Scholarship – ಬರೋಬ್ಬರಿ 2 ಲಕ್ಷ ರೂ. ಉಚಿತ ವಿದ್ಯಾರ್ಥಿ ವೇತನ ಡಿಗ್ರಿ ಓದುವವರಿಗೆ, ಈಗಲೇ ಅರ್ಜಿ ಸಲ್ಲಿಸಿ | Scholarship, Apply Online

dayananda scholarship

ಎಲ್ಲರಿಗೂ ನಮಸ್ಕಾರ ಇವತ್ತಿನ ವರದಿಯಲ್ಲಿ ಒಂದು ಹೊಸ ವಿದ್ಯಾರ್ಥಿ ವೇತನದ ಬಗ್ಗೆ ತಿಳಿದುಕೊಳ್ಳೋಣ,  ಸ್ವಾಮಿ ದಯಾನಂದ ಎಜುಕೇಶನ್ ಫೌಂಡೇಶನ್ ರವರ ಮೆರಿಟ್-ಕಮ್-ಮೀನ್ಸ್ ಸ್ಕಾಲರ್‌ಶಿಪ್ 2023-24 (SDEF merit Come means Schlorship) ವಿದ್ಯಾರ್ಥಿ ವೇತನಕ್ಕೆ ಆನ್ಲೈನ್ ಮೂಲಕ ಅರ್ಜಿ ಆಹ್ವಾಸಿದ್ದಾರೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಮೊಬೈಲ್ ಮೂಲಕವೇ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಈ ಕುರಿತು ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸ್ವಾಮಿ  ದಯಾನಂದ ಸ್ಕಾಲರ್‌ಶಿಪ್ 2023-24: (Swami Dayanand Scholarship 2023-24)

2023-24ನೇ ಸಾಲಿನ ಮೆರಿಟ್-ಕಮ್-ಮೀನ್ಸ್ ಸ್ಕಾಲರ್‌ಶಿಪ್ ಅನ್ನು ಸ್ವಾಮಿ ದಯಾನಂದ್  ಎಜುಕೇಷನಲ್ ಫೌಂಡೇಶನ್ (SDEF)ಪ್ರಕಟಿಸಿದೆ. ಇಂಜಿನಿಯರಿಂಗ್, ಮೆಡಿಕಲ್, ಆರ್ಕಿಟೆಕ್ಚರ್‌ ಹಾಗೂ ಇತರೆ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಪದವಿ ಕೋರ್ಸ್‌ಗಳನ್ನು ಕಲಿಯುವವರು ಅರ್ಜಿ  ಸಲ್ಲಿಸಬಹುದಾಗಿದೆ.

ಭಾರತದಲ್ಲಿನ ಸರ್ಕಾರಿ ಮತ್ತು ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ವೃತ್ತಿ ಪರ ಪದವಿ ಕೋರ್ಸ್ ಗೆ ದಾಖಲಾದ ವಿದ್ಯಾರ್ಥಿಗಳಿಗೆ ಈ ಸ್ಕಾಲರ್ ಶಿಪ್ ಅನ್ನು ನೀಡಲಾಗುತ್ತದೆ. ಪದವಿ ಓದುತ್ತಿರುವ ಎರಡನೇ ಮತ ಮೂರನೇ ವರ್ಷದ ವಿದ್ಯಾರ್ಥಿಗಳು ಸಹಿತ ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಥಿಗಳು ತಮಗೆ ಏನಾದರೂ ಹಣಕಾಸಿನ ಅಡೆತಡೆಗಳಿಂದಾಗಿ ( financially backward students) ತಮ್ಮ ಕಾಲೇಜು ಅಧ್ಯಯನವನ್ನು ಪೂರ್ಣಗೊಳಿಸಲು ಸಾಧ್ಯವಾಗದ ಮಕ್ಕಳಿಗೆ ಮತ್ತು ಪ್ರತಿಭಾನ್ವಿತ ವಿಧ್ಯಾರ್ಥಿಗಳಾಗಿ  ಆರ್ಥಿಕ ಪರಿಸ್ಥಿತಿಯಿಂದ  ಹಿಂದುವುಳಿದು ತಮ್ಮ ಮುಂದಿನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿಕೊಳ್ಳಲು ಆಗದಿರುವ ವಿದ್ಯಾರ್ಥಿಗಳಿಗೆ ಅಂತೆಯೇ ಈ ವಿದ್ಯಾರ್ಥಿವೇತನವನ್ನು ಓದುಗಿಸುವ ಗುರಿಯನ್ನು SDEF ಅನುಸರಿಸುತ್ತಿದೆ ಎಂದೇ ಹೇಳಬಹುದಾಗಿದೆ.

