ಕನ್ನಡ ಕಿರುತೆರೆಯ ಬಹು ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10(BigBoss season 10) ಈಗಾಗಲೇ ಎರಡನೇ ವಾರದ ಕೊನೆಯ ಹಂತದಲ್ಲಿದೆ. ಈ ಎರಡು ವಾರಗಳಲ್ಲಿ ಬಿಗ್ ಬಾಸ್ ಹಲವಾರು ವಿಶೇಷತೆಗಳನ್ನು ಹೊಂದಿದ್ದು. ವೀಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಮೊದಲನೇ ವಾರ ಶೇಕ್ ಶ್ಯಾಮ್ ಹೊರಹೋಗಿದ್ದರು.ಈ ವಾರ ಯಾರು ಮನೆಯಿಂದ ಹೊರ ಹೋಗಿದ್ದಾರೆ ಎಂದು ತಿಳಿದುಕೊಳ್ಳಬೇಕೇ ಹಾಗಿದ್ದಲ್ಲಿ ಈ ವರದಿಯನ್ನು ಕೊನೆವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ ಎಲ್ಲಾ ಮಾಹಿತಿಯನ್ನು ಈ ಕೆಳಗೆ ಕೊಡಲಾಗಿದೆ ದಯವಿಟ್ಟು ಸಂಪೂರ್ಣವಾಗಿ ಓದಿ.
ಎರಡನೇ ವಾರ ಬಿಗ್ ಬಾಸ್ ಮನೆಯಿಂದ ಹೊರ ನಡೆದ ವ್ಯಕ್ತಿ :
ಮೊದಲ ವಾರ ಬಿಗ್ ಬಾಸ್ ಮನೆಯಿಂದ ಸ್ನೇಕ್ ಶ್ಯಾಮ್ ಎಲಿಮಿನೇಟ್ ಆಗಿದ್ದರು. ಹೌದು ಈಗ ಎರಡನೇ ವಾರ ಯಾರು ಮನೆಯಿಂದ ಹೊರ ಬಂದರು ಎಂದು ಎಲ್ಲಾ ವೀಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ.
ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಲು ಎರಡನೇ ವಾರ ಒಟ್ಟು ಆರು ಮಂದಿ ನಾಮಿನೇಟ್ ಆಗಿದ್ದರು. ತುಕಾಲಿ ಸಂತು, ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ, ಗೌರೀಶ್ ಅಕ್ಕಿ ಮತ್ತು ಕಾರ್ತಿಕ್ ಮಹೇಶ್. ಶನಿವಾರದ ಸಂಚಿಕೆಯಲ್ಲಿ ಬಿಗ್ ಬಾಸ್ ಇಬ್ಬರನ್ನ ಸೇಫ್ ಮಾಡಿದ್ದಾರೆ. ಕಾರ್ತಿಕ್ ಮಹೇಶ್ ಹಾಗೂ ತುಕಾಲಿ ಸಂತು ಎಲಿಮಿನೇಟ್ ಆಗೋದ್ರಿಂದ ತಪ್ಪಿಸಿಕೊಂಡಿದ್ದಾರೆ.
ಕಾರ್ತಿಕ್ ಮಹೇಶ್ ಈ ವಾರ ತುಂಬಾ ಸ್ಟ್ರಾಂಗ್ ಆಗಿ ಆಟವಾಡಿದ್ದಾರೆ. ಟಾಸ್ಕ್‌ನಲ್ಲಿ ಕಾರ್ತಿಕ್ ಮಹೇಶ್ ಬೆಸ್ಟ್ ಪರ್ಫಾಮೆನ್ಸ್ ನೀಡುತ್ತಿದ್ದಾರೆ. ಇದಲ್ಲದೇ ಸಂಗೀತಾ ಮತ್ತು ಕಾರ್ತಿಕ್ ನಡುವಿನ ಬಾಂಡ್ ವೀಕ್ಷಕರಿಗೆ ಹೆಚ್ಚು ಇಷ್ಟವಾಗುತ್ತಿದ್ದು ಇವರು ಮನೆಯಲ್ಲಿ ಉಳಿದುಕೊಂಡಿದ್ದಾರೆ.
