ರಾಜ್ಯ ಸರ್ಕಾರವು ಖಜಾನೆ-2 ವ್ಯವಸ್ಥೆಯಲ್ಲಿ ಪಿಂಚಣಿ ಪಾವತಿಗೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಈ ಆದೇಶವು ನಿವೃತ್ತ ಸರ್ಕಾರಿ ನೌಕರರ ವೇತನ ಬ್ಯಾಂಕ್ ಖಾತೆಯನ್ನೇ ಪಿಂಚಣಿ ಸೌಲಭ್ಯಕ್ಕಾಗಿ ಮುಂದುವರೆಸಲು ಅನುಕೂಲ ಕಲ್ಪಿಸುತ್ತದೆ, ಇದರಿಂದ ಹೊಸ ಬ್ಯಾಂಕ್ ಖಾತೆ ತೆರೆಯುವ ಅಗತ್ಯವಿಲ್ಲ ಅಧಿಕೃತ ಸುತ್ತೋಲೆ ಲೇಖನದ ಕೊನೆಯಭಾಗದಲ್ಲಿದೆ
ಖಜಾನೆ-2 ರಲ್ಲಿ ಪಿಂಚಣಿ ಪಾವತಿ ನಿಯಮಗಳು:
ಖಜಾನೆ-2 ವ್ಯವಸ್ಥೆಯಲ್ಲಿ, ಸರ್ಕಾರಿ ನೌಕರರ ವೇತನ ಮತ್ತು ಭತ್ಯೆಗಳನ್ನು ಪಾವತಿಸಲು ಸ್ವೀಕರ್ತರ ವಿಧ-27 ರಲ್ಲಿ ನೌಕರರನ್ನು ನೋಂದಾಯಿಸಲಾಗುತ್ತದೆ. ಆದರೆ, ಸೇವೆಯಿಂದ ನಿವೃತ್ತರಾದ ನೌಕರರಿಗೆ ಪಿಂಚಣಿ ಸೌಲಭ್ಯವನ್ನು ಪಾವತಿಸಲು ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಬೇಕಾಗುತ್ತದೆ. ಒಂದೇ ಬ್ಯಾಂಕ್ ಖಾತೆಯನ್ನು ಎರಡು ಸ್ವೀಕರ್ತರ ವಿಧಗಳಲ್ಲಿ (ವಿಧ-27 ಮತ್ತು ವಿಧ-28) ನೋಂದಾಯಿಸಲು ಅವಕಾಶವಿಲ್ಲದಿರುವುದರಿಂದ, ಈಗಾಗಲೇ ನಿವೃತ್ತರಾದವರು ಹೊಸ ಬ್ಯಾಂಕ್ ಖಾತೆ ತೆರೆದು ವಿವರಗಳನ್ನು ಒದಗಿಸಬೇಕಿತ್ತು.
ಈಗ, ಈ ಸಮಸ್ಯೆಯನ್ನು ಸರಳೀಕರಣಗೊಳಿಸಲು ಸರ್ಕಾರವು ವೇತನ ಬ್ಯಾಂಕ್ ಖಾತೆಯನ್ನೇ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಲು ಅನುಕೂಲ ಕಲ್ಪಿಸಿದೆ. ಈ ಕೆಳಕಂಡ ವಿಧಾನಗಳನ್ನು ಅನುಸರಿಸಲಾಗುವುದು:
- ನಿವೃತ್ತಿಯ ನಂತರ 20 ದಿನಗಳ ಕಾಲ ಸ್ವೀಕರ್ತ ವಿಧ-27 ಸಕ್ರಿಯ:
ಸರ್ಕಾರಿ ನೌಕರರು ನಿವೃತ್ತರಾದ ನಂತರ, ಅವರ ಸ್ವೀಕರ್ತ ವಿಧ-27 ಅನ್ನು ನಿವೃತ್ತಿ ದಿನಾಂಕದಿಂದ 20 ದಿನಗಳವರೆಗೆ ಸಕ್ರಿಯ ಸ್ಥಿತಿಯಲ್ಲಿ ಇರಿಸಲಾಗುವುದು. ಈ ಅವಧಿಯಲ್ಲಿ, ಬಾಕಿ ಇರುವ ವೇತನ ಅಥವಾ ಭತ್ಯೆಗಳನ್ನು ಪಾವತಿಸಬಹುದು. 20 ದಿನಗಳ ನಂತರ, ಸ್ವೀಕರ್ತ ವಿಧ-27 ನೋಂದಣಿಯನ್ನು ನಿಷ್ಕ್ರಿಯಗೊಳಿಸಲಾಗುವುದು. - ವೇತನ ಬ್ಯಾಂಕ್ ಖಾತೆಯಲ್ಲಿ ಪಿಂಚಣಿ ಸೌಲಭ್ಯ:
ಸ್ವೀಕರ್ತ ವಿಧ-27 ನಿಷ್ಕ್ರಿಯಗೊಂಡ ನಂತರ, ಅದೇ ಬ್ಯಾಂಕ್ ಖಾತೆಯ ವಿವರಗಳನ್ನು ಉಪಯೋಗಿಸಿಕೊಂಡು, ಪಿಂಚಣಿ ಸೌಲಭ್ಯಕ್ಕಾಗಿ ಸ್ವೀಕರ್ತರ ವಿಧ-28 ರಲ್ಲಿ ನೋಂದಾಯಿಸಿಕೊಳ್ಳಬಹುದು. - ಪುನಃ ವೇತನ ಭತ್ಯೆ ಪಾವತಿಗೆ ಅವಕಾಶ:
ಒಂದು ವೇಳೆ ನಿವೃತ್ತಿಯ ನಂತರ ಯಾವುದೇ ವೇತನ ಅಥವಾ ಭತ್ಯೆ ಪಾವತಿಸಬೇಕಾದ ಸಂದರ್ಭ ಬಂದರೆ, ಸಂಬಂಧಿತ ಡಿಡಿಓ (Drawing and Disbursing Officer) ಖಜಾನೆ-2 ರಲ್ಲಿ ಟಿಕೇಟ್ ಮಂಡಿಸಿದರೆ, ಸ್ವೀಕರ್ತರ ವಿಧ-27 ಅನ್ನು ಪುನಃ ಸಕ್ರಿಯಗೊಳಿಸಿ, ಪಾವತಿಗೆ ಅವಕಾಶ ಕಲ್ಪಿಸಲಾಗುವುದು.



ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ತುಮಕೂರಿನ ಸರ್ಕಾರಿ ನರ್ಸಿಂಗ್ ಕಾಲೇಜಿನಿಂದ B.Sc (Nursing) ಪದವಿ ಪಡೆದಿರುವ ಇವರು, ಸಾರ್ವಜನಿಕ ಜಾಗೃತಿ ಮತ್ತು ಮಾಹಿತಿ ನೀಡುವ ಆಸಕ್ತಿಯಿಂದಾಗಿ ಡಿಜಿಟಲ್ ಪತ್ರಿಕೋದ್ಯಮ ಕ್ಷೇತ್ರವನ್ನು ಆಯ್ದುಕೊಂಡಿದ್ದಾರೆ. ಡಿಜಿಟಲ್ ಮಾಧ್ಯಮ ರಂಗದಲ್ಲಿ 3 ವರ್ಷಗಳ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ನೇಮಕಾತಿಗಳು ಮತ್ತು ಶೈಕ್ಷಣಿಕ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ನಿರುದ್ಯೋಗಿ ಯುವಕ-ಯುವತಿಯರಿಗೆ ಯಾವುದೇ ಗೊಂದಲವಿಲ್ಲದೆ, ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (Verified) ನಿಖರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದೇ ಇವರ ಬರವಣಿಗೆಯ ಶೈಲಿಯಾಗಿದೆ.


WhatsApp Group




Leave a Reply