ಬಿಎಸ್‌ಎನ್‌ಎಲ್ (BSNL)ತನ್ನ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ, 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗಲಿದೆ 5 ಪ್ರಿಪೇಯ್ಡ್ ಯೋಜನೆಗಳ(prepaid plans) ಸೇವೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (Bharat Sanchar Nigam Limited) ಭಾರತೀಯ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸೇವಾ ಪೂರೈಕೆದಾರ ಸಂಸ್ಥೆಯಾಗಿದೆ. ಇದು ಭಾರತದಾದ್ಯಂತ ತನ್ನ ರಾಷ್ಟ್ರವ್ಯಾಪಿ ದೂರಸಂಪರ್ಕ ಜಾಲದ ಮೂಲಕ ಮೊಬೈಲ್ ಧ್ವನಿ ಮತ್ತು ಇಂಟರ್ನೆಟ್ ಸೇವೆಗಳನ್ನು ಒದಗಿಸುತ್ತದೆ. ಇಂದಿಗೂ ಕೂಡ ಹೆಚ್ಚು ಗ್ರಾಹಕರನ್ನು ಹೊಂದಿದ್ದು, ಸಮಯಕ್ಕೆ ತಕ್ಕಂತೆ ತನ್ನ ಹೊಸ ಯೋಜನೆಗಳು, ರಿಯಾಯಿತಿಯನ್ನು ನೀಡುತ್ತಿದೆ. ಇದೀಗ ತನ್ನ ಹೊಸ ಪ್ಲಾನ್ ಒಂದನ್ನು ಬಿಡುಗಡೆ ಮಾಡಿ ಗ್ರಾಹಕರಿಗೆ ಸಂತಸ ಮೂಡಿಸಿದೆ. ಇದೀಗ ಬಿ ಎಸ್ ಎನ್ ಎಲ್ (BSNL) ತನ್ನ ಗ್ರಾಹಕರಿಗೆ 5 ಪ್ರಿಪೇಯ್ಡ್ ಯೋಜನೆಗಳನ್ನು(5 prepaid plans) ಬಿಡುಗಡೆ ಮಾಡುತ್ತಿದೆ. ಆ 5 ಪ್ರಿಪೇಯ್ಡ್ ಯೋಜನೆಗಳು ಯಾವುವು? ಯಾವೆಲ್ಲ ಸೌಲಭ್ಯಗಳನ್ನು ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಹೌದು, ನಾವೆಲ್ಲರೂ ಇಂದು ಮೊಬೈಲ್ ಫೋನ್ ಗಳನ್ನು ಬಳಸುತ್ತಿದ್ದೇವೆ. ಬರೀ ಫೋನ್ ಗಳನ್ನು ತೆಗೆದುಕೊಂಡರೆ ಸಾಕಾಗುವುದಿಲ್ಲ, ಇದಕ್ಕೆ ಸರಿಹೊಂದುವಂತಹ ಸಿಮ್(sim) ಗಳನ್ನೂ ಕೂಡ ಖರೀದಿಸುತ್ತೇವೆ. ಇಂದು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಸಿಮ್ ಗಳನ್ನು ನಾವು ನೋಡಬಹುದು. ಜಿಯೋ(jio), ಏರ್ಟೆಲ್(Airtel) ಹೀಗೆ ಹಲವು ಸಿಮ್ ಗಳನ್ನು ಕಾಣಬಹುದು. ಈ ರೀತಿಯ ಕಂಪನಿಗಳು ರಿಚಾರ್ಜ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಬಹಳ ಹಳೆಯ ಹಾಗೂ ನಮ್ಮ ಭಾರತದ ಸಿಮ್ ಕಾರ್ಡ್ ಆಗಿರುವ ಬಿಎಸ್ಎಲ್ ತನ್ನ ಗ್ರಾಹಕರಿಗಾಗಿ 100 ರೂ.ಗಿಂತ ಕಡಿಮೆ ಬೆಲೆಯಲ್ಲಿ ಪ್ರಿಪೇಯ್ಡ್ ಯೋಜನೆಗಳನ್ನು ಪರಿಚಯಿಸುತ್ತಿದೆ. ಒಟ್ಟಾರೆಯಾಗಿ 5 ಪ್ರಿಪೇಯ್ಡ್ ಯೋಜನೆಗಳು ದಿನಕ್ಕೆ 2GB ಡೇಟಾ, ಅನಿಯಮಿತ ಕರೆಗಳು ಮತ್ತು ಇತರ ಪ್ರಯೋಜನಗಳನ್ನು ಒಳಗೊಂಡಿವೆ.
ಬಿಎಸ್‌ಎನ್‌ಎಲ್ ನ 5 ಪ್ರಿಪೇಯ್ಡ್ ಪ್ಲಾನ್ ಗಳು ಹೀಗಿವೆ :
58 ರೂ. ಪ್ರಿಪೇಯ್ಡ್ ಯೋಜನೆ
87 ರೂ. ಪ್ರಿಪೇಯ್ಡ್ ಯೋಜನೆ
94 ರೂ. ಪ್ರಿಪೇಯ್ಡ್ ಯೋಜನೆ
97 ರೂ. ಪ್ರಿಪೇಯ್ಡ್ ಯೋಜನೆ
98 ರೂ. ಪ್ರಿಪೇಯ್ಡ್ ಯೋಜನೆ
58 ರೂ. ಪ್ರಿಪೇಯ್ಡ್ ಯೋಜನೆ:
ಕೇವಲ 58.ರೂ ಗೆ 7 ದಿನಗಳ ವ್ಯಾಲಿಡಿಟಿಯಲ್ಲಿ 2GB ಡೇಟಾ ಲಭ್ಯವಿದ್ದು, ಲೋಕಲ್ ಮತ್ತು STD ಕರೆಗಳಿಗೆ 200 ನಿಮಿಷಗಳನ್ನು ನೀಡಲಾಗುತ್ತಿದೆ. 2GB ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ 40kbps ವೇಗದಲ್ಲಿ ವರ್ಕ್ ಆಗುತ್ತದೆ.
87 ರೂ. ಪ್ರಿಪೇಯ್ಡ್ ಯೋಜನೆ:
ಇನ್ನು, 87 ರೂ.ನಲ್ಲಿ 14 ದಿನಗಳ ವ್ಯಾಲಿಡಿಟಿಯಲ್ಲಿ ಗ್ರಾಹಕರಿಗೆ ಪ್ರತಿ ದಿನ 1ಜಿGB ಡೇಟಾ ಹಾಗೂ ಅನಿಯಮಿತ ಕರೆಯ ಸೌಲಭ್ಯ ಸಿಗಲಿದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ 40kbps ವೇಗಕ್ಕೆ ಇಳಿಕೆಯಾಗುತ್ತದೆ.
94 ರೂ. ಪ್ರಿಪೇಯ್ಡ್ ಯೋಜನೆ:
ಕೇವಲ 94. ರೂ ಗೆ 30 ದಿನಗಳ ವ್ಯಾಲಿಡಿಟಿಯಲ್ಲಿ 3GB ಡೇಟಾ ನೀಡುತ್ತಿದ್ದು, ಇದರ ಜೊತೆಯಲ್ಲಿ ಲೋಕಲ್ ಮತ್ತು STD ಕರೆಗಳಿಗೆ 200 ನಿಮಿಷಗಳ ಕರೆ ಸೌಲಭ್ಯ ನೀಡಲಾಗಿದೆ.
97 ರೂ. ಪ್ರಿಪೇಯ್ಡ್ ಯೋಜನೆ:
97 ರೂ. ಪ್ರಿಪೇಯ್ಡ್ ಯೋಜನೆ 15 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 2GB ಡೇಟಾದಂತೆ ಒಟ್ಟು 30GB ಡೇಟಾ ಸೌಲಭ್ಯವನ್ನು ನೀಡುತ್ತಿದೆ ಹಾಗೂ ಅನಿಯಮಿತ ಲೋಕಲ್/STD/ರೋಮಿಂಗ್ ಕರೆಗಳನ್ನು ಒಳಗೊಂಡಿದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ 40kbps ವೇಗಕ್ಕೆ ಇಳಿಕೆಯಾಗುತ್ತದೆ.
98 ರೂ. ಪ್ರಿಪೇಯ್ಡ್ ಯೋಜನೆ:
ಇನ್ನು, 98 ರೂ. ಪ್ರಿಪೇಯ್ಡ್ ಯೋಜನೆ 18 ದಿನಗಳ ವ್ಯಾಲಿಡಿಟಿಯಲ್ಲಿ ದಿನಕ್ಕೆ 2GB ಡೇಟಾ ಸೌಲಭ್ಯವನ್ನು ನೀಡುತ್ತಿದ್ದು, ಇದರ ಜೊತೆಯಲ್ಲಿ ಅನಿಯಮಿತ ಕರೆಗಳನ್ನು ಮಾಡಲು ಗ್ರಾಹಕರಿಗೆ ಅವಕಾಶ ಮಾಡಿಕೊಡಲಾಗಿದೆ. ದೈನಂದಿನ ಡೇಟಾ ಮಿತಿ ಮುಗಿದ ನಂತರ ಇಂಟರ್ನೆಟ್ 40kbps ವೇಗಕ್ಕೆ ಇಳಿಕೆಯಾಗುತ್ತದೆ.
ಬಿ ಎಸ್ ಎನ್ ಎಲ್ ಕಂಪನಿಯ ಗೊತ್ತಿರದ ಇನ್ನಷ್ಟು ಮಾಹಿತಿಗಳು :
ಜಿಯೋ (jio), ಏರ್ಟೆಲ್ (Airtel) ಮತ್ತು ಇನ್ನು ಉಳಿದ ಕಂಪೆನಿಗಳಲ್ಲಿ ಮಾಡಿಕೊಂಡ ರೀಚಾರ್ಜ್ ಪ್ಲ್ಯಾನ್ ಖಾಲಿ ಆದ ನಂತರ ಒಳ ಬರುವ (incoming calls) ಮತ್ತು ಹೊರ ಹೋಗುವ ಕರೆಗಳನ್ನು (out going calls) ಕಂಪೆನಿಯು ನಿರ್ಬಂಧಿಸಿದೆ. ಆದರೆ ಬಿ ಎಸ್ ಎನ್ ಎಲ್ ನಲ್ಲಿ ಈ ತರಹದ ಯಾವುದೇ ಕರೆಗಳನ್ನು ನಿರ್ಬಂಧಿಸಲ್ಲ, ರೀಚಾರ್ಜ್ ಪ್ಲ್ಯಾನ್ ಖಾಲಿ ಆದರೂ ಕೂಡ ಸ್ವಲ್ಪ ಸಮಯದ ತನಕ ಕರೆಗಳು ದೊರೆಯುತ್ತವೆ.
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group




