ಅತ್ಯಂತ ಜನಪ್ರಿಯ ಕಂಪನಿಯಾದ ಮಾರುತಿ ಸುಜುಕಿ (maruthi suzuki) ಕಂಪನಿಯು ಆದಷ್ಟು ಬೇಗ ಬಿಡುಗಡೆ ಮಾಡಲಿದೆ ಸ್ವಿಫ್ಟ್ CNG.
ಮಾರುತಿ ಸುಜುಕಿಯು ತನ್ನ ಹೊಸ ಸ್ವಿಫ್ಟ್ CNG(swift CNG) ಮಾದರಿಯ ಹೊಸ ಕಾರನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಈ ಕಾರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆಯ ಆಯ್ಕೆಗಳನ್ನು ನೀಡಲಿದ್ದು, ಮಾರುತಿ ಸುಜುಕಿ ಇದೇ ಬಾರಿಗೆ ತನ್ನ ಹೊಸ ರೂಪಾಂತರದ ಸ್ವಿಫ್ಟ್ CNG ಕಾರಿನಲ್ಲಿ ಹಲವು ತಂತ್ರಜ್ಞಾನ (technology) ಒಳಗೊಂಡ ವಿಶೇಷ ಫಿಚರ್ಸ್ ಗಳನ್ನು (features) ಅಳವಡಿಸಿದೆ. ಮಾರುತಿ ಸುಜುಕಿಯ ಈ ಹೊಸ ಮಾದರಿಯ ಆವೃತ್ತಿಯ ಕಾರು ಜನಪ್ರಿಯ ಮಾದರಿಯ ಆಯ್ಕೆ ಆಗಿರುತ್ತದೆ. ಈ ಒಂದು ಕಾರನ್ನು ಇಂಧನ ದಕ್ಷತೆಯ ಮೇಲೆ ಕೇಂದ್ರೀಕರಿಸಿ ವಿನ್ಯಾಸಗೊಳಿಸಲಾಗಿದೆ. ಇದರಲ್ಲಿ ಹಲವಾರು ರೀತಿಯ ಸುರಕ್ಷತಾ ವೈಶಿಷ್ಟಗಳನ್ನು ಕೂಡ ನೀಡಿದ್ದಾರೆ. ಮಾರುತಿ ಸುಜುಕಿಯು ಬೆಲೆ ಎಷ್ಟು? ಇದರ ವಿಶೇಷತೆಗಳು ಏನು? ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಮಾರುತಿ ಸುಜುಕಿ ಸ್ವಿಫ್ಟ್ CNG ಮಾದರಿಯ ವೈಶಿಷ್ಟಗಳು (features) :

ಈಗಾಗಲೇ ಮಾರುತಿ ಸುಜುಕಿ ಕಂಪನಿಯು ತನ್ನ ಕಾರುಗಳ ನಿರ್ಮಾಣದಲ್ಲಿ ಹೊಸ ಬದಲಾವಣೆಯನ್ನು ಮಾಡಿದೆ. ಈ ಹಿಂದೆ ಪೆಟ್ರೋಲ್ (petrol) ಮತ್ತು ಇಂಧನ ಚಾಲಿತ ವಾಹನಗಳಿಗೆ ಹೆಚ್ಚು ಮಹತ್ವವನ್ನು ನೀಡುತ್ತಿದ್ದು, ಇದರಿಂದಾಗಿ ಇಂಧನ ಉಳಿತಾಯವಾಗುತ್ತದೆ. ಹಾಗೆಯೇ ಕ್ರಮೇಣ ಪೆಟ್ರೋಲ್ ಮತ್ತು ಡೀಸೆಲ್ ಕಾರುಗಳು ಸಹಿತಗೊಂಡ ನಂತರ ಈಗ ಮಾರುತಿ ಸುಜುಕಿ ಕಂಪನಿಯು CNG ಅಳವಡಿಕೆಯ ಕಾರುಗಳ ನಿರ್ಮಾಣದಲ್ಲಿ ತೊಡಗಿದೆ.
ಪೆಟ್ರೋಲ್ ಎಂಜಿನ್ (petrol engine) ಆಯ್ಕೆಯೊಂದಿಗೆ ಲಭ್ಯ :
ಮಾರುತಿ ಸುಜುಕಿ ಕಂಪನಿಯ ಹೊಸ ಮಾದರಿ ಇದಾಗಿದ್ದು, CNG ಆಯ್ಕೆಯೊಂದಿಗೆ ಈ ಒಂದು ಕಾರು ಗ್ರಾಹಕರಿಗೆ ಲಭ್ಯವಿದೆ. ಈ ಕಾರು ಗ್ರಾಹಕರಿಗೆ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಲಭ್ಯವಿದೆ. ಹಾಗೆಯೇ Z ಸೀರೀಸ್ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಇದರಲ್ಲಿ ಅಳವಡಿಕೆ ಮಾಡಲಾಗಿದೆ. ಹಾಗೆಯೇ ಇದರಲ್ಲಿ ಪೆಟ್ರೋಲ್ ಮಾದರಿಯ SCNG ತಂತ್ರಜ್ಞಾನವನ್ನು (SCNG technology) ಕೂಡ ಅಳವಡಿಸಲಾಗಿದೆ.
