Solar Pumpset Scheme – ಬರೋಬ್ಬರಿ 1.5 ಲಕ್ಷ ಸಬ್ಸಿಡಿ ಸಿಗುವ ಸೋಲಾರ್ ಪಂಪ್ ಸೆಟ್ ಗೆ ಅರ್ಜಿ ಆಹ್ವಾನ – ಮೊಬೈಲ್ ನಲ್ಲೆ ಅರ್ಜಿ ಹಾಕಿ

solar pump set subsidy

ತೋಟಗಾರಿಕೆ ಅಭಿವೃದ್ಧಿ ಯೋಜನೆ(Horticulture Development Scheme)ಯಡಿ ತೋಟಗಾರಿಕೆ ಇಲಾಖೆ ವತಿಯಿಂದ ವಿನೂತನ ತಂತ್ರಜ್ಞಾನ ( technology ) ಮತ್ತು ಯಂತ್ರೋಪಕರಣಗಳ (mechinory) ಸಹಾಯಧನ ಯೋಜನೆಯಡಿಯಲ್ಲಿ ಸೋಲಾರ್‌ ಪಂಪ್‌ಸೆಟ್‌(solar pump set) ಅಳವಡಿಸಲು ಸಹಾಯಧನ(Subsidy) ಸಿಗಲಿದೆ. ಇದು ರೈತರಿಗೆ ಬಂಪರ್ ಅವಕಾಶ ಎನ್ನಬಹುದು. ಏನಿದು ಸುದ್ದಿ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸೋಲಾರ್ ಪಂಪ್ಸೆಟ್ ಅಳವಡಿಸಲು ಸಹಾಯಧನ :

solsr pumpset subsidy

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ತರುತ್ತಿದೆ. ಕೃಷಿ, ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಕೃಷಿಯು ಕೂಡ ನಮ್ಮ ದೇಶದ ಬಹು ಮುಖ್ಯ ವೃತ್ತಿಯಾಗಿದೆ. ಹಾಗಾಗಿ ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರು ಹಾಗೂ ಪರಿಶಿಷ್ಟ ಜಾತಿ, ಪಂಗಡದ(SC / ST) ಫ‌ಲಾನುಭವಿ ರೈತರು ಶೇ.50 ಸಹಾಯಧನ ಪಡೆಯಬಹುದು.

ಸರ್ಕಾರವು ರೈತರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು. ಕೃಷಿ ಈಗಿನ ಕಾಲದಲ್ಲಿಯೂ ಸಹ ಭಾರತದ ಆರ್ಥಿಕತೆಯಲ್ಲಿ ಒಂದು ಪ್ರಮುಖ ಪಾತ್ರವಾಗಿ ಕಾರ್ಯನಿರ್ವಹಿಸುತ್ತಿದೆ. ರೈತರು, ಸರ್ಕಾರ ಜಾರಿತರುವ ಇಂತಹ ಯೋಜನೆಗಳ ಲಾಭವನ್ನು ಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿಯನ್ನು ( agriculture development ) ಕಾಣಬೇಕು.
ದೇಶದಲ್ಲಿ ರೈತರ ನೀರಾವರಿ ಸೌಲಭ್ಯವನ್ನು ಹೆಚ್ಚಿಸಲು ಈ ಹೊಸ ಯೋಜನೆಯನ್ನು ತಂದಿದ್ದಾರೆ. ದೇಶದಲ್ಲಿ ಕೃಷಿಯ ಮಹತ್ವವನ್ನು ಹೆಚ್ಚಿಸಲು ಮತ್ತು ರೈತರ ಆದಾಯವನ್ನು ಅಭಿವೃದ್ಧಿ ಪಡಿಸಲು ಈ ಯೋಜನೆಯನ್ನು ಆರಂಭಿಸಿದ್ದಾರೆ.

ಇದನ್ನೂ ಓದಿ – Coconut Price – ಎಳನೀರು ಗ್ರಾಹಕನಿಗೆ ಹೊರೆ, ರೈತರಿಗೆ ಬರೆ, 10ಕ್ಕೆ ಖರೀದಿಸಿ 35- 40 ಕ್ಕೆ ಮಾರಾಟ! ಇಲ್ಲಿದೆ ವಿವರ

ಎಷ್ಟು ಸಹಾಯಧನ ಸಿಗಲಿದೆ:

ಈ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ರೈತರ ನೀರಾವರಿಗಾಗಿ ಸೌರ ಚಾಲಿತ ಪಂಪ್ ಸೆಟ್ಗಳನ್ನು ಒದಗಿಸುತ್ತಿದೆ ಹಾಗೆಯೇ ಈ ಯೋಜನೆಗೆ ಸಹಾಯ ಧನ ಎಷ್ಟು ಸಿಗಲಿದೆ ಮತ್ತು ಅದಕ್ಕೆ ಬೇಕಾಗುವ ದಾಖಲಾತಿಗಳ ಬಗ್ಗೆ ನೋಡೋಣ.

