Picsart 25 09 26 22 26 53 254 scaled

ಪಿಎಫ್ ಹಣದ ನಿಯಮ ಬದಲಾವಣೆ: ಕೋಟ್ಯಾಂತರ ಉದ್ಯೋಗಿಗಳಿಗೆ ಕೇಂದ್ರದಿಂದ ಬಿಗ್ ಗಿಫ್ಟ್!

Categories:
WhatsApp Group Telegram Group

ಭಾರತದ ಕೋಟ್ಯಾಂತರ ಉದ್ಯೋಗಿಗಳಿಗೆ ಭವಿಷ್ಯ ನಿಧಿ (PF) ಕೇವಲ ನಿವೃತ್ತಿಯ ಭದ್ರತೆಯಲ್ಲ, ಕೆಲವೊಂದು ಸಮಯದಲ್ಲಿ ಆರ್ಥಿಕ ಆಧಾರವಾಗಿಯೂ ಕೆಲಸ ಮಾಡುತ್ತದೆ. ಆದರೆ, ಇದುವರೆಗೆ ಈ ಹಣವನ್ನು ಬಳಸುವಲ್ಲಿ ಅನೇಕ ನಿರ್ಬಂಧಗಳು, ನಿಯಮಗಳು ಹಾಗೂ ಶರತ್ತುಗಳು ಇತ್ತು. ಮನೆ ಕಟ್ಟುವುದು, ಮಕ್ಕಳ ಮದುವೆ ಅಥವಾ ಅವರ ಉನ್ನತ ಶಿಕ್ಷಣಕ್ಕಾಗಿ ಹಣ ಬೇಕಾದಾಗ, ಪಿಎಫ್ ಹಣ ಹಿಂಪಡೆಯಲು ಕಡ್ಡಾಯವಾಗಿ ನಿರ್ದಿಷ್ಟ ಶರತ್ತುಗಳನ್ನು ಪೂರೈಸಬೇಕಾಗಿತ್ತು. ಇದರಿಂದ ಸಾಮಾನ್ಯ ಉದ್ಯೋಗಿಗಳು ಹಲವಾರು ಬಾರಿ ನಿರಾಶೆ ವ್ಯಕ್ತಪಡಿಸಿದೆ ಸಂದರ್ಭಗಳೂ ಕಂಡುಬಂದಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇದೀಗ ಕೇಂದ್ರ ಸರ್ಕಾರವು ಈ ನಿಯಮಗಳಲ್ಲಿ ದೊಡ್ಡ ಬದಲಾವಣೆ ತರಲು ಸಜ್ಜಾಗಿದೆ. “ನಿಮ್ಮ ಪಿಎಫ್ ಹಣ  ನಿಮ್ಮ ಇಷ್ಟದಂತೆ ಬಳಸಿಕೊಳ್ಳಿ” ಎನ್ನುವ ತತ್ವದತ್ತ ಸರ್ಕಾರ ಹೆಜ್ಜೆ ಇಡುತ್ತಿದ್ದು, ಇದರಿಂದ ಉದ್ಯೋಗಿಗಳಿಗೆ ತಮ್ಮ ಹಣದ ಮೇಲೆ ಹೆಚ್ಚು ಸ್ವಾತಂತ್ರ್ಯ ಸಿಗುವ ನಿರೀಕ್ಷೆ ಇದೆ. ಹಾಗಾದರೆ ಏನಿದು ಹೊಸ ನಿಯಮ? ಇದರಿಂದ ನಿಮಗಾಗುವ ಲಾಭವೇನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಈಗಿರುವ ಪಿಎಫ್ ನಿಯಮಗಳು ಹೇಗಿವೆ?:

