ಚಿನ್ನದ ದರ(gold prices)ದಲ್ಲಿ ಭಾರೀ ಕುಸಿತ,ದುಬೈನಲ್ಲಿ ಚಿನ್ನ ಖರೀದಿಸಲು ಉತ್ತಮ ಸಮಯ. ಇಂದಿನ ಚಿನ್ನದ ಬೆಲೆ ಎಷ್ಟು ಎಂದು ತಿಳಿಯಬೇಕೆ?, ಹಾಗಿದ್ದರೆ ಈ ವರದಿಯನ್ನು ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಬಂಗಾರದ ಬೆಳಕಿನಲ್ಲಿ ಮಿನುಗುವ ದುಬೈ(Dubai), ಚಿನ್ನದ ಖರೀದಿಗೆ ಸ್ವರ್ಗವೇ ಸರಿ. ದುಬೈನಲ್ಲಿ ಚಿನ್ನದ ಬೆಲೆ ಭಾರತಕ್ಕಿಂತ ಗಣನೀಯವಾಗಿ ಕಡಿಮೆ. ಈ ಕಾರಣಕ್ಕಾಗಿ, ಚಿನ್ನದ ಖರೀದಿಗೆ ದುಬೈ ಒಂದು ಸ್ವರ್ಗವಾಗಿದೆ. ದುಬೈನಲ್ಲಿ ನೀವು ವಿಶ್ವದ ಅತ್ಯಂತ ಭವ್ಯವಾದ ಚಿನ್ನದ ಅಂಗಡಿಗಳನ್ನು ಕಾಣಬಹುದು. ಅಲ್ಲಿಯ ಚಿನ್ನದ ಆಭರಣಗಳ ವಿನ್ಯಾಸಗಳು ಅನನ್ಯ ಮತ್ತು ವೈವಿಧ್ಯಮಯವಾಗಿವೆ. ಒಟ್ಟಾರೆ, ದುಬೈ ಖರೀದಿಯ ಮಾಡುವವರಿಗೆ ಸ್ವರ್ಗವಾಗಿದೆ. ಚಿನ್ನದ ಖರೀದಿಯ ಜೊತೆಗೆ, ನೀವು ಇಲ್ಲಿ ಶಾಪಿಂಗ್, ಊಟ, ಪ್ರವಾಸೋದ್ಯಮ ಮತ್ತು ಇನ್ನೂ ಹೆಚ್ಚಿನದನ್ನು ಆನಂದಿಸಬಹುದು.
ಚಿನ್ನ ಖರೀದಿಗೆ ದುಬೈ ಸೂಕ್ತ:
ದುಬೈ ಚಿನ್ನದ ಖರೀದಿಗೆ ಖ್ಯಾತವಾಗಿದೆ. ಏಕೆಂದರೆ, ದುಬೈನಲ್ಲಿ ಚಿನ್ನ(gold), ಬೆಳ್ಳಿ(silver), ಪ್ಲಾಟಿನಂ(platinum)ಮತ್ತು ರತ್ನ ಕಲ್ಲುಗಳು(gemstones) ಅತ್ಯಂತ ಶುದ್ಧವಾದ ಎಂದು ನಂಬಲಾಗಿದೆ. ದುಬೈನಲ್ಲಿ ಚಿನ್ನದ ಬಾರ್ ಮತ್ತು ಆಭರಣಗಳ ಮೇಲೆ ಪ್ರಮಾಣೀಕೃತ ಹಾಲ್ಮಾರ್ಕ್ (Hallmark) ಇರುತ್ತದೆ. ಇದು ಶುದ್ಧತೆಯ ಭರವಸೆ ನೀಡಿದೆ. ದುಬೈ ಚಿನ್ನದ ವ್ಯಾಪಾರದಲ್ಲಿ ದೀರ್ಘಕಾಲದ ಖ್ಯಾತಿಯನ್ನು ಹೊಂದಿದೆ. ಗ್ರಾಹಕರು ಖರೀದಿಸುವ ಚಿನ್ನ ಶುದ್ಧವಾಗಿದೆ ಎಂಬ ನಂಬಿಕೆ ಇದೆ.

ದುಬೈನಲ್ಲಿ ಚಿನ್ನದ ಖರೀದಿ ತೆರಿಗೆ ಮುಕ್ತ(tax free) ವಾಗಿರುತ್ತದೆ, ಹಾಗಾಗಿ ಭಾರತೀಯರು ದುಬೈಗೆ ಭೇಟಿ ನೀಡಲು ಚಿನ್ನ ಖರೀದಿ ಪ್ರಮುಖವಾಗಿದೆ. ದುಬೈನಲ್ಲಿ ಭಾರತೀಯರು ತೆರಿಗೆ ಮುಕ್ತವಾಗಿ ಚಿನ್ನ ಖರೀದಿಸಬಹುದು. ಅಂದರೆ, ನೀವು ಖರೀದಿಸುವ ಚಿನ್ನದ ಮೇಲೆ ಯಾವುದೇ ವ್ಯಾಟ್(VAT)ಅಥವಾ ಇತರ ತೆರಿಗೆಗಳು ಲೆಕ್ಕವಿಲ್ಲ. ಚಿನ್ನದ ಹೂಡಿಕೆಯ ಒಟ್ಟಾರೆ ವೆಚ್ಚದಲ್ಲಿ ಗಣನೀಯ ಪ್ರಮಾಣದ ಹಣವನ್ನು ಉಳಿಸಬಹುದು.
ಭಾರತದಲ್ಲಿ ಮೇಲಿನ ತೆರಿಗೆ ಭಾರೀ, ಚಿನ್ನದ ಮೂಲ ಬೆಲೆಗಿಂತ ಹೆಚ್ಚಿನ ಹಣ ತೆತ್ತು ಖರೀದಿಸಬೇಕಾದ ಸ್ಥಿತಿ. ದುಬೈಗೆ ಭೇಟಿ ನೀಡುವ ಭಾರತೀಯರು ಚಿನ್ನವನ್ನು ಖರೀದಿಸುವುದನ್ನು ಒಂದು ಖಾಸಗಿ ಕೆಲಸವಾಗಿ ಮಾಡಿಕೊಳ್ಳುತ್ತಾರೆ. ಏಕೆಂದರೆ ದುಬೈನಲ್ಲಿ ಚಿನ್ನಕ್ಕೆ ಯಾವುದೇ ತೆರಿಗೆ ಇಲ್ಲ. ಹಾಗಂತ ದುಬೈನಿಂದ ನೀವು ಮನಸೋಯಿಚ್ಛೆ ಚಿನ್ನ ತರಲು ಆಗುವುದಿಲ್ಲ. ಕೆಲ ಮಿತಿ, ನಿರ್ಬಂಧಗಳಿವೆ.
ತೆರಿಗೆ ಮುಕ್ತ ಚಿನ್ನ ಖರೀದಿ:
ದುಬೈ ಚಿನ್ನ ಖರೀದಿಸಲು ಸ್ವರ್ಗ, ವ್ಯಾಟ್ ಅಥವಾ ಮಾರಾಟ ತೆರಿಗೆ ಇಲ್ಲದೆ ಕಡಿಮೆ ಬೆಲೆಯಲ್ಲಿ ಚಿನ್ನವನ್ನು ಖರೀದಿಸಬಹುದು. ಆದರೆ, ಭಾರತಕ್ಕೆ ಎಷ್ಟು ಚಿನ್ನ ತರಬಹುದು ಎಂಬುದಕ್ಕೆ ಮಿತಿ ಇದೆ.

ಪುರುಷರು(Mens): ನೀವು ₹50,000 ಮೌಲ್ಯದ 20 ಗ್ರಾಂ ಚಿನ್ನವನ್ನು ಖರೀದಿಸಿ ತರಬಹುದು.
ಮಹಿಳೆಯರು(womens): ನೀವು ₹1,00,000 ಮೌಲ್ಯದ 40 ಗ್ರಾಂ ಚಿನ್ನವನ್ನು ಖರೀದಿಸಿ ತರಬಹುದು.
