Bigg Boss Kannada – ಕಾರ್ತಿಕ್ ವಿರುದ್ದ ರಿವೆಂಜ್ ತಗೊಂಡ್ರಾ ಪ್ರತಾಪ್.? ನಂಬಿಕೆ ದ್ರೋಹ ಅಂತಿದಾರೆ ವೀಕ್ಷಕರು

karthik and prathap bigboss

ಕನ್ನಡದ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್ 10 ( Big Boss season 10 ) ಇದೀಗ ಹಲವಾರು ವಿಶಿಷ್ಟತೆಗಳನ್ನು ಹೊಂದಿದ್ದು. ಬಿಗ್ ಬಾಸ್ ಮನೆಯಲ್ಲಿ ದಿನವೂ ಕೂಡ ಒಂದಲ್ಲ ಒಂದು ಜಗಳ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಹಾಗೆಯೇ ಟಾಸ್ಕ್ ವಿಚಾರಕ್ಕೆ ಅಂತೂ ಹೇಳೋದೇ ಬೇಡ. ಕೋಪ ಜಗಳ ಸ್ಪರ್ಧಿಗಳ ನಡುವೆ ಇದ್ದೆ ಇರುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹಲವು ದಿನಗಳ ಹಿಂದೆ ಬಿಗ್ ಬಾಸ್ ಮನೆಯಲ್ಲಿ ವಿನಯ್, ಕಾರ್ತಿಕ್ ಮತ್ತಿತರು ಪ್ರಭಲ ಸ್ಪರ್ಧಿಗಳಾಗಿದ್ದರು. ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಕಾರ್ತಿಕ್ ಮಹೇಶ್ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಡ್ರೋನ್ ಪ್ರತಾಪ್ ಕಾರ್ತಿಕ್ ಅವರನ್ನ ತಂಡದಿಂದ ಹೋರಗಿಟ್ಟಿದ್ದಾರೆ. ಯಾಕೆ ? ಏನು ? ಎಂಬುದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ನಾನು ಪ್ರತಾಪ್ ತಂಡ ಸೇರಿಕೊಳ್ಳುತ್ತೇನೆ ಎಂದ ಕಾರ್ತಿಕ್ :

ನಾನು ಡ್ರೋನ್ ಪ್ರತಾಪ್ ( Drone Prathap ) ಅವರ ತಂಡವನ್ನ ಸೇರೋಕೆ ಇಷ್ಟ ಪಡ್ತೀನಿ. ಹಾಗೆಯೇ ಪ್ರತಾಪ್ ಒಬ್ಬ ಉತ್ತಮ ತಂತ್ರಗಾರ ಮತ್ತು ಈಗಾಗಲೇ ಉತ್ತಮ ಆಟಗಾರ ಎಂದು ಹೇಳಿಸಿಕೊಂಡಿದ್ದಾರೆ. ಈ ಹಿಂದೆ ನಾನು ಕ್ಯಾಪ್ಟನ್ ಆಗಿದ್ದಾಗ ಪ್ರತಾಪ್ ಅವರು ನನ್ನ ಪರವಾಗಿ ನಿಂತಿದ್ದರು. ಅದಕ್ಕೆ ನಾನು ಪ್ರತಾಪ್‌ ತಂಡಕ್ಕೆ ಹೋಗುತ್ತೇನೆ ಎಂದು ಪ್ರತಾಪ್ ತಂಡ ಸೇರಿಕೊಂಡರು.

ಮೊದಲು ಎರಡೂ ತಂಡಗಳಲ್ಲಿ ಸಮನಾಗಿ 6 ಜನ ಇದ್ದರು. ಆದರೆ, ಕಾರ್ತಿಕ್ ಡ್ರೋನ್ ಪ್ರತಾಪ್ ತಂಡಕ್ಕೆ ಸೇರಿಕೊಂಡಾಗ ಒಂದು ತಂಡದಲ್ಲಿ 7 ಜನ ಆದರು. ಹೀಗಾಗಿ, ಒಬ್ಬ ದುರ್ಬಲ ಸದಸ್ಯನನ್ನು ತಂಡದಿಂದ ಹೊರಗೆ ಇಡುವಂತೆ ಡ್ರೋನ್ ಪ್ರತಾಪ್‌ಗೆ ‘ಬಿಗ್ ಬಾಸ್‌’ ಹೇಳಿದರು. ಆಗ ಡ್ರೋನ್ ಪ್ರತಾಪ್ ಅವರು ದುರ್ಬಲ ಅಂತ ಹೇಳದೆ ಬೇರೆ ಕಾರಣ ಕೊಟ್ಟು ಕಾರ್ತಿಕ್ ಮಹೇಶ್ ಅವರನ್ನ ತಮ್ಮ ತಂಡದಿಂದ ಹೊರ ಹಾಕಿದರು.

ಅದೇ ಸಂದರ್ಭದಲ್ಲಿ ವಿನಯ್  ‘’ಇದು ಹೆಡ್‌ ಶಾಟ್‌’’ ( Head shot ) 7ಎಂದು ಕಾರ್ತಿಕ್‌ ಮಹೇಶ್‌ಗೆ ನೇರವಾಗಿ ಹೇಳಿದ್ದಾರೆ.
ನೀನು ಏನಾದರೂ ಅಂದುಕೋ.. ಹೇಗಾದರೂ ಅಂದುಕೋ.. ಬೆಂಕಿ ಹಾಕೋದಕ್ಕೆ ಹೇಳ್ತಾಯಿದ್ದೀನಿ ಅಂತಾನಾದರೂ ಅಂದುಕೋ.. ನಾನು ಮನಸ್ಸಿಂದ ಹೇಳ್ತಾಯಿರೋದು ‘’ನಿನಗಿದು ಹೆಡ್‌ ಶಾಟ್‌’’ ಅಂತ ಡೈರೆಕ್ಟ್ ಆಗಿ ಹೇಳಿದ್ದಾರೆ.

ಅದಕ್ಕೆ ಉತ್ತರ ನೀಡಿದ ಕಾರ್ತಿಕ್  ‘‘ಚಾನ್ಸೇ ಇಲ್ಲ. ನಾನು ಮಾಡುವ ಕೆಲಸವನ್ನ ನಿಯತ್ತಾಗಿ ಮಾಡುತ್ತೇನೆ. ಇಲ್ಲೇ ಇದ್ದು ಹೊಡೆಯುತ್ತೇನೆ’’ ಎಂದು ಎಲ್ಲರ ಮುಂದೆ ಹೇಳಿದರು.

ಮೊದಲೇ ಸೂಚನೆ ಕೊಟ್ಟಿದ್ದ ‘ಬಿಗ್ ಬಾಸ್’, ‘’ಈ ವಾರದ ಟಾಸ್ಕ್‌ಗಳನ್ನು ಗೆದ್ದು ಮುಂದಿನ ಕ್ಯಾಪ್ಟನ್ ಆಗುವ ಸ್ಪರ್ಧಿಗೆ ದ್ವಿಪಟ್ಟು ಹಾಗೂ ವಿಶೇಷ ಅಧಿಕಾರಗಳನ್ನು ನೀಡಲು ‘ಬಿಗ್ ಬಾಸ್‌’ ನಿರ್ಧರಿಸಿದ್ದಾರೆ. ಹೀಗಾಗಿ, ಈ ವಾರದ ಟಾಸ್ಕ್‌ಗಳಲ್ಲಿ ತಂಡಗಳ ಗೆಲುವು ಹಾಗೂ ಸ್ಪರ್ಧಿಗಳ ವೈಯಕ್ತಿಕ ಭಾಗವಹಿಸುವಿಕೆ ಬಹಳ ಮುಖ್ಯವಾಗಿರುತ್ತದೆ’’ ಎಂದು ತಂಡಗಳ ರಚನೆಗೂ ಮುನ್ನವೇ ‘ಬಿಗ್ ಬಾಸ್‌’ ಘೋಷಿಸಿದ್ದರು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ತಂಡಗಳ ನಾಯಕರು ಆಗಲು ಎಲ್ಲರಿಗೂ ಅವಕಾಶ ಇದೆ ಎಂದ ಕಿಚ್ಚ ಸುದೀಪ್ :

ಈ ವಾರದ ಟಾಸ್ಕ್‌ಗಳಿಗೆ ಎರಡು ತಂಡಗಳ ಅಗತ್ಯವಿತ್ತು. ಹಾಗೆಯೇ 2 ತಂಡಗಳನ್ನು ರಚಿಸಿ ಹಾಗೆಯೇ ಆ ತಂಡಗಳ ನಾಯಕರಾಗಲು ಅರ್ಹತೆ ಇರುವ ಇಬ್ಬರನ್ನು ಸ್ಪರ್ಧಿಗಳು ಆರಿಸಬೇಕಿತ್ತು. ಆಗ ತಂಡಗಳ ಕ್ಯಾಪ್ಟನ್ ಆಗಲು ಡ್ರೋನ್ ಪ್ರತಾಪ್, ಮೈಕಲ್, ತನಿಷಾ, ಸ್ನೇಹಿತ್, ವಿನಯ್, ಅವಿನಾಶ್‌ ಶೆಟ್ಟಿ, ಪವಿ ಪೂವಪ್ಪ, ಕಾರ್ತಿಕ್ ಮುಂದೆ ಬಂದರು.

ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಬೇಕಾದರೆ ಪ್ರತಿ ಸಲ ಮನೆಯಲ್ಲಿ ಗಲಾಟೆ ಜಗಳ ಕಿತ್ತಾಟ ಆಗುತ್ತದೆ. ಆ ಗಲಾಟೆ ಆಗಬಾರದು ಎಂದು ಕಿಚ್ಚ ಸುದೀಪ್ ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು. ಪ್ರತಿಯೊಬ್ಬರೂ ಆಡಬೇಕು. ಈಕ್ವೆಲ್ ಆಗಿ ರೈಟ್ಸ್ ಸಿಗಬೇಕು ಎಂದರು. ವೋಟಿಂಗ್‌ ವೇಳೆ ಡ್ರೋನ್ ಪ್ರತಾಪ್‌ಗೆ 3, ಮೈಕಲ್‌ ಹಾಗೂ ಅವಿನಾಶ್ ಶೆಟ್ಟಿಗೆ 2 ವೋಟ್‌ ಲಭಿಸಿತು. ಕೊನೆಗೆ ತಂಡಗಳ ನಾಯಕರಾಗಿ ಮೈಕಲ್ ಮತ್ತು ಡ್ರೋನ್ ಪ್ರತಾಪ್ ಆಯ್ಕೆಯಾದರು. ಆಗ ತಂಡದ ಕ್ಯಾಪ್ಟನ್ ಆಗಿದ್ದ ಡ್ರೋನ್ ಪ್ರತಾಪ್ ರೂಲ್ಸ್ ಪ್ರಕಾರ ನಾನು ನನ್ನ ತಂಡವನ್ನ ಗೆಲುವಿನತ್ತ ತಗೊಂಡು ಹೋಗ್ತೀನಿ’’ ಎಂದು ಎಲ್ಲರಿಗೂ ತಿಳಿಸಿದರು.

ಡ್ರೋನ್ ಪ್ರತಾಪ್‌ಗೆ ವೋಟ್ ( Vote ) ಹಾಕಿದವರು ಯಾರು?

ಡ್ರೋನ್ ಪ್ರತಾಪ್‌ ತಂಡದ ನಾಯಕ ಆಗಬೇಕು ಅಂತ ವರ್ತೂರು ಸಂತೋಷ್, ತುಕಾಲಿ ಸಂತು ಹಾಗೂ ಸಿರಿ ವೋಟ್ ಮಾಡಿದ್ದರು.

ಈಗಿನ 2 ತಂಡಗಳಲ್ಲಿ ಯಾರು ಯಾರು ಸ್ಪರ್ಧಿಗಳು ಇದ್ದಾರೆ ?

ಮೈಕಲ್ ನೇತೃತ್ವದ ತಂಡದಲ್ಲಿ ಸ್ನೇಹಿತ್, ವಿನಯ್, ಅವಿನಾಶ್ ಶೆಟ್ಟಿ, ತನಿಷಾ, ಸಂಗೀತಾ ಇದ್ದಾರೆ.
ಡ್ರೋನ್ ಪ್ರತಾಪ್ ತಂಡದಲ್ಲಿ ನಮ್ರತಾ, ಕಾರ್ತಿಕ್, ವರ್ತೂರು ಸಂತೋಷ್, ತುಕಾಲಿ ಸಂತು, ಪವಿ ಪೂವಪ್ಪ, ಸಿರಿ ಇದ್ದಾರೆ. ಹಾಗೆಯೇ ಈ ವಾರದ ಟಾಸ್ಕ್ ಗೆ 2 ತಂಡಗಳ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

tel share transformed

ಕನ್ನಡದಲ್ಲಿ ಎಲ್ಲಾ ಸರ್ಕಾರಿ ಸೇವೆಗಳು, ವಿದ್ಯಾರ್ಥಿ ವೇತನ, ಟೆಕ್ನಾಲಜಿ ಮಾಹಿತಿ, ಜಾಬ್ ನ್ಯೂಸ್ ಮತ್ತು ಎಲ್ಲಾ ಸುದ್ದಿಗಳಿಗೆ ಈಗಲೇ “Needs Of Public” ಆಂಡ್ರಾಯ್ಡ್ ಆಪ್ ಉಚಿತವಾಗಿ ಡೌನ್ಲೋಡ್ ಮಾಡಲು ಕೆಳಗೆ ಕ್ಲಿಕ್ ಮಾಡಿ

app download

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!