ಕರ್ನಾಟಕದ ಕೃಷಿಕರು ತಮ್ಮ ಕೃಷಿ ಭೂಮಿಯಲ್ಲಿ ‘ಫಾರ್ಮ್ ಹೌಸ್’ ನಿರ್ಮಾಣ ಮಾಡಲು ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯವೆಂದು ಸರ್ಕಾರ ಹೇಳಿದೆ. ಕಂದಾಯ ಇಲಾಖೆಯು ನೀಡಿದ ಮಾಹಿತಿಯ ಪ್ರಕಾರ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ಕಲಂ 95(1)ರ ಪ್ರಕಾರ, ಕೃಷಿಕರು ತಮ್ಮ ಒಟ್ಟು ಕೃಷಿ ಭೂಮಿಯ 10% ಗರಿಷ್ಠ ಪ್ರಮಾಣದಲ್ಲಿ ಮಾತ್ರ ಫಾರ್ಮ್ ಹೌಸ್ ನಿರ್ಮಿಸಬಹುದು.ಈ ಕುರಿತು ಸಂಪೂರ್ಣ ಮಾಹಿತಿ ಕೆಳಗೆ ಕೊಡಲಾಗಿದೆ.ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫಾರ್ಮ್ ಹೌಸ್‌ನ ಉದ್ದೇಶ ಮತ್ತು ನಿಯಮಗಳು
ಫಾರ್ಮ್ ಹೌಸ್ ಅನ್ನು ಕೃಷಿಕರು ಮತ್ತು ಅವರ ಕುಟುಂಬದ ವಾಸಕ್ಕಾಗಿ ಮಾತ್ರವೇ ಅಲ್ಲದೆ, ಕೃಷಿ ಸಾಧನಗಳು ಮತ್ತು ಉಪಕರಣಗಳನ್ನು ಸಂಗ್ರಹಿಸಿಡಲು ಬಳಸಬೇಕು. ಆದರೆ, ಈ ಫಾರ್ಮ್ ಹೌಸ್‌ಗಳನ್ನು ಬಾಡಿಗೆಗೆ ನೀಡುವುದು ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸುವುದು ನಿಷೇಧವಾಗಿದೆ. ಕೃಷಿ ಭೂಮಿಯಲ್ಲಿ ನಿರ್ಮಾಣ ಮಾಡುವ ಫಾರ್ಮ್ ಹೌಸ್‌ಗಳಿಗೆ ಸಂಬಂಧಿಸಿದಂತೆ ಕೆಳಗಿನ ನಿಯಮಗಳನ್ನು ಪಾಲಿಸಬೇಕು:
ಅರ್ಜಿ ಸಲ್ಲಿಕೆ: ಆರ್.ಟಿ.ಸಿ (Record of Rights, Tenancy and Crops) ಹೊಂದಿರುವ ಭೂಮಾಲೀಕರು, ತಮ್ಮ ವ್ಯವಸಾಯ ಭೂಮಿಯ ಗರಿಷ್ಠ 10% (ಬಂಜರು ಭೂಮಿಯನ್ನು ಹೊರತುಪಡಿಸಿ) ಪ್ರಮಾಣದಲ್ಲಿ ಫಾರ್ಮ್ ಹೌಸ್, ಬಾವಿ ಅಥವಾ ನೀರಿನ ತೊಟ್ಟಿ ನಿರ್ಮಿಸಲು ಇಚ್ಛೆ ಇದ್ದರೆ, ಕಂದಾಯ ನಿರೀಕ್ಷಕರಿಗೆ ಲಿಖಿತ ಅರ್ಜಿ ಸಲ್ಲಿಸಬೇಕು.
ಡಿಜಿಟಲ್ ದಾಖಲೆ: ಆರ್.ಟಿ.ಸಿಯಲ್ಲಿ ಭೂಮಾಲೀಕರ ಇಚ್ಛೆಯನ್ನು ದಾಖಲಿಸಲು, ಭೂಮಿ ತಂತ್ರಾಂಶ ವ್ಯವಸ್ಥೆಯಲ್ಲಿ ಹೊಸ ಸೇವೆಯನ್ನು ಸೇರಿಸಲಾಗುತ್ತಿದೆ. ಇದರಿಂದ ಫಾರ್ಮ್ ಹೌಸ್ ನಿರ್ಮಾಣದ ವಿವರಗಳನ್ನು ಕಲಂ-2ರಲ್ಲಿ ನಮೂದಿಸಲು ಅನುಕೂಲವಾಗುತ್ತದೆ.