3 ಎಚ್‌.ಪಿ.ಸೋಲಾರ್‌ ಪಂಪ್‌ಸೆಟ್‌ಗೆ 1 ಲ.ರೂ., 5 ಎಚ್‌ಪಿ ಹಾಗೂ ಹೆಚ್ಚಿನ ಸಾಮರ್ಥ್ಯದ ಪಂಪ್‌ ಸೆಟ್‌ಗಳಿಗೆ 1.50 ಲಕ್ಷ ರೂ. ಸಹಾಯಧನ ಸಿಗಲಿದೆ.
3 ಎಚ್‌ಪಿಯ ಸೋಲಾರ್‌ ಪಂಪ್‌ ಸೆಟ್‌ಗಳಿಗೆ ಘಟಕ ವೆಚ್ಚ 1.98 ಲಕ್ಷ ರೂ.ಗೆ ಶೇ.50ರಂತೆ 0.99 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ.
5 ಎಚ್‌ಪಿ ಮತ್ತು ಅದಕ್ಕಿಂತ ಹೆಚ್ಚಿನ ಪಂಪ್‌ಸೆಟ್‌ಗಳಿಗೆ 3 ಲಕ್ಷ ರೂ.ಗಳ ಶೇ.50 ರಂತೆ 1.50 ಲಕ್ಷಕ್ಕೆ ಮಿತಿಗೊಳಿಸಿ ಸಹಾಯಧನ ನೀಡಲಾಗುತ್ತದೆ. ಸೋಲಾರ್‌ ಪಂಪ್‌ ಸೆಟ್‌ಗಳಿಗೆ ವಿಮೆ ಮಾಡಿಸುವುದು ಕಂಪೆನಿಯ ಜವಾಬ್ದಾರಿಯಾಗಿದ್ದು ಅವರಿಂದ ಸೂಕ್ತ ದಾಖಲೆ ಪಡೆಯಬಹುದು.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ಮುಖ್ಯ ದಾಖಲೆಗಳು :

ಪಹಣಿ
ಆಧಾರ್‌ ಕಾರ್ಡ್‌
ಬೆಳೆ ದೃಢೀಕರಣ ಪತ್ರ
ಬ್ಯಾಂಕ್‌ ಪಾಸ್‌ ಬುಕ್‌
ಜಾತಿ-ಆದಾಯ ಪತ್ರ
20 ರೂ.ನ ಬಾಂಡ್‌ ಪೇಪರ್‌
ಅರ್ಜಿದಾರರ ಫೋಟೋ
ಎಫ್‌ಐಡಿ ಸಂಖ್ಯೆ

ಇದನ್ನೂ ಓದಿ – ಬರೋಬ್ಬರಿ 300 ಕಿ. ಮೀ ವರೆಗೆ ಮೈಲೇಜ್ ಕೊಡುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ! ಬೆಲೆ ಎಷ್ಟು ಗೊತ್ತಾ?

ಅರ್ಜಿ ಎಲ್ಲಿ ಮತ್ತು ಹೇಗೆ ಸಲ್ಲಿಸಬೇಕು?

ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ಒದಗಿಸಿ ಅರ್ಜಿ ಸಲ್ಲಿಸಬೇಕಿದೆ. ಗುರಿಗೆ ಅನುಗುಣವಾಗಿ ಮಾರ್ಗಸೂಚಿ ಅನುಸಾರ ಫ‌ಲಾನುಭವಿಗಳ ಜೇಷ್ಠತಾ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುತ್ತದೆ.

ಇದನ್ನೂ ಓದಿ – ಕರ್ನಾಟಕ ರಾಜ್ಯಕ್ಕೆ 50 ವರ್ಷಗಳ ಸಂಭ್ರಮ: ಕನ್ನಡ ರಾಜ್ಯೋತ್ಸವದ ಬಗ್ಗೆ ಸಂಪೂರ್ಣ ವಿವರ ಇಲ್ಲಿದೆ!

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!