ಡೋರ್ ಸಬ್‌ಸ್ಕ್ರಿಪ್ಶನ್‌ ಟಿವಿ ಮಾರುಕಟ್ಟೆಗೆ ಭರ್ಜರಿ ಎಂಟ್ರಿ , 124 ಒಟಿಟಿ ಆಯಪ್, 300 ಚಾನೆಲ್.! ಟಿವಿ ರೇಟ್ ಇಲ್ಲಿದೆ.

IMG 20241130 WA0000

ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಬರಲಿದೆ ಸಬ್‌ಸ್ಕ್ರಿಪ್ಯನ್ ಟಿವಿ!. ಡಿಸೆಂಬರ್ 1ರಿಂದ ಫ್ಲಿಪ್‌ಕಾರ್ಟ್‌(Flipkart) ನಲ್ಲಿ ಲಭ್ಯ.

ಕಾಲ ಬದಲಾದಂತೆ ಜನರು ಜೀವಿಸುವ ಶೈಲಿಯೂ ಕೂಡ ಬದಲಾಗುತ್ತಾ ಬಂದಿದೆ. ಡಿಜಿಟಲೀಕರಣ ಮಯವಾಗಿದೆ. ಜಗತ್ತು ತಂತ್ರಜ್ಞಾನಗಳೊಂದಿಗೆ (technology) ಹೊಸ ಹೊಸ ಅನ್ವೇಷಣೆಗಳನ್ನು ಮಾಡುತ್ತಾ ಬಂದಿದೆ. ಹಾಗೆ ಕೀಪ್ಯಾಡ್ ಮೊಬೈಲ್ ಗಳೆಲ್ಲ ಇಂದು ಸ್ಮಾರ್ಟ್ ಫೋನ್ ಗಳಾಗಿ ಜಗತ್ತನ್ನೇ ಆಳುತ್ತಿವೆ. ಇನ್ನೂ ನೋಡುವುದಾದರೆ, ಹಳೆಯ ಕಾಲದ ದೂರದರ್ಶನ ಅಥವಾ ಟಿವಿ ಇಂದು ಸ್ಮಾರ್ಟ್ ಟಿವಿ ಗಳಾಗಿ ಬದಲಾಗಿದೆ. ಎಲ್ಲರ ಮನೆಯಲ್ಲಿ ಕೂಡ ಟಿವಿ ಇದ್ದೆ ಇದೆ. ಹೆಚ್ಚು ಜನರು ಸ್ಮಾರ್ಟ್ ಟಿವಿ (smart TV) ಗಳನ್ನು ಬಳಸಲು ಪ್ರಾರಂಭಿಸಿದ್ದಾರೆ. ಉತ್ತಮ ಬೆಲೆಯಲ್ಲಿ ಉತ್ತಮ ಫ್ಯೂಚರ್ ಗಳನ್ನು ಒಳಗೊಂಡಂತಹ ಸ್ಮಾರ್ಟ್ ಟಿವಿಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗೆ ಇದೀಗ ಮಾರುಕಟ್ಟೆಗೆ ಬರಲಿದೆ ಸಬ್‌ಸ್ಕ್ರಿಪ್ಯನ್ ಟಿವಿ. ಹಲವು ಚಂದಾದಾರಿಕೆಗಳನ್ನು ಒಳಗೊಂಡಿರುವ ‘ಡೋರ್‌’ (ಡಿಒಆರ್) ಸ್ಮಾರ್ಟ್‌ ಟಿವಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ಟಿವಿಯ ಬೆಲೆ ಎಷ್ಟು? ಯಾವ ಯಾವ ಫೀಚರ್ಸ್ ಗಳನ್ನು ಒಳಗೊಂಡಿದೆ ಎಂಬ ಸಂಪೂರ್ಣ ಮಾಹಿತಿಯನ್ನು  ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ಸಬ್‌ಸ್ಕ್ರಿಪ್ಯನ್ ಆಧಾರಿತ ಟಿವಿ (India’s First Subscription Smart TV) ಬಿಡುಗಡೆ ಮಾಡಲಾಗುತ್ತಿದೆ ಎಂದು  ಬಾಂದ್ರಾದಲ್ಲಿರುವ ನೀತಾ ಮುಖೇಶ್ ಅಂಬಾನಿ ಕಲ್ಚರಲ್‌ ಸೆಂಟರ್‌ನಲ್ಲಿ(Neeta Mukesh Ambani Cultural center) ನಡೆದ ಕಾರ್ಯಕ್ರಮದಲ್ಲಿ, ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಸಿಇಒ ಅನುಜ್ ಗಾಂಧಿ(CEO Anuj Gandhi) ಹಾಗೂ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಲಿಮಿಟೆಡ್ ಕಂಪನಿಯ ಸಹ–ಸಂಸ್ಥಾಪಕ ರಾಹುಲ್‌ ಶರ್ಮಾ(Co-founder Rahul Sharma) ತಿಳಿಸಿದರು. ‘ಡೋರ್‌’ ಟಿವಿ ದೇಶದ ಮೊಟ್ಟ ಮೊದಲ ಚಂದಾದಾರಿಕೆ ಟಿವಿಯಾಗಿದ್ದು, ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಹಾಗೂ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಲಿಮಿಟೆಡ್ ಕಂಪನಿಯ(Micromax Informatics limited company) ಸಹಯೋಗದಲ್ಲಿ ಮೂಡಿಬರುತ್ತಿದೆ.