ಪ್ರತ್ಯೇಕ ಖಾತರಿ ಇಲ್ಲ: ಈ ನಿರ್ಮಾಣಗಳು ಕೇವಲ ಕೃಷಿ ಉಪಯೋಗಕ್ಕಾಗಿ ಮಾತ್ರವೇ ಮಿತಿಗೊಳಿಸಲ್ಪಟ್ಟಿರುವುದರಿಂದ, ಇವುಗಳಿಗೆ ಪ್ರತ್ಯೇಕವಾದ ಗ್ರಾಮ ಪಂಚಾಯಿತಿ ಅಥವಾ ನಗರಪಾಲಿಕೆಯ ಆಸ್ತಿ ಸಂಖ್ಯೆ ನೀಡುವ ಅಗತ್ಯವಿಲ್ಲ.
ಭೂಮಿ ವಹಿವಾಟು: ಫಾರ್ಮ್ ಹೌಸ್ ಇರುವ ಭೂಮಿಯನ್ನು ಮಾರಾಟ ಮಾಡಬೇಕಾದರೆ ಅಥವಾ ಇತರ ವ್ಯವಹಾರಗಳಿಗೆ ಬಳಸಬೇಕಾದರೆ, ಕರ್ನಾಟಕ ಭೂ ಕಂದಾಯ ಕಾಯ್ದೆ, 1964ರ ನಿಯಮ 95ರಡಿ ಭೂ ಪರಿವರ್ತನೆ ಕಡ್ಡಾಯವಾಗಿರುತ್ತದೆ.
ಇತರೆ ಕಾನೂನುಗಳಿಗೆ ಅಧೀನ: ಫಾರ್ಮ್ ಹೌಸ್, ಬಾವಿ ಅಥವಾ ತೊಟ್ಟಿ ನಿರ್ಮಾಣವು ಇತರೆ ಸಂಬಂಧಿಸಿದ ಕಾನೂನುಗಳು ಮತ್ತು ನಿಯಮಗಳಿಗೆ ಒಳಪಟ್ಟಿರುತ್ತದೆ.
ಡಿಜಿಟಲ್ ಅನುಷ್ಠಾನ: ಈ ಎಲ್ಲಾ ಮಾರ್ಗಸೂಚಿಗಳನ್ನು ಭೂಮಿ ತಂತ್ರಾಂಶದಲ್ಲಿ ಸರಿಯಾಗಿ ಅಳವಡಿಸುವಂತೆ ಸರ್ಕಾರ ಸೂಚಿಸಿದೆ.
ಯಾವತ್ತು ಈ ನಿಯಮಗಳು ಜಾರಿಗೆ ಬರುತ್ತವೆ?
ಈ ನಿಯಮಗಳು ತಕ್ಷಣ ಜಾರಿಗೆ ಬಂದು, ಕೃಷಿ ಭೂಮಿಯಲ್ಲಿ ಫಾರ್ಮ್ ಹೌಸ್ ನಿರ್ಮಾಣಕ್ಕೆ ಅನುಮತಿ ಬೇಡುವವರ ಮೇಲಿನ ವಿಧಾನಗಳನ್ನು ಪಾಲಿಸಬೇಕು. ಈ ನಿಯಮಗಳು ಕೃಷಿಕರಿಗೆ ಅನುಕೂಲವಾಗುವಂತೆ ರೂಪಿಸಲಾಗಿದೆ, ಆದರೆ ನಿಯಮಗಳ ಉಲ್ಲಂಘನೆಗೆ ಕಟ್ಟುನಿಟ್ಟಾದ ಕ್ರಮ ತೆಗೆದುಕೊಳ್ಳಲಾಗುವುದು.
ಹೀಗಾಗಿ, ಕೃಷಿ ಭೂಮಿಯನ್ನು ಹೊಂದಿರುವ ಪ್ರತಿಯೊಬ್ಬ ರೈತರು ಮತ್ತು ಭೂಮಾಲೀಕರು ಈ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಫಾರ್ಮ್ ಹೌಸ್ ನಿರ್ಮಾಣ ಮಾಡಬಹುದು.


ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.