ಮ್ಯಾನುವಲ್ ಆಯ್ಕೆಗಳ ಅಳವಡಿಕೆ (manual settings) :
ಈ ಕಾರು ಪ್ರತಿ ಕೆಜಿ CNG ಗೆ 32 ಕಿಮೀ ಮೈಲೇಜ್ ನೀಡಲಿದ್ದು, ಸ್ವಿಫ್ಟ್ CNG ತನ್ನ ಪೆಟ್ರೋಲ್ ರೂಪಾಂತರಕ್ಕಾಗಿ ಮ್ಯಾನುಯಲ್ ಮತ್ತು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ಗಳ (automatic transmission) ನಡುವೆ ಚಾಲಕರು ಆಯ್ಕೆ ಮಾಡುವ ಆಯ್ಕೆಯನ್ನು ನೀಡಲಾಗಿದೆ. ಆದರೆ ಇದರಲ್ಲಿ CNG ಮಾದರಿಗೆ ಮ್ಯಾನ್ಯುವಲ್ ಟ್ರಾನ್ಸ್ಮಿಷನ್ ಮಾತ್ರ ಆಯ್ಕೆಯಾಗಿದೆ.
ಸ್ವಿಫ್ಟ್ ಮಾದರಿಯ ಕಾರುಗಳ ಆಯ್ಕೆಗಳು ಮತ್ತು ಬೆಲೆ (price) :
ಸ್ವಿಫ್ಟ್ LXI, VXI, VXI, ZXI, ಮತ್ತು ZXI Plus ನಂತಹ ವಿವಿಧ ಮಾದರಿಗಳಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಆಯ್ಕೆಗಳು ಪೆಟ್ರೋಲ್ ಆವೃತ್ತಿಯಲ್ಲಿ ದೊರೆಯಲಿದ್ದು, ಈ ಕಾರುಗಳ ಬೆಲೆಗಳು ರೂ. 6.49 ಲಕ್ಷದಿಂದ ರೂ.ಗಳಾಗಿವೆ.
ಸ್ವಿಫ್ಟ್ CNG ಯ ಸುರಕ್ಷತಾ ವೈಶಿಷ್ಟ್ಯಗಳು (safety features) :
ಈ ಒಂದು ಹೊಸ ಕಾರು ನೋಡಲು ಹೊರಭಾಗದಲ್ಲಿ ಸಂಪೂರ್ಣವಾಗಿ ವಿಭಿನ್ನವಾಗಿದ್ದು, ಇದರ ಹಿಂಬದಿಯ ಭಾಗವನ್ನು ಎದ್ದು ಕಾಣುವಂತೆ ವಿನ್ಯಾಸ ಗೊಳಿಸಲಾಗಿದೆ. ಕಾರಿನ ಹೊಸ ಆವೃತ್ತಿಯು ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್, ಆಧುನಿಕ ಎಲ್ಇಡಿ ಹೆಡ್ಲೈಟ್ಗಳು (LED headlights) ಮತ್ತು ನಯವಾದ 9-ಇಂಚಿನ ತೇಲುವ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ.
ಒಳಾಂಗಣದಲ್ಲಿನ ಆಸನಗಳು ಉತ್ತಮ ಗುಣಮಟ್ಟದ ಬಟ್ಟೆಯಿಂದ ಮಾಡಲ್ಪಟ್ಟಿದೆ ಮತ್ತು ಹೆಚ್ಚಿನ ಅನುಕೂಲಕ್ಕಾಗಿ ವೈರ್‌ಲೆಸ್ ಚಾರ್ಜಿಂಗ್ ನ (Wireless charging) ವೈಶಿಷ್ಟ್ಯ ಇದರಲ್ಲಿದೆ. ಇಸ್ಟೇ ಅಲ್ಲದೆ ಈ ಕಾರು ಅತ್ಯಾಧುನಿಕ ಆಟೋ ಕ್ಲೈಮೇಟ್ ಕಂಟ್ರೋಲ್ ಸಿಸ್ಟಮ್ (auto climate control system) ಅನ್ನು ಹೊಂದಿದ್ದು ಅದು ಗಾಡಿಯಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಗರಿಷ್ಠ ಸೌಕರ್ಯವನ್ನು ನೀಡುತ್ತದೆ. ಒಂದು ಉತ್ತಮ ಬೆಲೆಯ ಉತ್ತಮ ಕಾರು ಇದಾಗಿದೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿ
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




