Gold Rate Today : ಚಿನ್ನದ ಬೆಲೆಯಲ್ಲಿ ಸತತ ಅಚ್ಚರಿಯ ಏರಿಕೆ.! ಇಂದು ಚಿನ್ನ ಬೆಳ್ಳಿ ರೇಟ್ ಎಷ್ಟಿದೆ.?

IMG 20250522 WA0023

WhatsApp Group Telegram Group

ಮೇ 23, 2025ರ ಚಿನ್ನದ ದರ ದಾಖಲೆ ಮಟ್ಟಕ್ಕೆ: ಗ್ರಾಹಕರ ನಿರೀಕ್ಷೆಗೆ ಬೃಹತ್ ಹೊಡೆತ

ಭಾರತದ ಚಿನ್ನದ ಮಾರುಕಟ್ಟೆಯಲ್ಲಿ ಇತ್ತೀಚಿನ ಬೆಳವಣಿಗೆಗಳು ಚಿನ್ನಾಸಕ್ತರ ಮನೋಭಾವಕ್ಕೆ ಭಾರಿ ಹೊಡೆತ ನೀಡಿವೆ. ಇತ್ತೀಚೆಗೆ ಚಿನ್ನದ ದರ ದಿಢೀರ್ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಗ್ರಾಹಕರ ನಿರೀಕ್ಷೆಗಳಿಗೆ ಪೆಟ್ಟುಬಿದ್ದಂತಾಗಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆಯಲ್ಲಿ ಗಣನೀಯ ಏರಿಕೆಯಾಗುತ್ತಿದ್ದು, ಇಂದು ಕೂಡ ಬೆಲೆ ಏರಿಕೆಯಾಗಿದೆ. ವಿಶೇಷವಾಗಿ 24 ಕ್ಯಾರಟ್ ಚಿನ್ನದ ದರ ಇಂದು ₹4,900ರಷ್ಟು ಏರಿಕೆಯಾಗಿ ಹೊಸ ದಾಖಲೆಗೆ ಏರಿದೆ. ಇಂತಹ ಬೆಳವಣಿಗೆ ಹೂಡಿಕೆದಾರರಲ್ಲು ಗೊಂದಲವನ್ನುಂಟುಮಾಡಿದ್ದು, “ಇದು ಇನ್ನೂ ಹೆಚ್ಚಾಗಬಹುದೆ?” ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.ಹಾಗಿದ್ದರೆ ಇಂದಿನ ಚಿನ್ನದ ಬೆಲೆ(Gold price) ಎಷ್ಟಿದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನ-ಬೆಳ್ಳಿ (Gold and silver ) ಬೆಲೆ ಇಂದು, ಮೇ 23, 2025: Gold Price Today

ಹೌದು, ಚಿನ್ನ ಖರೀದಿಸುವವರಿಗೆ ನಿನ್ನೆಯಿಂದ ಭಾರಿ ನಿರಾಸೆಯಾಗುತ್ತಿದೆ. ಇಳಿಕೆಯತ್ತ ಮುಖ ಮಾಡಿದ್ದಂತ ಚಿನ್ನದ ದರ ನಿನ್ನೆಯಿಂದ ದಿಡೀರ್ ಏರಿಕೆಯಾಗುತ್ತಿದೆ. ಈ ರೀತಿಯ ಧರ ಏರಿಕೆಯಿಂದ ಗ್ರಾಹಕರು ಕೊಂಚ ಗೊಂದಲದಲ್ಲಿದ್ದಾರೆ. ಹಾಗಿದ್ದರೆ, ಮೇ 23, 2025ರಂದು ಚಿನ್ನದ ಬೆಲೆಯಲ್ಲಿ (Gold rate) ಯಾವ ರೀತಿಯ ಬದಲಾವಣೆಗಳು (Changes) ಆಗಿವೆ ಎಂಬುದನ್ನು ನೋಡೋಣ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹8,976 ಆಗಿದ್ದು, 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹9,792 ಆಗಿದ್ದು, 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹7,345 ಆಗಿದೆ. ಒಟ್ಟಾರೆಯಾಗಿ, 49 ರೂ. ನಷ್ಟು ಏರಿಕೆಯನ್ನು ಕಂಡಿದೆ. ಇನ್ನು,10 ಗ್ರಾಂ ಬೆಳ್ಳಿ ಬೆಲೆ:,1,00,100 ರೂ. ನಷ್ಟಿದೆ.

ಚಿನ್ನದ ಬೆಲೆಯಲ್ಲಿನ ಈ ಬದಲಾವಣೆ ಹಿಂದೆ ಜಾಗತಿಕ ರಾಜಕೀಯ ಅನಿಶ್ಚಿತತೆ, ಜಿಯೋಪಾಲಿಟಿಕಲ್ ಒತ್ತಡಗಳು, ಅಮೆರಿಕದ ಆರ್ಥಿಕ ನೀತಿಗಳು ಹಾಗೂ ರೂಪಾಯಿಯ ಮೌಲ್ಯ ಕುಸಿತ ಪ್ರಮುಖ ಕಾರಣಗಳೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಚಿನ್ನವನ್ನು ಸಂಕುಚಿತ ಆರ್ಥಿಕ ಸ್ಥಿತಿಗತಿಯಲ್ಲೂ ಭದ್ರ ಹೂಡಿಕೆಯೆಂದು ಪರಿಗಣಿಸುವ ಹೂಡಿಕೆದಾರರ ಬೆಲೆಗೆ ನಿರಂತರ ಬಲ ನೀಡುತ್ತಿದೆ. ಅಮೆರಿಕದ ಟ್ರೆಜರಿ ಬಾಂಡ್‌ಗಳ ಮೇಲಿನ ಕಡಿಮೆ ಬೇಡಿಕೆ ಮತ್ತು ಬಡ್ಡಿದರ ಕುಸಿತವು ಕೂಡ ಚಿನ್ನದ ಮೇಲಿನ ಹೂಡಿಕೆಯನ್ನು ಉತ್ತೇಜಿಸಿದೆ.

ಮೇ 22, 2025ರ ಚಿನ್ನದ ದರ ಎಷ್ಟು?:

22 ಕ್ಯಾರಟ್ ಚಿನ್ನ:
ಪ್ರತಿ ಗ್ರಾಂ: ₹8,975
10 ಗ್ರಾಂ: ₹89,750
100 ಗ್ರಾಂ: ₹8,97,500
ಏರಿಕೆ: ₹450 (10 ಗ್ರಾಂಗೆ)

24 ಕ್ಯಾರಟ್ ಚಿನ್ನ:
ಪ್ರತಿ ಗ್ರಾಂ: ₹9,791
10 ಗ್ರಾಂ: ₹97,910
100 ಗ್ರಾಂ: ₹9,79,100
ಏರಿಕೆ: ₹4,900 (100 ಗ್ರಾಂಗೆ)

18 ಕ್ಯಾರಟ್ ಚಿನ್ನ:
ಪ್ರತಿ ಗ್ರಾಂ: ₹7,344
10 ಗ್ರಾಂ: ₹73,440
100 ಗ್ರಾಂ: ₹7,34,400
ಏರಿಕೆ: ₹3,700 (100 ಗ್ರಾಂಗೆ)

ವಿಭಿನ್ನ ನಗರಗಳಲ್ಲಿ 1 ಗ್ರಾಂ ಚಿನ್ನದ ಬೆಲೆ ಯಾವರೀತಿಯಾಗಿದೆ?:

1 ಗ್ರಾಂ 24k ಬೆಲೆ ಹೀಗಿದೆ,
ಚೆನ್ನೈ₹9,791₹
ಮುಂಬೈ :₹9,791₹
ದೆಹಲಿ:₹9,806₹
ಕೋಲ್ಕತಾ:₹9,806
ಬೆಂಗಳೂರು: ₹9,806₹
ಹೈದರಾಬಾದ್:₹9,806
ಕೇರಳ:₹9,806
ಪುಣೆ:₹9,806
ಬರೋಡಾ+₹9,796
ಅಹಮದಾಬಾದ್:₹9,796

1 ಗ್ರಾಂ 22k ಬೆಲೆ ಹೀಗಿದೆ,

ಚೆನ್ನೈ:₹8,975
ಮುಂಬೈ: ₹8,975
ದೆಹಲಿ:₹8,990
ಕೋಲ್ಕತಾ: ₹8,990
ಬೆಂಗಳೂರು:₹8,990
ಹೈದರಾಬಾದ್: ₹8,990
ಕೇರಳ:₹8,990
ಪುಣೆ:₹8,990
ಬರೋಡಾ:₹8,980
ಅಹಮದಾಬಾದ್:₹8,980

1 ಗ್ರಾಂ 18k ಬೆಲೆ ಹೀಗಿದೆ,
ಚೆನ್ನೈ: ₹7,395
ಮುಂಬೈ:₹7,344
ದೆಹಲಿ:₹7,356
ಕೋಲ್ಕತಾ:₹7,356
ಬೆಂಗಳೂರು:₹7,356
ಹೈದರಾಬಾದ್:₹7,356
ಕೇರಳ:₹7,356
ಪುಣೆ: ₹7,356
ಬರೋಡಾ:₹7,348
ಅಹಮದಾಬಾದ್:₹7,348

