WhatsApp Image 2025 10 01 at 1.11.11 PM

ರಾಜ್ಯ ಸರ್ಕಾರಿ ನೌಕರರ’ ಗಮನಕ್ಕೆ : ಕಡ್ಡಾಯ ಜೀವ ವಿಮಾ ಪಾಲಿಸಿಗಳಿಗೆ ಬೋನಸ್’ ಸುತ್ತೋಲೆ ಹೊರಡಿಸಿ ಅಧಿಕೃತ ಆದೇಶ

WhatsApp Group Telegram Group

ಕರ್ನಾಟಕ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ತಂದಿದೆ ರಾಜ್ಯ ಸರ್ಕಾರ. ಸರ್ಕಾರಿ ವಿಮಾ ಇಲಾಖೆಯ ಕಡ್ಡಾಯ ಜೀವ ವಿಮಾ ಯೋಜನೆಯ ಅಡಿಯಲ್ಲಿ ನೌಕರರ ಜೀವ ವಿಮಾ ಪಾಲಿಸಿಗಳಿಗೆ ಬೋನಸ್ ನೀಡಲು ಸರ್ಕಾರ ಮಂಜೂರಾತಿ ನೀಡಿದೆ. ಈ ನಿರ್ಣಯವನ್ನು ರಾಜ್ಯ ಸರ್ಕಾರ ಮಹತ್ವದ ಆದೇಶವೊಂದರ ಮೂಲಕ ಅನುಮೋದಿಸಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ ನಿರ್ದೇಶಕರು ಹೊರಡಿಸಿದ ಆದೇಶದ ಪ್ರಕಾರ, 01-04-2020 ರಿಂದ 31-03-2022ರ ವರೆಗಿನ ಅವಧಿಗೆ ಸಂಬಂಧಿಸಿದ ವಿಮಾ ಮೌಲ್ಯಮಾಪನ ವರದಿಯ ಆಧಾರದ ಮೇಲೆ ಈ ಬೋನಸ್ ನೀಡಲಾಗುವುದು. ಕರ್ನಾಟಕ ಸರ್ಕಾರಿ ನೌಕರರ (ಕಡ್ಡಾಯ ಜೀವ ವಿಮಾ) ನಿಯಮಗಳು, 1958ರ ನಿಯಮ-22ರ ಪ್ರಕಾರ, ಪ್ರತಿ ಎರಡು ವರ್ಷಗಳಿಗೊಮ್ಮೆ (ದ್ವೈವಾರ್ಷಿಕ) ಈ ವಿಮಾ ಮೌಲ್ಯಮಾಪನವನ್ನು ನಡೆಸಬೇಕಾಗಿದೆ. ಇದರಂತೆ, 2020-2022 ಅವಧಿಯ ಮೌಲ್ಯಮಾಪನ ಕಾರ್ಯವನ್ನು ವಿಮಾ ಗಣಕಕಾರರು (ಆಕ್ಯುಯರಿ) ಪೂರ್ಣಗೊಳಿಸಿದ್ದಾರೆ.

ವಿಮಾ ಗಣಕಕಾರರ ಶಿಫಾರಸ್ಸು:

ವಿಮಾ ಗಣಕಕಾರರು ಸಲ್ಲಿಸಿದ ಮೌಲ್ಯಮಾಪನ ವರದಿಯಲ್ಲಿ, 31-03-2022ರಂದು ಚಾಲ್ತಿಯಲ್ಲಿದ್ದ ಎಲ್ಲಾ ವಿಮಾ ಪಾಲಿಸಿಗಳಿಗೆ, ವಿಮಾ ಮೊತ್ತದ ಪ್ರತಿ ಸಾವಿರ ರೂಪಾಯಿಗೆ ವಾರ್ಷಿಕ ರೂ. 80 ರಂತೆ ಪ್ರತ್ಯಾವರ್ತಿ ಲಾಭಾಂಶ (ಬೋನಸ್) ನೀಡಲು ಶಿಫಾರಸ್ಸು ಮಾಡಿದ್ದಾರೆ. ಈ ಉದ್ದೇಶಕ್ಕಾಗಿ, ಒಟ್ಟು ರೂ. 2524.53 ಕೋಟಿಯ ಲಾಭದಲ್ಲಿ ರೂ. 1955.65 ಕೋಟಿಯನ್ನು ಬೋನಸ್ ಗಾಗಿ ವಿತರಣೆ ಮಾಡಲು ಮತ್ತು ಉಳಿದ ರೂ. 568.57 ಕೋಟಿಯನ್ನು ಮುಂದಿನ ಮೌಲ್ಯಮಾಪನ ಅವಧಿಗೆ ಕೊಂಡೊಯ್ಯಲು ಸೂಚಿಸಿದ್ದಾರೆ.

