Gruhalakshmi – ಮೆಸೇಜ್ ಇನ್ನೂ ಬಂದಿಲ್ವಾ..?? ಗೃಹ ಲಕ್ಷ್ಮಿ ಯೋಜನೆಯ ಅರ್ಜಿ ಸಲ್ಲಿಸುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ – ತಪ್ಪದೇ ಓದಿ

Picsart 23 07 22 15 51 35 552 scaled

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಗೆ ಸಂಬಂಧಪಟ್ಟಂತೆ ಪ್ರಶ್ನೆ ಉತ್ತರಗಳನ್ನು ನಿಮಗೆ ತಿಳಿಸಲಾಗುತ್ತದೆ. ಅಷ್ಟೇ ಅಲ್ಲದೆ ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಿತಿಯನ್ನು ರದ್ದು ಮಾಡಿರುವುದರ ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಹಲವಾರು ಜನರಿಗೆ ಗೊಂದಲಗಳಿವೆ. ಆ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಈ ಲೇಖನದ ಪ್ರಶ್ನೆ ಉತ್ತರಗಳು ಸಹಾಯ ಮಾಡುತ್ತವೆ. ಇವುಗಳ ಬಗ್ಗೆ ತಿಳಿದುಕೊಳ್ಳಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟ ಗೊಂದಲಗಳಿಗೆ ಇಲ್ಲಿವೆ ಉತ್ತರ :

ಗೃಹಲಕ್ಷ್ಮಿ ಯೋಜನೆ ಎಂದರೆ ಹಲವರಿಗೆ 2000 ತೆಗೆದುಕೊಳ್ಳುವ ಒಂದು ಯೋಜನೆ ಎಂದು ಅಷ್ಟೇ ತಿಳಿದಿರುತ್ತದೆ. ಆದರೆ ಆ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳುವ ಮುಂಚೆ ಏನೆಲ್ಲಾ ಸಿದ್ಧತೆಯನ್ನು ಮಾಡಿಕೊಳ್ಳಬೇಕು?, ನೋಂದಣಿಯನ್ನು ಹೇಗೆ ಮಾಡಿಕೊಳ್ಳಬೇಕು?, ನೋಂದಣಿಯನ್ನು ಮಾಡಿಕೊಂಡ ನಂತರ ಏನೆಲ್ಲ ಮಾಡಬೇಕು?, ಹೇಗೆ ಹಣ ಜಮಾ ಆಗುತ್ತದೆ, ಹೀಗೆ ಹತ್ತು ಹಲವಾರು ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಿರುತ್ತವೆ. ಬಹು ನಿರೀಕ್ಷಿತ ಹಾಗೂ ಕಾತುರದಿಂದ ಕಾಯುತ್ತಿರುವ ಗೃಹಲಕ್ಷ್ಮಿ ಯೋಜನೆಗೆ (GruhaLakshmi Scheme) ನೋಂದಣಿ ಮಾಡಿಕೊಳ್ಳುವ ಮಹಿಳೆಯರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳಾಗದಂತೆ ಕರ್ನಾಟಕ ಸರ್ಕಾರ (Karnataka Government) ಪ್ರಮುಖ ಮಾರ್ಗಸೂಚಿಗಳನ್ನು (Guidelines) ಬಿಡುಗಡೆ ಮಾಡಿದೆ. ಜೊತೆಗೆ ಹಲವಾರು ಪ್ರಶ್ನೆಗಳಿಗೆ ಉತ್ತರವನ್ನು ಕೂಡ ನೀಡಿದೆ, ಅವುಗಳನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಿತಿ ರದ್ದು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ, ದಿನಕ್ಕೆ ಒಂದು ಸರ್ಕಾರಿ ಕೇಂದ್ರದಲ್ಲಿ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿ ಇತ್ತು. ಒಂದು ಅರ್ಜಿಗಳಿಗಿಂತ ಜಾಸ್ತಿ ಅರ್ಜಿಗಳನ್ನು ಒಂದು ಸರ್ಕಾರಿ ಕೇಂದ್ರಗಳಲ್ಲಿ ಸ್ವೀಕರಿಸಿದರೆ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯ ಸಿಬ್ಬಂದಿಗಳಿಗೆ ಹೊರೆ ಹೆಚ್ಚಾಗುತ್ತದೆ ಎಂದು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಒಂದು ಸರ್ಕಾರಿ ಕೇಂದ್ರದಲ್ಲಿ 60 ಕ್ಕಿಂತಲೂ ಹೆಚ್ಚಿನ ಮಹಿಳೆಯರು ಕ್ಯೂ ನಿಲ್ಲುತ್ತಿದ್ದರು. ಆದಕಾರಣ ಸರ್ಕಾರವು ಈ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿಯನ್ನು ರದ್ದುಗೊಳಿಸಿದೆ. ಈಗ ಒಂದು ಸರ್ಕಾರಿ ಕೇಂದ್ರದಲ್ಲಿ ಎಷ್ಟು ಅರ್ಜಿಯನ್ನು ಬೇಕಾದರೂ ಸಲ್ಲಿಸುವ ಅವಕಾಶವಿದೆ. ಅದಕ್ಕೆ ಮಿತಿ ಇಲ್ಲ.

ಗೃಹಲಕ್ಷ್ಮಿ ಯೋಜನೆಯ ಪ್ರಶ್ನೆಗಳಿಗೆ ನಮ್ಮ ಉತ್ತರ :

ಗೃಹ ಲಕ್ಷ್ಮಿ ಯೋಜನೆ ಎಂದರೇನು?

