Home » Uncategorized » ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?

ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ 2020 ಹಾಗೂ 2023 ನೇ ಸಾಲಿನ ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ಮತ್ತು ಎಷ್ಟು ಹಣ ಪಡೆದುಕೊಳ್ಳಬಹುದು ಎಂದು ತಿಳಿಸಿಕೊಡುತ್ತೇನೆ. ಇದಲ್ಲದೆ ವಿದ್ಯಾಶ್ರೀ ಸ್ಕಾಲರ್ಶಿಪ್ ಅನ್ನು ಯಾರು ಯಾರು ಅಪ್ಲೈ ಮಾಡಬಹುದು, ಅಪ್ಲೈ ಮಾಡಲು ಕೊನೆಯ ದಿನಾಂಕ ಹಾಗೂ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಿಕೊಡಲಾಗುವುದು. ಈ ವಿದ್ಯಾಸಿರಿ ಸ್ಕಾಲರ್ಶಿಪ್ ಇಂದ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 1500ರಂತೆ 10 ತಿಂಗಳು ಅಂದರೆ ಹದಿನೈದು ಸಾವಿರ ರೂಗಳು ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮವಾಗುತ್ತದೆ. ಈ ವಿದ್ಯಾಸಿರಿ ಸ್ಕಾಲರ್ಶಿಪ್ ಅನ್ನು ಹತ್ತನೇ ತರಗತಿ ಮುಗಿದ ನಂತರ ಮುಂದಿನ ಮುಂದಿನ ವಿದ್ಯಾಭ್ಯಾಸವನ್ನು ಪಡೆದುಕೊಳ್ಳುವಂತಹ ವಿದ್ಯಾರ್ಥಿಗಳು ಆನ್ಲೈನ್ ಮುಖಾಂತರ ಅಪ್ಲೈ ಮಾಡಬಹುದಾಗಿದೆ.
Advertisement

