Gruhalakshmi – ಗೃಹಲಕ್ಷ್ಮಿ ನೋಂದಣಿಗೆ ‘SMS’ ಕಳುಹಿಸಿದ್ರು ರಿಪ್ಲೈ ಬರುತ್ತಿಲ್ಲವಾ.? ಹೀಗೆ ಮಾಡಿ ಮಂಜೂರಾತಿ ಪತ್ರ ಪಡೆಯಿರಿ

Picsart 23 07 23 06 50 16 230

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹಲಕ್ಷ್ಮಿ ಯೋಜನೆ(Gruhalakshmi Scheme)ಯ ಅರ್ಜಿ ಸಲ್ಲಿಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು  ತಿಳಿಸಿಕೊಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಮೊದಲ ಪ್ರಕ್ರಿಯೆ ಎಸ್ಎಮ್ಎಸ್(SMS) ಮಾಡುವುದರ ಮೂಲಕ ಶುರುವಾಗುತ್ತದೆ ಎಂದು ಈಗಾಗಲೇ ಹಲವರಿಗೆ ತಿಳಿದಿದೆ. ಆದರೆ ನೀವೇನಾದರೂ ಹೇಗೆ ಮೆಸೇಜ್ ಮಾಡುವುದು?, ಏನನ್ನು ಮೆಸೇಜ್ ಮಾಡಬೇಕು ಎಂಬ ಗೊಂದಲದಲ್ಲಿದ್ದರೆ ನಿಮಗೆ ಈ ಲೇಖನ ಸಂಪೂರ್ಣವಾಗಿ ಸಹಾಯಮಾಡುತ್ತದೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಮೆಸೇಜ್ ಮಾಡುವ ಪ್ರತಿ ಹಂತವನ್ನು ಹಾಗೂ ಯಾವ ದಾಖಲೆಗಳು ಬೇಕಾಗುತ್ತದೆ ಮತ್ತು ಎಲ್ಲಿ ಅರ್ಜಿಗಳನ್ನು ಸಲ್ಲಿಸಲಾಗುತ್ತದೆ ಎಂಬುವುದರ ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡಲಾಗುತ್ತದೆ. ಇದೇ ರೀತಿಯ  ಎಲ್ಲಾ ಸರ್ಕಾರಿ ಸೌಲಭ್ಯಗಳ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಮನೆಯ ಯಜಮಾನಿಯರು ಮೆಸೇಜ್ ಮಾಡುವುದೊಂದೇ ಬಾಕಿ :

ರೇಷನ್ ಕಾರ್ಡಲ್ಲಿ ಗುರುತಿಸಲಾದ ಮನೆಯ ಯಜಮಾನಿ ಮಹಿಳೆಯರು ತಮ್ಮ ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ಸಂಖ್ಯೆಯಿಂದ 8147500500 ಅಥವಾ 8277000500 ಎರಡರಲ್ಲಿ ಯಾವುದಾದರೂ ಒಂದು ಮೊಬೈಲ್ ಸಂಖ್ಯೆಗೆ ನಿಮ್ಮ ಪಡಿತರ ಚಿಟಿ ಸಂಖ್ಯೆಯನ್ನು ಎಸ್ಎಂಎಸ್ ಮೂಲಕ ಕಳುಹಿಸಬೇಕು.

SMS ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ನಿಮಗೆ VM-SEVSIN ಕರ್ನಾಟಕ ಸರ್ಕಾರದ ವತಿಯಿಂದ ನೀವು ಯಾವ ದಿನಾಂಕದಲ್ಲಿ ಯಾವ ಸಮಯಕ್ಕೆ ಯಾವ ಸ್ಥಳದಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಎಂಬ ಮೆಸೇಜ್ ಬರುತ್ತದೆ. ಒಂದು ವೇಳೆ ಮೆಸೇಜ್ ಬಾರದಿದ್ದರೆ ಅದು ಸರ್ವರ್ ಸಮಸ್ಯೆ ಆಗಿರುತ್ತದೆ, ಆದ್ದರಿಂದ ಮತ್ತೆ ನೀವು ಸಂದೇಶ ಕಳುಹಿಸಬೇಕು. ನಿಮಗೆ SMS ಮೂಲಕ ಯಾವ ಗ್ರಾಮದಲ್ಲಿ ಯಾವ ಕೇಂದ್ರದಲ್ಲಿ ಯಾವ ಸಮಯಕ್ಕೆ ಹೋಗಿ ಅರ್ಜಿ ಸಲ್ಲಿಸಬೇಕು ಎನ್ನುವ ಮಾಹಿತಿ ಬರುತ್ತದೆ.

ಮೆಸೇಜ್ ಕಳುಹಿಸಿದ್ರು ರಿಪ್ಲೈ ಬರುತ್ತಿಲ್ಲವಾ.? ಇಲ್ಲಿದೆ ಪರಿಹಾರ

ನಿಮ್ಮ ಮೆಸೇಜ್ ಗೆ ರಿಪ್ಲೈ ಬಂದಿಲ್ಲ ಎಂದರೆ ತಾಂತ್ರಿಕ ಸಮಸ್ಯೆಯಿಂದ ಹೀಗಾಗಿರಬಹುದು. ಗೃಹಲಕ್ಷ್ಮಿ ಯೋಜನೆಯ ಅಧಿಕೃತ ವೆಬ್ಸೈಟ್ https://sevasindhugs.karnataka.gov.in/ ಗೆ ಭೇಟಿ ನೀಡಿ ನಿಮ್ಮ ಪಡಿತರ ಚೀಟಿ ಸಂಖ್ಯೆ ಹಾಗೂ ಕ್ಯಾಪ್ಚಾ ನಮೂದಿಸಿ ನೀವು ಅರ್ಜಿ ಸಲ್ಲಿಸುವ ವೇಳಾಪಟ್ಟಿ ಚೆಕ್ ಮಾಡಿಕೊಳ್ಳಬಹುದು.

ಈಗ ಮೆಸೇಜ್ ಇಲ್ಲದೇ ಕೂಡ ಗೃಹಲಕ್ಷ್ಮಿಗೆ ಅರ್ಜಿ ಸಲ್ಲಿಸಬಹುದು :

SMS ಇಲ್ಲದೆ ಅರ್ಜಿ ಸಲ್ಲಿಸಿ ಪಡೆದ ಮಂಜೂರಾತಿ ಪತ್ರ

manjurati

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾದಾಗಿನಿಂದಲೂ ಅನೇಕ ಜನರಿಗೆ ಗೊತ್ತಿರುವಂತೆ ಮೆಸೇಜ್ ಮಾಡಿದ ನಂತರವೇ ಸರ್ಕಾರದಿಂದ ಕಳುಹಿಸಲಾದ ದಿನಾಂಕ ಹಾಗೂ ಸ್ಥಳಕ್ಕೆ ತೆರಳಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿಗೆ ಗ್ರಾಮವನ್ ಸರ್ಕಾರಿ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸುವವರು ತಿಳಿಸಿರುವಂತೆ ಮೆಸೇಜ್ ಮಾಡದಿದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಗೆ ಗ್ರಾಮವನ್ ನಲ್ಲಿ ಮಾತ್ರ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ಯಾವುದೇ ರೀತಿಯ ಘೋಷಣೆಯು ಹೊರಡದಿದ್ದರು ಕೂಡ, ಗ್ರಾಮ ಒನ್ ನವರು ನೀಡಿರುವ ಮಾಹಿತಿಯ ಪ್ರಕಾರ ಈಗಾಗಲೇ ಅವರು ಅನೇಕ ಅರ್ಜಿಗಳನ್ನು ಮೆಸೇಜ್ ಇಲ್ಲದೆ ಸಲ್ಲಿಸಿದ್ದಾರೆ. ನಿಮಗೆ ಏನಾದರೂ ಮೆಸೇಜ್ ಮಾಡಲು ಬಾರದಿದ್ದಲ್ಲಿ ಅಥವಾ ಮೆಸೇಜ್ ಮಾಡಿಯೂ ಕೂಡ ಸರ್ಕಾರದಿಂದ ಸ್ಥಳ ಮತ್ತು ದಿನಾಂಕದ ವೇಳಾಪಟ್ಟಿ ಬರದಿದ್ದರೆ ನೀವು ಗ್ರಾಮವನ್ಗೆ ಒಮ್ಮೆ ತೆರಳಿ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯನ್ನು ಮಾಡಿಸಿಕೊಂಡು ಅರ್ಜಿಯನ್ನು ಸಲ್ಲಿಸುವ  ಅವಕಾಶವಿದೆ.

ಗೃಹಲಕ್ಷ್ಮಿ ಯೋಜನೆಯ ನೋಂದಣಿಗೆ ಮಿತಿ ರದ್ದು :

ಗೃಹಲಕ್ಷ್ಮಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಲು ಶುರು ಮಾಡಿದ ಪ್ರಾರಂಭದ ದಿನಗಳಲ್ಲಿ, ದಿನಕ್ಕೆ ಒಂದು ಸರ್ಕಾರಿ ಕೇಂದ್ರದಲ್ಲಿ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿ ಇತ್ತು. ಒಂದು ಅರ್ಜಿಗಳಿಗಿಂತ ಜಾಸ್ತಿ ಅರ್ಜಿಗಳನ್ನು ಒಂದು ಸರ್ಕಾರಿ ಕೇಂದ್ರಗಳಲ್ಲಿ ಸ್ವೀಕರಿಸಿದರೆ, ಗೃಹಲಕ್ಷ್ಮಿ ಯೋಜನೆಯ ನೋಂದಣಿಯ ಸಿಬ್ಬಂದಿಗಳಿಗೆ ಹೊರೆ ಹೆಚ್ಚಾಗುತ್ತದೆ ಎಂದು ಈ ನಿರ್ಧಾರವನ್ನು ಸರ್ಕಾರ ಕೈಗೊಂಡಿತ್ತು. ಆದರೆ, ಒಂದು ಸರ್ಕಾರಿ ಕೇಂದ್ರದಲ್ಲಿ 60 ಕ್ಕಿಂತಲೂ ಹೆಚ್ಚಿನ ಮಹಿಳೆಯರು ಕ್ಯೂ ನಿಲ್ಲುತ್ತಿದ್ದರು. ಆದಕಾರಣ ಸರ್ಕಾರವು ಈ 60 ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುವುದು ಎಂಬ ಮಿತಿಯನ್ನು ರದ್ದುಗೊಳಿಸಿದೆ. ಈಗ ಒಂದು ಸರ್ಕಾರಿ ಕೇಂದ್ರದಲ್ಲಿ ಎಷ್ಟು ಅರ್ಜಿಯನ್ನು ಬೇಕಾದರೂ ಸಲ್ಲಿಸುವ ಅವಕಾಶವಿದೆ. ಅದಕ್ಕೆ ಮಿತಿ ಇಲ್ಲ.

ಗೃಹಲಕ್ಷ್ಮಿ ಯೋಜನೆ ನೊಂದಣಿ ವೇಳಾಪಟ್ಟಿಯನ್ನು ನೋಡುವ ವಿಧಾನ :

ಹಂತ 1: ಮೊದಲಿಗೆ ಗೃಹಲಕ್ಷ್ಮಿ ಯೋಜನೆಯ ಸೇವಾ ಸಿಂಧುವಿನ ಅಧಿಕೃತ ಜಾಲತಾಣಕ್ಕೆ ತೆರಳಲು ಇಲ್ಲಿ ಕ್ಲಿಕ್ ಮಾಡಿ. 

https://sevasindhugs1.karnataka.gov.in/gl-stat-sns/

rr1

ಹಂತ 2: ನಂತರ ನಿಮ್ಮ ಪಡಿತರ ಚೀಟಿ(Ration card)ಯ 12 ಸಂಖ್ಯೆಗಳನ್ನು ನಮೂದಿಸಬೇಕು. ಕ್ಲಿಯರ್ ಮಾಡಲು ಹಳದಿ ಕಲರ್ ಲೈನ್ ಅನ್ನು ಹಸಿರು ಲೈನಿನ್ ಮದ್ಯ ಭಾಗಕ್ಕೆ ತಂದು ನಿಲ್ಲಿಸಬೇಕು ನಂತರ Captcha ಕ್ಲಿಯರ್ ಆಗುತ್ತೆ.  ನಂತರ fetch RC details ಮೇಲೆ ಕ್ಲಿಕ್ ಮಾಡಿ

rr2

ಹಂತ 4: ನಂತರ ಪುಟದಲ್ಲಿ, ಗೃಹಲಕ್ಷ್ಮಿ ಯೋಜನೆಗೆ ನೊಂದಣಿಯನ್ನು ಮಾಡಿಕೊಳ್ಳಲು ಸ್ಥಳ, ದಿನಾಂಕ ಹಾಗೂ ಸಮಯವನ್ನು ನೀಡಲಾಗಿರುತ್ತದೆ.

rr3

ಈ ಸ್ಥಳ, ದಿನಾಂಕ ಹಾಗೂ ಸಮಯವನ್ನು ನೋಡಿಕೊಂಡು, ನೀವು ಬೇಕಾದ ದಾಖಲೆಗಳೊಂದಿಗೆ ನಿಗದಿತ ಸಮಯಕ್ಕೆ ತಿಳಿಸಲಾದ ಸರ್ಕಾರಿ ಕೇಂದ್ರಕ್ಕೆ ತೆರಲಿ ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ಮಾಡಿಕೊಳ್ಳಬಹುದಾಗಿದೆ. ಅಷ್ಟೇ ಅಲ್ಲದೆ ಆಗಸ್ಟ್ ತಿಂಗಳಿನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಕೂಡ ಹಣವು ಜಮಾ ಆಗಲಿದೆ.  ಹೀಗೆ ನೀವು ಮೇಲಿನ ಹಂತಗಳನ್ನು ಪರಿಶೀಲಿಸಿಕೊಂಡು ಗೃಹಲಕ್ಷ್ಮಿ ಯೋಜನೆ ನೋಂದಣಿಯ ವೇಳಾಪಟ್ಟಿಯ ವಿವರವನ್ನು ತಿಳಿದುಕೊಳ್ಳಬಹುದಾಗಿದೆ.

 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!