“ಗೃಹಲಕ್ಷ್ಮಿ ಯೋಜನ” ಕರ್ನಾಟಕ ಸರ್ಕಾರದ ಪ್ರಮುಖ ಮಹಿಳಾ ಸಬಲೀಕರಣ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ಪಡಿತರ ಕಾರ್ಡ್ ಹೊಂದಿದ ಕುಟುಂಬದ ಯಜಮಾನಿಗೆ ಮಾಸಿಕ ರೂ. 2000/- ಹಣ ವಿತರಣೆ ಮಾಡಲಾಗುತ್ತದೆ.ನಾನು ಈ ಯೋಜನೆಗೆ ಅರ್ಹಳೇ?
ಅಂತ್ಯೋದಯ, ಬಿಪಿಎಲ್ ಮತ್ತು ಎಪಿಎಲ್ ಪಡಿತರ ಚೀಟಿಗಳಲ್ಲಿ ಕುಟುಂಬದ ಯಜಮಾನಿ ಎಂದು ನಮೂದಿಸಿದ ಮಹಿಳೆ ಅರ್ಹಳು.ಮನೆಯ ಯಜಮಾನಿ ಯಾರು? ರೇಷನ್‌ ಕಾರ್ಡ್‌’ನಲ್ಲಿ ನಮೂದಿಸಿರುವ ಮನೆಯ ಯಜಮಾನಿಯನ್ನು ‘ಗೃಹಲಕ್ಷ್ಮಿ ಯೋಜನೆಯ ಫಲಾನುಭವಿ ಎಂದು ಪರಿಗಣಿಸಲಾಗುತ್ತದೆ.

ಪಡಿತರ ಚೀಟಿಯಲ್ಲಿ ಅತ್ತೆ ಯಾಜಮಾನಿಯಾಗಿದ್ದು, ಸದಸ್ಯರ ಪಟ್ಟಿಯಲ್ಲಿ ಸೊಸೆಯ ಹೆಸರಿದ್ದು, ಸೊಸೆಯನ್ನೇ ಫಲಾನುಭವಿಯನ್ನಾಗಿಸುವ ಸೌಲಭ್ಯವಿದೆಯೇ?

ಇಲ್ಲ, ಪಡಿತರ ಚೀಟಿಯಲ್ಲಿಯ(Ration card) ಯಜಮಾನಿಯೇ ಈ ಯೋಜನೆ ಫಲಾನುಭವಿಯಾಗಿರುತ್ತಾರೆ.

ಕುಟುಂಬದ ಯಜಮಾನಿಯು ಇತ್ತೀಚೆಗೆ ನಿಧನರಾದರೆ, ಈ ಸನ್ನಿವೇಶದಲ್ಲಿ ಏನು ಮಾಡಬಹುದು?

ಪಡಿತರ ಚೀಟಿಯಲ್ಲಿ ಅಗತ್ಯ ತಿದ್ದು ಪಡಿಯಾದ ನಂತರ ನೊಂದಾಯಿಸಬಹುದು. ಮೊದಲನೆಯದಾಗಿ ಮರಣ ಪತ್ರವನ್ನು ಮಾಡಿಸಬೇಕಾಗುತ್ತದೆ.

ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಮುಂದಿನ ಕ್ರಮವೇನು?

ಕುಟುಂಬದ ಯಜಮಾನಿಯು ಮರಣ ಹೊಂದಿದಲ್ಲಿ ಯೋಜನೆಯ ಸೌಲಭ್ಯ ಸ್ಥಗಿತಗೊಳಿಸಲಾಗುವುದು

ಕುಟುಂಬದ ಮುಖ್ಯಸ್ಥರು ಮೃತ ಪಟ್ಟರು ಸಹ ಪಡಿತರ ಚೀಟಿಯಿಂದ ಅವರ ಹೆಸರನ್ನು ತೆಗೆಯದಿರುವ ಪಡಿತರ ಚೀಟಿಗಳನ್ನು ಪರಿಗಣಿಸಲಾಗುತ್ತದೆಯೇ?
ನಿಮ್ಮ ಸಮೀಪದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿಯನ್ನು
ಸಂಪರ್ಕಿಸುವುದು.

ಈ ಯೋಜನೆಗೆ ನೋಂದಾಯಿಸುವುದು ಹೇಗೇ?

ಈ ಯೋಜನೆಯನ್ನು ಬಾಪೂಜಿ ಸೇವಾ ಕೇಂದ್ರ, ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್, ಬಿಬಿಎಂಪಿ ವಾರ್ಡ್ ಕಛೇರಿ ಮತ್ತು ಸ್ಥಳೀಯ ನಗರಾಡಳಿತ ಸಂಸ್ಥೆಯ ಕಛೇರಿಗಳ ಮೂಲಕ ಉಚಿತವಾಗಿ ನೋಂದಾಯಿಸಬಹುದು. ಅಥವಾ ಸ್ಥಳೀಯ ಮಟ್ಟದಲ್ಲಿ ಸರ್ಕಾರದಿಂದ ನೇಮಕವಾದ ಪ್ರಜಾ ಪ್ರತಿನಿಧಿಗಳು ಮನೆಮನಗೆ ತೆರಳಿ ಉಚಿತವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

tel share transformed

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!