ಯಾವ ಯಾವ ಅಳತೆಗಳಲ್ಲಿ ಡೋರ್ ಟಿವಿ(Dor TV) ಲಭ್ಯ?:

ಇನ್ನೇನೂ ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ ದೇಶದ ಮೊಟ್ಟ ಮೊದಲ ಚಂದಾದಾರಿಕೆಯ  ‘ಡೋರ್‌’ ಟಿವಿಯನ್ನು ಮೈಕ್ರೋಮ್ಯಾಕ್ಸ್ ಇನ್‌ಫರ್ಮ್ಯಾಟಿಕ್ಸ್‌ನಿಂದ (Micromax Informatics) ಬೆಂಬಲಿತದ ಕಾರ್ಯತಂತ್ರದೊಂದಿಗೆ ತಯಾರಿಸಲಾಗಿದೆ. 43, 55 ಹಾಗೂ 65 ಇಂಚಿನ ಅಳತೆಗಳಲ್ಲಿ ಡೋರ್ ಟಿವಿ ಲಭ್ಯವಿದೆ. ಹಾಗೂ ಹಲವು ಒಟಿಟಿಗಳ ಚಂದಾದಾರಿಕೆಗೆ ಪ್ರತ್ಯೇಕ ಹಣವನ್ನು ಕಟ್ಟಿ ಆ ಒಟಿಟಿ ಪ್ಲಾಟ್ ಫಾರ್ಮ್ಗಳನ್ನು(OTT platforms) ಪಡೆದುಕೊಳ್ಳುವ ಅಗತ್ಯ ಇರುವುದಿಲ್ಲ.

ಎಂದಿನಿಂದ ಮಾರಾಟವಾಗಲಿದೆ ಡೋರ್ ಟಿವಿ?:

ಇನ್ನು, ಭಾರತದಲ್ಲಿ ಮೊದಲ ಬಾರಿಗೆ ಮಾರುಕಟ್ಟೆಗೆ ಹೊಸ  ಸಬ್‌ಸ್ಕ್ರಿಪ್ಯನ್ ಸ್ಮಾರ್ಟ್ ಟಿವಿಯನ್ನು ಬಿಡುಗಡೆ ಮಾಡಲು ಸ್ಟ್ರೀಮ್‌ಬಾಕ್ಸ್‌ ಮೀಡಿಯಾ ಹಾಗೂ ಮೈಕ್ರೋಮ್ಯಾಕ್ಸ್‌ ಇನ್ಫರ್ಮ್ಯಾಟಿಕ್ಸ್‌ ಲಿಮಿಟೆಡ್ ಕಂಪನಿಯ(Micromax Informatics limited company) ಸಜ್ಜು ಮಾಡಿಕೊಂಡಿದೆ. 43 ಇಂಚಿನ ಟಿವಿಯು ಡಿಸೆಂಬರ್ 1, 2024ರಿಂದ ಫ್ಲಿಪ್‌ಕಾರ್ಟ್(Flipkart) ಮೂಲಕ ಭಾರತದ ಸ್ಮಾರ್ಟ್ ಟಿವಿ ಮಾರುಕಟ್ಟೆಗೆ ಕಾಲಿಡಲಿದ್ದು, 55 ಹಾಗೂ 65 ಇಂಚಿನ ಅಳತೆಯ ಟಿವಿಗಳನ್ನು 2025ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು’ ಎಂದು ಕಂಪನಿ ತಿಳಿಸಿದೆ.

ಡೋರ್ ಟಿವಿಯ ಬೆಳೆ ಎಷ್ಟು?:

43 ಇಂಚಿನ ಟಿವಿಯು ಡಿಸೆಂಬರ್ 1, 2024ರಿಂದ ಫ್ಲಿಪ್‌ಕಾರ್ಟ್(Flipkart) ಖರೀದಿಗೆ ಲಭ್ಯವಾಗಲಿದ್ದು, 43 ಇಂಚಿನ ಟಿವಿ ಸೆಟ್‌ನ ಮುಂಗಡ ವೆಚ್ಚವು ರೂ 10,799 ಅನ್ನು (ಪ್ರತಿ ತಿಂಗಳಿಗೆ ₹799 ಚಂದಾದಾರಿಕೆ ಶುಲ್ಕ ಸಹಿತ) ನಿಗದಿಪಡಿಸಲಾಗಿದೆ. ಕೇವಲ 12 ತಿಂಗಳ ಚಂದಾದಾರಿಕೆಯ(12 month subscription) ಅವಧಿಯ ಅಂತ್ಯದವರೆಗೆ ತಿಂಗಳಿಗೆ ₹799 ಆಗಿರುತ್ತದೆ. 12 ತಿಂಗಳುಗಳ ನಂತರ ಗ್ರಾಹಕರು ತಮಗೆ ಬೇಕಾದ ಪ್ಯಾಕೇಜ್‌ ಆಯ್ಕೆ ಮಾಡಿಕೊಳ್ಳಬಹುದು. ಹಾಗೂ ಗ್ರಾಹಕರಿಗೆ 4 ವರ್ಷಗಳ ವಾರಂಟಿ(4 years warranty) ಮತ್ತು ಒಎಸ್‌ ಅಪ್‌ಡೇಟ್‌(OS update) ಗ್ಯಾರಂಟಿಯನ್ನೂ ನೀಡುತ್ತಿದ್ದೇವೆ’ ಎಂದು ಕಂಪನಿ ತಿಳಿಸಿದೆ.

ಡೋರ್ ಟಿವಿಯ ಫೀಚರ್ಸ್ ಗಳೇನು?:

ಇನ್ನೇನು ಕೆಲವೇ ದಿನಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿರುವ   43 ಇಂಚಿನ ಡೋರ್‌ನ ಮೊದಲ ಸ್ಮಾರ್ಟ್ ಟಿವಿ 4K ಅಲ್ಟ್ರಾ HD ರೆಸಲ್ಯೂಶನ್ ಅನ್ನು ನೀಡುತ್ತದೆ. ಸುಧಾರಿತ ಕ್ಯೂಎಲ್‌ಇಡಿ(QLED),ಡಾಲ್ಬಿ ಆಡಿಯೊ ಮೊದಲಾದ ತಂತ್ರಜ್ಞಾನಗಳನ್ನು ಹೊಂದಿದ್ದು, ಸೌರ ಶಕ್ತಿಯ ರಿಮೋಟ್ ಕಂಟ್ರೋಲ್ ಈ ಟಿವಿಯ ವಿಶೇಷ ಎಂದರೆ ತಪ್ಪಾಗಲಾರದು. ಇನ್ನು, ಬಹಳ ಮುಖ್ಯವಾಗಿ ಚಂದಾದಾರರಾದವರು ಐದು ಮೊಬೈಲ್‌ ಫೋನ್‌ಗಳಲ್ಲೂ ಡೌಲ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನು 2025 ರಲ್ಲಿ 55 ಹಾಗೂ 65 ಇಂಚಿನ ರೂಪಾಂತರಗಳನ್ನು  ಬಿಡುಗಡೆ ಮಾಡುತ್ತದೆ ಎಂದು ಕಂಪನಿ ತಿಳಿಸಿದೆ.

ಎಷ್ಟು ಒಟಿಟಿ ಪ್ಲಾಟ್‌ಫಾರ್ಮ್‌ಗಳು ಲಭ್ಯವಿರಲಿವೆ?:

300ಕ್ಕೂ ಅಧಿಕ ಒಟಿಟಿ ಪ್ಲಾಟ್ ಫಾರ್ಮ್ ಗಳನ್ನು ನೀಡಲಾಗುತ್ತಿದ್ದು, ಅದರಲ್ಲಿ ಪ್ರೈಮ್ ವಿಡಿಯೋ, ಜಿಯೋ ಸಿನಿಮಾ, Sony Liv, Youtube, Discovery+, Travel XP, Shemaroo,ಡಿಸ್ನಿ ಹಾಟ್‌ಸ್ಟಾರ್ ಜೊತೆಗೆ Zee 5, Fancode, Nammaflix, Sun Nxt, Aha, Hoichoi, Lionsgate Play, Manorama MAX, ಪ್ಲೇಫ್ಲಿಕ್ಸ್, ETV ವಿನ್, ರಾಜ್ ಟಿವಿ, ಡಾಲಿವುಡ್ ಪ್ಲೇ, ಡಿಸ್ಟ್ರೋ ಟಿವಿ, ಚೌಪಾಲ್, ಹಂಗಾಮಾ, ಸ್ಟೇಜ್, ವಿಆರ್ ಒಟಿಟಿ, ದಂಗಲ್ ಪ್ಲೇ ಹೀಗೆ ಹಲವು ಒಟಿಟಿ ಪ್ಲಾಟ್‌ಫಾರ್ಮ್‌ಗಳ ಸೇವೆಯನ್ನು ಪಡೆದುಕೊಳ್ಳಬಹುದು.

ಗಮನಿಸಿ :

ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಸ್ಮಾರ್ಟ್ ಟಿವಿ  ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸಲು ತಯಾರಾಗಿರುವ ಸಬ್‌ಸ್ಕ್ರಿಪ್ಯನ್ ಡೋರ್ ಟಿವಿ ಜನರಿಗೆ ಇಷ್ಟವಾಗುವಲ್ಲಿ ಯಾವುದೇ ಸಂಶಯವಿಲ್ಲ. ಎಐ ಆಧರಿಸಿ  ‘ಆಸ್ಕ್ ಡೋರ್’ ವಿಭಾಗದಲ್ಲಿ ಬಯಸಿದ ಒಟಿಟಿ, ವಾಹಿನಿ ಅಥವಾ ವಿಷಯವನ್ನು ಬಹಳ ಬೇಗ ಪಡೆದುಕೊಳ್ಳಬಹುದು ಜೊತೆಗೆ ಮಕ್ಕಳಿಗೆಂದೇ ಪ್ರತ್ಯೇಕ ವಿಭಾಗವಿರುವುದರಿಂದ ಮಕ್ಕಳಿಗೂ ಕೂಡ ಹೆಚ್ಚು ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ.

ಈ ಮಾಹಿತಿಗಳನ್ನು ಓದಿ

 

 

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!