Today Onion Price – ಮತ್ತಷ್ಟು ಏರುತ್ತಲೇ ಇದೇ ಈರುಳ್ಳಿ ದರ, ಇಲ್ಲಿದೆ ರೇಟ್ ವಿವರ..!

onion rate increased

ಈಗಾಗಲೇ ನಿಮಗೆ ತಿಳಿದೇ ಇದೆ ಮಾರುಕಟ್ಟೆಯಲ್ಲಿ ( Market ) ಈರುಳ್ಳಿ ( Onion ) ದರ ಬಾನೆತ್ತರಕ್ಕೆ ತಲುಪಿದೆ. ಮೂರು ತಿಂಗಳ ಹಿಂದೆಯಷ್ಟೇ ಟೊಮೆಟೊ ದರ ಕೆಜಿಗೆ 200 ರೂ.ವರೆಗೂ ದಾಟಿ ನಂತರ ಕುಸಿತ ಕಂಡಿತ್ತು. ಆದರೆ ಇದೀಗ ಈರುಳ್ಳಿಯ ಬೆಲೆ ಏರಿಕೆ ಆಗಿದೆ. ಈ ವಿಷಯ ಕೇಳಿ ಜನರು ಪೇಚಾಡುವಂತೆ ಆಗಿದೆ. ಏನಿದು ಸುದ್ದಿ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಈರುಳ್ಳಿಯ ಬೆಲೆ ಮತ್ತೆ ಏರಿಕೆ :

Hike in onion price : ಹೌದು ಕಳೆದ ವಾರ, ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಪ್ರತಿ ಕೆ.ಜಿ.ಗೆ 30-40 ರೂ.ಗೆ ಲಭ್ಯವಿತ್ತು, ಆದರೆ ಎರಡು ದಿನಗಳ ಹಿಂದೆ ಅದು ಕೆ.ಜಿ.ಗೆ 80-100 ರೂ.ಗೆ ಏರಿದೆ. ಹೀಗೆ ಆದರೆ ಮನೆಯ ಅಡುಗೆಗೆ ಏನು ಬಳಸಬೇಕು ಎಂದು ಎಲ್ಲರೂ ಕಾಡುವ ಪ್ರಶ್ನೆ. ಈರುಳ್ಳಿಯ ಈ ಬೆಲೆ ಏರಿಕೆಯ ಹಿಂದಿನ ಮುಖ್ಯ ಕಾರಣವೆಂದರೆ ಈರುಳ್ಳಿಯ ಸಂಗ್ರಹಣೆಯಿಂದಾಗಿ ಪೂರೈಕೆ ಕಡಿಮೆಯಾಗಿ ಬೆಲೆ ದುಪ್ಪಟ್ಟಾಗಿದೆ ( Rate Increased ) .

ಇದಕ್ಕೆಲ್ಲ ಮುಖ್ಯ ಕಾರಣವೆಂದರೆ ಜನರು ಮಾರುಕಟ್ಟೆಯಲ್ಲಿ ಈರುಳ್ಳಿಯನ್ನು ಸಂಗ್ರಹಿಸುತ್ತಿದ್ದಾರೆ. ಇದು ಇಂದು ಮಾರುಕಟ್ಟೆಯಲ್ಲಿ ಬೆಲೆಗಳನ್ನು ಹೆಚ್ಚಿಸುತ್ತಿದೆ. ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳದಿದ್ದರೆ, ಮುಂಬರುವ ತಿಂಗಳುಗಳಲ್ಲಿ ಬೆಲೆಗಳು ಪ್ರತಿ ಕೆ.ಜಿ.ಗೆ 120-150 ರೂ.ಗೆ ತಲುಪಬಹುದಾಗಿದೆ.

ನೋಡುವುದಾದರೆ ಒಂದು ವಾರದ ಹಿಂದೆ ಈರುಳ್ಳಿಯನ್ನು ಸಗಟು ಮಾರುಕಟ್ಟೆಗಳಲ್ಲಿ ಪ್ರತಿ ಕೆ.ಜಿ.ಗೆ 20-25 ರೂ.ಗೆ ಮಾರಾಟ ಮಾಡಲಾಗುತ್ತಿತ್ತು. ಚಿಲ್ಲರೆ ವ್ಯಾಪಾರದಲ್ಲಿ ಪ್ರತಿ ಕೆ.ಜಿ.ಗೆ 35-50 ರೂ. ಇತ್ತೀಚಿನ ಏರಿಕೆಯ ನಂತರ, ಸಗಟು ಮಾರುಕಟ್ಟೆಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 45-50 ರೂ.ಗೆ ಏರಿದೆ. ನಗರಗಳ ಚಿಲ್ಲರೆ ಮಾರುಕಟ್ಟೆಗಳಲ್ಲಿ ಈರುಳ್ಳಿಯನ್ನು ಪ್ರತಿ ಕೆ.ಜಿ.ಗೆ 80-100 ರೂ.ಗಳ ದರದಲ್ಲಿ ಮಾರಾಟ ಮಾಡಲಾಗುತ್ತಿದೆ.

ಇದನ್ನೂ ಓದಿ – Coconut Price – ಎಳನೀರು ಗ್ರಾಹಕನಿಗೆ ಹೊರೆ, ರೈತರಿಗೆ ಬರೆ, 10ಕ್ಕೆ ಖರೀದಿಸಿ 35- 40 ಕ್ಕೆ ಮಾರಾಟ! ಇಲ್ಲಿದೆ ವಿವರ

ಮಾರುಕಟ್ಟೆಗೆ ಬರುತ್ತಿಲ್ಲ ಈರುಳ್ಳಿ :

ಈ ಬಾರಿ ಮಳೆ ( Rain ) ಕೊರತೆಯಿಂದ ಚಳಿಗಾಲದ ವೇಳೆ ಬೆಳೆಯುತ್ತಿದ್ದ ಈರುಳ್ಳಿ ಪ್ರಮಾಣ ಕುಸಿತ ಕಂಡಿದೆ. ಏಕೆಂದರೆ ಮಳೆ ಸರಿಯಾಗಿ ಬರದ ಕಾರಣ ನೀರಿನ ಕೊರತೆ ಕಾಡುತ್ತಿದೆ. ಇಳುವರಿ ಕುಸಿತವಾಗಿ ಮಾರುಕಟ್ಟೆಗೆ ಈರುಳ್ಳಿ ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಹಾಗಾಗಿ ಮಾರಾಟಗಾರರು ಈರುಳ್ಳಿಯನ್ನು ಸಂಗ್ರಹಿಸಿ ಇಡಲಾರಂಭಿಸಿದ್ದಾರೆ.
ಹೀಗಾಗಿ ಈರುಳ್ಳಿಯು ಮಾರುಕಟ್ಟೆಯಲ್ಲಿ ದಶಕ ಬಾರಿಸಿದೆ. ಜನ ಸಾಮಾನ್ಯರು ಕೊಂಡು ಕೊಳ್ಳಲು ಆಗದೆ ನಿರಾಶೆಯನ್ನು ತೋರುತ್ತಿದ್ದಾರೆ. ಈಗ ಇದ್ದ ಈರುಳ್ಳಿಯ ಬೆಲೆ ಮುಂದಿನ ವಾರ ಏನಾಗುತ್ತದೆ ಎಂದು ಕಾದು ನೋಡಬೇಕು.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

Leave a Reply

Your email address will not be published. Required fields are marked *