ಇನ್ನು ತುಕಾಲಿ ಸಂತು ಅವರ ಎರಡನೇ ವಾರದ ಆಟ ಹಲವರ ಮನಗೆದ್ದಿದೆ. ತಮ್ಮ ಸೆನ್ಸ್ ಆಫ್ ಹ್ಯೂಮರ್‌ನಿಂದ ವೀಕ್ಷಕರ ಮನಗೆಲ್ಲುತ್ತಿರುವ ತುಕಾಲಿ ಸಂತು, ಮನೆಯ ಎಂಟರ್‌ಟೇನ್ಮೆಂಟ್ ಆಗಿದ್ದಾರೆ. ತುಕಾಲಿ ಸಂತು ಈ ವಾರ ಔಟ್ ಆಗದೇ ಇರಲು ಇದು ಒಂದು ಕಾರಣ ಎನ್ನಬಹುದು.
ಬಿಗ್ ಬಾಸ್ ಮನೆಯಿಂದ ಗೌರೀಶ್ ಅಕ್ಕಿ ಔಟ್ :
ಭಾನುವಾರ ನಡೆದ ಬಿಗ್ ಬಾಸ್ ಸಂಚಿಕೆಯಲ್ಲಿ ಉಳಿದ ನಾಲ್ಕು ಜನರಲ್ಲಿ ತನಿಷಾ ಕುಪ್ಪಂಡ, ಸಂಗೀತ ಶೃಂಗೇರಿ, ಭಾಗ್ಯಶ್ರೀ ಕೂಡ ಸೇಫ್ ಆಗಿದ್ದಾರೆ. ಆದರೆ ಗೌರಿಶ್ ಅಕ್ಕಿ ಯವರು ಎಲಿಮಿನೇಟ್ ಆಗಿ ಮನೆಯಿಂದ ಹೊರ ನಡೆದಿದ್ದಾರೆ. ಸೇಫಾಗಿ ಆಡುತ್ತಿದ್ದ ಗೌರೀಶ ಅಕ್ಕಿಯವರು ಮನೆಯಿಂದ ಹೊರ ನಡೆದಿದ್ದಾರೆ. ಈ ಸೇಫ್ ಆಟ ಮನೆ ಒಳಗೆ ವರ್ಕ್ ಆಗ್ತಿಲ್ಲ. ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟ ನಿರೂಪಕ ಗೌರೀಶ್ ಅಕ್ಕಿ ಸೈಲೆಂಟ್ ಆಗಿಯೇ ಮನೆ ಮಂದಿಗೆಲ್ಲಾ ಇಷ್ಟವಾಗಿದ್ರೂ. ಆದ್ರೆ ಗೌರೀಶ್ ಮೌನವೇ ಅವರಿಗೆ ಮುಳುವಾದಂತೆ ಕಾಣ್ತಿದೆ. ಟಾಸ್ಕ್ ನಲ್ಲಿ ಹೆಚ್ಚಿನ ಆಸಕ್ತಿ ತೋರಲಿಲ್ಲ ಎನ್ನುವ ಕಾರಣಕ್ಕೆ ಅನೇಕರು ಗೌರೀಶ್ ಅವರನ್ನೇ ಎಲಿಮಿನೇಷನ್ ಮಾಡಿದ್ರು.
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
*********** ವರದಿ ಮುಕ್ತಾಯ ***********
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು
ನಮ್ಮ Needs Of Public ಮೊಬೈಲ್
ಅಪ್ಲಿಕೇಶನ್ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ
ಸಬ್ ಸ್ಕ್ರೈಬ್ ಆಗಲು Instagram, Facebook, Youtube
ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