ಎಲ್ಲೆಲ್ಲೂ ಸಂಭ್ರಮ, ಸಡಗರ ಯಾಕೆಂದರೆ ಇಷ್ಟು ದಿನಗಳಿಂದ ನಿರ್ಮಾಣ ವಾಗಿತ್ತಿರುವ ಅಯೋಧ್ಯೆಯಲ್ಲಿ ( Ayodhya ) ಶ್ರೀ ರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ( shree ram statue establishing ) ಗೊಳ್ಳುತ್ತದೆ. ಇದೇ ತಿಂಗಳ 22ನೇ ತಾರೀಕು ಅಂದರೆ ನಾಳೆ,ರಾಮನ ನಾಮ ಪ್ರತಿ ಮನೆಗಳಲ್ಲೂ ಕೇಳಿಬರುವುದಂತು ಸತ್ಯ.ಆದರೆ ಇನ್ನು ಸಂಪೂರ್ಣ ಮಂದಿರದ ಕೆಲಸ ಕಾರ್ಯ ಮುಗಿಯಲು ಇನ್ನೂ ನಾಲ್ಕೈದು ವರ್ಷಗಳು ಬೇಕಾಗಲಿದೆ. ಯಾಕೆಂದರೆ, ಶ್ರೀ ರಾಮ ಮಂದಿರ ನಿರ್ಮಾಣ ಮಾಡಲು ಬಳಸಲಾಗುತ್ತಿರುವ ವಾಸ್ತು ಶಿಲ್ಪ ( Architecher ) ಹಾಗೂ ತಂತ್ರಜ್ಞಾನ ( Technology ) ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ಮಂದಿರ ಭೂಕಂಪನದ ಹೊಡೆತಗಳ ನಡುವೆಯೂ ಸಾವಿರಾರು ವರ್ಷ ಬಲವಾಗಿ ನಿಲ್ಲುವ ಶಕ್ತಿ ಹೊಂದಿದೆ ಹಾಗಾದರೆ, ಈ ಮಂದಿರವನ್ನು ನಿರ್ಮಾಣ ಮಾಡಲು ಏನು ಏನು ತಂತ್ರಜ್ಞಾನ ಬಳಸಿದ್ದಾರೆ, ಮತ್ತು ಯಾವ ವಸ್ತುಗಳನ್ನು ಬಳಸಿದ್ದಾರೆ. ಎಂದು ಈ ಒಂದು ಲೇಖದ ಮೂಲಕ ತಿಳಿದು ಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ
ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ಭಾರತೀಯ ತಂತ್ರಜ್ಞಾನದ ಅಳವಡಿಕೆ ( Indian technology included ) :
ಶ್ರೀ ರಾಮನ ಮಂದಿರ ನಿರ್ಮಾಣಕ್ಕೆ , ಭಾರತದ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ ಯಾಕೆಂದರೆ, ಈ ದೇವಸ್ಥಾನವು ಸಾವಿರಕ್ಕೂ ಹೆಚ್ಚು ವರ್ಷಗಳಾದರೂ ಯಾವುದೇ ಹಾನಿಗೆ ಒಳಗಾಗಬಾರದು, ಅದಕ್ಕಾಗಿ ಭಾರತದ ಪುರಾತನ ಕಾಲದ ತಂತ್ರಜ್ಞಾನ ( Indian Ancient Technology ) ಬಳಸಿಕೊಳ್ಳಲಾಗಿದೆ ಎಂದು ಶ್ರೀ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ದೇವಸ್ಥಾನ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ( Nrupendra Mishra ) ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ ಶ್ರೀ ರಾಮನಿಗಾಗಿ ನಿರ್ಮಾಣವಾಗುತ್ತಿರುವ ಈ ಒಂದು ಭವ್ಯ ರಾಮಮಂದಿರವು ಭಾರತೀಯ ಸಾಂಪ್ರದಾಯಿಕ ಶಿಲ್ಪಕಲಾ ಪರಂಪರೆಯ ಹಾಗೂ ಆಧುನಿಕ ವಿಜ್ಞಾನಗಳನ್ನು ಒಳಗೊಂಡಿದೆ. ಇದು ಶತಮಾನಗಳು ಉರುಳಿದರೂ ರಾಮಮಂದಿರ ಗಟ್ಟಿಯಾಗಿ ನಿಲ್ಲುವ ಶಕ್ತಿಯನ್ನು ನೀಡಲಿದೆ. ಹಾಗೂ ಭಾರತದ ಹಿರಿಯ ವಿಜ್ಞಾನಿಗಳು ಮಹತ್ವದ ಕೊಡುಗೆ ನೀಡಿದ್ದಾರೆ. ದೇವಸ್ಥಾನದಲ್ಲಿ ಇಸ್ರೋ ತಂತ್ರಜ್ಞಾನವನ್ನು ಸಹ ಬಳಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಶ್ರೀ ರಾಮ ಮಂದಿರ ನಿರ್ಮಾಣದ ವಾಸ್ತುಶಿಲ್ಪಿಗಳು ( Architecture ) :
ಮಂದಿರ ನಿರ್ಮಾಣಕ್ಕೆ ಸಹಕರಿಸಿದ ವಾಸ್ತುಶಿಲ್ಪಿ ಪ್ರಸಿದ್ಧ ಸೋಂಪುರ ಕುಟುಂಬದಿಂದ ಬಂದವರು, ಪೂಜ್ಯ ಸೋಮನಾಥ ದೇವಾಲಯ ಸೇರಿದಂತೆ ವಿಶ್ವದಾದ್ಯಂತ 100 ಕ್ಕೂ ಹೆಚ್ಚು ದೇವಾಲಯಗಳನ್ನು ರಚಿಸುವಲ್ಲಿ ಇವರು ಹೆಸರುವಾಸಿಯಾಗಿದ್ದಾರೆ. ಮುಖ್ಯ ವಾಸ್ತುಶಿಲ್ಪಿ ಚಂದ್ರಕಾಂತ್ ಸೋಂಪುರ ( Chandrakanth Sompurra ) ನೇತೃತ್ವದಲ್ಲಿ ಮತ್ತು ಅವರ ಮಕ್ಕಳಾದ ಆಶಿಶ್ ಮತ್ತು ನಿಖಿಲ್ ಅವರ ಬೆಂಬಲದೊಂದಿಗೆ, ಅವರು ದೇವಾಲಯದ ವಾಸ್ತುಶಿಲ್ಪದಲ್ಲಿ ತಲೆಮಾರುಗಳನ್ನು ಮೀರಿದ ಪರಂಪರೆಯನ್ನು ರಚಿಸಿದ್ದಾರೆ. ಇಂದೊಂದು ಖುಷಿಯ ವಿಚಾರ ಎನ್ನಬಹುದು.
ಪುರಾತನ ನಾಗರ ಶೈಲಿಯ ವಾಸ್ತುಶೈಲಿ ಅಳವಡಿಕೆ :
ದೇವಾಲಯವು ನಾಗರ ಶೈಲಿಯಲ್ಲಿ 360 ಸ್ತಂಭಗಳನ್ನು ಒಳಗೊಂಡಿದೆ, ಅದರ ದೃಶ್ಯ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಹಾಗೆಯೇ ಇದರಲ್ಲಿ ಭಾರತದ ಹಳೆಯ ಪುರಾತನ ವಾಸ್ತುಶೈಲಿಯನ್ನು ಅಳವಡಿಕೆ ಮಾಡಲಾಗಿದೆ. ಸುಮಾರು 50 ಕಂಪ್ಯೂಟರ್ ಮಾಡೆಲ್‌ಗಳನ್ನು ವಿಶ್ಲೇಷಿಸಿದ ನಂತರ ಆಯ್ಕೆ ಮಾಡಲಾದ ಮಾದರಿಯು, ನಾಗರ ಶೈಲಿ ವಾಸ್ತುಶಿಲ್ಪ ವಿನ್ಯಾಸ ( Urban style architectural design ) ಹೊಂದಿದೆ.
ರಾಜಸ್ಥಾನದಿಂದ ತರಿಸಲಾದ ‘ಬನ್ಸಿ ಪಹಾರ್ಪುರ್’ ( Bansi Pahaarpur )ಎಂದು ಕರೆಯಲಾಗುವ ಪಿಂಕ್ ಸ್ಯಾಂಡ್ ಸ್ಟೋನ್ ಅನ್ನು ಬಳಸಲಾಗಿದೆ. ನೆಲ ಮಹಡಿಯಲ್ಲಿ ಒಟ್ಟು 160 ಸ್ತಂಭಗಳು ಇದ್ದು, ಮೊದಲ ಮಹಡಿಯಲ್ಲಿ 132 ಮತ್ತು ಎರಡನೇ ಮಹಡಿಯಲ್ಲಿ 74 ಸ್ತಂಭಗಳಿವೆ. ಇವೆಲ್ಲವನ್ನೂ ಸ್ಯಾಂಡ್‌ಸ್ಟೋನ್‌ನಿಂದ ಮಾಡಲಾಗಿದೆ. ಹೊರಭಾಗದಿಂದ ಕೆತ್ತನೆ ಮಾಡಲಾಗಿದೆ. ಅಲಂಕೃತ ಗರ್ಭಗುಡಿಯು ರಾಜಸ್ಥಾನದಿಂದ ( Rajasthan ) ತೆಗೆದ ಶ್ವೇತ ವರ್ಣದ ಮಕ್ರಾನ ಮಾರ್ಬಲ್‌ನಿಂದ ( White Mkran marbal ) ರಚನೆಯಾಗಿದೆ. ತಾಜ್‌ಮಹಲ್ ಕೂಡ ಮಕ್ರಾನ್ ಗಣಿಯಿಂದ ತೆಗೆದ ಮಾರ್ಬಲ್‌ನಿಂದಲೇ ಕಟ್ಟಲಾಗಿದೆ.
ನಿರ್ಮಾಣವಾಗುತ್ತಿರುವ ಶ್ರೀ ರಾಮ ಮಂದಿರದ ಒಟ್ಟು ವಿಸ್ತೀರ್ಣ ( square Feet ) :
161 ಅಡಿ ಎತ್ತರದ ಮಂದಿರ ದೇವಸ್ಥಾನದ ಒಟ್ಟಾರೆ ಆವರಣ 2.7 ಎಕರೆ ಇದ್ದು, ಮೂರು ಮಹಡಿಗಳ ಮಂದಿರವನ್ನು 57 ಸಾವಿರ ಚದರ ಅಡಿಯಲ್ಲಿ ನಿರ್ಮಿಸಲಾಗಿದೆ. ಇದರಲ್ಲಿ ಯಾವುದೇ ಕಬ್ಬಿಣ ಅಥವಾ ಉಕ್ಕು ಬಳಸಿಲ್ಲ ಎನ್ನುವುದು ಗಮನಾರ್ಹ. ಕಬ್ಬಿಣದ ಜೀವಿತಾವಧಿ 80- 90 ವರ್ಷ ಮಾತ್ರ ಇರುತ್ತದೆ ಎನ್ನುವುದು ಇದಕ್ಕೆ ಕಾರಣ. ಈ ದೇಗುಲದ ಎತ್ತರ 161 ಅಡಿ. ಇದು ಕುತುಬ್ ಮಿನಾರ್‌ನ ಶೇ 70ರಷ್ಟು ಎತ್ತರವಿದೆ. ಹಾಗೂ 2500 ವರ್ಷಗಳವರೆಗೂ ಭಾರಿ ಪ್ರಮಾಣದ ಯಾವುದೇ ಭೂಕಂಪ ಬಂದರೂ ಸಹಿಸಿಕೊಳ್ಳುವ ಸಾಮರ್ಥ್ಯದೊಂದಿಗೆ ಮೂರು ಅಂತಸ್ತಿನ ರಚನೆಯನ್ನು ವಿನ್ಯಾಸ ಮಾಡಲಾಗಿದೆ.
ರಾಮನ ಮಂದಿರ ನಿರ್ಮಾಣಕ್ಕೆ ಕಬ್ಬಿಣ ಅಥವಾ ಉಕ್ಕನ್ನು ಬಳಸಿಲ್ಲ ( Not included Iron and steel ) :
ಶ್ರೀ ರಾಮ ಮಂದಿರವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ ಮತ್ತು ಉಕ್ಕು ಅಥವಾ ಕಬ್ಬಿಣವನ್ನು ಬಳಸಲಾಗಿಲ್ಲ. ಅತ್ಯುತ್ತಮ ಗುಣಮಟ್ಟದ ಗ್ರಾನೈಟ್ ( Granite ), ಸ್ಯಾಂಡ್ ಸ್ಟೋನ್ ( Stand Stone ) ಮತ್ತು ಮಾರ್ಬಲ್‌ಗಳನ್ನು ( Marbales ) ಬಳಸಲಾಗಿದೆ. ಅವುಗಳ ಜೋಡಣೆಯಲ್ಲಿ ಸಿಮೆಂಟ್ ಅಥವಾ ಲೈಮ್ ಮೋರ್ಟರ್ ( Light Mortar )ಬಳಕೆ ಮಾಡಿಲ್ಲ. ಎಂದು ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕ ಡಾ. ಪ್ರದೀಪ್ ಕುಮಾರ್ ರಾಮನ್‌ಚರ್ಲಾ ತಿಳಿಸಿದ್ದಾರೆ.
ದೇವಾಲಯವನ್ನು ನಿರ್ಮಿಸುವಾಗ ಎದುರಾದ ಹಲವು ಸವಾಲುಗಳು:
ಈ ದೇವಾಲಯ ನಿರ್ಮಾಣ ಅನೇಕ ವಿಶಿಷ್ಟ ಸವಾಲುಗಳು ಸಹ ಒಳಗೊಂಡಿದ್ದವು. ಅಡಿಪಾಯ ಹಾಕುವಾಗ ಸುತ್ತಮುತ್ತಲಿನ ತಾಪಮಾನಕ್ಕಿಂತ 18 ಡಿಗ್ರಿ ಕಡಿಮೆ ಸ್ವಯಂ-ಕಾಂಪ್ಯಾಕ್ಟಿಂಗ್ ಕಾಂಕ್ರೀಟ್ನ ತಾಪಮಾನವನ್ನು ನಿರ್ವಹಿಸಬೇಕಿತ್ತು. ಅದಕ್ಕಾಗಿ ಸೈಟ್ನಲ್ಲಿ ಐಸ್ ಪುಡಿಮಾಡುವ ಯಂತ್ರಗಳನ್ನು ಬಳಸಲಾಯಿತು. ಬಾಹ್ಯ ತಾಪಮಾನದ ಪರಿಣಾಮವನ್ನು ಕಡಿಮೆ ಮಾಡಲು ರಾತ್ರಿಯಲ್ಲಿ ಮಾತ್ರ ಅಡಿಪಾಯ ಹಾಕಬೇಕಿತ್ತು.
ರಾಮ ಮಂದಿರ ನಿರ್ಮಾಣಕ್ಕೆ ಬಳಸಲಾದ ವಸ್ತುಗಳು ( Materials ) :
ಮಂದಿರ ನಿರ್ಮಾಣಕ್ಕಾಗಿ ಮೊದಲಿಗೆ ಸುಮಾರು 15 ಮೀಟರ್‌ಗಳ ಆಳದವರೆಗೆ ಇಡೀ ದೇವಸ್ಥಾನ ಭಾಗದ ಮಣ್ಣನ್ನು ತೆಗೆಯಲಾಗಿತ್ತು. ತಯಾರಿಸಲಾದ ಮಣ್ಣನ್ನು 12- 14 ಮೀಟರ್‌ಗಳವರೆಗೆ ತುಂಬಿಸಲಾಗಿದೆ. ಇದರಲ್ಲಿ ಯಾವುದೇ ಉಕ್ಕಿನ ಕಂಬಿಗಳನ್ನು ಬಳಸಿಲ್ಲ. ಗಟ್ಟಿ ಬಂಡೆಯಂತೆ ಇರಲಿ 47 ಪದರುಗಳ ಬುನಾದಿ ಹಾಕಲಾಗಿದೆ ಎಂದು ವಿವರಿಸಿದ್ದಾರೆ. ಇದರ ಮೇಲೆ ಬಲವರ್ಧನೆಗಾಗಿ 1.5 ಮೀಟರ್ ದಪ್ಪನೆಯ ಎಂ-35 ಶ್ರೇಣಿಯ ಲೋಹ ರಹಿತ ಕಾಂಕ್ರೀಟ್ ಹಾಸನ್ನು ಹಾಕಲಾಗಿದೆ. ನೆಲಗಟ್ಟನ್ನು ಮತ್ತಷ್ಟು ಬಲವಾಗಿಸಲು ದಕ್ಷಿಣ ಭಾರತದಿಂದ ತರಲಾದ 6.3 ಮೀಟರ್ ದಪ್ಪನೆಯ ಗಟ್ಟಿಮುಟ್ಟಾದ ಗ್ರಾನೈಟ್ ಕಲ್ಲನ್ನು ಹಾಕಲಾಗಿದೆ.
ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
- ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
- ಅಯೋಧ್ಯೆಯ ರಾಮಮಂದಿರದ ಆ್ಯಪ್ ಬಿಡುಗಡೆ, ಅಯೋಧ್ಯೆಗೆ ಹೋಗೋರಿಗೆ ಸಂಪೂರ್ಣ ಮಾಹಿತಿ ಇಲ್ಲಿದೆ
- ಮಹಿಳೆಯರಿಗೆ ಗುಡ್ ನ್ಯೂಸ್! ಉಚಿತ ಗ್ಯಾಸ್ ಸಂಪರ್ಕಕ್ಕೆ ಅರ್ಜಿ ಆಹ್ವಾನ
- ಇನ್ನೂ ಮುಂದೆ 2000/- ರೂ. ಇವರಿಗೆ ಬರುವುದಿಲ್ಲ, ಜನವರಿ ತಿಂಗಳ ಅಕ್ರಮ ಬಿಪಿಎಲ್ ಕಾರ್ಡ್ ಪತ್ತೆ, ರದ್ದಾದ ಪಟ್ಟಿ ಬಿಡುಗಡೆ.!
- ರೈತರ ಖಾತೆಗೆ ಬರ ಪರಿಹಾರದ ಮೊದಲನೇ ಕಂತಿನ ಹಣ ₹2000 ಜಮಾ, ಸ್ಟೇಟಸ್ ಹೀಗೆ ಚೆಕ್ ಮಾಡಿ
- ಬೆಳೆಹಾನಿ ಪರಿಹಾರದ ಹಣ ಇನ್ನೂ ಬಂದಿಲ್ವಾ? ಆಧಾರ್ ಲಿಂಕ್ ಆಗದೇ ಇರುವ ಪಟ್ಟಿ ಬಿಡುಗಡೆ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.
Lingaraj Ramapur BCA, MCA, MA ( Journalism );
as Editor-in-Chief of NEEDS OF PUBLIC Media, leads a team of journalists, sets editorial standards, and ensures accurate, credible, and timely content. His leadership upholds the company as a trusted information source, meeting public needs while maintaining top-tier journalistic integrity.


WhatsApp Group






