ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 (BigBoss season 10) ದಿನದಿಂದ ದಿನಕ್ಕೆ ರೋಚಕತೆಯನ್ನು ಸೃಷ್ಟಿಸುತ್ತಿದೆ. ಇವತ್ತು ಇವರೇ ಎಲಿಮಿನೇಟ್ ಆಗಬಹುದೇನೋ ಎಂಬ ಜನರ ಊಹೆಗಳು ತಪ್ಪಾಗಿ ನಿರೀಕ್ಷೆ ಮಾಡದಿರುವವರು ಕೂಡ ಎಲಿಮಿನೇಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ದಿನದಿಂದ ದಿನಕ್ಕೆ ಜನರು ಕಡಿಮೆಯಾಗುತ್ತಿದ್ದಾರೆ. ಈ ಭಾನುವಾರ ನಮ್ರತಾ ಗೌಡ(Namratha Gowda) ಎಲಿಮಿನೇಟ್(eliminate) ಆಗಿರುವ ಸಂಗತಿ ನಿಮಗೆಲ್ಲ ತಿಳಿದೇ ಇದೆ. ವಾರದ ಅಂತ್ಯದ ಪಂಚಾಯಿತಿಯಲ್ಲಿ ಸುದೀಪ್ ಅವರು ನಮ್ರತ ಗೌಡ ಅವರನ್ನು ಎಲಿಮಿನೇಟ್ ಮಾಡಿ ಇನ್ನು ಕೇವಲ ಒಂದೇ ವಾರ ಫೈನಲ್ ಗೆ ಉಳಿದಿದೆ ಎಂದು ಹೇಳಿದ್ದಾರೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮನೆಯಿಂದ ಹೊರಗೆ ನಡೆದ ನಮ್ರತ:
ಬಿಗ್ ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಲಿಟ್ಟ ನಮ್ರತ ಇನ್ನೇನು ಫೈನಲ್ ಗೆ ಒಂದು ವಾರ ಇರುವ ಹಾಗೆ ಮನೆಯಿಂದ ಹೊರ ನಡೆದಿದ್ದಾರೆ. ಶನಿವಾರದ ವಾರದ ಕಥೆ ಕಿಚ್ಚ ಸುದೀಪ್ ನ ಜೊತೆಯ ಸಂಚಿಕೆಯಲ್ಲಿ ವಿನಯವರು ಮೊದಲಿಗೆ ಸೇಫ್ ಆದರು. ವರ್ತೂರು ಸಂತೋಷ್, ತುಕಾಲಿ ಸಂತೋಷ್ ಹಾಗೂ ಸಂಗೀತಾ ಈಗಾಗಲೇ ಬಿಗ್ಬಾಸ್ ಫಿನಾಲೆ ವಾರ ತಲುಪಿದ್ದರು. ಭಾನುವಾರದ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್(Drone prathap) ಕೂಡ ಸೇಫಾಗಿ ಉಳಿದರು. ಕೊನೆಗೆ ಉಳಿದ ಕಾರ್ತಿಕ್ ಹಾಗೂ ನಮ್ರತ ನಡುವೆ ಯಾರು ಎಲಿಮಿನೇಟ್ ಆಗುತ್ತಾರೆ ಎಂಬುದು ಎಲ್ಲರಿಗೂ ಕುತೂಹಲಕಾರಿಯಾಗಿತ್ತು. ಸುದೀಪ್ ಅವರು ಸ್ಪರ್ಧಿಗಳನ್ನು ಕುರಿತು ಈ ಘಟ್ಟದಲ್ಲಿ ಎಲ್ಲರೂ ತಮ್ಮ ಎಫರ್ಟ್ ಅನ್ನು ಹಾಕಿ ಇಲ್ಲಿವರೆಗೂ ಬಂದಿದ್ದೀರಾ, ಯಾರನ್ನು ಎಲಿಮಿನೇಟ್ ಮಾಡಬೇಕು ಎಂಬುವುದು ನಿರ್ಧರಿಸುವುದು ಕಷ್ಟದ ಕೆಲಸ ಆದರೆ ನಾನು ನನ್ನ ಕೆಲಸವನ್ನು ಮಾಡಲೇಬೇಕಾಗುತ್ತದೆ ಎಂದು ಹೇಳಿದರು.