18 ವರ್ಷದೊಳಗಿನ ಮಕ್ಕಳಿಗೆ ಯಾವುದೇ ಮಿತಿಯಿಲ್ಲ. ಒಂದು ವರ್ಷಕ್ಕೂ ಹೆಚ್ಚು ಕಾಲ ವಿದೇಶದಲ್ಲಿ ವಾಸಿಸುತ್ತಿರುವ ಭಾರತೀಯ ನಿವಾಸಿಗಳು 38.5% ಕಸ್ಟಮ್ಸ್ ಸುಂಕವನ್ನು(Custom Duty)ಪಾವತಿಸುವ ಮೂಲಕ 50 ಗ್ರಾಂ (ಪುರುಷರು) ಅಥವಾ 100 ಗ್ರಾಂ ಚಿನ್ನ (ಮಹಿಳೆಯರು) ಮರಳಿ ತರಬಹುದು.
ಇಂದು ದುಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ ಎಷ್ಟು?
ದುಬೈ ಚಿನ್ನದ ಬೆಲೆ ಭಾರತಕ್ಕೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿರುತ್ತದೆ. 22 ಕ್ಯಾರೆಟ್ ಚಿನ್ನದ 10 ಗ್ರಾಂ (10 grams of 22 carat gold)ಬೆಲೆ 54,896 ರೂಪಾಯಿಗಳು ಮತ್ತು 24 ಕ್ಯಾರೆಟ್ ಚಿನ್ನದ 10 ಗ್ರಾಂ(10 grams of 24 carat gold) ಬೆಲೆ 59,240 ರೂಪಾಯಿಗಳು. ಭಾರತದಲ್ಲಿ ಚಿನ್ನದ ಬೆಲೆ ಇದಕ್ಕಿಂತ ಹೆಚ್ಚು.
ದುಬೈನಲ್ಲಿ ಯಾವುದೇ ವ್ಯಾಟ್ ಅಥವಾ ಮಾರಾಟ ತೆರಿಗೆಯಿಲ್ಲದೆ ಕಡಿಮೆ ಬೆಲೆಯಲ್ಲಿ ಚಿನ್ನ ಖರೀದಿಸುವುದು ನಿಜ. ಆದರೆ, ಭಾರತಕ್ಕೆ ಮರಳುವಾಗ, ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಸುಂಕವನ್ನು ಪಾವತಿಸಬೇಕಾಗುತ್ತದೆ( Custom duty has to be paid in Airport).
ಇಂದು ಭಾರತದಲ್ಲಿ ಚಿನ್ನದ ಬೆಲೆ ಎಷ್ಟು?
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ : 22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 60,590 ರೂ. 24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 66,100ರೂ. ಬೆಳ್ಳಿ ಬೆಲೆ 1 ಕೆಜಿ: 76,900 ರೂ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ಲೋಕಸಭಾ ಚುನಾವಣೆ ದಿನಾಂಕ ಘೋಷಣೆ! ಇಲ್ಲಿದೆ ಮಾಹಿತಿ
- ಸೋಲಾರ್ ಪಂಪ್ ಸೆಟ್ ಖರೀದಿಗೆ 50% ಸಬ್ಸಿಡಿ ವಿತರಣೆಗೆ ಅರ್ಜಿ ಅಹ್ವಾನ. ಇಲ್ಲಿದೆ ಅರ್ಜಿ ಲಿಂಕ್
- ಉಚಿತ ಆಧಾರ್ ಕಾರ್ಡ್ ತಿದ್ದುಪಡಿ ಡೆಡ್ಲೈನ್ ವಿಸ್ತರಣೆ, ಮತ್ತೆ 3 ತಿಂಗಳು ಅವಕಾಶ
- ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ; ದಾವಣಗೆರೆಗೆ ಶ್ರೀಮತಿ ಗಾಯತ್ರಿ ಸಿದ್ದೇಶ್ವರ..! ಪ್ರತಾಪ್ ಸಿಂಹಗೆ ತಪ್ಪಿದ ಟಿಕೆಟ್
- ಗೃಹಲಕ್ಷ್ಮಿ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಬಿಡುಗಡೆ, 2000/- ಹಣ ಬರದೇ ಇದ್ದವರು ಹೀಗೆ ಮಾಡಿ!
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






