ಗೃಹಲಕ್ಷ್ಮಿ ಅರ್ಜಿ ಜೊತೆ ದಾಖಲೆ ಕೊಟ್ರು 10 ಲಕ್ಷ ಮಂದಿಗೆ ಸಿಕ್ಕಿಲ್ಲ ಹಣ, ನಿಮಗೂ ಹಣ ಬಂದಿಲ್ವಾ?? ಇಲ್ಲಿದೆ ವಿವರ

10 lakh womens not received gruhalakshmi money

ಎಲ್ಲರಿಗೂ ನಮಸ್ಕಾರ. ಇವತ್ತಿನ ವರದಿಯಲ್ಲಿ, ಗೃಹ ಲಕ್ಷ್ಮಿ ಯೋಜನೆಯ ಹಣ ತಡೆ ಆಗಿ ನಿಂತಿರುವ(Gruha laxmi Scheme Problem ) ಬಗ್ಗೆ ಮಾಹಿತಿಯನ್ನು ನೀಡಲಾಗುತ್ತದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಇತ್ತೀಚೆಗೆ ಮಹಿಳೆಯರ ಸಬಲೀಕರಣ ಮತ್ತು ಲಿಂಗ ಸಮಾನತೆಯನ್ನು ಉತ್ತೇಜಿಸುವ ಉದ್ದೇಶದಿಂದ ಗೃಹಲಕ್ಷ್ಮಿ ಯೋಜನೆ(Gruhalakshmi scheme) ಪ್ರಾರಂಭಿಸಿರುವುದು ತಮಗೆಲ್ಲ ತಿಳಿದಿರುವ ವಿಷಯ. ಅದರಂತೆಯೇ ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತವು ಬಂದ ಮೇಲೆ ತನ್ನ ಗ್ಯಾರೆಂಟಿ ಯೋಜನೆಯನ್ನು ಆಡಳಿತಕ್ಕೆ ತಂದಿದೆ. ಅದರಲ್ಲಿ ಗೃಹ ಲಕ್ಷ್ಮಿ ಯೋಜನೆಯು ಒಂದು ಆಗಿದೆ. ಈ ಯೋಜನೆ ಅಡಿಯಲ್ಲಿ ಕುಟುಂಬದ ಮಹಿಳೆಗೆ ತಿಂಗಳಿಗೆ 2,000 ರೂಪಾಯಿಗಳನ್ನು ನೀಡುವ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿದೆ ಎಂದು ಈಗಾಗಲೇ ನಿಮಗೆ ಎಲ್ಲಾ ತಿಳಿದೇ ಇದೆ. ಮತ್ತು ಸರ್ಕಾರವು ಗೃಹ ಲಕ್ಷ್ಮಿ ಯೋಜನೆಯ ಮೊದಲು ಕಂತಿನ ಹಣವನ್ನು ಆಗಸ್ಟ್ 30 ರಿಂದ ಪ್ರತಿ ಗ್ರಹಣೀಯರಿಗೆ ಕೊಡಲು ಸರ್ಕಾರ ಆರಂಭಿಸಿದ್ದು ಸಾಕಷ್ಟು ಗೃಹಣಿಯರ ಖಾತೆಗೆ ಹಣ ಜಮೆ ಆಗಿದೆ. ಆದರೆ ಕೆಲವು ಗೃಹಣಿಯರಿಗೆ, ಮೊದಲಿನ ಕಂತಿನ ಹಣ ಜಮಾ ಆಗಿ ಎರಡು ತಿಂಗಳುಗಳು ಕಳೆದರೂ 2ನೇ ಕಂತಿನ ಹಣ ಬಂದಿಲ್ಲ ಎಂದು ನಿರಾಶೆ ವ್ಯಕ್ತ ಪಡಿಸಿದ್ದಾರೆ

ನಿಮಗೆ ಗೃಹಲಕ್ಷ್ಮಿಯ ಎರಡನೇ ಕಂತಿನ ಹಣ ಬಂತ?:

ಸರ್ಕಾರ ಈಗಾಗಲೇ ತಿಳಿಸಿರುವಂತೆ ಸೆಪ್ಟೆಂಬರ್ ತಿಂಗಳ ಕೊನೆಯವರೆಗೆ ಪ್ರತಿಯೊಬ್ಬ ಫಲಾನುಭವಿ ಗೃಹಣಿಯ ಖಾತೆಗೆ 2,000 ಜಮಾ ಆಗುತ್ತದೆ ಎಂದು ಹೇಳಿದರು, ಏನಾದರೂ ಒಂದು ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ಕಂತಿನ ಹಣ ಜಾಮ ಆಗದಿದ್ದರೆ ಅಂತವರಿಗೆ ಎರಡು ಕಂತಿನ ಹಣ, ಅಂದರೆ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನ ಹಣ 4000 ರೂ ಒಟ್ಟಿಗೆ ಅಕ್ಟೋಬರ್ 30 ಒಳಗೆ ಜಮಾ ಮಾಡಲಾಗುತ್ತದೆ ಎಂದು ಸರ್ಕಾರ ಸೂಚನೆ ನೀಡಿತ್ತು.

ಆದರೆ ರಾಜ್ಯ ಸರ್ಕಾರದ ಗೃಹಲಕ್ಷ್ಮೀ ಯೋಜನೆಯ ನೋಂದಣಿಯಾಗಿದ್ದವರ ಪೈಕಿ 10 ಲಕ್ಷ ಮಹಿಳೆಯರಿಗೆ ಇನ್ನೂ ಯಾವುದೇ ಹಣ ವರ್ಗಾವಣೆಯಾಗಿಲ್ಲ ಎಂದು ತಿಳಿದು ಬಂದಿದೆ. ಈ ಬಗ್ಗೆ ಸರ್ಕಾರ ಯಾವುದೇ ನಿಗಾವಹಿಸುತ್ತಿಲ್ಲ. ಮತ್ತು ಮಹಿಳೆಯರಿಗೆ ಆಸೆ ತೋರಿಸಿ ಕೈಕೊಡುತ್ತಿರುವ ಸರ್ಕಾರದ ವಿರುದ್ಧ ಮಹಿಳೆಯರು ಬೇಸರಗೊಂಡಿದ್ದಾರೆ ಎಂದೇ ಹೇಳಬಹುದಾಗಿದೆ.

ಅರ್ಜಿ ಸಲ್ಲಿಕೆಯಲ್ಲಿ ಯಾವುದೇ ದೋಷವಿಲ್ಲ. ನಿಮ್ಮ ಹೆಸರನ್ನು ಅನುಮೋದಿಸಲಾಗಿದೆ. ಎರಡು ಸಾವಿರ ರೂ. ಪಡೆಯಲು ಅರ್ಹರಾಗಿದ್ದೀರಿ,ಹೀಗೆ ಸಂದೇಶ ಬಂದು ಎರಡು ತಿಂಗಳಾದರೂ ಗೃಹಲಕ್ಷ್ಮಿ ಹಣ ಮಾತ್ರ ಬಂದಿಲ್ಲಾ ಮತ್ತು ಇದರ ಬಗ್ಗೆ ವಿಚಾರಣೆ ಮಾಡಿದಾಗ, ಎಲ್ಲವೂ ಸರಿಯಿದ್ದು ತಾಂತ್ರಿಕ ದೋಷಗಳಿಂದ ಬಂದಿಲ್ಲವೆಂದು ಅಥವಾ ಆಧಾರ್‌ ಜೋಡಣೆಯಾಗಿಲ್ಲ ಎಂದು ಏಕ ಉತ್ತರ ಬರುತ್ತಿದೆ.

ಗೃಹಲಕ್ಷ್ಮಿ ಹಣ ಬರದಿದ್ದ ಕಾರಣ ಗೃಹಿಣಿಯರ ಆಕ್ರೋಶ :

ಎಲ್ಲಾ ದಾಖಲೆಗಳು ಸರಿಯಾಗಿಲ್ಲದಿದ್ದರೆ ದೃಢೀಕರಣದ ಸಂಖ್ಯೆ, ಸಂದೇಶ (Confirmation Messages)ಏಕೆ ಬರುತ್ತದೆ? ಕೆಲವು ಗೃಹನಿಯರಿಗೆ ಹಣ ಕೊಟ್ಟಂತೆ ಕೊಟ್ಟು, ಇತರರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡುತ್ತಿದೆ ಸರಕಾರ ಎಂದು ಯೋಜನೆ ವಂಚಿತ ಮಹಿಳಾ ವಲಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು 10 ಲಕ್ಷ ಮಂದಿ ನೋಂದಾಯಿತರಿಗೆ ಹಣ ಹಾಕದೆ ತಾಂತ್ರಿಕ ದೋಷ ಮತ್ತು ದಾಖಲೆಗಳು ಸರಿಯಾಗಿಲ್ಲಎಂದು ಸರಕಾರ ನೆಪ ಹೇಳುತ್ತಿದೆ ಎಂದು ಆರೋಪಿಸಿವುದರ ಜೊತೆಗೆ ನೋಂದಣಿಯಾದ ಗೃಹಲಕ್ಷ್ಮಿ ಯೋಜನೆಗೆ ದೃಢೀಕರಣಕ್ಕೆ ಬೆಲೆ ಇಲ್ಲವೇ ಎಂದು ಮಹಿಳೆಯರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿರುವುದು ಬೇಸರದ ಸಂಗತಿ ಎಂದು ಹೇಳಬಹುದಾಗಿದೆ.

ಇವೆಲ್ಲಾ ಆಗು ಹೋಗುಗಳ ನಡುವೆ ಆರ್ಥಿಕವಾಗಿ ಹಿಂದುಳಿದ ಸಾಕಷ್ಟು ಮಹಿಳೆಯರಿಗೆ ಸರಕಾರದಿಂದ ಮಾಸಿಕ 2 ಸಾವಿರ ರೂ. ಪಡೆಯುವ ಭಾಗ್ಯ ಇನ್ನುವರೆಗು ಸಿಗುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

whatss

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

tel share transformed 

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!