ಈ ಸ್ಕಾಲರ್ಷಿಪ್ನ ಮೂಲ ಉದ್ದೇಶ ಏನೆಂದರೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಮತ್ತು ವಿದ್ಯಾರ್ಥಿಗಳಿಗೆ ಓದುವ ಆಸಕ್ತಿಯನ್ನು ಹೆಚ್ಚಿಸಲು ಇಂತಹ ಸ್ಕಾಲರ್ಶಿಪ್ ಗಳನ್ನು ಸರ್ಕಾರ ನೀಡಲು ಮುಂದಾಗಿದೆ. ಹೀಗೆ ವಿದ್ಯಾರ್ಥಿಗಳಿಗೆ ತಮ್ಮ ವಸತಿ ಹಾಗೂ ಊಟದ ವ್ಯವಸ್ಥೆಯನ್ನು ಸರ್ಕಾರ ಸ್ಕಾಲರ್ಶಿಪ್ ಮೂಲಕ ಕಲ್ಪಿಸಿಕೊಡುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಯಾವುದೇ ಸರ್ಕಾರಿ ಅನುದಾನಿತ ವಿದ್ಯಾರ್ಥಿ ನಿಲಯ ಅಥವಾ ವಸತಿ ಕಾಲೇಜುಗಳಲ್ಲಿ ಪ್ರವೇಶ ದೊರೆಯಾದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಅನುಕೂಲವಾಗಿದೆ. ಇಂತಹ ವಿದ್ಯಾರ್ಥಿಗಳು 10ನೇ ತರಗತಿಯನ್ನು ಮುಗಿಸಿದಂತಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಊಟ ಮತ್ತು ವಸತಿ ಕಾರ್ಯಕ್ರಮದಲ್ಲಿ ಮಂಜೂರಾತಿ ನೀಡಲಾಗುವುದು. ಇಸ್ ಸ್ಕಾಲರ್ಶಿಪ್ ಅನ್ನು ಪಡೆಯಲು ವಿದ್ಯಾರ್ಥಿಗಳು ಭಾರತದ ಪ್ರಜೆಯಾಗಿದ್ದು ಕರ್ನಾಟಕದಲ್ಲಿಯೇ ವಾಸವಾಗಿ ಇರಬೇಕಾಗಿರುತ್ತದೆ.ಆನ್ಲೈನ್ ಮುಖಾಂತರ ವಿದ್ಯಾ ಸಿರಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ವಿಧಾನ :ಮೊದಲಿಗೆ ಕರ್ನಾಟಕದಲ್ಲಿ ಆಯೋಜಿಸಿದಂತಹ ವಿದ್ಯಾ ಸರಿ ವೆಬ್ಸೈಟ್ ಅನ್ನು ಲಾಗಿನ್ ಮಾಡಿಕೊಳ್ಳಬೇಕು ಅದರಲ್ಲಿ ವಿದ್ಯಾಸಿರಿ ಯೋಜನೆ ಊಟ ಮತ್ತು ವಸತಿ ಎಂಬ ಕರ್ನಾಟಕ ಇಲಾಖೆಯ ಅಲ್ಪಸಂಖ್ಯಾತರ ನಿರ್ದೇಶನಾಲಯ ಎಂಬ ಪೇಜ್ ನಿಮಗೆ ದೊರೆಯುತ್ತದೆ. ನಂತರ ಸ್ಕಾಲರ್ ಮಾಡಿದರೆ ಆನ್ಲೈನ್ ಸೇವೆಗಳು ಎಂದು ದೊರೆಯುತ್ತದೆ ಅದರಲ್ಲಿ ಆನ್ಲೈನ್ ಅಪ್ಲಿಕೇಶನ್ ಮೇಲೆ ಕ್ಲಿಕ್ ಮಾಡಿ. ನಂತರ ಅದರಲ್ಲಿ ಐದನೇ ಕ್ರಮ ಸಂಖ್ಯೆಯಲ್ಲಿ 2022 2023ನೇ ಸಾಲಿನ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಆನ್ಲೈನ್ ಅರ್ಜಿ ಆಹ್ವಾನ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ. ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಆನ್ಲೈನ್ ಅರ್ಜಿ ಆಹ್ವಾನ ಎಂಬ ಮುಖ್ಯಾಂಶ ನಿಮಗೆ ದೊರೆಯುತ್ತದೆ ಅದರಲ್ಲಿ ಪ್ರಕಟಣೆ, ಸರ್ಕಾರಿ ಆದೇಶ, ದೂರ ಪ್ರಮಾಣ ಪತ್ರ ಹಾಗೂ ಆನ್ಲೈನ್ ಅರ್ಜಿ ಎಂಬ ನಾಲಕ್ಕು ಆಪ್ಷನ್ ಗಳು ದೊರೆಯುತ್ತದೆ ಅದರಲ್ಲಿ ನೀವು ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಡಾಕ್ಯುಮೆಂಟ್ಗಳನ್ನು ಮತ್ತು ನಿಮ್ಮ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಅರ್ಜಿಯನ್ನು ಸಲ್ಲಿಸಬೇಕು.  ನೀವು ಈ ಅಪ್ಲಿಕೇಶನ್ ಅನ್ನು ಸೇವಾ ಸಿಂಧು ಮೂಲಕ ಸಲ್ಲಿಸಬಹುದು. ಇದಲ್ಲದೆ ಅರ್ಜಿ ಸಲ್ಲಿಸಲು ಏನಾದರೂ ತೊಂದರೆ ಉಂಟಾದಲ್ಲಿ ನೀವು ಬ್ರಾಹ್ಮನ್ ಹಾಗೂ ಸೇವಾ ಸಿಂಧುಗಳಲ್ಲಿ ಅರ್ಜಿಯನ್ನು ಸಲ್ಲಿಸಬಹುದು. ಇದು ಅರ್ಜಿ ಸಲ್ಲಿಸುವ ವಿಧಾನವಾಗಿದೆ.

