ಅತಿ ಕಡಿಮೆ ಬೆಲೆಗೆ ಸಿಗುವ ಹರಾಜಿನ ಮನೆ ಖರೀದಿಸುವುದು ಹೇಗೆ ? ಇಲ್ಲಿದೆ ಕಂಪ್ಲೀಟ್ ಮಾಹಿತಿ

bank action property purchase

ಬ್ಯಾಂಕಿನಿಂದ ಹರಾಜಿನಲ್ಲಿ ಆಸ್ತಿಯನ್ನು ಖರೀದಿಸುವ ಮೂಲಕ 30 ರಿಂದ 40% ವರೆಗೆ ರಿಯಾಯಿತಿ ಪಡೆಯುವ ಅಪೂರ್ವ ಅವಕಾಶವನ್ನು ಈಗ ಬಳಸಿಕೊಳ್ಳಿ. ಏನಿದು ಹರಾಜಿನ ಪ್ರಾಪರ್ಟಿ? ಇದರ ಪ್ರಕ್ರಿಯೆ ಹೇಗಿರುತ್ತೆ? ಈ ಹರಾಜಿನ ಪ್ರಾಪರ್ಟಿ ಖರೀದಿಸುವುದು ಉತ್ತಮವೇ? ಮತ್ತು ಇದರ ಕುರಿತು ಇನ್ನಷ್ಟೂ ಹೆಚ್ಚಿನ ಮಾಹಿತಿಯನ್ನು ಪ್ರಸ್ತುತ ವರದಿಯಲ್ಲಿ ನೀಡಲಾಗಿದೆ. ವರದಿಯನ್ನು ತಪ್ಪದೆ ಕೊನೆಯವರೆಗೂ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಹರಾಜಿನ ಪ್ರಾಪರ್ಟಿ(Auction property) ಎಂದರೇನು?

ನೀವು ಮನೆ, ಕಾರು, ಭೂಮಿ ಅಥವಾ ಇತರ ಯಾವುದೇ ಮೌಲ್ಯಯುತ ಆಸ್ತಿಯನ್ನೂ ಖರೀದಿಸಲು ಬ್ಯಾಂಕಿನಿಂದ ಸಾಲ(loan)ವನ್ನು ಪಡೆಯುತ್ತಿರಿ. ನೀವೂ ಖರೀದಿಸುವ ಆಸ್ತಿಯೂ ಬ್ಯಾಂಕ್ ಗೆ ಸ್ವತ್ತ ವಾಗಿರುತ್ತದೆ, ಸಾಲದ ಮೊತ್ತವನ್ನು ಮರುಪಾವತಿಸಲು ಭರವಸೆಯಾಗಿರುತ್ತದೆ. ಬ್ಯಾಂಕ್(Bank) ನೀವು ಪಡೆದುಕೊಂಡ ಸಾಲದ ಮರುಪಾವತಿಗಾಗಿ ಸಾಲಗಾರನಿಗೆ 3 EMI ಅವಕಾಶಗಳನ್ನು ನೀಡುತ್ತದೆ. ಸಾಲಗಾರ 3 EMI ಕಂತುಗಳನ್ನು ಸತತವಾಗಿ ಪಾವತಿಸಲು ವಿಫಲವಾದರೆ, ಬ್ಯಾಂಕ್ ಲೋನ್ ಖಾತೆಯನ್ನು NPA (ನಾನ್-ಪರ್ಫಾರ್ಮಿಂಗ್ ಆಸ್ತಿ) ಎಂದು ಘೋಷಿಸುತ್ತದೆ ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಕಾನೂನು ಕ್ರಮ ಜರುಗಿಸುತ್ತದೆ ಮತ್ತು ಆಸ್ತಿಯನ್ನು ಜಪ್ತು ಮಾಡಿಕೊಳ್ಳುತ್ತದೆ. ಈಗ ಆ ಆಸ್ತಿಯು ಬ್ಯಾಂಕ್ ನ ಪ್ರಾಪರ್ಟಿ ಆಗುತ್ತದೆ. ಈಗ ಬ್ಯಾಂಕ್ ಈ ಆಸ್ತಿಯನ್ನು ಬೇರೆಯವರಿಗೆ ಕಡಿಮೆ ರೇಟ್ ನಲ್ಲಿ ಮಾರಾಟಮಾಡಲೂ ಮುಂದಾಗುತ್ತದೆ. ಇದನ್ನು ಹರಾಜಿನ ಪ್ರಾಪರ್ಟಿ ಅಂದ್ರೆ Loan auction ಎಂದು ಕರೆಯುತ್ತಾರೆ.

