Bigg Boss Kannada- ದೊಡ್ಮನೆಯಲ್ಲಿ ಬಿಗ್ ಫೈಟ್, ನಿನ್ನಂತ ಕಿತ್ತೊದೋನು ಅನ್ಕೊಂಡೆನೋ, ಸಂಗೀತಾ V/S ವಿನಯ್

bigboss halli mane task

ಕನ್ನಡದ ಬಹು ದೊಡ್ಡ ರೋಯಲಿಟಿ ಶೋ ಬಿಗ್ ಬಾಸ್ ( Big boss ) ಶುರುವಾಗಿ ಹಲವು ದಿನಗಳು ಕಳೆದವು. ಶುರುವಾದಗಿನಿಂದ ಬಿಗ್ ಬಾಸ್’ ಮನೆಯಲ್ಲಿ ಹಲವಾರು ವಿಶಿಷ್ಟ ಟಾಸ್ಕ್ ಗಳು ( Task ) ಹಾಗೂ ಮನರಂಜಿತ ಆಟಗಳು ನಡೆದಿವೆ. ಹಾಗೆಯೇ ಈ ಬಾರಿಯ ಬಿಗ್ ಬಾಸ್ ಮನೆಯಲ್ಲಿ ಅಷ್ಟೇ ಅಲ್ಲದೆ ಜಗಳಗಳು, ಬೀಪ್ ಪದಗಳು ಕೇಳಿ ಬರುತ್ತಿವೆ. ಬಿಗ್ ಬಾಸ್ ಮನೆ ಈಗಾಗಲೇ ಎರಡು ತಂಡಗಳಾಗಿವೆ. ಈಗ ಬಿಗ್ ಬಾಸ್ ಹಳ್ಳಿಮನೆ ಎಂದು ಟಾಸ್ಕ್ ನೀಡಿದ್ದರು, ಆದರೆ ಈ ಟಾಸ್ಕ್ ನಲ್ಲಿ ನಡೆದಿದ್ದೆ ಬೇರೆ. ಸ್ಪರ್ಧಿಗಳೆಲ್ಲ ಪರಸ್ಪರ ಕಿತ್ತಾಡಿಕೊಂಡಿದ್ದಾರೆ, ಆದು ಏನೆಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಹಳ್ಳಿ ಮನೆ ಟಾಸ್ಕ್ ನಲ್ಲಿ ಜಗಳ:

ಹಳ್ಳಿ ಮನೆ ಎಂಬ ಟಾಸ್ಕ್ ನಲ್ಲಿ ಹಲವಾರು ಬೀಪ್ ಪದಗಳನ್ನು ಸ್ಪರ್ಧಿಗಳು ಬಳಸಿದ್ದಾರೆ. ಹಾಗೆಯೇ ಒಬ್ಬರ ಮೇಲೆ ಇನ್ನೊಬ್ಬರು ಕೈ ಮಾಡುವ ಹಂತಕ್ಕೂ ಇಳಿದಿದ್ದಾರೆ. ಬಿಗ್ ಬಾಸ್ ಮನೆಯ ಯಾವುದೇ ಟಾಸ್ಕ್ ನಲ್ಲಿ ಜಗಳ ಇದ್ದೆ ಇರುತ್ತದೆ. ಆದ್ರೆ ಈ ಸೀಸನ್ ನಲ್ಲಿ ಇದು ವಿಪರೀತವಾಗಿ ಮೂಡಿ ಬಂದಿದೆ.

ನವೆಂಬರ್ 1ರ ರಾಜ್ಯೋತ್ಸವದ ( kannada Rajyosthava ) ಸಂಭ್ರಮದಲ್ಲಿ ಬಿಗ್‌ಬಾಸ್‌ ಮನೆಯೊಳಗಿನ ಸ್ಪರ್ಧಿಗಳಿಗೆ ಒಂದು ವಿಶಿಷ್ಟವಾದ ಟಾಸ್ಕ್‌ ಕೊಟ್ಟಿದ್ದರು. ಸದಸ್ಯರೆಲ್ಲರೂ ಎರಡು ಕುಟುಂಬಗಳಾಗಿ ವಿಭಾಗಗೊಂಡು ಹಳ್ಳಿ ಜೀವನವನ್ನು ನಡೆಸಬೇಕು ಎಂದು ಟಾಸ್ಕ್ ನ ನಿಯಮವಾಗಿತ್ತು. ಸಂಗೀತಾ ಮತ್ತು ವಿನಯ್ ಒಬ್ಬರೂ ಒಂದೊಂದು ಕುಟುಂಬದ ಮುಖ್ಯಸ್ಥರಾಗಿದ್ದರು. ಅದರ ಪ್ರಕಾರವೇ ಟಾಸ್ಕ್‌ ಆರಂಭಗೊಂಡಿತ್ತು.

ಇದನ್ನೂ ಓದಿ – Loan Scheme – SC/ST ವರ್ಗದವರಿಗೆ ಸಾಲ & ಸಬ್ಸಿಡಿ ಯೋಜನೆಗಳಿಗೆ ಅರ್ಜಿ ಆಹ್ವಾನ, ನಿಮ್ಮ ಅರ್ಜಿ ಹೀಗೆ ಸಲ್ಲಿಸಿ

ಟಾಸ್ಕ್ ಶುರುವಾದ ಪ್ರಾರಂಭದಲ್ಲಿ ಖುಷಿಯೊಂದಿಗೇ ಟಾಸ್ಕ್ ಆರಂಭಗೊಂಡಿತ್ತು. ಎಲ್ಲರೂ ಅದನ್ನು ಎಂಜಾಯ್ ಮಾಡುತ್ತಿದ್ದರು. ನಂತರ ಮಾತಿಗೆ ಮಾತು ಬೆರೆತು ಪರಸ್ಪರ ಬೈದುಕೊಂಡಿದ್ದಾರೆ.
ಮಣ್ಣಿನ ಪಾತ್ರೆಗಳನ್ನು ಮಾಡುವ ಟಾಸ್ಕ್‌ನಲ್ಲಿ, ‘ಎದುರಾಳಿ ಕುಟುಂಬದ ಸದಸ್ಯರು ಅದನ್ನು ಕೆಡಿಸದಂತೆ ರಕ್ಷಿಸಿಕೊಳ್ಳಬೇಕು’ ಎಂಬ ನಿಯಮವೇ ಈ ಚಕಮಕಿಗೆ ಕಾರಣವಾಗಿದೆ. ಒಬ್ಬರು ಮಾಡಿದ ಪಾತ್ರೆಗಳನ್ನು ಕಿತ್ತುಕೊಳ್ಳಲು ಇನ್ನೊಬ್ಬರು ಬಂದಿರುವುದು ಜಗಳಕ್ಕೆ ಕಾರಣವಾಗಿದೆ. ಅದರಲ್ಲಿಯೂ ಸಂಗೀತಾ ಮತ್ತು ನಮ್ರತಾ ನಡುವಿನ ಗಲಾಟೆ ಮತ್ತು ವಿನಯ್‌ ಮತ್ತು ಕಾರ್ತಿಕ್ ನಡುವಿನ ಜಿದ್ದಾಜಿದ್ದಿ ಕೈಕೈ ಮಿಲಾಯಿಸುವ ಮಟ್ಟಕ್ಕೂ ಹೋಗುವಂತಿದೆ.

ಜಗಳವಾಡಿ ಕೊನೆಯಲ್ಲಿ ಹಳ್ಳಿ ಮನೆ ಟಾಸ್ಕ್ ರದ್ದು :

ಎರಡು ತಂಡದವರು ತಲಾ 30 ಬೆರಣಿಗಳನ್ನು ತಟ್ಟಬೇಕಾಗಿದ್ದು. ಎರಡು ತಂಡದವರು ಮೂವತ್ತು ಬೆರಣಿಗಳನ್ನು ತಟ್ಟಿದ್ದರು ಆದರೆ ಅವುಗಳು ಸರಿಯಾದ ಆಕಾರದಲ್ಲಿ ಇದೇಯೇ ಎಂಬುವ ನಿರ್ಧಾರವನ್ನು ವಿನಯ್ ಹಾಗೂ ಸಂಗೀತ ತೆಗೆದುಕೊಳ್ಳಬೇಕಾಗಿತ್ತು. ಸಂಗೀತ ಅವರು ಒಂದು ವೇಳೆ ಆತರ ಸರಿ ಇಲ್ಲ ಎಂದು ಅದನ್ನು ತೆಗೆದು ಹಾಕಿದರು. ನಂತರ ರೊಚ್ಚಿಗೆದ್ದ ವಿನಯ್ ಅಪ್ರೂ ಮಾಡಿದ್ದ ಬೆರಣಿಯನ್ನು ತೆಗೆದುಹಾಕುವುದು ಯಾವ ನ್ಯಾಯ ಎಂದು ಸಂಗೀತ ಅವರ ಟೀಮಿನ ಎಲ್ಲಾ ಬೆರಣಿಗಳನ್ನು ಕಿತ್ತು ಹಾಕಿದರು. ಅವರಂತೆಯೇ ವಿನಯ್ ಅವರ ಟೀಮಿನ ಬೆರಣಿಗಳನ್ನು ಕೂಡ ಸಂಗೀತ ಅವರು ಕಿತ್ತು ಹಾಕಿದರು. ಇವೆಲ್ಲವುಗಳನ್ನು ಗಮನಿಸಿದ ಬಿಗ್ ಬಾಸ್ ಹಳ್ಳಿ ಮನೆಯ ಆಟವನ್ನು ರದ್ದುಗೊಳಿಸಿದರು.

ಮುಂದೆ ಏನಾಗುತ್ತದೆಯೋ ಎಂದು ಮುಂದಿನ ಸಂಚಿಕೆಯಲ್ಲಿ ಕಾದು ನೋಡೋಣ.

ಇದನ್ನೂ ಓದಿ – Bricks Machine – ಗಂಟೆಗೆ ಬರೋಬ್ಬರಿ 25 ಸಾವಿರ ಇಟ್ಟಿಗೆ ತಯಾರಿಸುವ ಹೊಸ ಮಷಿನ್ ಬಿಡುಗಡೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Picsart 23 07 16 14 24 41 584 transformed 1

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!