ಇದನ್ನೂ ಓದಿ – 15 ಸಾವಿರ ರೂ. ಒಳಗೆ ಸಿಗುವ ಬೆಸ್ಟ್ 5G ಸ್ಮಾರ್ಟ್​ಫೋನ್​ಗಳ ಪಟ್ಟಿ ಇಲ್ಲಿದೆ ನೋಡಿ

ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆಗಳಲ್ಲಿ ( common entrance exam) ಉನ್ನತ ಶ್ರೇಣಿಯನ್ನು ಗಳಿಸಲು ಮತ್ತು ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯಲು ತಮ್ಮ ಕುಟುಂಬದ ಪರಿಸ್ಥಿತಿಯ ಸವಾಲುಗಳನ್ನು ಜಯಿಸಿದ ವಿದ್ಯಾರ್ಥಿಗಳಿಗೆ SDEFಯ ಈ ವಿದ್ಯಾರ್ಥಿವೇತನದ ಯೋಜನವು ತುಂಬಾ ಸಹಾಯಕವಾಗಿದೆ.

ಸ್ವಾಮಿ  ದಯಾನಂದ ಸ್ಕಾಲರ್‌ಶಿಪ್  2023-24

ವಿದ್ಯಾರ್ಥಿವೇತನದ ಹೆಸರು : ಸ್ವಾಮಿ ದಯಾನಂದ ವಿದ್ಯಾರ್ಥಿವೇತನ( Swami Dayanand Scholarship)
ಸಂಸ್ಥೆಯ ಹೆಸರು: ಸ್ವಾಮಿ ದಯಾನಂದ ಎಜುಕೇಷನ್ ಫೌಂಡೇಶನ್ (SDFE)
ಶೈಕ್ಷಣಿಕ ವರ್ಷ: 2023-24
ಅರ್ಜಿ ಸಲ್ಲಿಸಲು ಸ್ಥಿತಿ :ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲಾಗುತ್ತಿದೆ (Online)
ಅಪ್ಲಿಕೇಶನ್ ಕೊನೆಯ ದಿನಾಂಕ: 30 ಅಕ್ಟೋಬರ್ 2023
ಅರ್ಹ ವಿದ್ಯಾರ್ಥಿಗಳು: ಪದವಿ ದಾಖಲಾಗಿರಬೇಕು.
ಅಧಿಕೃತ ಜಾಲತಾಣ :swamidayanand.org

ಸ್ವಾಮಿ  ದಯಾನಂದ ಸ್ಕಾಲರ್‌ಶಿಪ್ 2023-24 ಕ್ಕೇ ಅರ್ಹತೆಯ ಮಾನದಂಡ ಈ ಕೆಳಗಿನಂತೆ:

  1. ಈ ಯೋಜನೆಯು ಭಾರತೀಯ ನಾಗರಿಕರಿಗೆ ಮಾತ್ರ ಭಾರತದಲ್ಲಿ ತಮ್ಮ ಅಧ್ಯಯನವನ್ನು ಪೂರ್ಣಗೊಳಿಸಲು ಮುಕ್ತವಾಗಿದೆ.
  2. ಎಲ್ಲಾ ಪದವಿಪೂರ್ವ ಕೋರ್ಸ್‌ಗಳು ಮತ್ತು ಪ್ರಸ್ತುತ ಕಾಲೇಜು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ .
  3. ವಿದ್ಯಾರ್ಥಿಗಳು ಕನಿಷ್ಠ 7.5 ರ 12 / CGPA ನಲ್ಲಿ ಕನಿಷ್ಠ 75% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರಬೇಕು.
  4. ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ರೂ.ಗಿಂತ ಹೆಚ್ಚಿರಬಾರದು. 6, 00000/- (ಆರು ಲಕ್ಷಗಳು).
  5. ಅರ್ಜಿದಾರರ ವಯಸ್ಸು 25 ವರ್ಷಗಳಿಗಿಂತ ಹೆಚ್ಚಿರಬಾರದು.
  6. ಅಂಕಗಳ ಶೇಕಡಾವಾರು ಮತ್ತು ಪೋಷಕರ ವಾರ್ಷಿಕ ಆದಾಯದಂತಹ ಅರ್ಹತೆ ಮತ್ತು ಕೌಟುಂಬಿಕ ಹಿನ್ನೆಲೆ ಪರಿಶೀಲನೆಗಳ ಆಧಾರದ ಮೇಲೆ ಆಯ್ಕೆಯನ್ನು ಮಾಡಲಾಗುತ್ತದೆ.
  7. 50% ವಿದ್ಯಾರ್ಥಿವೇತನವನ್ನು ಮಹಿಳಾ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.
  8. ಈ ಯೋಜನೆಯು ಪದವಿಪೂರ್ವ ಕೋರ್ಸ್‌ಗಳಿಗೆ ವರ್ಷಪೂರ್ತಿ ತೆರೆದಿರುತ್ತದೆ.

ವಿವಿಧ ಕೆಟಗರಿಯಲ್ಲಿ ಸ್ಕಾಲರ್‌ಶಿಪ್‌ ಅನ್ನು ಈ ಕೆಳಗಿನಂತೆ ನೀಡಲಾಗುತ್ತದೆ.

ಜೆಇಇ / ನೀಟ್‌ ಅರ್ಹತೆ ಪಡೆದವರಿಗೆ Rank ಆಧಾರದಲ್ಲಿ ಕೆಳಗಿನಂತೆ ಸ್ಕಾಲರ್‌ಶಿಪ್‌ ನೀಡಲಾಗುತ್ತದೆ.
Rank 1-500 ವರೆಗೆ : Rs.2 Lakh / For 4 Years.
Rank 501-1500 ವರೆಗೆ : Rs.1.6 Lakh / For 4 Years.
Rank 1501-3000 ವರೆಗೆ : Rs.1.2 Lakh / For 4 Years.
ವೃತ್ತಿಪರ ಪದವಿ ಕೋರ್ಸ್‌ ಪಡೆಯುವವರಿಗೆ : 4 ವರ್ಷಕ್ಕೆ 80,000 ರೂ.
ಇತರೆ ಜೆನೆರಲ್ ಡಿಗ್ರಿ ಕೋರ್ಸ್‌ ಪಡೆಯುವವರಿಗೆ : ವರ್ಷಕ್ಕೆ ರೂ.10000.
ಸೂಚನೆ : ಈ ಸ್ಕಾಲರ್‌ಶಿಪ್‌ ಹಣವನ್ನು ನೇರವಾಗಿ ಅಭ್ಯರ್ಥಿ ಪ್ರವೇಶ ಪಡೆದಿರುವ ಶಿಕ್ಷಣ ಸಂಸ್ಥೆ ಖಾತೆಗೆ ಜಮಾ ಮಾಡಲಾಗುತ್ತದೆ. ಅಲ್ಲಿ ವಿದ್ಯಾರ್ಥಿಗಳು ಪಡೆಯಬೇಕಾಗುತ್ತದೆ.

ಸ್ವಾಮಿ ದಯಾನಂದ ಸ್ಕಾಲರ್‌ಶಿಪ್ ಆನ್‌ಲೈನ್ ಅರ್ಜಿಗೆ ಅಗತ್ಯವಾದ ದಾಖಲೆಗಳು ಈ ಕೆಳಗಿನಂತಿವೆ:
ಆದಾಯ ಪುರಾವೆ ಪ್ರಮಾಣಪತ್ರ, 10ನೇ ಮತ್ತು 12ನೇ ಅಂಕಪಟ್ಟಿಗಳು, ಪ್ರವೇಶ ಪರೀಕ್ಷೆಯ ಶ್ರೇಣಿಯ ಕಾರ್ಡ್, ಸೀಟು ಹಂಚಿಕೆ ಮತ್ತು ಶ್ರೇಣಿ ಪತ್ರ, ಶುಲ್ಕ ರಶೀದಿ ಪ್ರತಿಗಳು, ವಿದ್ಯಾರ್ಥಿವೇತನ ಪತ್ರದ ಪ್ರತಿ, ID ಪುರಾವೆ, ನಿವಾಸ ಪುರಾವೆ, ಕೃಷಿ ಭೂಮಿ ದಾಖಲೆಗಳು, ವಿದ್ಯುತ್ ಬಿಲ್ ನ ಪ್ರತಿ, ಶಿಕ್ಷಣ ಸಾಲದ ಪುರಾವೆ (ಯಾವುದಾದರೂ ಇದ್ದರೆ), ಬಾಡಿಗೆ ಒಪ್ಪಂದ (ಯಾವುದಾದರೂ ಇದ್ದರೆ), 4 ಮನೆಯ ಫೋಟೋಗಳು (ಒಳಗೆ ಮತ್ತು ಹೊರಗೆ), 4 ಕುಟುಂಬದ ಫೋಟೋಗಳು

ಅರ್ಜಿ ಸಲ್ಲಿಸಲು  ಕೊನೆಯ ದಿನಾಂಕ :  31 ಅಕ್ಟೋಬರ್ 2023 

ಅರ್ಹ ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್ www.swamidayanand.org ಗೆ ಲಾಗ್ ಇನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು. ಮತ್ತು ಹೊಸ ಅಪ್ಲಿಕೇಶನ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 31 ಅಕ್ಟೋಬರ್ 2023 ಮತ್ತು  ಅರ್ಜಿ ನವೀಕರಣಕ್ಕೆ ಕೊನೆಯ ದಿನಾಂಕ 30 ನವೆಂಬರ್ 2023 ಆಗಿದೆ.

ಹೊಸ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ರಿನಿವಲ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೊನೆ ಕ್ಷಣದವರೆಗೆ ಕಾಯದೇ ಬೇಗ ಬೇಗ ಅರ್ಜಿ ಸಲ್ಲಿಸಿ. ಮತ್ತು ಇಂತಹ ಉತ್ತಮವಾದ  ಮಾಹಿತಿ   ಹೊಂದಿದ ಈ ಲೇಖನವನ್ನು ಕೂಡಲೇ ನಿಮ್ಮೆಲ್ಲಾ ಸ್ನೇಹಿತರೊಂದಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

WhatsApp Group Join Now
Telegram Group Join Now

Related Posts

One thought on “Scholarship – ಬರೋಬ್ಬರಿ 2 ಲಕ್ಷ ರೂ. ಉಚಿತ ವಿದ್ಯಾರ್ಥಿ ವೇತನ ಡಿಗ್ರಿ ಓದುವವರಿಗೆ, ಈಗಲೇ ಅರ್ಜಿ ಸಲ್ಲಿಸಿ | Scholarship, Apply Online

Leave a Reply

Your email address will not be published. Required fields are marked *

error: Content is protected !!