ಸರ್ಕಾರದ ಅನುಮೋದನೆ:

ವಿಮಾ ಇಲಾಖೆಯ ನಿರ್ದೇಶಕರು ಈ ಶಿಫಾರಸ್ಸನ್ನು ಪರಿಗಣಿಸಿ, ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಪರಿಶೀಲನೆಯ ನಂತರ, ಸರ್ಕಾರವು ಈ ಕೆಳಕಂಡ ರೀತಿಯಲ್ಲಿ ಬೋನಸ್ ನೀಡಲು ದಿನಾಂಕ 17 ಸೆಪ್ಟೆಂಬರ್ 2025ರಂದು ಮಂಜೂರಾತಿ ನೀಡಿದೆ.

ಬೋನಸ್ ನೀಡುವಿಕೆಯ ವಿವರ:

01-04-2020 ರಿಂದ 31-03-2022ರ ಅವಧಿಯಲ್ಲಿ ಚಾಲ್ತಿಯಲ್ಲಿದ್ದ ಎಲ್ಲಾ ವಿಮಾ ಪಾಲಿಸಿಗಳಿಗೆ, ವಿಮಾ ಮೊತ್ತದ ಪ್ರತಿ ಸಾವಿರ ರೂಪಾಯಿಗೆ ವಾರ್ಷಿಕ ರೂ. 80 ರಂತೆ ಲಾಭಾಂಶ (ಬೋನಸ್) ನೀಡಲಾಗುವುದು.

01-04-2022 ರಿಂದ 31-03-2024 ರ ಅವಧಿಯಲ್ಲಿ ಅವಧಿ ಪೂರ್ಣಗೊಂಡ, ಮರಣಜನ್ಯ ಕಾರಣಗಳಿಂದ ಮುಕ್ತವಾದ ಅಥವಾ ವಿಮಾ ತ್ಯಾಗ ಮೌಲ್ಯದಿಂದ ಹೊರಬಂದ ಪಾಲಿಸಿಗಳಿಗೆ, ವಿಮಾ ಮೊತ್ತದ ಪ್ರತಿ ಸಾವಿರ ರೂಪಾಯಿಗೆ ವಾರ್ಷಿಕ ರೂ. 80 ರಂತೆ ಮಧ್ಯಂತರ ಲಾಭಾಂಶ (Interim Bonus) ನೀಡಲಾಗುವುದು.

ಈ ಆದೇಶದಿಂದ ರಾಜ್ಯ ಸರ್ಕಾರದ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಹಲವಾರು ನೌಕರರು ಲಾಭಪಡೆಯಲಿದ್ದಾರೆ. ಕಡ್ಡಾಯ ಜೀವ ವಿಮಾ ಯೋಜನೆಯಡಿಯಲ್ಲಿ ಈ ಬೋನಸ್ ಘೋಷಣೆಯು ನೌಕರರ ವಿಮಾ ರಕ್ಷಣೆ ಮತ್ತು ಆರ್ಥಿಕ ಲಾಭಗಳನ್ನು ಹೆಚ್ಚಿಸಲಿದೆ. ಸರ್ಕಾರಿ ಆದೇಶ ಸಂಖ್ಯೆ ಆಇ 79 ಕವಿಇ 2025ರ ಮೂಲಕ ಈ ತೀರಮಾನವನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ.

WhatsApp Image 2025 10 01 at 2.59.49 PM
WhatsApp Image 2025 10 01 at 2.59.49 PM 1
WhatsApp Image 2025 10 01 at 2.59.50 PM
WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories