Home » ಸರ್ಕಾರಿ ಯೋಜನೆಗಳು » ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವತಿಯಿಂದ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ವತಿಯಿಂದ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ

ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತ

 ನಿಗಮದ 2022-23ನೇ ಸಾಲಿನ 5 ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯಗಳ ವಿವರ

ವೀರಶೈವ ಲಿಂಗಾಯತ ಸಮುದಾಯದ ಜನತೆಗೆ ಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ. ಹೌದು, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತವು ಪ್ರಸಕ್ತ ಸಾಲಿನಲ್ಲಿ ಐದು ಯೋಜನೆಗಳಿಗೆ ಸಾಲ ಹಾಗೂ ಸಹಾಯ ಧನ ಸೌಲಭ್ಯ ನೀಡುತ್ತಿದೆ. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ 2022-23ನೇ ಸಾಲಿಗೆ ಅನುಮೋದಿಸಿದ ಕ್ರಿಯಾ ಯೋಜನೆಯಂತೆ ಈ ಕೆಳಕಂಡ 5 ಯೋಜನೆಗಳಿಗೆ ಸಾಲ ಹಾಗೂ ಸಹಾಯಧನ ಸೌಲಭ್ಯ ಪಡೆಯಲು ಇಚ್ಚಿಸುವ ವೀರಶೈವ ಲಿಂಗಾಯತ ಸಮುದಾಯದ ಅರ್ಹ ಫಲಾನುಪೇಕ್ಷಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿದಾರರು ಪ್ರವರ್ಗ-III ಬಿ ವರ್ಗಕ್ಕೆ ಸೇರಿದವರಾಗಿರಬೇಕು ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಹೊಂದಿರಬೇಕು. ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಜೋಡಣೆಯಾದ  ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಹೊಂದಿರಬೇಕು.

Advertisement

ಇದನ್ನೂ ಓದಿ: ನಿಮ್ಮ ಮೊಬೈಲ್ ನಲ್ಲಿ ಆರ್ ಸಿ ಕಾರ್ಡ್ ಮತ್ತು ಡಿಎಲ್ ಅನ್ನು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ?

ಬಸವ ಬೆಳಗು : ವೃತ್ತಿಪರ ಕೋರ್ಸ್ ಗಳಿಗೆ ವಾರ್ಷಿಕ ರೂ. 1 ಲಕ್ಷಗಳ ಮಿತಿಯಲ್ಲಿ ಗರಿಷ್ಠ ರೂ. 5 ಲಕ್ಷಗಳ ವರೆಗೆ ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.

ವಿದೇಶ ವಿದ್ಯಾವಿಕಾಸ : ಮಾನ್ಯತೆ ಪಡೆದಿರುವಂತಹ ವಿದೇಶ ವಿಶ್ವವಿದ್ಯಾಲಯಗಳಲ್ಲಿ ಉನ್ನತ ವ್ಯಾಸಂಗ ಪಡೆಯಲು ವಾರ್ಷಿಕ ಗರಿಷ್ಠ ರೂ. 3.50 ಲಕ್ಷಗಳಂತೆ ಮೂರು ವರ್ಷದ ಅವಧಿಗೆ ಒಟ್ಟು ರೂ. 10.00 ಲಕ್ಷಗಳನ್ನು ಶೇ.2ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ.

ಇದನ್ನೂ ಓದಿ: KMF ನೇಮಕಾತಿ: 487 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ

ಜೀವಜಲ : ಈ ಯೋಜನೆ ಅಡಿ ಸೌಲಭ್ಯ ಪಡೆಯಲು ಸಣ್ಣ ಹಾಗೂ ಅತಿ ಸಣ್ಣ ರೈತರಾಗಿದ್ದು ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಒಳಗೆ ಜಮೀನು ಹೊಂದಿರಬೇಕು. ದಕ್ಷಿಣ ಕನ್ನಡ, ಉಡುಪಿ, ಕೊಡಗು, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ನಿಗದಿಪಡಿಸಿರುವ ಘಟಕ ವೆಚ್ಚ: 7 ಜಿಲ್ಲೆಗಳಿಗೆ 3.50 ಲಕ್ಷ ಸಹಾಯಧನ ಹಾಗೂ ರೂ. 50,000/- ಸಾಲ ಮತ್ತು ಉಳಿದ 25 ಜಿಲ್ಲೆಗಳಲ್ಲಿ ಫಲಾನುಭವಿಗಳಿಗೆ ಎರಡು ಲಕ್ಷ ಸಹಾಯಧನ ಹಾಗೂ 50,000/- ಸಾಲ ಶೇ.4ರ ಬಡ್ಡಿ ದರದಲ್ಲಿ ನೀಡಲಾಗುವುದು.

ಇದನ್ನೂ ಓದಿ: ರೈತರ ಮಕ್ಕಳಿಗೆ ನೀಡುತ್ತಿದ್ದ ಮುಖ್ಯಮಂತ್ರಿ ರೈತವಿಧ್ಯಾನಿಧಿ ಈ ವರ್ಗಗಳಿಗೂ ವಿಸ್ತರಣೆ

ಕಾಯಕಕಿರಣ : ರೂ.50,000/- ಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.30ರಷ್ಟು ಗರಿಷ್ಠ ರೂ.10,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.70ರಷ್ಟು ಗರಿಷ್ಠ ರೂ.40,000/-ಗಳಷ್ಟು ವಾರ್ಷಿಕ ಶೇ.2ರ ಬಡ್ಡಿದರದಲ್ಲಿ ಸಾಲ ಮಂಜೂರು ಮಾಡುವುದು.

ರೂ.15,001/- ರಿಂದ ರೂ.1,00,000/-ಗಳವರೆಗಿನ ಘಟಕ ವೆಚ್ಚದ ಆರ್ಥಿಕ ಚಟುವಟಿಕೆಗಳಿಗೆ ಶೇ.20ರಷ್ಟು ಗರಿಷ್ಠ  ರೂ.20,000/-ಗಳ ಸಹಾಯಧನವನ್ನು ಹಾಗೂ ಉಳಿಕೆ ಶೇ.80ರಷ್ಟು ಗರಿಷ್ಠ ರೂ.80,000/- ಗಳನ್ನು ವಾರ್ಷಿಕ ಶೇ.2ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡುವುದು.

ಇದನ್ನೂ ಓದಿ: SSP ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ – 2022-23 ನೇ ಸಾಲಿನ ಅರ್ಜಿ ಸಲ್ಲಿಕೆ ವಿವರ

ಸ್ವಸಹಾಯ ಸಂಘಗಳಿಗೆ ಉತ್ತೇಜನ : ವೀರಶೈವ ಲಿಂಗಾಯತ ಸಮುದಾಯದ ಸ್ವಸಹಾಯ ಗುಂಪುಗಳ 15 ಸದಸ್ಯರಿಗೆ ತಲಾ ರೂ.5,000/-ಗಳ ಸಹಾಯ ಧನ ಹಾಗೂ ತಲಾ ರೂ.10,000/-ಗಳ ಸಾಲವನ್ನು ವಾರ್ಷಿಕ ಶೇ.4ರಷ್ಟು ಬಡ್ಡಿದರದಲ್ಲಿ ಹೀಗೆ ಪ್ರತಿ ಗುಂಪಿಗೆ ರೂ.75,000/-ಗಳ ಸಹಾಯ ಧನ ಹಾಗೂ ರೂ.1,50,000/- ಗಳ ಸಾಲ ಒಟ್ಟು ರೂ.2,25,000/-ಗಳನ್ನು ಮಂಜೂರು ಮಾಡುವುದು.

ಅರ್ಹ ಫಲಾಪೇಕ್ಷಿಗಳು  ಹತ್ತಿರದ ಗ್ರಾಮ ಒನ್ | ಬೆಂಗಳೂರು ಒನ್ | ಕರ್ನಾಟಕ ಒನ್ | ನಾಗರಿಕ ಸೇವಾ ಕೇಂದ್ರಗಳಲ್ಲಿ ದಾಖಲೆಗಳೊಂದಿಗೆ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.

ಈ ಮೇಲ್ಕಂಡ 5 ಯೋಜನೆಗಳಿಗೆ ಸಂಬಂಧಿಸಿದಂತೆ ನಿಗಮದ ಅಧಿಕೃತ ವೆಬ್ ಸೈಟ್ https://kvldcl.karnataka.gov.in  ನಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

ಇದನ್ನೂ ಓದಿ: ಹೊಸ ಪಡಿತರ ಚೀಟಿ ( ರೇಷನ್ ಕಾರ್ಡ ) ಡೌನ್ಲೋಡ್ ಮಾಡುವ ವಿಧಾನ.

ಕಳೆದ ಮೂರು ವರ್ಷದಿಂದ ಸರ್ಕಾರದ ಯಾವುದೇ ನಿಗಮ / ಇಲಾಖೆಗಳಲ್ಲಿ ಯೋಜನೆಯ ಪ್ರಯೋಜನ ಪಡೆದಿದ್ದಲ್ಲಿ ಅಂತಹವರು ಹಾಗೂ ಅವರ ಕುಟುಂಬದವರು ಮತ್ತೊಮ್ಮೆ ಸೌಲಭ್ಯ ಕೋರಿ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

ಸರ್ಕಾರದ ವಿವೇಚನ ಕೋಟ ಮತ್ತು ಅಧ್ಯಕ್ಷರ / ನಿರ್ದೇಶಕರ ಮಂಡಳಿಯ ವಿವೇಚನಾ ಕೋಟಾದಡಿ ಸೌಲಭ್ಯ ಪಡೆಯಲು ಇಚ್ಛಿಸುವ ಫಲಾನುಭವಿಗಳು ಸಹ ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್ ನಲ್ಲಿ ಅರ್ಜಿಗಳನ್ನು ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ನಿಯಮಿತದ ಕೇಂದ್ರ ಕಚೇರಿಯ ದೂರವಾಣಿ ಸಂಖ್ಯೆ: 080-22865522 ಅಥವಾ ಆಯಾ ಜಿಲ್ಲಾ ವ್ಯವಸ್ಥಾಪಕರ ಕಚೇರಿ, ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ದೂರವಾಣಿ ಸಂಖ್ಯೆಗಳನ್ನು ನಿಗಮದ ವೆಬ್ ಸೈಟ್ ನಲ್ಲಿ  ನೀಡಲಾಗಿರುತ್ತದೆ. ಅದರಂತೆ ಸಂಪರ್ಕಿಸಬಹುದು.

ವಿಶೇಷ ಸೂಚನೆ:- ಆನ್‌ ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30/11/2022

ಇದನ್ನೂ ಓದಿ: 75 ಯೂನಿಟ್ ವರೆಗೆ ಉಚಿತ ವಿದ್ಯುತ್

*********** ಲೇಖನ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube 

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

ಯಶಸ್ವಿನಿ ಯೋಜನೆ ಮರು ಜಾರಿ- ಅರ್ಜಿ ಸಲ್ಲಿಸಲು ನವೆಂಬರ್ 14 ಕೊನೆಯ ದಿನಾಂಕ

ನವೆಂಬರ್ 1 ರ ಕನ್ನಡ ರಾಜ್ಯೋತ್ಸವಕ್ಕೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಭರ್ಜರಿ ಕೊಡುಗೆ ನೀಡಿದೆ. ರೈತರು ಹಾಗೂ ಬಡವರಿಗಾಗಿ ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಮರು ಜಾರಿಗೊಳಿಸಿ ಆದೇಶ ಹೊರಡಿಸಿದ್ದು, ನವೆಂಬರ್ 2ರಿಂದ ಈ ಯೋಜನೆಗೆ ನೋಂದಣಿ ಪ್ರಾರಂಭವಾಗಲಿದೆ.

ರಾಜ್ಯದಲ್ಲಿಡೆ ಸಹಕಾರಿಗಳ ಮತ್ತು ರೈತರ ನಿರಂತರ ಬೇಡಿಕೆಯಂತೆ ರಾಜ್ಯ ಸರ್ಕಾರವು 2022 23ನೇ ಸಾಲಿನ ಆಯವ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಪರಿಣಾಮಕಾರಿಯಾಗಿ ರೂಪಿಸಿ ಮರು ಜಾರಿಗೊಳಿಸಲು ತೀರ್ಮಾನಿಸಿ ಇದಕ್ಕಾಗಿ 2022-23ನೇ ಬಜೆಟ್ ನಲ್ಲಿ 300 ಕೋಟಿ ಘೋಷಣೆ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/yasashwing-scheme-karnataka-kannada/

ಆಧಾರ್ ನಂಬರ್ ‌ ಅಥವಾ ರೇಷನ್ ಕಾರ್ಡ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನಾ ಮಾಹಿತಿ ಚೆಕ್ ಮಾಡಿ

ರೇಷನ್ ಕಾರ್ಡ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಬೆಳೆ ಸಾಲ ಮನ್ನದ ಪಟ್ಟಿಯಲ್ಲಿರುವ ಹೆಸರನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುವುದು. ಹೌದು ಇದು ಒಂದು ಕನ್ನಡದ ಜನತೆಗೆ ಸಿಹಿ ಸುದ್ದಿಯಾಗಿದೆ.
ಸ್ಟೋರ್ ರೈತರು ತಮ್ಮ ಬೆಳೆಯನ್ನು ಹಾನಿ ಮಾಡಿಕೊಂಡು ಅಗಾಧದಲ್ಲಿದ್ದಾರೆ, ಇದಕ್ಕಾಗಿ ರಾಜ್ಯ ಸರ್ಕಾರವು
ಒಂದು ಉತ್ತಮವಾದ ನಿರ್ಧಾರವನ್ನು ತೆಗೆದುಕೊಂಡಿದೆ ಅದೇನೆಂದರೆ ಬೆಳೆ ಸಾಲವನ್ನು ಮನ್ನಾ ಮಾಡುವುದು.
ಅದರ ಜೊತೆಗೆ ಬೆಳೆ ಸಾಲವನ್ನು ಮನ್ನಾ ಮಾಡಿರುವ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ, ಇದು 2018ರ
ಬೆಳೆ ಸಾಲದ ಮನ್ನಾದ ಪಟ್ಟಿಯಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/crop-loan-waiver-kannada/

ದ್ವಿಚಕ್ರ ವಾಹನ ಖರೀದಿಗೆ 50 ಸಾವಿರ ರೂಪಾಯಿ ಸಹಾಯಧನ ನೀಡಲು ಅರ್ಜಿ ಆಹ್ವಾನ

ವಿವಿಧ ಯೋಜನೆಗಳಡಿಯಲ್ಲಿ ದ್ವಿಚಕ್ರ ವಾಹನ,  ಸರಕು ಸಾಗಾಣಿಕೆ ವಾಹನ, ಗಂಗಾ ಕಲ್ಯಾಣ ಯೋಜನೆ ಹಾಗೂ ಭೂ ಒಡೆತನ ಯೋಜನೆಯಡಿಯಲ್ಲಿ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಡಾ ಅಂಬೇಡ್ಕರ್ ನಿಗಮ ದಲ್ಲಿ ಹೊಸ ಬೈಕ್ ಪಡೆಯಲು ಸಹಾಯಧನ ಅರ್ಜಿ ಆಹ್ವಾನಿಸಲಾಗಿದೆ. ಅಮೇಜಾನ್, ಝೋಮೊಟೋ, ಸ್ವಿಗ್ಗಿ, ಊಬರ್ ಸೇರಿದಂತೆ ಇತರ ಸಂಸ್ಥೆಗಳಲ್ಲಿ ಕೆಲಸ ಪಡೆದು ಪಾರ್ಸೆಲ್ ಗಳನ್ನು ಮನೆಬಾಗಿಲಿಗೆ ತಲುಪಿಸಲು ನಿಮ್ಮ ಹತ್ತಿರ ಬೈಕ್ ಇಲ್ಲವೆ. ಚಿಂತೆ ಮಾಡಬೇಡಿ, ಇನ್ನೇಕೆ ತಡ ಕೂಡಲೇ ಅರ್ಜಿ ಸಲ್ಲಿಸಿ ಬೈಕ್ ಖರೀದಿಸಿ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/two-wheeler-scheme-karnataka/

ನವೆಂಬರ್‌ 2022 – ವಿವಿಧ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಅವಕಾಶ: 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳು

ಉದ್ಯೋಗದ ಆಕಾಂಕ್ಷೆಗಳಿಗೆ ನವೆಂಬರ್ ತಿಂಗಳಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಈಗಾಗಲೇ  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಹೊರಡಿಸಿಲಾದ ಅಧಿ ಸೂಚನೆಯ ಪ್ರಕಾರ 1 ಲಕ್ಷ 60 ಸಾವಿರಕ್ಕೂ ಹೆಚ್ಚು ಹುದ್ದೆಗಳಿವೆ ಎಂದು ತಿಳಿದು ಬಂದಿದೆ. ಯಾವ ಯಾವ ಅಭ್ಯರ್ಥಿಗಳಿಗೆ ಈ ಸರ್ಕಾರಿ ಹುದ್ದೆಯಲ್ಲಿ ಆಸಕ್ತಿ ಹೊಂದಿದೆಯೋ ಅವರು ಸಂಬಂಧಪಟ್ಟ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ನೀಡಲಾದ ಆನ್ಲೈನ್ ಫಾರ್ಮ್ ಇಂದ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ.

ಅರ್ಜಿ ಸಲ್ಲಿಸಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ : https://www.needsofpublic.in/kannada-job-news-november-2022/

ನಿಮ್ಮ ಜಾಗ ಹೊಲ ಗದ್ದೆಗಳ ಸಂಪೂರ್ಣ ಸರ್ವೇ ಸ್ಕೆಚ್ಚ್ ನಿಮ್ಮ ಪೋನಲ್ಲೆ ಉಚಿತವಾಗಿ ಪಡೆಯಿರಿ

ನಾವು ಭೂಮಿಯ ನಕ್ಷೆ, ಸರ್ವೆ ನಂಬರ್, ಭೂಮಿ ಒತ್ತುವರಿ ಆಗಿದ್ದನ್ನು ನೋಡಲು ದಿಶಾಂಕ್ ಆಪ್ ಅನ್ನು ಬಳಸಿಕೊಂಡು ಹೇಗೆ ಇವುಗಳನ್ನು ತಮ್ಮ ಫೋನ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ  ನೋಡಿಕೊಳ್ಳುವುದು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುವುದು. ಹೌದು ಇದು ರೈತರಿಗೆ ಒಂದು ಸಂತಹಸದ ಸುದ್ದಿ ಅಂತನೇ ಹೇಳಬಹುದು, ಏಕೆಂದರೆ ಮೊದಲೆಲ್ಲಾ ಸರ್ವೆ ನಂಬರನ್ನು ತಿಳಿದುಕೊಳ್ಳಲು ಅಥವಾ ಒತ್ತುವರಿ  ಜಾಗದ ಬಗ್ಗೆ ವಿಚಾರಿಸಲು ಸರ್ವೇಯರ್ ನನ್ನು ಕರೆಯಬೇಕಾಗಿತ್ತು. ಆದರೆ ಇನ್ನು ಮುಂದೆ ಅಂತ ತಲೆಬಿಸಿ ಕೆಲಸ ಇಲ್ಲ. ನೀವು ಈ ಎಲ್ಲಾ ವಿಷಯಗಳ ಬಗ್ಗೆ ಕೂತಲ್ಲಿಯೇ ತಮ್ಮ ಮೊಬೈಲ್ಗಳಲ್ಲಿ ಅಥವಾ ಕಂಪ್ಯೂಟರ್ಗಳಲ್ಲಿ ದಿಶಾಂಕ್ ಆಪ್ (Dishank app)ಇಂದ ತಿಳಿದುಕೊಳ್ಳಬಹುದು. ಇದರಿಂದಾಗಿ ನೀವು ತುಂಬಾ ಸಮಯವನ್ನು ಒಳಿತು ಮಾಡಬಹುದು ಅದಲ್ಲದೆ ಕಚೇರಿಗಳಿಗೆ, ಆಫೀಸ್ ಗಳಿಗೆ ಅಲೆದಾಡುವ ಸಂದರ್ಭ ಬರುವುದಿಲ್ಲ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/dishank-app-kannada/