ಇದಲ್ಲದೆ ವಿಶೇಷವಾದ ಮಾಹಿತಿ ಏನೆಂದರೆ ವಿದ್ಯಾರ್ಥಿಗಳು ಕಡ್ಡಾಯವಾಗಿ ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಸಬೇಕಾಗಿರುತ್ತದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯ, ಊಟ ಮತ್ತು ವಸತಿ ಸಹಾಯ ಯೋಜನೆ ಹಾಗೂ ಹತ್ತನೇ ತರಗತಿ ಮುಗಿದ ನಂತರ ವಿದ್ಯಾರ್ಥಿ ವೇತನ ಇವುಗಳಲ್ಲಿ ಯಾವುದಾದರೂ ಒಂದು ಸೌಲಭ್ಯ ಮಾತ್ರ ಅರ್ಹರಾಗಿರುತ್ತಾರೆ. ಈ ಯೋಜನೆಯನ್ನು ಪಡೆಯಲು ವಿದ್ಯಾರ್ಥಿಗಳ ತಂದೆ ತಾಯಿಯ ವಾರ್ಷಿಕ ಆದಾಯ ಪ್ರವರ್ಗ ಒಂದರ ವಿದ್ಯಾರ್ಥಿಗಳಿಗೆ ಎರಡು ಲಕ್ಷ 50,000 ಒಳಗಿರಬೇಕು ನಂತರ ಪ್ರವರ್ಗ 2a 3a ಮತ್ತು 3 ಬಿ ವಿದ್ಯಾರ್ಥಿಗಳಿಗೆ ಒಂದು ಲಕ್ಷದ ಮಿತಿಯೊಳಗೆ ಇರಬೇಕು. ಒಂದೇ ಕುಟುಂಬದ ಎರಡು ಗಂಡು ಮಕ್ಕಳು ಮಾತ್ರ ಈ ಯೋಜನೆಗೆ ಅರ್ಹರು ಆದರೆ ಈ ನಿರ್ಬಂಧ ಹೆಣ್ಣು ಮಕ್ಕಳಿಗೆ ಅನ್ವಯಿಸುವುದಿಲ್ಲ. ಹೊಸದಾಗಿ ಈ ಸೌಲಭ್ಯವನ್ನು ಪಡೆಯಲು ಈ ಹಿಂದಿನ ವರ್ಷದ ಪ್ರವರ್ಗ 1 ಅವರಿಗೆ  ಕಡ್ಡಾಯವಾಗಿ 40%ಉತ್ತೀರ್ಣರಾಗಿರಬೇಕು ಹಾಗೂ ಪ್ರವರ್ಗ 2 ಎ 3 ಎ ಮತ್ತು 3  ಬಿ ಇವರು 50 %ಅಲ್ಲಿ ಉತ್ತರಿಣರಾಗಿರಬೇಕು. ವಿದ್ಯಾರ್ಥಿಗಳು ನಿಗದಿತ ದಾಖಲೆಗಳು ಹಾಗೂ ಬ್ಯಾಂಕ್ ಖಾತೆ ಸಂಖ್ಯೆ ಮತ್ತು ಐಎಫ್‌ಸಿ ಕೋಡ್ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಹೊಂದಿರಬೇಕು. ವಿದ್ಯಾಸಿರಿ ಸ್ಕಾಲರ್ಶಿಪ್ ಅನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2022.

ಈ ವಿದ್ಯಾಸಿರಿ ಸ್ಕಾಲರ್ಶಿಪ್ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲವಾಗಿದೆ. ಇದರಿಂದ ಉಚಿತವಾಗಿ ವಸತಿ ಊಟವನ್ನು ಪಡೆದುಕೊಳ್ಳಬಹುದು ಅದಲ್ಲದೆ ವರ್ಷಕ್ಕೆ 15000 ರೂಗಳನ್ನು ಕೂಡ ಉಚಿತವಾಗಿ ಪಡೆದುಕೊಳ್ಳಬಹುದು. ನಿಮ್ಮ ಎಲ್ಲಾ ವಿದ್ಯಾರ್ಥಿ ಮಿತ್ರರಿಗೆ ಶೇರ್ ಮಾಡಿ ಧನ್ಯವಾದಗಳು.

About

Lingaraj Ramapur BCA,MCA, MA(Journalism)

9 thoughts on “ವಿದ್ಯಾಸಿರಿ ಸ್ಕಾಲರ್ಶಿಪ್ : ವಿದ್ಯಾಸಿರಿ  ಸ್ಕಾಲರ್ಶಿಪ್ ಗೆ ಹೇಗೆ ಅಪ್ಲೈ ಮಾಡುವುದು ?

Leave a Reply

Your email address will not be published. Required fields are marked *

error: Content is protected !!