೆರಿಫೈ ಮಾಡುವಾಗ ನೀವು ಕ್ಯೂಆರ್ ಕೋಡನ್ನು ತೋರಿಸಿದರೆ ಸಾಕು ನಿಮ್ಮ ಡಿಎಲ್ ಅದರ ಮುಖಾಂತರ ವೆರಿಫೈ ಆಗುತ್ತದೆ.

ಹೀಗೆ ನೀವು ನಿಮ್ಮ ಫೋನಿನಲ್ಲೇ ವಿಚುವಲ್ ಆರ್ ಸಿ ಕಾರ್ಡ್ ಹಾಗೂ ಡಿಎಲ್‌ಗಳನ್ನು ಡೌನ್ ಲೋಡ್ ಮಾಡಿಕೊಂಡು ಉಪಯೋಗಿಸಬಹುದು. ಇದು ಎಲ್ಲಾ ಚಾಲಕರಿಗೂ ಉಪಯೋಗವಾಗಿದ್ದು ಈ ಲೇಖನವನ್ನು ತಪ್ಪದೇ ನಿಮ್ಮ ಎಲ್ಲಾ ಚಾಲಕ ಸ್ನೇಹಿತನಿತ್ರರಿಗೆ ಶೇರ್ ಮಾಡಿ. ಧನ್ಯವಾದಗಳು

ಇದನ್ನೂ ಓದಿ

ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?

About

Lingaraj Ramapur BCA, MCA, MA ( Journalism )

Leave a Reply

Your email address will not be published. Required fields are marked *