ಆಸ್ತಿಯನ್ನು ಹರಾಜು ಮಾಡುವ ಪ್ರಕ್ರಿಯೆ ಹೀಗಿರುತ್ತದೆ.

ಸಾಲಗಾರ 3 EMI ಕಂತುಗಳನ್ನು ಸತತವಾಗಿ ಪಾವತಿಸಲು ವಿಫಲವಾದರೆ, ಬ್ಯಾಂಕ್ ಲೋನ್ ಖಾತೆಯನ್ನು NPA (non-performing asset) ಎಂದು ಘೋಷಿಸುತ್ತದೆ ಮತ್ತು ಆಸ್ತಿಯನ್ನು ವಶಪಡಿಸಿಕೊಳ್ಳಲು ಕಾನೂನು ಕ್ರಮ ಜರುಗಿಸುತ್ತದೆ.

ಮೊದಲಿಗೆ ಬ್ಯಾಂಕ್ ಸಾಲುಗಾರನಿಗೆ ಡಿಮ್ಯಾಂಡ್ ನೋಟಿಸ್ (Demand Notice) ಕಳಿಸುತ್ತದೆ, ಈ ನೋಟಿಸ್ ನಲ್ಲಿ ಪ್ರತಿ EMI ಗೆ ಇಂಟರೆಸ್ಟ್ ನೊಂದಿಗೆ ಹಣವನ್ನು ಮರುಪಾವತಿಬೇಕು ಎಂದೂ ಎಚ್ಚರಿಕೆಯನ್ನು ನೀಡಿರುತ್ತದೆ ಅಥವಾ ಬ್ಯಾಂಕ್ ಗೆ ಭೇಟಿ ನೀಡಿ ಸಾಲ ಮರುಪಾವತಿಸುವುದರಲ್ಲಿ ಏಕೆ ವಿಳಂಬ ವಾಗುತ್ತಿದೆ ಎಂದು ಕಾರಣವನ್ನು ನೀಡಬೇಕು ಎಂದು ಬ್ಯಾಂಕ್ ಈ ನೋಟಿಸ್ ಮುಖಾಂತರ ತಿಳಿಸುತ್ತದೆ. ಈ ನೋಟೀಸ್ ನ ಪ್ರತಿಕ್ರಿಯೆ ಗಾಗಿ 60 ದಿನಗಳ ಸಮಯವನ್ನು ಬ್ಯಾಂಕ್ ನೀಡಿರುತ್ತದೆ.

ಡಿಮ್ಯಾಂಡ್ ನೋಟಿಸ್ ಯಾವದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಬ್ಯಾಂಕ್ ಮತ್ತೆ ಪೊಸಿಷನ್ ನೊಟೀಸ್(Possesion notice), 30 ದಿನಗಳ ಕಾಲಾವಧಿಯ ನೊಟೀಸ್ ಕಳಿಸುತ್ತದೆ. ಈ ನೋಟಿಸ್ ಯಾವದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಬ್ಯಾಂಕ್ ಮತ್ತೆ ನಿಮಗೆ ಸೆಲೆ ನೊಟೀಸ್ (Sale Notice), 21 ದಿನಗಳ ಕಾಲಾವಧಿಯ ನೊಟೀಸ್ ಕಳಿಸುತ್ತದೆ. ಈ ಮೂರು ನೋಟಿಸ್ಗಳಿಗೆ ಸಾಲಗಾರ
ಯಾವುದೇ ಪ್ರತಿಕ್ರಿಯೆ ನೀಡದಿದ್ದಲ್ಲಿ ಬ್ಯಾಂಕ್ ಕೊನೆಯದಾಗಿ ಫೈನಲ್ ನೋಟಿಸ್ ನೊಂದಿಗೆ
ಆಸ್ತಿಯನ್ನು ಸೀಜ್ ಮಾಡುತ್ತದೆ. ಬ್ಯಾಂಕ್ ಆಸ್ತಿಯನ್ನು ಹರಾಜಿನಲ್ಲಿ ಮಾರಾಟ ಮಾಡಲು ಉದ್ದೇಶಿಸಿ ಸಾರ್ವಜನಿಕ ಸೂಚನೆಯನ್ನು ಪ್ರಕಟಿಸುತ್ತದೆ. ಈ ಸೂಚನೆಯನ್ನು ಬ್ಯಾಂಕ್ ವೆಬ್ಸೈಟ್ ನಲ್ಲಿ, ನ್ಯೂಸ್ ಪೇಪರ್ ಜಾಹಿರಾತುಗಳಲ್ಲಿ, eauction India.com , https://foreclosureindia.com/ ಮತ್ತು IBAPI ವೆಬ್ಸೈಟ್ ಗಳಲ್ಲಿ ಪ್ರಕಟಿಸಲಾಗುತ್ತದೆ. ಈ ಸೂಚನೆಯು ಹರಾಜಿನ ದಿನಾಂಕ, ಸಮಯ, ಸ್ಥಳ ಮತ್ತು ಹೆಚ್ಚಿನ ಆಸ್ತಿಯ ವಿವರಗಳನ್ನು ತಿಳಿಸುತ್ತದೆ. ಹರಾಜಿನ ದಿನಾಂಕದಂದು, ಆಸಕ್ತ ಖರೀದಿದಾರರು ಆಸ್ತಿಗೆ ಬಿಡ್ ಮಾಡಬಹುದು. ಹೆಚ್ಚಿನ ಬಿಡ್ ಸಲ್ಲಿಸುವ ಖರೀದಿದಾರರಿಗೆ ಆಸ್ತಿಯನ್ನು ಮಾರಾಟ ಮಾಡಲಾಗುತ್ತದೆ. ಖರೀದಿದಾರ ಮತ್ತು ಬ್ಯಾಂಕ್ ಮಾರಾಟದ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಮತ್ತು ಖರೀದಿದಾರ ಆಸ್ತಿಯ ಸ್ವಾಮ್ಯವನ್ನು ಪಡೆಯುತ್ತಾರೆ.

whatss

ಹರಾಜಿನ ಪ್ರಾಪರ್ಟಿಯನ್ನು ನಿಮಗೆ ಇಷ್ಟ ವಾಗಿದ್ದು, ಅದನ್ನು ಖರೀದಿಸುವ ಮುನ್ನ ಖರೀದಿದಾರರು ಕೆಲವು ಪ್ರಮುಖ ಅಂಶಗಳು ತಿಳಿದುಕೊಳ್ಳಬೇಕಾಗುತ್ತದೆ:

ಮೊದಲಿಗೆ ಬ್ಯಾಂಕಿಗೆ ಬೇಟಿ ನೀಡಿ, ಬ್ಯಾಂಕಿನ ಮ್ಯಾನೇಜರ್ ನಿಮಗೆ Auction date, ಅಂದ್ರೆ ಹರಾಜಿನ ದಿನಾಂಕವನ್ನು ಉಚಿತಪಡಿಸಿಕೊಳ್ಳಿ. ಮತ್ತು Visting dates ಗಳನ್ನೂ ಉಚಿತಪಡಿಸಿಕೊಳ್ಳಿ.

ಪ್ರಾಪರ್ಟಿಯ ಜಾಗವನ್ನು ಮತ್ತು ಅದರ ರೇಟ್ ಕುರಿತಾಗಿ ಮಾಹಿತಿಯನ್ನೂ ಪರಿಶೀಲಿಸಿ

ಪ್ರಾಪರ್ಟಿ ಏನಾದ್ರೂ ಡ್ಯಾಮೇಜ್ ಇದೆಯಾ ಎಂದೂ ಪರಿಶೀಲಿಸಿ

ಪ್ರಾಪರ್ಟಿಯ ಮಾಲೀಕ ಯಾರು ಎಂದು ತಿಳಿದುಕೊಂಡು, ಪ್ರಾಪರ್ಟಿ ಮಾಲೀಕನ ಹೆಸರಿನಲ್ಲಿ ವರ್ಗಾವಣೆ ಆಗಿದೆಯೇ ಎಂದು ಪರಿಶೀಲಿಸಿ. ನಕಲಿ ಕಾಗದಗಳು ಇರುವ ಸಾಧ್ಯತೆಯೂ ಇರುತ್ತದೆ.

Title Clearance: ಪ್ರಾಪರ್ಟಿ ಗು ಹಾಗೂ ಕೊಟ್ಟಿರುವಂತಹ ಡಾಕ್ಯುಮೆಂಟ್ಸ್ ಗೆ ಟೈಟಲ್ ಕ್ಲಿಯರೆನ್ಸ್ ಅಗಿದೆಯೇ ಎಂದು ಪರಿಶೀಲಿಸಿ

Sale deed ಯಾರ ಹೆಸರಲ್ಲಿ ಇದೆ ಎಂದು ಪರಿಶೀಲಿಸಿ. ಇದರಲ್ಲಿ ಇರುವ ಪ್ರತ್ಯೇಕ ಮಾಹಿತಿಯೂ ಸರಿಯಾಗಿದೆಯೇ ಎಂದು ಪರಿಶೀಲಿಸಿ

ಲಿಂಕ್ ಡಾಕ್ಯುಮೆಂಟ್ಸ್

ಕರ್ನಾಟಕದಲ್ಲಿ ಆಸ್ತಿಯನ್ನು ಖರೀದಿಸಲು ಬಯಸುವ ಯಾರಿಗಾದರೂ ಎನ್‌ಕಂಬರೆನ್ಸ್ ಸರ್ಟಿಫಿಕೇಟ್ (EC) ಒಂದು ಪ್ರಮುಖ ದಾಖಲೆಯಾಗಿದೆ. ಇದು ಆಸ್ತಿಯ ಮೇಲೆ ಯಾವುದೇ ನೋಂದಾಯಿತ ವಹಿವಾಟುಗಳನ್ನು ತೋರಿಸುವ ಕಾನೂನು ದಾಖಲೆಯಾಗಿ ಕಾರ್ಯನಿರ್ವಹಿಸುತ್ತದೆ, ಮೂಲಭೂತವಾಗಿ ಅದರ ಮಾಲೀಕತ್ವ ಮತ್ತು ಕಾನೂನು ಸ್ಥಿತಿಯನ್ನು ಪರಿಶೀಲಿಸುತ್ತದೆ. ಹರಾಜಿನ ಆಸ್ತಿಯನ್ನು ಖರೀದಿಸುವಾಗ ಈ EC ಪರಿಶೀಲನೆಯು ಅತ್ಯಂತ ಮಹತ್ವ.

Sub register office ನಲ್ಲಿ ನೀವು ಕೊಂಡುಕೊಳ್ಳುವ ಆಸ್ತಿಯ ವಿವರಗಳು ಸರಿಯಾಗಿ ಇದೆಯೇ ಎಂದು ಗಮನಿಸಿ.

ಹರಾಜಿನ ಆಸ್ತಿಯ ಫೈನಲ್ ಬಿಡಿಂಗ್ ಮತ್ತು ಮಾರ್ಕೆಟ್ ರೇಟ್ ಎರಡು ಸಮನವಾಗಿದೆಯೇ ಎಂದು ಪರಿಶೀಲಿಸಿ

ಡಾಕ್ಯುಮೆಂಟ್ ನಲ್ಲಿ ನೀಡಿರುವ outside loan ಮಾಹಿತಿಯು ಸರಿಯಾಗಿದೆಯೇ ಎಂದು ಪರಿಶೀಲಿಸಿ.

ಇನ್ನು ಆಸ್ತಿ ಪಡೆಯುವ ಮುನ್ನ ಈ ಹಿಂದ ಇದ್ದ ಮಾಲೀಕನ ಸಂಪೂರ್ಣ ಕುಟುಂಬ ಆಸ್ತಿ ಮಾರಾಟ ಮಾಡಲು ಒಪ್ಪಿಗೆ ನೀಡಿದೆಯೇ ಎಂದು ಪರಿಶೀಲಿಸಿ.

ಇನ್ನು ಪ್ರಾಪರ್ಟಿ ಯಲ್ಲಿ ಯಾವುದೇ ರಿಪೇರಿಗಳು ಇದೆಯೇ ಎಂದು ಸಹ ಪರಿಶೀಲಿಸಿ.

ಪ್ರಾಪರ್ಟಿ ಮಾಲೀಕರ ಪರಿಶೀಲನೆ ತುಂಬಾ ಮುಖ್ಯ, ಪ್ರಾಪರ್ಟಿ ಒಬ್ಬರ ಹೆಸರಲ್ಲಿ ಇದೆಯೇ ಅಥವಾ ಬೇರೆ ಇನ್ನಾರೂ ಈ ಪ್ರಾಪರ್ಟಯ ಮಾಲ್ವೀಕತ್ವವನ್ನು ಹೊಂದಿದ್ದಾರೆ ಎಂದು ಪರಿಶೀಲಿಸಿ.

Bank Auction ಹೇಗೆ ನಡೆಯುತ್ತೆ ಮತ್ತು ಪ್ರಾಪರ್ಟಿ ಗಳನ್ನ ಹೇಗೆ ಚೆಕ್ ಮಾಡಬೇಕು ಎಂದು ತಿಳಿಯೋಣ:

ಮೊದಲಿಗೆ google ನಲ್ಲಿ E-Auction india ವೆಬ್ಸೈಟ್ ಗೆ ಭೇಟಿ ನೀಡಿ. ಹೊಸ ಮುಖಪುಟವು ತೆರೆಯುತ್ತದೆ.

ಅಲ್ಲಿ ನೀವು Find ur Dream property ಎಂದು ನಿಮಗೇ ಕಾಣಿಸಿಕೊಳ್ಳುತ್ತದೆ. ಅಲ್ಲಿ ನಿಮ್ಮ ID, ನಿಮಗೇ ಯಾವ ರೀತಿಯ ಪ್ರಾಪರ್ಟಿ ಬೇಕು ಅನ್ನುವುದನ್ನು , ಬ್ಯಾಂಕ್ ಹೆಸರು ಹಾಗೂ ಇನ್ನಿತರೇ ಕೇಳಿರುವ ಮಹಿತಿಯನ್ನೂ ನಮೂದಿಸಿ search ಕ್ಲಿಕ್ ಮಾಡಿ .

ನಂತರ ನಿಮ್ಮ ಬಜೆಟ್ ಅನ್ನು ಅಲ್ಲಿ ನಮೂದಿಸಿ, ಅಂದರೆ ಕನಿಷ್ಠ ಮೊತ್ತ ಮತ್ತು ಗರಿಷ್ಠ ಮೊತ್ತ ವನ್ನು ನಮೂದಿಸಿ.

ಇಲ್ಲಿ ನೀವು Bank Auction day ವಿವರಗಳನ್ನು ಪರಿಶೀಲಿಸಬಹುದು.

ಸ್ನೇಹಿತರೇ, ಹರಾಜಿನ ಆಸ್ತಿಯನ್ನು ಖರೀದಿಸುವ ಮೊದಲು ಮೇಲೆ ನೀಡಿರುವ ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ಪರಿಶೀಲಿಸಿ.
ಆಸ್ತಿಯ ವಿವರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಲಾಗಿದೆ. ಯಾವುದೇ ಸಮಸ್ಯೆ ಇದ್ದರೆ ಮೊದಲೇ ಗಮನಿಸಿ ಮತ್ತು ಪರಿಹರಿಸಿ.ಆಸ್ತಿಯ ಮೇಲೆ ಯಾವುದಾದರೂ ಸಮಸ್ಯೆ ಇದ್ದರೆ, ಅದನ್ನು ಪರಿಹರಿಸಲು ಕಾನೂನು ಸಲಹೆ ಪಡೆಯಿರಿ. ಸಮಸ್ಯೆಯನ್ನು ಪರಿಹರಿಸಿದರೆ ಆಸ್ತಿಯನ್ನು ಖರೀದಿಸಬೇಡಿ. ಯಾವುದೇ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.
ಎಲ್ಲಾ ಮಾಹಿತಿಯನ್ನು ಪೂರ್ಣವಾಗಿ ಪರಿಶೀಲಿಸಿದ ನಂತರ ಖರೀದಿಸುವ ನಿರ್ಧಾರವನ್ನು ತೆಗೆದುಕೊಳ್ಳಿ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!