Bigg boss Kannada – ಮದುವೆ ಬಗ್ಗೆ ವೈಯಕ್ತಿಕ ವಿಚಾರ ಹಂಚಿಕೊಂಡ್ರಾ ಸಿರಿ..! ಇಲ್ಲಿದೆ ವಿವರ

siri bigboss 10

ಬಿಗ್ ಬಾಸ್ ಸೀಸನ್ 10(Bigboss season-10) ಶುರುವಾಗಿ ಎರೆಡನೇ ವೀಕೆಂಡ್ ಬಂದಿದೆ. ಬಿಗ್ ಬಾಸ್ ಗೆ ಬರುವಮುಂಚೆ ಕೆಲವರು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಕೂಡ ಕೆಲವರ ವೈಯಕ್ತಿಕ ಜೀವನದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ ಹಾಗೆ ಬಿಗ್ ಬಾಸ್ ಕಾಂಟೆಸ್ಟೆಂಟ್ “ಸಿರಿ “ಅವರ ವಯಕ್ತಿಕ ಜೀವನ ಬಗ್ಗೆಯೂ ಅವರ ಫ್ಯಾನ್ಸ್ ಗಳಿಗೆ ತಿಳಿದಿರಲಿಲ್ಲ. ಅದರಲ್ಲೂ ಅವರಿಗಿನ್ನೂ ಮದುವೆ ಆಗಿಲ್ಲ ಎನ್ನುವ ವಿಷಯ ತಿಳಿದಿದ್ದೇ ಬಿಗ್ ಬಾಸ್ ಗೆ ಬಂದಾಗ ಈ ವಿಷಯವನ್ನು ಕೇಳಿ ತುಂಬಾ ಸಂತಸ ಪಟ್ಟಿದ್ದಾರೆ. ಇನ್ನು ತಾನು ಯಾಕೆ ಮದುವೆ ಆಗಿಲ್ಲ ಎನ್ನುವ ಕುರಿತು ಸ್ವತಃ ಸಿರಿ ಅವರೆ ಬಿಗ್ ಬಾಸ್ ಮನೆಯಲ್ಲಿ ಹಂಚಿಕೊಂಡಿದ್ದಾರೆ. ಇದರ ಬಗ್ಗೆ ಪೂರ್ಣ ಮಾಹಿತಿ ಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.

ಸೀರಿಯವರು ಇನ್ನೂ ಯಾಕೆ ಮದ್ವೆ ಆಗಿಲ್ಲ ಗೊತ್ತ?:

ಚಿತ್ರರಂಗಕ್ಕೆ ಕಾಲಿಟ್ಟು 20 ವರ್ಷಗಳನ್ನು ಪೂರೈಸಿರುವ ಸಿರಿ ಅವರು ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ‘ನಾನು ನಾನಾಗಿರಬೇಕು’ ಅಂತ ಹೇಳಿಕೊಂಡು ಮನೆಯೊಳಗಡೆ ಕಾಲಿಟ್ಟಿದ್ದರು. ಹಾಗೆ ತಾನು ಯಾಕೆ ಇನ್ನು ಮದುವೆ ಆಗಿಲ್ಲ ಎನ್ನುವ ಬಗ್ಗೆಯೂ ಕಿಚ್ಚ ಸುದೀಪ್ ಎದುರು ಹೇಳಿದ್ದರು.

“ನನಗೆ ತಂದೆಯಿಲ್ಲ. ನಮ್ಮ ತಾಯಿಗೆ ಇಬ್ಬರು ಹೆಣ್ಣು ಮಕ್ಕಳು. ಹಾಗಾಗಿ ಮನೆಗೆ ಅಳಿಯನೂ ಬೇಕು, ಮಗನೂ ಬೇಕು. ನಮಗೆ ಒಮ್ಮೊಮ್ಮೆ ಮದುವೆ ಬೇಕಾ? ಅಗತ್ಯ ಇದೆಯಾ ಅಂತ ಕೂಡ ಅನಿಸತ್ತೆ. ನೋಡೋಣ, ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ತಿಳಿಸಿದ್ದರು.

ಬಿಗ್‌ಬಾಸ್‌ ಮನೆಯಲ್ಲಿ ನಟಿ ಸಿರಿ ಮೊದಲನೆಯ ವಾರ ಅಷ್ಟಾಗಿ ಟಾಸ್ಕ್‌ ಹಾಗೂ ಮಾತುಕತೆಗಳಲ್ಲಿ ಕಾಣಿಸಿಕೊಂಡಿರಲಿಲ್ಲ. ಎರಡನೇಯ ವಾರ ಟಾಸ್ಕ್‌ಗಳಲ್ಲಿ ಭಾಗವಹಿಸಿವುದರ ಜೊತೆ ಕೆಲವರ ಜೊತೆಗೆ ಮನಸ್ಸು ಬಿಚ್ಚ ಮಾತನಾಡಲು ಸಹ ಶುರುಮಾಡಿದ್ದಾರೆ. ಜಗಳ, ಮನಸ್ಥಾಪ, ಬಿನ್ನಾಭಿಪ್ರಾಯಗಳ ಮಧ್ಯೆಯು ಮನೆಯ ಸದಸ್ಯರು ಜೊತೆಗೆ ಚೆನ್ನಾಗಿ ಹೊಂದಿಕೊಂಡಿದ್ದಾರೆ. ಸದ್ಯ ನಟಿ ಸಿರಿ ತಮ್ಮ ವೈಯಕ್ತಿಕ ವಿಚಾರದ ಬಗ್ಗೆ ಬಿಗ್‌ಬಾಸ್‌ ಮನೆಯಲ್ಲಿ, ಅದರಲ್ಲೂ ಗೌರೀಶ್ ಅಕ್ಕಿ ಎದುರು ಹಂಚಿಕೊಂಡಿದ್ದಾರೆ.

ಸಿರಿ ಹಾಗೂ ಗೌರೀಶ್ ಅಕ್ಕಿ ನಡುವೆ ನಡೆದ ಸಂಭಾಷಣೆ

ಸಿರಿ “ಜಗಳಗಳು ಬೆಳಗ್ಗೆ ಶುರುವಾಗಿ ರಾತ್ರಿಗೆ ಎಂಡ್ ಆಗಿ ಬಿಡಬೇಕು. ಆದರೆ, ಅದೇಗೆ ಆ ರೀತಿ ಅಡ್ಜೆಸ್ಟ್ ಆಗುವುದು. ನನ್ನ ಸ್ನೇಹಿತರು ಇದ್ದಾರೆ. ದಿನ ಕಳೆದಂತೆ ಅವೆಲ್ಲಾ ಕಾಮನ್ ಆಗಿ ಹೋಗುತ್ತದೆ. ನಾನು ಯಾಕೆ ಮದುವೆಯಾಗಿಲ್ಲ ಅಂದ್ರೆ, ಕಾಂಪ್ರಮೈಸ್ ಆಗಲೇಬೇಕು. ಮದುವೆಯಾಗಲಿ, ರಿಲೇಷನ್ ಶಿಪ್ ಅಂತ ಬಂದಾಗ ಕಾಂಪ್ರಮೈಸ್ ಆಗಬೇಕು. ಅದು ನಂಗೆ ಇಷ್ಟ ಇಲ್ಲ. ಸುಮ್ಮನೆ ಅವನ ಜೀವನವೂ ಹಾಳು, ನನ್ನ ಜೀವನವೂ ಹಾಳು” ಆದರೆ ಈಗ ನಾನು ಮದುವೆ ಆಗೋಕೆ ರೆಡಿ ಆಗಿದ್ದೀನಿ, ಆದರೆ ಸರಿಯಾದ ಸಂಗಾತಿ ಸಿಗಬೇಕು. ನಾನು ಕಾಂಪ್ರಮೈಸ್ ಆಗೋಕೆ ರೆಡಿ ಇದ್ದೀನಿ, ಕಾಂಪ್ರಮೈಸ್ ಆಗಲೇಬೇಕು. ಎಂದು ಸಿರಿ ಅವರು ತಮ್ಮ ಮನಸ್ಸಿನ ಮಾತನ್ನು ಹಂಚಿಕೊಂಡಿದ್ದಾರೆ.

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

tel share transformed

*********** ವರದಿ ಮುಕ್ತಾಯ ***********

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು

ನಮ್ಮ Needs Of Public ಮೊಬೈಲ್

ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ

ಸಬ್ ಸ್ಕ್ರೈಬ್ ಆಗಲು InstagramFacebookYoutube

ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

whatss

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!