ಮಧ್ಯ ಕರ್ನಾಟಕದ ಕೃಷಿಕರ ಜೀವನಾಧಾರವಾಗಿರುವ ಈರುಳ್ಳಿ ಬೆಳೆ (Onion crop) ಇದೀಗ ರೈತರಿಗೆ ಕಣ್ಣೀರು ತರಿಸುತ್ತಿದೆ. ಜಿಲ್ಲೆಯಾದ್ಯಂತ ಈರುಳ್ಳಿ ಕಟಾವು ಆರಂಭವಾದರೂ, ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಕಂಡುಬಂದಿದೆ. ಬೆಳೆಗಾರರು ಹಲವು ತಿಂಗಳು ದುಡಿದು ಬೆಳೆದ ಬೆಳೆ ಇದೀಗ ಮಾರುಕಟ್ಟೆಯಲ್ಲಿ (In market) ತಕ್ಕಮಟ್ಟಿನ ದರ ಪಡೆಯದೇ ನಷ್ಟಕ್ಕೆ ದೂಡುತ್ತಿದೆ. 50 ಕೆ.ಜಿ ಈರುಳ್ಳಿ ಬ್ಯಾಗ್ ಕನಿಷ್ಠ ₹50ರಿಂದ ಗರಿಷ್ಠ ₹500ರವರೆಗೆ ಮಾತ್ರ ಮಾರಾಟವಾಗುತ್ತಿದೆ. ಇದರಿಂದ ರೈತರ ನಿರೀಕ್ಷೆಗಳು ಭಗ್ನವಾಗಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವರ್ಷಕ್ಕಿಂತ ಭಾರೀ ಕುಸಿತ :
ಕಳೆದ ವರ್ಷದ ಇದೇ ಅವಧಿಯಲ್ಲಿ 50 ಕೆ.ಜಿ ಬ್ಯಾಗ್‌ಗೆ ಕನಿಷ್ಠ ₹1,600ರಿಂದ ₹3,450ರವರೆಗೆ ದರ ದೊರಕುತ್ತಿತ್ತು. ಆದರೆ ಈ ಬಾರಿ ಪ್ರತಿ ಕೆ.ಜಿ ಕೇವಲ ₹1ರಿಂದ ₹10ರವರೆಗೆ ಮಾತ್ರ ಮಾರಾಟವಾಗುತ್ತಿದೆ. ಗಣೇಶ ಹಬ್ಬದ (Ganesha Festival) ಸಂದರ್ಭದಲ್ಲಿ ಉತ್ತಮ ದರ ಸಿಗುತ್ತೆಂದು ಭರವಸೆಯಿಟ್ಟಿದ್ದ ರೈತರಿಗೆ ಈಗ ತೀವ್ರ ನಿರಾಶೆಯಾಗಿದೆ.
ಹಂಗಾಮಿನ ಸ್ಥಿತಿ:
ಜಿಲ್ಲೆಯಲ್ಲಿ ಈ ಹಂಗಾಮಿನಲ್ಲಿ ಸುಮಾರು 40,000 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿದೆ. ಸ್ಥಳೀಯ ಬೇಡಿಕೆ ಕುಸಿದಿರುವ ಕಾರಣ, ರೈತರು ತಮ್ಮ ಬೆಳೆಗಳನ್ನು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ (Yashwanthpur market in Bangalore) ಸಾಗಿಸುತ್ತಿದ್ದಾರೆ. ಆದರೆ ಅಲ್ಲಿ ಸಹ ತೃಪ್ತಿಕರ ದರ ಸಿಗದಿರುವುದರಿಂದ ರೈತರ ನೋವು ಹೆಚ್ಚಾಗಿದೆ.
ರೈತರ ಅಳಲು:
ಮುಕ್ತ ಮಾರುಕಟ್ಟೆಯಲ್ಲಿ ಪ್ರತಿ 4 ಕೆ.ಜಿ ಈರುಳ್ಳಿಗೆ ₹100 ದರವಿದೆ. ಆದರೆ ಸೂಪರ್ ಮಾರುಕಟ್ಟೆಗಳಲ್ಲಿ ಅದೇ ಈರುಳ್ಳಿಯನ್ನು ಪ್ರತಿ ಕೆ.ಜಿ ₹35ರಂತೆ ಮಾರುತ್ತಿದ್ದಾರೆ. ಒಂದು ಬ್ಯಾಗ್ ಈರುಳ್ಳಿ ಬೆಳೆಯಲು ಕನಿಷ್ಠ ₹800 ಖರ್ಚಾಗುತ್ತದೆ. ಸಾಗಣೆ ವೆಚ್ಚ ಸೇರಿ ₹1,000 ಕ್ಕೂ ಹೆಚ್ಚು ಖರ್ಚು ಆಗುತ್ತದೆ. ಇದರ ಅರ್ಧದರವೂ ಸಿಗದಿದ್ದರೆ ನಾವು ಜೀವನ ನಡೆಸುವುದು ಹೇಗೆ? ಎಂದು ಚಳ್ಳಕೆರೆ ತಾಲ್ಲೂಕಿನ ಬಾಲೇನಹಳ್ಳಿ ಗ್ರಾಮದ ರೈತ ಸಿದ್ದೇಶ್ ತಮ್ಮ ನೋವನ್ನು ಹಂಚಿಕೊಂಡು ಕಣ್ಣೀರು ಹಾಕಿದ್ದಾರೆ.
ಮಳೆಯ ಸಂಕಷ್ಟ(Rain problem) :
ಇದೇ ವೇಳೆ, ನಿರಂತರ ಮಳೆಯಿಂದಾಗಿ ಈರುಳ್ಳಿಯ ಗುಣಮಟ್ಟ ಕುಸಿದಿದೆ. ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆಯಿಂದಾಗಿ ಕಟಾವು ಹಂತದಲ್ಲಿದ್ದ ಈರುಳ್ಳಿ ಬಣ್ಣ ಮತ್ತು ಗುಣಮಟ್ಟ (Onion color and quality) ಹಾಳಾಗಿದೆ. ಕಳೆದ ವಾರ ಸುರಿದ ಭಾರಿ ಮಳೆಯಿಂದ ಅಪಾರ ಪ್ರಮಾಣದ ಈರುಳ್ಳಿ ನಾಶವಾಗಿದೆ.
ಇನ್ನು, ಮಳೆಯಿಂದ ಸ್ಥಳೀಯ ಈರುಳ್ಳಿಯ ಗುಣಮಟ್ಟ ಹಾಳಾಗಿದೆ, ಬಣ್ಣ ಬದಲಾಗಿದೆ. ಆದ್ದರಿಂದ ವರ್ತಕರು ಸ್ಥಳೀಯ ಈರುಳ್ಳಿಯನ್ನು ತಿರಸ್ಕರಿಸಿ ಮಹಾರಾಷ್ಟ್ರದಿಂದ ತರಲಾಗಿರುವ ಈರುಳ್ಳಿ ಖರೀದಿಸುತ್ತಿದ್ದಾರೆ. ಇದರಿಂದ ನಾವು ಭಾರೀ ನಷ್ಟ (Heavy loss) ಅನುಭವಿಸುತ್ತಿದ್ದೇವೆ ಎಂದು ಹೊಸದೂರ್ಗ ತಾಲ್ಲೂಕಿನ ಹೊಸಕುಂದೂರಿನ ಜಿ.ಎಚ್. ಲೋಕೇಶ್ ಅವರ ಅಳಲು ತೋಡಿಕೊಂಡಿದ್ದಾರೆ.
ಒಟ್ಟಾರೆಯಾಗಿ, ಈರುಳ್ಳಿ ಬೆಲೆ ಕುಸಿತ ಮತ್ತು ಮಳೆಯ ಅನಾಹುತದಿಂದಾಗಿ ರೈತರ ಬದುಕು ಗಂಭೀರ ಸಂಕಷ್ಟಕ್ಕೆ ತುತ್ತಾಗಿದೆ. ಶ್ರಮ, ಹಣ, ಕಾಲ ಹೂಡಿಕೆ (Invest) ಮಾಡಿದರೂ ಸಮರ್ಪಕ ಬೆಲೆ ಸಿಗದಿರುವುದರಿಂದ ಅವರು ಮುಂದಿನ ದಿನಗಳಲ್ಲಿ ಬೆಳೆಗಾರಿಕೆಯಲ್ಲಿ ತೊಡಗಬೇಕೇ ಎಂಬ ಅನುಮಾನ ತಲೆದೋರಿಸಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.