ಮುಂದಿನ ವಾರಕ್ಕೆ ಹೋಗುತ್ತಿರುವ ಟಾಪ್ 6ನೇ ಸ್ಪರ್ಧಿ ಕಾರ್ತಿಕ್ ಎಂದು ಹೇಳಿದರು. ನಂತರ ನಮ್ರತಾ ಅವರು ಕಣ್ಣೀರಿಡುತ್ತಾ ಮನೆಯಿಂದ ಹೊರಬಂದರು. ನಮ್ರತ ಹೊರಗೆ ಬರುವಾಗ ವಿನಯವರು ಕಣ್ ತುಂಬಿಕೊಂಡರು. ಆರಂಭದಲ್ಲಿ ಸ್ವಲ್ಪಮಟ್ಟಿಗೆ ಸೇಫ್ ಗೇಮ್ ಆಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ನಿಧಾನವಾಗಿ ಅಸಲಿ ಆಟ ಶುರು ಮಾಡಿದ್ದರು. ಕೊನೆ ಕೊನೆಗೆ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಂಡರು. ಬಿಗ್ ಬಾಸ್ ನಲ್ಲಿ ಇದ್ದ ಮೊದಲ ದಿನಗಳಲ್ಲಿ ಸ್ವಲ್ಪ ಕಡಿಮೆ ಮಾತನಾಡುತ್ತಿದ್ದರು ಎಲ್ಲರೊಂದಿಗೆ ಕಡಿಮೆ ಸೇರುತ್ತಿದ್ದರು. ಆದರೆ ಕೊನೆಯಲ್ಲಿ ಎಲ್ಲಾ ಸ್ಪರ್ಧಿಗಳ ಜೊತೆಯಲ್ಲಿ ಚೆನ್ನಾಗಿ ಬೆಳೆದಿದ್ದರು ಅಷ್ಟೇ ಅಲ್ಲದೆ ಟಫ್ ಕಾಂಪಿಟೇಟರ್ ಕೂಡ ಆಗಿದ್ದರು.

ನಾಗಿಣಿ ಎಂದೇ ಫೇಮಸ್ ಆಗಿದ್ದ ನಮ್ರತಾ ಗೌಡ ಅವರು, ಧಾರವಾಹಿಗಳ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದರು. ಅಷ್ಟೇ ಅಲ್ಲದೆ ಬಿಗ್ ಬಾಸ್ ಮನೆಯಲ್ಲಿ ಕೂಡ ಸ್ಟ್ರಾಂಗ್ ಕಂಟೆಸ್ಟೆಂಟ್ ಗಳಲ್ಲಿ ಒಬ್ಬರಾಗಿದ್ದರು. ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಟವನ್ನು ಆಡಿದ ನಾಗಿಣಿಗೆ ಕೊನೆಯ ವಾರದವರೆಗೂ ಉಳಿಯಲು ಸಾಧ್ಯವಾಗಲಿಲ್ಲ. ಇನ್ನು ಒಂದು ವಾರ ಇರುವ ಹಾಗೆಯೇ ಮನೆಯಿಂದ ಹೊರ ಬಂದಿದ್ದಾರೆ.
ಈಗ ಸಂಗೀತಾ, ಪ್ರತಾಪ್, ವರ್ತೂರು ಸಂತೋಷ್, ಕಾರ್ತಿಕ್, ತುಕಲಿ ಸಂತೋಷ್, ವಿನಯ್ ಫಿನಾಲೆ ವೀಕ್‌ಗೆ ಎಂಟ್ರಿ ನೀಡಿದ್ದಾರೆ. ವಾರದ ಮಧ್ಯದಲ್ಲಿ ಇವರಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲಾಗುತ್ತದೆ. ಅಂತಿಮವಾಗಿ ಐದು ಸ್ಪರ್ಧಿಗಳು ಫೈನಲ್ ಗೆ ಹೋಗಲಿದ್ದಾರೆ. ಕೆಲವೇ ದಿನಗಳಲ್ಲಿ ವಿನ್ನರ್ ಯಾರು ಎಂದು ಘೋಷಣೆ ಕೂಡ ಆಗುತ್ತದೆ ಈಗಾಗಲೇ ಸುದೀಪ್ ಅವರು ಭಾನುವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ವಿನ್ನರ್ ಟ್ರೋಫಿ ಯನ್ನು ಅನಾವರಣಗೊಳಿಸಿದ್ದಾರೆ. ಮನೆಯ ಸ್ಪರ್ದಿಗಳೆಲ್ಲ ಆ ಟ್ರೋಫಿಯನ್ನು ನೋಡಿ ಅದು ನಮ್ಮದೇ ಎಂದು ಹೇಳುತ್ತಿದ್ದಾರೆ. ಆ ಟ್ರೋಫಿ ಹಾಗೂ 50 ಲಕ್ಷ ಹಣ ಯಾರ ಪಾಲಾಗಲಿದೆ ಎಂದು ಕಾದು ನೋಡಬೇಕಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!
- ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?
- ಈ ಬಾರಿ ಬಿಗ್ ಬಾಸ್ ನಲ್ಲಿ ಟಾಪ್ 5ರಲ್ಲಿ ಇರೋರು ಇವರೇ ನೋಡಿ – ಮೈಕಲ್ ಭವಿಷ್ಯ ನುಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