ಪೂರ್ಣ ಹಣ ಹಿಂಪಡೆಯಲು: ಪಿಎಫ್ ಹಣ 58 ವರ್ಷಗಳ ನಿವೃತ್ತಿ ವಯಸ್ಸಿನ ನಂತರವೇ ಹಿಂಪಡೆಯಲು ಸಾಧ್ಯವಿದೆ ಅಥವಾ ಎರಡು ತಿಂಗಳಿಗಿಂತ ಹೆಚ್ಚು ಕಾಲ ಯಾವುದೇ ಜಾಬ್ ಇಲ್ಲ ಅಂದ್ರೆ ನಿಮಗೆ ಪೂರ್ತಿ ಹಣ ಸಿಗುತ್ತದೆ.
ಮದುವೆಗೆ ಹಣ: ಕನಿಷ್ಠ ಏಳು ವರ್ಷಗಳ ಸೇವೆ ಸಲ್ಲಿಸಿರಬೇಕು ತಮ್ಮ ಸ್ವಂತ ಸಹೋದರ ಸಹೋದರಿ ಅಥವಾ ಮಕ್ಕಳ ಮದುವೆಗಾಗಿ ತಮ್ಮ ವಂತಿಕೆ ಅಥವಾ ಅದರ ಮೇಲಿನ ಬಡ್ಡಿಯ ಶೇಕಡ 50ರಷ್ಟು ಹಣವನ್ನ ಮಾತ್ರ ವಿಥ್ಡ್ರಾ ಮಾಡಿಕೊಳ್ಳಬಹುದು.
ಗೃಹ ನಿರ್ಮಾಣಕ್ಕೆ: ಗೃಹ ನಿರ್ಮಾಣಕ್ಕಾಗಿ ಕನಿಷ್ಠ ಮೂರು ವರ್ಷ ಸೇವೆ ಸಲ್ಲಿಸಿದ್ದರೆ ಒಟ್ಟು ಜಮಾ ಆಗಿರುವ ಹಣದಲ್ಲಿ ಶೇಕಡ 90ರಷ್ಟು ಹಣವನ್ನ ಹಿಂಪಡೆಯಬಹುದು ಆದರೆ ಆ ಆಸ್ತಿ ನೌಕರರ ಅವರ ಸಂಗಾತಿಯ ಅಥವಾ ಜಂಟಿ ಹೆಸರಿನಲ್ಲಿರಬೇಕು.
ಮಕ್ಕಳ ಉನ್ನತ ಶಿಕ್ಷಣಕ್ಕೆ: ಇನ್ನು ಮಕ್ಕಳ ಮೆಟ್ರಿಕ್ ನಂತರದ ಶಿಕ್ಷಣಕ್ಕಾಗಿ ಕನಿಷ್ಠ ಏಳು ವರ್ಷ ಸೇವೆ ಸಲ್ಲಿಸಿದವರು ತಮ್ಮ ಒಂತಿಕೆಯ ಶೇಕಡ 50ರಷ್ಟು ಹಣವನ್ನ ಬಡ್ಡಿ ಸಮೇತ ಪಡೆಯಬಹುದು.
ಈ ನಿಯಮಗಳು ಹಲವಾರು ವೇಳೆ ಕಟ್ಟುನಿಟ್ಟಾಗಿದ್ದು, ತುರ್ತು ಸಂದರ್ಭಗಳಲ್ಲಿ ನೌಕರರು ಹಣ ಬಳಸಲು ತೊಂದರೆ ಅನುಭವಿಸುತ್ತಿದ್ದರು.

ಕೇಂದ್ರ ಸರ್ಕಾರದ ಹೊಸ ಚಿಂತನೆ ಏನು?:

ಮನಿ ಕಂಟ್ರೋಲ್ ವರದಿ ಪ್ರಕಾರ, ಸರ್ಕಾರ ಪ್ರತಿ 10 ವರ್ಷಗಳಿಗೊಮ್ಮೆ ಸದಸ್ಯರಿಗೆ ತಮ್ಮ ಪಿಎಫ್ ಹಣದ ಒಂದು ಭಾಗ ಅಥವಾ ಸಂಪೂರ್ಣ ಮೊತ್ತ ಹಿಂಪಡೆಯುವ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದೆ.
ಹಿರಿಯ ಅಧಿಕಾರಿಗಳ ಪ್ರಕಾರ, “ಉದ್ಯೋಗಿಯೇ ತನ್ನ ಹಣವನ್ನು ಹೇಗೆ ಬಳಸಬೇಕು ಎಂದು ನಿರ್ಧರಿಸಬೇಕು. ಸರ್ಕಾರವು ನಿರ್ಬಂಧ ಹೇರಲು ಬಯಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಬದಲಾವಣೆ ಜಾರಿಯಾದರೆ, ಕಡಿಮೆ ಹಾಗೂ ಮಧ್ಯಮ ಆದಾಯದ ಉದ್ಯೋಗಿಗಳಿಗೆ ತುರ್ತು ಸಂದರ್ಭದಲ್ಲಿ ಹಣದ ಕೊರತೆ ಪರಿಹಾರವಾಗಲಿದೆ.
ಜೀವನದ ಪ್ರಮುಖ ಹಂತಗಳಲ್ಲಿ (ಮನೆ, ಮದುವೆ, ಮಕ್ಕಳ ಶಿಕ್ಷಣ) ನೌಕರರು ತಮ್ಮ ಹಣವನ್ನು ನಿರ್ಬಂಧವಿಲ್ಲದೆ ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ಆದರೆ, ನಿವೃತ್ತಿಯ ಸಮಯದಲ್ಲಿ ಪಿಎಫ್ ಹಣ ಸಂಪೂರ್ಣ ಖಾಲಿಯಾಗದಂತೆ ಸಮತೋಲನ ಸಾಧಿಸುವ ಕ್ರಮಗಳ ಅಗತ್ಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿನ EPFO ಅಪ್ಡೇಟ್‌ಗಳು ಹೀಗಿವೆ:
ಸರ್ಕಾರದ ಭವಿಷ್ಯದ ಬದಲಾವಣೆಗಳೊಂದಿಗೆ, ಈಗಾಗಲೇ EPFO ಕೆಲವು ಪ್ರಮುಖ ಸುಧಾರಣೆಗಳನ್ನು ತಂದಿದೆ.