ಬೆಳ್ಳಿ ಬೆಲೆಯಲ್ಲಿಯೂ ಏರಿಕೆ:
ಪ್ರತಿ ಗ್ರಾಂ ಬೆಳ್ಳಿ: ₹101
10 ಗ್ರಾಂ: ₹1,010
100 ಗ್ರಾಂ: ₹10,100
1 ಕೆ.ಜಿ: ₹1,01,000
ಏರಿಕೆ: ₹1,000 (1 ಕೆ.ಜಿ)

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸ್ಪಾಟ್ ಚಿನ್ನದ ಸ್ಥಿತಿ ಹೀಗಿದೆ:

ಮೇ 22 ರಂದು ಸ್ಪಾಟ್ ಚಿನ್ನದ ಬೆಲೆ ಪ್ರತಿ ಔನ್ಸ್‌ಗೆ $3,330.54 ತಲುಪಿದ್ದು, ಇದು 0.50%ರಷ್ಟು ಏರಿಕೆಯಾಗಿದೆ. ಅಮೆರಿಕದ ಸಾಲದ ಪ್ರಮಾಣದ ಗಂಭೀರತೆ ಮತ್ತು ಇತರ ಆರ್ಥಿಕ ಒತ್ತಡಗಳು ಈ ಬೆಲೆ ಏರಿಕೆಗೆ ಕಾರಣವಾಗಿವೆ.

ಚಿನ್ನದ ದರ ಏರಿಕೆಗೆ ಕಾರಣವೇನು?:

1. ಆರ್ಥಿಕ ಅಸ್ಥಿರತೆ: ಜಾಗತಿಕ ಮಾರುಕಟ್ಟೆಯ ಸ್ಥಿತಿ ಗಂಭೀರವಾಗಿರುವಾಗ ಹೂಡಿಕೆದಾರರು ಚಿನ್ನವನ್ನು ಶ್ರೇಷ್ಠವಾಗಿ ಪರಿಗಣಿಸುತ್ತಾರೆ.
2. ಜಿಯೋಪಾಲಿಟಿಕಲ್ ಒತ್ತಡಗಳು: ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಗಳು ಹಾಗೂ ಜಾಗತಿಕ ರಾಜಕೀಯ ಸಂಕಷ್ಟಗಳು.
3. ರೂಪಾಯಿ ಮೌಲ್ಯ ಕುಸಿತ: ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದರೆ, ಚಿನ್ನದ ದರ ಭಾರತದ ಒಳಗಿನ ಮಾರುಕಟ್ಟೆಯಲ್ಲಿ ಜಾಸ್ತಿಯಾಗುತ್ತದೆ.
4. ಬಡ್ಡಿದರಗಳ ಬದಲಾವಣೆ: ಅಮೆರಿಕದ ಫೆಡ್ ಅಥವಾ ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿದರ ಇಳಿಸಿದರೆ, ಬಾಂಡ್‌ಗಿಂತ ಚಿನ್ನ ಹೂಡಿಕೆಗೆ ಹೆಚ್ಚು ಆಸಕ್ತಿಯನ್ನು ಹುಟ್ಟುಹಾಕುತ್ತದೆ.
5. ಚಿನ್ನ ಉತ್ಪಾದನೆ ಕಡಿಮೆಯಾದಾಗ: ಬೇಡಿಕೆ ಹೆಚ್ಚಿದಾಗ ಮತ್ತು ಪೂರೈಕೆ ಕಡಿಮೆಯಾದಾಗ ದರಗಳಲ್ಲಿ ತಕ್ಷಣ ಪ್ರಭಾವ ಬೀರುತ್ತದೆ.

ಚಿನ್ನದ ಮೌಲ್ಯದಲ್ಲಿ ಇತ್ತೀಚಿನ ಈ ದಿಢೀರ್ ಏರಿಕೆ ದೇಶದ ಹೂಡಿಕೆದಾರರಲ್ಲಿ ಹವ್ಯಾಸಿಗಳಿಂದ ವೃತ್ತಿಪರ ಹೂಡಿಕೆದಾರರ ತನಕ ವ್ಯಾಪಕ ಕುತೂಹಲ ಮತ್ತು ಆತಂಕ ಹುಟ್ಟುಹಾಕಿದೆ. ಬೆಲೆಯು ಇನ್ನು ಏರಿಕೆಯಾಗಬಹುದು ಎಂಬ ನಿರೀಕ್ಷೆಯ ನಡುವೆ, ಈ ಮಟ್ಟದಲ್ಲಿಯೇ ಖರೀದಿಸುವುದು ಲಾಭಕರವೇ ಅಥವಾ ಕಾದು ನೋಡಬೇಕೇ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ, ಈ ಸಮಯದಲ್ಲಿ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ತಜ್ಞರ ಸಲಹೆ ಪಡೆದು, ಮಾರುಕಟ್ಟೆಯ ಸಮಗ್ರ ವಿಶ್ಲೇಷಣೆ ಮಾಡುವುದು ಅತ್ಯವಶ್ಯಕವಾಗಿದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!