ಬಿಗ್ ಬಾಸ್ ಕನ್ನಡ ಸೀಸನ್ 10 ಇನ್ನೇನು ಕೇವಲ ನಾಲ್ಕು ದಿನಗಳಲ್ಲಿ ಮುಕ್ತಾಯವಾಗಲಿದೆ, ಬಿಗ್ ಬಾಸ್ ಕನ್ನಡ ಸೀಸನ್ 16 ನೇ ವಾರದಲ್ಲಿ ಇರುವುದು 6 ಮಂದಿ. ಇದರಲ್ಲಿ ಬರುತೇಕರು ಸ್ಟ್ರಾಂಗ್ ಕ್ಯಾಂಡಿಡೇಟ್‌ಗಳೇ ಇದ್ದಾರೆ. ಆದರೆ, ಕಳೆದ 7 ವಾರಗಳಿಂದ ಎಲ್ಲರೂ ಟಾರ್ಗೆಟ್ ಮಾಡುತ್ತಿರುವುದು ಮಾತ್ರ ಡ್ರೋನ್ ಪ್ರತಾಪ್ ಅವರನ್ನು. ಅವರನ್ನ ಮನೆಯಿಂದ ಹೊರ ಹಾಕಲು ಹಲವು ಪ್ರಯತ್ನಗಳು ನಡೆಯುತ್ತಿದ್ದು, ಸ್ಪರ್ಧಿಗಳ ಮಧ್ಯೆ ಕಾಂಪಿಟೇಷನ್ ಜೋರಾಗಿದೆ. ಬಿಗ್ ಬಾಸ್ (BBK 10) ಮನೆಯಲ್ಲಿ ಈ ವಾರ ಉಳಿದುಕೊಂಡಿದ್ದ ಆರು ಮಂದಿ. ಈ ಪೈಕಿ ಐವರು ನಾಮಿನೇಟ್ ಆಗಿದ್ದಾರೆ. ಈಗ ಮನೆಯಿಂದ ಒಬ್ಬರು ಎಲಿಮಿನೇಟ್ (Bigg Boss Elimination) ಆಗಲಿದ್ದಾರೆ. ಅದು ಯಾರು ಅನ್ನೋ ಕುತೂಹಲ ಮೂಡಿದೆ. ಮೂಲಗಳ ಪ್ರಕಾರ ಪ್ರಮುಖ ವ್ಯಕ್ತಿಯೇ ಎಲಿಮಿನೇಟ್ ಆಗಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಸುದ್ದಿ ಹರಿದಾಡಿದೆ. ಕೆಲವು ಪ್ರಶ್ನೆಗಳಿಗೆ ಫೈನಲಿಸ್ಟ್ ಗಳು ಉತ್ತರಿಸಿದ ವಿವರ ಈ ಕೆಳಗಿನಂತಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಫೈನಲ್ ವಾರದಲ್ಲಿ ಬಿಗ್ ಫೈಟ್

‘ಬಿಗ್ ಬಾಸ್’ ಮನೆಯಲ್ಲಿ ಉಳಿದಿರೋದು ಆರು ಮಂದಿ ಮಾತ್ರ. ತುಕಾಲಿ ಸಂತೋಷ್, ವರ್ತೂರು ಸಂತೋಷ್, ಕಾರ್ತಿಕ್ ಮಹೇಶ್, ವಿನಯ್ ಗೌಡ, ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್ ಮಧ್ಯೆ ಆಟ ಮುಂದುವರಿದಿದೆ. ಸಂಗೀತಾಗೆ ಈಗಾಗಲೇ ಫಿನಾಲೆ ಟಿಕೆಟ್ ಸಿಕ್ಕಿದೆ. ತುಕಾಲಿ ಅವರು ಈ ವಾರ ನಾಮಿನೇಟ್ ಆಗದೆ ಫಿನಾಲೆ ವೀಕ್ ತಲುಪಿದ್ದಾರೆ. ವರ್ತೂರು ಸಂತೋಷ್ ಈ ವಾರ ಮೊದಲು ಸೇವ್ ಆಗಿ ಅವರು ಫಿನಾಲೆ ವಾರಕ್ಕೆ ಕಾಲಿಟ್ಟಿದ್ದಾರೆ. ಉಳಿದ ನಾಲ್ಕು ಸ್ಥಾನಕ್ಕೆ ಐದು ಜನರ ಮಧ್ಯದಲ್ಲಿ ಪೈಪೋಟಿ ನಡೆಯುತ್ತಿದೆ. ಈ ಬೆನ್ನಲ್ಲೇ ಡ್ರೋನ್ ಪ್ರತಾಪ್ ಕೂಡ ಎಲಿಮಿನೇಟ್ (Elimination) ಆಗಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಡ್ರೋನ್ ಪ್ರತಾಪ್ ಗೆ ಭಾರಿ ಜನ ಬೆಂಬಲ

ಡೋನ್ ಪ್ರತಾಪ್ ಅವರು ಬಿಗ್‌ಬಾಸ್‌ಗೆ ಹೋದ ಮೇಲಂತೂ ಅವರ ಮೇಲೆ ಜನರಿಗಿದ್ದ ಅಭಿಪ್ರಾಯ ಸಂಪೂರ್ಣ ಬದಲಾಗಿದೆ. ಈ ಮೊದಲು ಪ್ರತಾಪ್ ಬಗ್ಗೆ, ಬರೀ ನೆಗಿಟಿವ್ ಅಭಿಪ್ರಾಯಗಳೇ ಕೇಳಿಬರುತ್ತಿತ್ತು ಆದರೆ, ಈಗ ಪ್ರತಾಪ್ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ ಅದಕ್ಕೆ ಕಾರಣ ದೊಡ್ಡನೆಯೊಳಗೆ ಪ್ರತಾಪ್ ಆಡುತ್ತಿರುವ ರೀತಿ. ಎಲ್ಲ ಟಾಸ್ಕ್ ಗಳಲ್ಲೂ ಚೆನ್ನಾಗಿ ಆಡುತ್ತಿರುವ ಪ್ರತಾಪ್ ಮುಕ್ತವಾಗಿ ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಜನರಿಗೆ ತಮ್ಮ ಮೇಲಿದ್ದ ಕೆಟ್ಟ ಅಭಿಪ್ರಾಯವನ್ನು ತೊಡೆದು ಹಾಕಿದ್ದಾರೆ ಹೀಗಾಗಿ ಜಾಲತಾಣದಲ್ಲಿ ಪ್ರತಾಪ್ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ.
ದೊಡ್ಮನೆಯಿಂದ ಡ್ರೋನ್ ಪ್ರತಾಪ್ ಔಟ್?

ಡ್ರೋನ್ ಪ್ರತಾಪ್ ಸದ್ಯಕ್ಕೆ ಬಾರಿ ಜನ ಬೆಂಬಲ ಹೊಂದಿರುವ ಬಿಗ್ ಬಾಸ್ ಸ್ಪರ್ಧಿ ಎಂದು ಹೇಳಬಹುದು, ಬಿಗ್ ಬಾಸ್ ಮನೆಗೆ ಬರುವ ಮುನ್ನ ಡೋಂಟ್ ಪ್ರತಾಪ್ ಸಾಕಷ್ಟು ವಿಚಾರವಾಗಿ ಟ್ರೋಲ್ ಆಗಿದ್ದರು ಆದರೆ ಬಿಗ್ ಬಾಸ್ ಮನೆಯಲ್ಲಿ ಅವರ ನಡವಳಿಕೆ ಹಾಗೂ ಅವರ ಆಕ್ಟಿವಿಟಿಗಳನ್ನ ಜನರು ಮೆಚ್ಚಿದ್ದಾರೆ. ಹಾಗಾಗಿ ಹಲವು ನೆಗೆಟಿವ್ ಅಂಶಗಳು ಪಾಸಿಟಿವ್ ಆಗಿವೆ. ಕಳೆದ ವಾರ ಈಶಾನ್ಯ ಪ್ರತಾಪ್ ವಿರುದ್ಧವಾಗಿ ಮಾತಾಡಿ ಕಾಗೆ ಕಕ್ಕ ಎಂದು ನಿಂದಿಸಿದ್ದಕ್ಕೆ. ಡ್ರೋನ್ ಪ್ರತಾಪ್ ಬೆಂಬಲಿಗರು ಈಶಾನಿಗೆ ಸಕತ್ತಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಇಷ್ಟೊಂದು ಫ್ಯಾನ್ಸ್ ಹೊಂದಿರುವ ಡ್ರೋನ್ ಪ್ರತಾಪ್ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ ಎನ್ನಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ ? ಅಥವಾ ಎರಡು ದಿನಗಳ ಮಟ್ಟಿಗೆ ಪ್ರತಾಪ ಸೀಕ್ರೆಟ್ ರೂಮಿಗೆ ಹೋಗ್ತಾರಾ ? ಎಂದು ಕಾದು ನೋಡಬೇಕಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- BBK 10- ಬಿಗ್ ಬಾಸ್ ಮನೆಯಿಂದ ತನಿಷಾ ಕುಪ್ಪಂಡ ಔಟ್! ವಾರದ ಮಿಡ್ ಎಲಿಮಿನೇಷನ್
- ಡ್ರೋನ್ ಪ್ರತಾಪ್ ಫೈನಲ್ ಟಿಕೆಟ್ ಕೊಡುವಲ್ಲಿ ಬಿಗ್ ಬಾಸ್ ಮೋಸ ಮಾಡಿದ್ರಾ? ಇಲ್ಲಿದೆ ಕಿಚ್ಚನ ಕ್ಲಾರಿಟಿ!
- ಬಿಗ್ ಬಾಸ್ ಮನೆಯ ಶನಿ ಸಂಗೀತ ಎಂದ ಕಾರ್ತಿಕ್, ಆದ್ರೆ ಕಿಚ್ಚ ಮುಂದೆ ನೋ ಬೋರ್ಡ್!
- ತಾರಕಕ್ಕೇರಿದ ಡ್ರೋನ್ & ವಿನಯ್ ಜಗಳ, ಮತ್ತೇ ಟಾರ್ಗೆಟ್ ಆದ್ನಾ ಪ್ರತಾಪ್..?
- ಈ ಬಾರಿ ಬಿಗ್ ಬಾಸ್ ನಲ್ಲಿ ಟಾಪ್ 5ರಲ್ಲಿ ಇರೋರು ಇವರೇ ನೋಡಿ – ಮೈಕಲ್ ಭವಿಷ್ಯ ನುಡಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