ಪಾಸ್ಬುಕ್ ಲೈಟ್:

ಸದಸ್ಯರ ಪೋರ್ಟಲ್‌ನಲ್ಲಿ ಹೊಸ ಫೀಚರ್.
ಒಂದು ಲಾಗಿನ್‌ನಲ್ಲೇ ಕೊಡುಗೆ, ಹಿಂಪಡೆಯುವ ಹಣ ಮತ್ತು ಒಟ್ಟು ಬಾಕಿ ಮೊತ್ತವನ್ನು ಸುಲಭವಾಗಿ ವೀಕ್ಷಿಸಬಹುದು.
ಮೊದಲು ಪ್ರತ್ಯೇಕ ಪೋರ್ಟಲ್‌ಗೆ ಲಾಗಿನ್ ಆಗಬೇಕಾಗುತ್ತಿತ್ತು.

ಅನೆಕ್ಸರ್ K ಟ್ರ್ಯಾಕಿಂಗ್:

ಉದ್ಯೋಗ ಬದಲಿಸಿದಾಗ ಹಳೆಯ ಕಂಪನಿಯಿಂದ ಹೊಸ ಕಂಪನಿಗೆ ಪಿಎಫ್ ವರ್ಗಾವಣೆ ಆಗುತ್ತದೆ.
ಈಗ ಸದಸ್ಯರು Annexure K ಪ್ರಮಾಣಪತ್ರವನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು.
ಪಿಎಫ್ ವರ್ಗಾವಣೆ ಯಾವ ಹಂತದಲ್ಲಿದೆ ಎಂದು ನಿಖರವಾಗಿ ತಿಳಿದುಕೊಳ್ಳಬಹುದು.
ಭವಿಷ್ಯದಲ್ಲಿ ಪಿಂಚಣಿ ಲೆಕ್ಕಾಚಾರಕ್ಕೂ ಇದು ಉಪಯೋಗಿ.

ಕ್ಲೇಮ್ ಪ್ರಕ್ರಿಯೆ ಸುಲಭ:

ಮೊದಲು ಉನ್ನತ ಅಧಿಕಾರಿಗಳ ಅನುಮೋದನೆ ಅಗತ್ಯವಿತ್ತು.
ಈಗ ಸಹಾಯಕ ಭವಿಷ್ಯನಿಧಿ ಆಯುಕ್ತರು ಮತ್ತು ಕೆಳಹಂತದ ಅಧಿಕಾರಿಗಳಿಗೆ ಅಧಿಕಾರ ಹಂಚಿಕೆ ಮಾಡಲಾಗಿದೆ.
ಕ್ಲೇಮ್ ಪ್ರಕ್ರಿಯೆ ವೇಗವಾಗಿ ಪೂರ್ಣಗೊಳ್ಳಲಿದೆ.

ಒಟ್ಟಾರೆಯಾಗಿ, ಕೇಂದ್ರ ಸರ್ಕಾರವು ಪಿಎಫ್ ಹಣವನ್ನು ಬಳಸುವಲ್ಲಿ ಉದ್ಯೋಗಿಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲು ತೀರ್ಮಾನಿಸಿದೆ. ಒಂದು ಕಡೆ ಭವಿಷ್ಯದ ನಿಯಮ ಬದಲಾವಣೆಗಳು “ನಿಮ್ಮ ಹಣ – ನಿಮ್ಮ ನಿರ್ಧಾರ” ಎಂಬ ತತ್ವದತ್ತ ಸಾಗುತ್ತಿದ್ದು, ಇನ್ನೊಂದು ಕಡೆ EPFO ಈಗಾಗಲೇ ಪಾಸ್ಬುಕ್ ಲೈಟ್, Annexure K ಮುಂತಾದ ಹೊಸ ಫೀಚರ್‌ಗಳ ಮೂಲಕ ಪಿಎಫ್ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಲಭಗೊಳಿಸಿದೆ.
ಇದರಿಂದ ಕೋಟ್ಯಾಂತರ ಉದ್ಯೋಗಿಗಳಿಗೆ ಆರ್ಥಿಕ ಭದ್ರತೆ ಜೊತೆಗೆ ತುರ್ತು ಸಂದರ್ಭದಲ್ಲಿ ತಕ್ಷಣದ ನೆರವು ಲಭಿಸುವ ನಿರೀಕ್ಷೆ ಇದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories