75 ಸಾವಿರ ರೂಪಾಯಿ ನೇರವಾಗಿ ಖಾತೆಗೆ ಬರುವ HDFC ಪರಿವರ್ತನಾ ಸ್ಕಾಲರ್‌ಶಿಪ್‌ – ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

hdfc

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, HDFC ಬ್ಯಾಂಕ್ ವಿದ್ಯಾರ್ಥಿವೇತನದ ಬಗ್ಗೆ ಮಾಹಿತಿಯನ್ನು ನೀಡಲಾಗುವುದು. ಇದು HDFC ಬ್ಯಾಂಕ್ ಪರಿವರ್ತನ್‌ನ ECSS 2023-24 ರ ಕಾರ್ಯಕ್ರಮವಾಗಿದೆ. ಸಮಾಜದ ಹಿಂದುಳಿದ ವರ್ಗಗಳಿಗೆ ಸೇರಿದ ಪ್ರತಿಭಾವಂತ ಮತ್ತು ಅಗತ್ಯವಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್(Scholarship) ನೀಡುವ ಮೂಲಕ ಪ್ರೋತ್ಸಾಹ ಧನವನ್ನು ನೀಡಲು ಮುಂದಾಗಿದೆ. 1 ರಿಂದ 12 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ITI, ಪಾಲಿಟೆಕ್ನಿಕ್, ಪದವಿಪೂರ್ವ(Under graduate) ಮತ್ತು ಸ್ನಾತಕೋತ್ತರ(post-graduate) ಶಿಕ್ಷಣವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಯಾರ್ಯಾರು ಎಷ್ಟು ವಿದ್ಯಾರ್ಥಿವೇತನ ಪಡೆಯುತ್ತಾರೆ,?, ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಯಾವಾಗ?, ಅರ್ಜಿ ಸಲ್ಲಿಸುವುದು ಹೇಗೆ?, ಎನ್ನುವುದರ ಇತರೆ ಮಾಹಿತಿಗಳ ಕುರಿತು ಪೂರ್ಣ ಮಾಹಿತಿಯನ್ನು ಪಡೆಯಲು ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

HDFC ಬ್ಯಾಂಕ್ ವತಿಯಿಂದ ಸ್ಕಾಲರ್‌ಶಿಪ್:

ವಿದ್ಯಾರ್ಥಿಗಳು ಆರ್ಥಿಕ ಸಂಕಷ್ಟಗಳಿಂದಾಗಿ ಶೈಕ್ಷಣಿಕ ಕನಸುಗಳನ್ನು ತ್ಯಜಿಸಬೇಕಾಗಿಲ್ಲ. ಏಕೆಂದರೆ, HDFC ಬ್ಯಾಂಕ್ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಸ್ಕಾಲರ್‌ಶಿಪ್ ನೀಡುತ್ತಿದೆ.
ಹೌದು, 2023-24ರ HDFC ಬ್ಯಾಂಕ್ ಪರಿವರ್ತನ್‌ನ ECSS ಕಾರ್ಯಕ್ರಮವು HDFC ಬ್ಯಾಂಕ್‌ನ ಒಂದು ಉಪಕ್ರಮವಾಗಿದ್ದು, ಸಮಾಜದ ಹಿಂದೂಳಿದ ವರ್ಗಗಳಿಗೆ ಸೇರಿದ ಶೈಕ್ಷಣಿಕವಾಗಿ ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ECSS ಕಾರ್ಯಕ್ರಮದ ಮೂಲಕ, ವೈಯಕ್ತಿಕ / ಕೌಟುಂಬಿಕ ಬಿಕ್ಕಟ್ಟುಗಳು ಮತ್ತು ಇತರ ಆರ್ಥಿಕ ಸಂಕಷ್ಟಗಳಿಂದಾಗಿ ಶಿಕ್ಷಣವನ್ನು ಪೂರೈಸಲಗಾದ ವಿದ್ಯಾರ್ಥಿಗಳಿಗೆ ಭರವಸೆಯ ಕಿರಣವಾಗಿದೆ.

ಈ ಕಾರ್ಯಕ್ರಮವು ಶಿಕ್ಷಣ-ಸಂಬಂಧಿತ ವೆಚ್ಚಗಳ ಹೊರೆಯನ್ನು ನಿವಾರಿಸುವ ಗುರಿಯನ್ನು ಹೊಂದಿದೆ, ಪ್ರತಿಭಾವಂತ ಮತ್ತು ಅರ್ಹ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಕನಸುಗಳಲ್ಲಿ ಯಾವದೇ ರೀತಿಯ ಅಡೆತಡೆಯಿಲ್ಲದೆ ಮುಂದುವರಿಸುವ, ಅಧ್ಯಯನದ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ಗುರಿಯನ್ನು ಹೊಂದಿದೆ.

1 ರಿಂದ 12 ನೇ ತರಗತಿವರೆಗಿನ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಡಿಪ್ಲೊಮಾ, ITI, ಪಾಲಿಟೆಕ್ನಿಕ್, ಪದವಿಪೂರ್ವ(Under graduate) ಮತ್ತು ಸ್ನಾತಕೋತ್ತರ(post-graduate) ಶಿಕ್ಷಣವನ್ನು ಅನುಸರಿಸುತ್ತಿರುವ ವಿದ್ಯಾರ್ಥಿಗಳು ಈ ಸ್ಕಾಲರ್‌ಶಿಪ್ ಪಡೆಯಲು ಅರ್ಹರಾಗಿದ್ದಾರೆ. ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2023. ಯಾರಿಗೆ ಎಷ್ಟು ಸ್ಕಾಲರ್‌ಶಿಪ್‌ ಸಿಗಲಿದೆ, ಸ್ಕಾಲರ್‌ಶಿಪ್‌ ಪಡೆಯಲು ಏನೆಲ್ಲಾ ಅರ್ಹತೆಗಳಿರಬೇಕು ಎಂದು ಹಂತ ಹಂತವಾಗಿ ತಿಳಿಯೋಣ.

PG ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌ನ ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):
ಈ ಸ್ಕಾಲರ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹತೆಗಳೆಂದರೆ.
– ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
– ಎಂಎಸ್ಸಿ(MSc) ,ಎಂಎ( MA), ಎಂ.ಟೆಕ್(M-tech), ಎಂಬಿಎ(MBA)ಕೋರ್ಸ್‌ ಓದುತ್ತಿರಬೇಕು.
– ಪದವಿಯಲ್ಲಿ ಶೇಕಡ.55 ಅಂಕಗಳನ್ನು ಪಡೆದಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಇದನ್ನೂ ಓದಿ – Scholarship – ಬರೋಬ್ಬರಿ 2 ಲಕ್ಷ ರೂ. ಉಚಿತ ವಿದ್ಯಾರ್ಥಿ ವೇತನ  ಡಿಗ್ರಿ ಓದುವವರಿಗೆ, ಈಗಲೇ ಅರ್ಜಿ ಸಲ್ಲಿಸಿ | Scholarship, Apply Online

ಸ್ಕಾಲರ್ಶಿಪ್ ಮೊತ್ತ:
– ಸಮಾನ್ಯ ಎಂಎಸ್ಸಿ, ಎಂಎ ಕೋರ್ಸ್‌ ಓದುತ್ತಿರುವವರಿಗೆ ರೂ.35,000.
-ವೃತ್ತಿಪರ ಕೋರ್ಸ್‌ಗಳಾದ ಎಂ.ಟೆಕ್, ಎಂಬಿಎ ಕೋರ್ಸ್‌ ಓದುತ್ತಿರುವವರಿಗೆ ರೂ.75000.

UG ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌ನ ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):

– ವಿದ್ಯಾರ್ಥಿಯು ಭಾರತೀಯ ಪ್ರಜೆಯಾಗಿರಬೇಕು
– ಮಾನ್ಯತೆ ಪಡೆದ ಕಾಲೇಜು ಅಥವಾ ವಿಶ್ವವಿದ್ಯಾನಿಲಯದಲ್ಲಿ ಪದವಿ ಕೋರ್ಸ್‌ಗಳಾದ – BCom, BSc, BA, BCA, ಇತರೆ ವೃತ್ತಿಪರ ಕೋರ್ಸ್‌ಗಳಾದ ಬಿ.ಟೆಕ್(B-tech), ಎಂಬಿಬಿಎಸ್( MBBS), ಎಲ್‌ಎಲ್‌ಬಿ(LLB), ಬಿ.ಆರ್ಚ್‌(B-arch) , ನರ್ಸಿಂಗ್ ಕೋರ್ಸ್‌ಗಳನ್ನು ಅನುಸರಿಸುತ್ತಿರಬೇಕು.
– ಹೊಂದಿನ ಅರ್ಹತಾ ಪರೀಕ್ಷೆಯಲ್ಲಿ ಶೇಕಡ.55 ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಕಡಿಮೆ ಆಗಿರ್ಬೇಕು.

ಸ್ಕಾಲರ್ಶಿಪ್ ಮೊತ್ತ:

– ವೃತ್ತಿಪರ ಪದವಿ ಕೋರ್ಸ್‌ಗಳ ವ್ಯಸಂಗ ಮಾಡುತ್ತಿರುವರಿಗೆ ವಾರ್ಷಿಕ ರೂ.50,000.
– ಸಾಮಾನ್ಯ ಪದವಿ ಕೋರ್ಸ್‌ಗಳ ವ್ಯಸಂಗ ಮಾಡುತ್ತಿರುವರಿಗೆ ವಾರ್ಷಿಕ ರೂ.30000.

ಶಾಲಾ ವಿದ್ಯಾರ್ಥಿಗಳಿಗೆ HDFC ಬ್ಯಾಂಕ್ ಪರಿವರ್ತನ್‌ನ ECSS ವಿದ್ಯಾರ್ಥಿ ವೇತನ:

ಅರ್ಹತೆ(Eligibility):

– 1 ರಿಂದ 12ನೇ ತರಗತಿ, ITI, Diploma, ಇತರೆ ಪಾಲಿಟೆಕ್ನಿಕ್ ಕೋರ್ಸ್‌ಗಳನ್ನು ಖಾಸಗಿ, ಸರ್ಕಾರಿ ಅಥವಾ ಸರ್ಕಾರಿ ಅನುದಾನಿತ(government-aided) ಶಾಲೆಗಳಲ್ಲಿ ಓದುತ್ತಿರಬೇಕು.
– ಅರ್ಜಿ ಸಲ್ಲಿಸುವವರು ತಮ್ಮ ಹಿಂದಿನ ಶಿಕ್ಷಣದಲ್ಲಿ ಕನಿಷ್ಠ ಶೇಕಡ.55 ಅಂಕಗಳೊಂದಿಗೆ ಉತ್ತಿರ್ಣರಾಗಿರಬೇಕು.
– ಕುಟುಂಬದ ವಾರ್ಷಿಕ ಆದಾಯ ರೂ.2.5 ಲಕ್ಷ ಮೀರಿರಬಾರದು.

ಸ್ಕಾಲರ್ಶಿಪ್ ಮೊತ್ತ:

– 1 ರಿಂದ 6 ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ.15,000.
– 7 ರಿಂದ 12ನೇ ತರಗತಿವರೆಗಿನ ಹಾಗೂ ಡಿಪ್ಲೊಮ, ಐಟಿಐ, ಪಾಲಿಟೆಕ್ನಿಕ್ ವಿದ್ಯಾರ್ಥಿಗಳಾಗಿದ್ದಲ್ಲಿ ವಾರ್ಷಿಕ ರೂ.18,000.

ಇದನ್ನೂ ಓದಿ –  Solar Pumpset Scheme – ಬರೋಬ್ಬರಿ 1.5 ಲಕ್ಷ ಸಬ್ಸಿಡಿ ಸಿಗುವ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ – ಮೊಬೈಲ್ ನಲ್ಲೆ ಅರ್ಜಿ ಹಾಕಿ

HDFC ಬ್ಯಾಂಕ್ ಪರಿವರ್ತನ್‌ನ ECSS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲಾತಿಗಳು :

-ಹಿಂದಿನ ವರ್ಷದ ಅಂಕ ಪಟ್ಟಿಗಳು
ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ
ಆಧಾರ್‌ ಕಾರ್ಡ್‌ ಅಥವಾ ಯಾವದೇ ಸರ್ಕಾರಿ ಗುರುತಿನ ಪುರಾವೆ.
ಆದಾಯ ಪ್ರಮಾಣ ಪತ್ರ.
ಪ್ರಸ್ತುತ ಶಿಕ್ಷಣಕ್ಕೆ ಪ್ರವೇಶ ಪಡೆದಿರುವ ಕುರಿತಾದ ದಾಖಲೆ.
-ವೈಯಕ್ತಿಕ / ಕೌಟುಂಬ ಬಿಕ್ಕಟ್ಟಿನ ಪುರಾವೆ(ಲಭ್ಯವಿದ್ದಲ್ಲಿ).

HDFC ಬ್ಯಾಂಕ್ ಪರಿವರ್ತನ್‌ನ ECSS ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

ಈ ವಿದ್ಯಾರ್ಥಿವೇತನದ ಅಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಡಿಸೆಂಬರ್ 2023.

https://www.buddy4study.com/page/hdfc-bank-parivartans-ecss-programme

ಹಂತ 1: ಕೆಳಗಿನ ‘APPLY NOW’ ಬಟನ್ ಕ್ಲಿಕ್ ಮಾಡಿ.

ಹಂತ 2: ಡ್ಯಾಶ್‌ಬೋರ್ಡ್‌ನ ಬಲಭಾಗದಲ್ಲಿರುವ ‘ರಿಜಿಸ್ಟರ್’ ಬಟನ್ ಅನ್ನು ಕ್ಲಿಕ್ ಮಾಡಿ ಮತ್ತು ‘ರಿಜಿಸ್ಟರ್’ ಮಾಡಲು ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿದ್ದರೆ, ನೋಂದಾಯಿತ ಇಮೇಲ್ ಐಡಿ ಬಳಸಿ ಲಾಗ್ ಇನ್ ಮಾಡಿ.)

ಹಂತ 3: ಡ್ಯಾಶ್‌ಬೋರ್ಡ್‌ನ ಮೇಲ್ಭಾಗದಲ್ಲಿ ನೀಡಿರುವ ‘ಅಧಿಕೃತ ಲಾಗಿನ್’ ಆಯ್ಕೆಯ ಅಡಿಯಲ್ಲಿ ‘ಸ್ಕೂಲ್ ಅಥಾರಿಟಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ.

ಹಂತ 4: ಈಗ, ‘ಹೊಸ ನೋಂದಣಿಗಾಗಿ – ಇಲ್ಲಿ ಕ್ಲಿಕ್ ಮಾಡಿ’ ಆಯ್ಕೆಗೆ ನ್ಯಾವಿಗೇಟ್ ಮಾಡಿ ಮತ್ತು ಅದನ್ನು ಕ್ಲಿಕ್ ಮಾಡಿ.
(ಗಮನಿಸಿ – ಈಗಾಗಲೇ ನೋಂದಾಯಿಸಿರುವ ಶಾಲೆಗಳು, ಮಾನ್ಯ ರುಜುವಾತುಗಳನ್ನು ಬಳಸಿ ಲಾಗಿನ್ ಮಾಡಿ.)

ಹಂತ 5: ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ.

ಹಂತ 6: ಯಶಸ್ವಿ ನೋಂದಣಿಯ ನಂತರ, ”Student Nomination’ ಆಯ್ಕೆಮಾಡಿ.

ಹಂತ 7: ವಿದ್ಯಾರ್ಥಿಯ ವಿವರಗಳನ್ನು ಭರ್ತಿ ಮಾಡಿ, ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ ಮತ್ತು ಸ್ವೀಕೃತಿಯನ್ನು ಪಡೆಯಲು ಅರ್ಜಿಯನ್ನು ಸಬ್ಮಿಟ್ ಮಾಡಿ.

ವಿದ್ಯಾರ್ಥಿಗಳು ಈ ಉತ್ತಮ ಸಂಧಿಯನ್ನು ತಪ್ಪಿಸದೆ ಈ ಕಾರ್ಯಕ್ರಮದ ಲಾಭಗಳನ್ನು ಪಡೆದುಕೊಂಡು ತಮ್ಮ ಶೈಕ್ಷಣಿಕ ಕನಸುಗಳನ್ನು ಪೂರೈಸಿಕೊಳ್ಳಬಹುದು. ಹಾಗೆಯೇ ಇಂತಹ ಉತ್ತಮ ಸ್ಕಾಲರ್‌ಶಿಪ್ ಮಾಹಿತಿಯನ್ನು ಹೊಂದಿರುವ ಈ ವರದಿಯನ್ನು ನಿಮ್ಮ ಎಲ್ಲಾ ಸ್ನೇಹಿತರಲ್ಲಿ ಮತ್ತು ಬಂಧು-ಭಾಂದವರಲ್ಲಿ ಶೇರ್ ಮಾಡಲು ಮರಿಯಬೇಡಿ, ಧನ್ಯವಾದಗಳು.

ಇದನ್ನೂ ಓದಿ – 15 ಸಾವಿರ ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

2 thoughts on “75 ಸಾವಿರ ರೂಪಾಯಿ ನೇರವಾಗಿ ಖಾತೆಗೆ ಬರುವ HDFC ಪರಿವರ್ತನಾ ಸ್ಕಾಲರ್‌ಶಿಪ್‌ – ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ

Leave a Reply

Your email address will not be published. Required fields are marked *

error: Content is protected !!