Picsart 25 11 02 23 35 55 138 scaled

ತೆಂಗಿನಕಾಯಿ ಚಿಪ್ಪಿಗೂ ಬಂಪರ್ ಬೇಡಿಕೆ: ಕೆಜಿಗೆ 22 ರೂ. ದರ, ಗ್ರಾಮೀಣ ಮನೆಗಳಿಗೆ ಹೊಸ ಆದಾಯದ ದಾರಿ 

Categories: ,
WhatsApp Group Telegram Group

ಭಾರತದಲ್ಲಿ ಕಲ್ಪವೃಕ್ಷ ಎಂದು ಕರೆಯಲ್ಪಡುವ ತೆಂಗಿನ ಮರವು ಅನೇಕ ರೀತಿಯಲ್ಲಿ ಮನುಷ್ಯನ ಬದುಕಿಗೆ ಆರ್ಥಿಕ ನೆರವನ್ನು ಒದಗಿಸುತ್ತಿದೆ. ತೆಂಗಿನಕಾಯಿ ಎಣ್ಣೆ, ಗರಿ, ಎಳನೀರು, ಪೊರಕೆ ಎಲ್ಲವೂ ಉಪಯೋಗಕ್ಕೆ ಬರುತ್ತವೆ. ಆದರೆ ಈ ಪಟ್ಟಿಯಲ್ಲಿ ಸಾಮಾನ್ಯವಾಗಿ ಕಡೆಗಣಿಸಲ್ಪಟ್ಟಿರುವ ಒಂದು ಭಾಗವೆಂದರೆ ತೆಂಗಿನಕಾಯಿ ಚಿಪ್ಪು. ವರ್ಷಗಳ ಕಾಲ ಅಡುಗೆ ಒಲೆಗೆ ಉರಿ, ಕಸಕ್ಕೆ ಹಾಕುವ ತ್ಯಾಜ್ಯ ಅಥವಾ ಅಲಂಕಾರ ವಸ್ತುಗಳಿಗೆ ಸೀಮಿತವಾಗಿದ್ದ ಚಿಪ್ಪು, ಇದೀಗ ಮಾರುಕಟ್ಟೆಯಲ್ಲಿ ತನ್ನದೇ ಆದ ಮೌಲ್ಯವನ್ನು ಪಡೆಯುತ್ತಿದೆ. ದೇಶೀಯ ಮಾರುಕಟ್ಟೆಯಲ್ಲಷ್ಟೇ ಅಲ್ಲ, ವಿದೇಶಗಳಲ್ಲಿ ಹೆಚ್ಚುತ್ತಿರುವ ಬೇಡಿಕೆಯ ಪರಿಣಾಮವಾಗಿ ಚಿಪ್ಪಿನ ಬೆಲೆ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚೆಗೆ ಗ್ರಾಮೀಣ ಪ್ರದೇಶಗಳಲ್ಲಿ ಮನೆ ಮನೆಗೆ ವ್ಯಾಪಾರಿಗಳು ತೆರಳಿ, ಒಂದು ಕೆಜಿಗೆ 20–22 ರೂಪಾಯಿ ಅಥವಾ ಒಂದು ಚಿಪ್ಪಿಗೆ 1 ರೂಪಾಯಿ ನೀಡಿ ನೇರವಾಗಿ ಖರೀದಿಸುವ ಹೊಸ ಟ್ರೆಂಡ್‌ ಹುಟ್ಟಿಕೊಂಡಿದೆ. ಇದರಿಂದ ಅನೇಕ ಮನೆಗಳಿಗೆ, ವಿಶೇಷವಾಗಿ ಮಹಿಳೆಯರಿಗೆ, ಹೊಸ ಆದಾಯದ ಮೂಲ ಸೃಷ್ಟಿಯಾಗಿದೆ.

ವಿದೇಶಗಳಲ್ಲಿ ಭಾರಿ ಬೇಡಿಕೆ: ಬೆಲೆ ಏರಿಕೆಯ ಮುಖ್ಯ ಕಾರಣ,

ಒಂದು ಕಾಲದಲ್ಲಿ ಚಿಪ್ಪಿನಿಂದ ತಯಾರಾಗುತ್ತಿದ್ದ ಇದ್ದಿಲು ಸ್ಥಳೀಯವಾಗಿ ಮಾತ್ರ ಬಳಕೆಯಾಗುತ್ತಿದ್ದರೂ, ಕಳೆದ ಕೆಲವು ವರ್ಷಗಳಲ್ಲಿ ಕೊಬ್ಬರಿ ಚಿಪ್ಪಿನ ಇದ್ದಿಲಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಬಂದಿದೆ. ಈ ಉತ್ಪನ್ನಗಳು ಪರಿಸರ ಸ್ನೇಹಿ, ಬಾಳಿಕೆ ಬರುವುದರಿಂದ ರಫ್ತು ಮಾಡುವುದು ಸುಲಭ. 
ಇದೇ ವೇಳೆ, ರೈತರು ಎಳನೀರು ಮಾರಾಟದ ಕಡೆ ಹೆಚ್ಚು ಒಲವು ತೋರಲು ಆರಂಭಿಸಿರುವುದರಿಂದ ಮಾರುಕಟ್ಟೆಗೆ ಬರುವ ಬಲಿತ ತೆಂಗಿನಕಾಯಿ ಪ್ರಮಾಣ ಕಡಿಮೆಯಾಗಿದೆ. ಇದರಿಂದ ಕೊಬ್ಬರಿ ಚಿಪ್ಪಿನ ಕೊರತೆ ಉಂಟಾಗಿ ಬೆಲೆ ಮತ್ತಷ್ಟು ಏರಿಕೆಯಾಗಲು ಕಾರಣವಾಗಿದೆ ಎಂದು ವ್ಯಾಪಾರಿಗಳು ತಿಳಿಸುತ್ತಿದ್ದಾರೆ.

ಮಹಿಳೆಯರಿಗೆ ಹೊಸ ಆದಾಯದ ದಾರಿ:

ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಸ ಎನ್ನಿಸಿಕೊಂಡಿದ್ದ ಈ ಚಿಪ್ಪುಗಳು ಈಗ ಹಣಕ್ಕೆ ಮಾರಾಟವಾಗುತ್ತಿರುವುದು ಗಮನಾರ್ಹ ಬದಲಾವಣೆ.
ಮಹಿಳೆಯರು ಚಿಪ್ಪುಗಳನ್ನು ಆರಿಸಿ ಒಣಗಿಸಿ ಸಂಗ್ರಹಿಸುತ್ತಿದ್ದಾರೆ. ವ್ಯಾಪಾರಿಗಳು ಮನೆ ಬಾಗಿಲಿಗೇ ಬಂದು ತೂಕದ ಆಧಾರದಲ್ಲಿ ಖರೀದಿಸುತ್ತಿದ್ದಾರೆ ಚಿಪ್ಪಿಗಳನ್ನು ಖರೀದಿಸುತ್ತಿದ್ದಾರೆ. ಸಂಗ್ರಹವಾದ ಚಿಪ್ಪುಗಳನ್ನು ತಿಪಟೂರು, ಅರಸೀಕೆರೆ ಮೊದಲಾದ ಪ್ರಮುಖ ತೆಂಗು ಮಾರುಕಟ್ಟೆಗಳಿಗೆ ರವಾನಿಸಲಾಗುತ್ತಿದೆ. ಇದರಿಂದ ಮನೆಯ ಖರ್ಚಿಗೆ ಸ್ವಲ್ಪಮಟ್ಟಿನ ಹಣ ಸಿಗುತ್ತಿದೆ. 

ಇನ್ನು, ತೆಂಗಿನ ಮರದ ಪ್ರತಿಯೊಂದು ಭಾಗವೂ ಮನುಷ್ಯನ ಉಪಯೋಗಕ್ಕಾಗಿನೇ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತದೆ, ಉದಾಹರಣೆಗೆ ಎಳನೀರು ಆರೋಗ್ಯಕ್ಕೆ, ಕೊಬ್ಬರಿ ಅಡುಗೆಗೆ, ಚಾವಣಿಗೆ ಗರಿ, ಪೊರಕೆ, ಎಣ್ಣೆ, ಗರಿ, ಮಟ್ಟೆ ಮುಂತಾದ ಅನೇಕ ಬಳಕೆಗಳ ಸಾಲಿಗೆ ಈಗ ತೆಂಗಿನಕಾಯಿ ಚಿಪ್ಪು ಕೂಡ ಸೇರಿಕೊಂಡಿದೆ.

ಒಟ್ಟಾರೆಯಾಗಿ,  ಅಗ್ಗದ ತ್ಯಾಜ್ಯವಾಗಿದ್ದ ತೆಂಗಿನಕಾಯಿ ಚಿಪ್ಪು, ಈಗ ಬಂಪರ್ ಬೇಡಿಕೆಯ ಉತ್ಪನ್ನವಾಗಿದೆ. ರಫ್ತು ಬೇಡಿಕೆ, ಸ್ಥಳೀಯವಾಗಿ ಕಡಿಮೆಯಾಗಿರುವ ಪೂರೈಕೆ ಮತ್ತು ನೇರವಾಗಿ ಮನೆ ಮನೆಗೆ ಖರೀದಿ ಮಾಡುವ ವ್ಯವಸ್ಥೆ ಸೇರಿ ಚಿಪ್ಪಿಗೆ ಹೊಸ ಚಿನ್ನದ ಮೌಲ್ಯ ತಂದಿವೆ. ಇದರ  ಫಲಿತಾಂಶವಾಗಿ, ಗ್ರಾಮೀಣ ಮನೆಗಳಿಗೂ ಹೊಸ ಆರ್ಥಿಕ ಅವಕಾಶ ಸೃಷ್ಟಿಯಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories