Home » ಸರ್ಕಾರಿ ಯೋಜನೆಗಳು » 75 ಯೂನಿಟ್ ವರೆಗೆ ಉಚಿತ ವಿದ್ಯುತ್

75 ಯೂನಿಟ್ ವರೆಗೆ ಉಚಿತ ವಿದ್ಯುತ್

Telegram Group

ಎಲ್ಲರಿಗೂ ನಮಸ್ಕಾರ. ಇವತ್ತಿನ ಲೇಖನದಲ್ಲಿ, ಉಚಿತವಾಗಿ 75 ಯೂನಿಟ್ ಎಲೆಕ್ಟ್ರಿಸಿಟಿ ಪಡೆಯಲು ಆನ್ಲೈನ್ ಮುಖಾಂತರ ಅಪ್ಲಿಕೇಶನ್ ಹೇಗೆ ಹಾಕುವುದು ಎಂಬುದರ ಸಂಪೂರ್ಣ ವಿವರವನ್ನು ತಿಳಿಸಿಕೊಡಲಾಗುವುದು. ಉಚಿತವಾಗಿ 75 ಯೂನಿಟ್ ವರೆಗೂ ವಿದ್ಯುತ್ತನ್ನು ಪಡೆಯಲು ಈಗಾಗಲೇ ಆನ್ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಅರ್ಜೆಗಳನ್ನು ಆನ್ಲೈನ್ ಮುಖಾಂತರ ಹೇಗೆ ಸಲ್ಲಿಸುವುದು ಮತ್ತು ಇದಕ್ಕೆ ಬೇಕಾಗಿರುವ ಅಗತ್ಯ ದಾಖಲೆಗಳು ಯಾವುವು ಎಂದು ಈ ಲೇಖನದ ಮೂಲಕ ಸಂಪೂರ್ಣವಾಗಿ ತಿಳಿಸಿಕೊಡಲಾಗುತ್ತದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬ ವರ್ಗದವರಿಗೆ 75 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲು ಇಂಧನ ಇಲಾಖೆ ಆದೇಶವನ್ನು ಹೊರಡಿಸಿದೆ. ಇದು ಕೇವಲ ಗೃಹ ಬಳಕೆಗಾಗಿ ಮಾತ್ರ ಉಪಯೋಗಿಸಿಕೊಳ್ಳಬಹುದಾಗಿದೆ. ಈ ಯೋಜನೆ ಗ್ರಾಮೀಣ ಹಾಗೂ ನಗರದ ಎಸ್ಸಿ ಎಸ್ಟಿ ಜನಾಂಗದವರಿಗೆ ನೀಡಲಾಗಿದೆ. ಈ ಯೋಜನೆಯ ಅಡಿಯಲ್ಲಿ ಗ್ರಾಹಕರು ಸಂಪೂರ್ಣ ಒಂದು ತಿಂಗಳ ವಿದ್ಯುತ್ ಹಣವನ್ನು ಪಾವತಿಸಬೇಕು ನಂತರ 75 ಯೂನಿಟ್ ಗಳಷ್ಟು ಹಣವನ್ನು ಸರ್ಕಾರ ಗ್ರಾಹಕರ ಬ್ಯಾಂಕ್ ಖಾತೆಗೆ ಹಿಂದಿರುಗಿಸುತ್ತದೆ. ಈ ಯೋಜನಾರು ನೀವೊಂದರಿಂದ ಜಾರಿಗೆ ಬಂದಿದೆ. ಈ ಪ್ರವರ್ಗದ ವಿದ್ಯುತ್ ಗ್ರಾಹಕರು ವಿದ್ಯುತ್ ಸರಬರಾಜು ಕಂಪನಿಗಳಿಗೆ ಬ್ಯಾಂಕ್ ಖಾತೆಯ ಸಂಖ್ಯೆ, ಸಂಬಂಧಿತ ಇತರೆ ದಾಖಲೆಗಳನ್ನು ಒದಗಿಸಬೇಕು. ಅದೇ ಬ್ಯಾಂಕ್ ಖಾತೆಗೆ ವಿದ್ಯುತ್ ಸರಬರಾಜು ಕಂಪನಿ ಗಳಿಂದ ಸರ್ಕಾರದ ಸಹಾಯಧನವನ್ನು ಜಮೆ ಮಾಡಲಾಗುತ್ತದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರದ ವತಿಯಿಂದ ಎಸ್‌ಸಿ ಹಾಗು ಎಸ್ ಟಿ ಜನಾಂಗದವರಿಗೆ ಅನುಕೂಲವಾಗಲೆಂದು ಈ ಕಾಯ್ದೆಯನ್ನು ಹಮ್ಮಿಕೊಳ್ಳಲಾಗಿದೆ.