ನಿಮ್ಮ ಜಮೀನಿನ ಪಹಣಿ (ಆರ್ ಟಿ ಸಿ ಉತಾರ) ಮತ್ತು ವರ್ಗಾವಣೆ ಸ್ಥಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಮ್ಮ ಜಮೀನಿನ ಪಹಣಿ ಯಾವ ವರ್ಷದಿಂದ ತಮ್ಮ ತಮ್ಮ ಹೆಸರಿಗೆ ವರ್ಗಾವಣೆಯಾಗಿದೆ , ಮತ್ತು ನಿಮ್ಮ ಜಮೀನಿನ ಪಹಣಿ ಅಥವಾ ಆರ್ ಟಿ ಸಿ ಉತಾರವನ್ನ ಹೇಗೆ ನೋಡುವುದು ಎಂಬುದನ್ನು ಮೊಬೈಲ್ ನಲ್ಲಿ ಚೆಕ್ ಮಾಡುವ ವಿಧಾನದ ಬಗ್ಗೆ ಸಂಪೂರ್ಣವಾಗಿ ಮಾಹಿತಿ ತಿಳಿಸಲಾಗುವುದು. ಇದು ರೈತರಿಗೆ ಒಂದು ಸಂತಸದ ವಿಷಯ ಎಂದು ತಿಳಿಸಬಹುದಾಗಿದೆ. ಏಕೆಂದರೆ ರೈತರು ಕಚೇರಿಗೆ ತೆರಳಿ ತಮ್ಮ ಪಹಣಿಯು ಯಾವ ವರ್ಷವದಿಂದ ತಮಗೆ ವರ್ಗಾವಣೆಯಾಗಿದೆ ಎಂಬುವುದರ ಮಾಹಿತಿಯನ್ನು ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ, ಏಕೆಂದರೆ ಅವರು ಕೂತಲಿಯೇ ಮೊಬೈಲ್ ಮೂಲಕ ತಮ್ಮ ಪಹಣಿ ಯಾವ ವರ್ಷದಿಂದ ತಮಗೆ ವರ್ಗಾವಣೆ ಆಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ.

ಹೇಗೆ ಎಂದು ತಿಳಿದುಕೊಳ್ಳಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ: https://www.needsofpublic.in/view-rtc-in-mobile-phone/

ಇದನ್ನೂ ಓದಿ:

IAF Agniveervayu Recruitment 2022: ಭಾರತೀಯ ವಾಯುಪಡೆಯಿಂದ ಅಗ್ನೀ ವೀರ್ ವಾಯು ಅರ್ಜಿ ಆಹ್ವಾನ; ಇಲ್ಲಿದೆ ಮಾಹಿತಿ

25 ಲಕ್ಷದವರೆಗೆ ಸಾಲ ಸೌಲಭ್ಯ 35% ಸಬ್ಸಿಡಿ ಸಿಗುತ್ತೆ : PMEGP Loan Scheme 2022, ಅರ್ಜಿ ಸಲ್ಲಿಸುವುದು ಹೇಗೆ ?

ಖಾಲಿ ಜಾಗ, ಗುಡಿಸಲು, ಹಳೆ ಮನೆ ಇದ್ದವರಿಗೆ ಉಚಿತ ಮನೆ ಕಟ್ಟಿಸಲು ಅವಕಾಶ : ಬಸವ ವಸತಿ ಯೋಜನೆ 2022

Amazon Recruitment 2022 : ಮನೆಯಲ್ಲೇ ಕೆಲಸ ₹45 ಸಾವಿರ ಸಂಬಳ. ಅರ್ಜಿ ಸಲ್ಲಿಸುವ ವಿಧಾನ, ಸಂಪೂರ್ಣ ಮಾಹಿತಿ ಇಲ್ಲಿದೆ

 

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!