ಎಸ್ಸಿ ಹಾಗೂ ಎಸ್ ಟಿ ವರ್ಗದ ಜನಾಂಗದವರು ತಮ್ಮ ಮನೆಯಲ್ಲಿ 75 ಯೂನಿಟ್ ವರೆಗೂ ವಿದ್ಯುತ್ತನ್ನು ಉಪಯೋಗಿಸಬಹುದು. ಈ 75 ಯೂನಿಟ್ ವರೆಗೂ ವಿದ್ಯುತ್ತನ್ನು ಉಚಿತವಾಗಿ ಉಪಯೋಗಿಸಿದ ನಂತರ ಅದಕ್ಕೂ ಮೇಲೆ ಯೂನಿಟ್ ಗಳು ಖರ್ಚಾದಲ್ಲಿ ಅದನ್ನು ಮಾತ್ರ ಸರ್ಕಾರ ಚಾರ್ಜ್ ಮಾಡುತ್ತದೆ. 75 ಯೂನಿಟ್ ವರೆಗೂ ಖರ್ಚಾದ ವಿದ್ಯುತ್ತಿಗೆ ಚಾರ್ಜ್ ಅನ್ನು ಮಾಡುವುದಿಲ್ಲ ಅಂದರೆ 75 ಯೂನಿಟ್ ವರೆಗೂ ಖರ್ಚಾದ ವಿದ್ಯುತ್ತಿಗೆ ಯಾವುದೇ ರೀತಿಯ ಹಣವನ್ನು ಸರ್ಕಾರಕ್ಕೆ ವಿಧಿಸುವಂತಿಲ್ಲ.

ಹೀಗೆ 75 ಯೂನಿಟ್ ಎಲೆಕ್ಟ್ರಿಸಿಟಿಯನ್ನು ಉಚಿತವಾಗಿ ಪಡೆದುಕೊಳ್ಳಲು ನಮಗೆ ಬೇಕಾಗುವ ದಾಖಲೆಗಳೆಂದರೆ : ವಿದ್ಯುತ್ ಬಿಲ್, ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ನಂತರ 1 ನಿಮ್ಮ ಫೋಟೋ. ಈ ಅರ್ಜಿಗಳನ್ನು ನೀವು  ಗ್ರಾಮ 1 ನಲ್ಲಿ   ಸಲ್ಲಿಸಬಹುದು, ಗ್ರಾಮ್ ಒನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಅವರು ನಿಮಗೆ ಒಂದು ರಿಸಿಪ್ಟನ್ನು ಕೊಡುತ್ತಾರೆ. ಆ ರಿಸಿಪ್ಟರ್ ಕಾಫಿ ಜೊತೆಗೆ ಮೇಲೆ ತಿಳಿಸಿರುವ ಅಂತಹ ದಾಖಲೆಗಳನ್ನು ಸೇರಿಸಿ ನಿಮ್ಮ ಹತ್ತಿರದ ಕೆಇಬಿ ಆಫೀಸ್ ನಲ್ಲಿ ನೀವು ಕೊಡಬೇಕು. ಹೀಗೆ ದಾಖಲೆಗಳನ್ನು ಸಲ್ಲಿಸಿದ ನಂತರ ಅವರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಈ ಯೋಜನೆಯನ್ನು  ನಿಮಗೆ ಅಪ್ರೂ ಮಾಡುವರು. ನಂತರ ಎಸ್ಸಿ ಎಸ್ಟಿ ಜನಾಂಗದ ಎಲ್ಲಾ ಜನರು ಹೀಗೆ 75 ಯೂನಿಟ್ ವರೆಗೂ ಉಚಿತ ವಿದ್ಯುತ್ತನ್ನು ಉಪಯೋಗಿಸಬಹುದಾಗಿದೆ.

ಹೀಗೆ ಈ ಯೋಜನೆಯಿಂದ ನೀವು 75 ಯೂನಿಟ್ ವರೆಗೂ ವಿದ್ಯುತ್ತಿನ ಹಣವನ್ನು ವೆಚ್ಚ ಮಾಡುವುದನ್ನು ಉಳಿಸಬಹುದಾಗಿದೆ. ಆದ್ದರಿಂದ ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಶೇರ್ ಮಾಡಿ. ಧನ್ಯವಾದಗಳು.

About

Lingaraj Ramapur BCA,MCA, MA(Journalism)

Leave a Reply

Your email address will not be published. Required fields are marked *

error: Content is protected !!