ಪ್ರಧಾನ ಮಂತ್ರಿ ಸೂರ್ಯೋದಯ ಯೋಜನೆಗೆ ಅರ್ಜಿ ಸಲ್ಲಿಸಿ, ಉಚಿತ ವಿದ್ಯುತ್ ಪಡೆಯಿರಿ

solar subsidy scheme

ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆ(Prime Minister Surya Ghar Yojana), ಒಂದು ಕೋಟಿ ಕುಟುಂಬಗಳಿಗೆ ಉಚಿತ ವಿದ್ಯುತ್(Free Electricity). ಏನೀದು ಪಿಎಂ ಸೂರ್ಯ ಘರ್ ಯೋಜನೆ? ಇದಕ್ಕೆ ಆರ್ಜಿ ಹೇಗೆ ಸಲ್ಲಿಸಬೇಕು? ಮತ್ತು ಈ ಯೋಜನೆಗೆ ಸಂಬಂಧಿಸದ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ತಿಳಿಯಲು ವರದಿಯನ್ನು ತಪ್ಪದೆ ಕೊನೆಯವರೆಗೂ ಸಂಪೂರ್ಣವಾಗಿ ಓದಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ(PM Surya ghar free Electricity Yojana):

ಫೆಬ್ರವರಿ 13 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದ ಈ ಯೋಜನೆಯುದೇಶದ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಗುರಿಯನ್ನು ಹೊಂದಿದೆ.

ಈ ಯೋಜನೆಯನ್ನು ‘ಪ್ರಧಾನಿ ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ’ ಎಂದು ಕರೆಯಲಾಗುತ್ತದೆ. ಕೇಂದ್ರ ಸಚಿವ ಅನುರಾಗ್ ಠಾಕೂರ್ ಈ ಯೋಜನೆಯನ್ನು ಘೋಷಿಸಿದರು ಮತ್ತು ಫಲಾನುಭವಿಗಳಿಗೆ 300 ಯೂನಿಟ್ ಉಚಿತ ವಿದ್ಯುತ್(300 unit free current) ಒದಗಿಸಲಾಗುವುದು ಎಂದು ಹೇಳಿದರು.

ಈ ಯೋಜನೆ ಸೌರ ಶಕ್ತಿ(solar power) ಪರಿಸರ ವ್ಯವಸ್ಥೆಯನ್ನು ಉತ್ತಮಗೊಳಿಸುತ್ತದೆ ಎಂದು ಅವರು ಹೇಳಿದರು. ಉತ್ಪಾದನೆ, ಸಾಗಣೆ, ಪೂರೈಕೆ ಸರಪಳಿ, ಮಾರಾಟ, ಸ್ಥಾಪನೆ ಮತ್ತು ಇತರ ಸೇವೆಗಳಲ್ಲಿ ಸುಮಾರು 17 ಲಕ್ಷ ನೇರ ಉದ್ಯೋಗಗಳು ಸೃಷ್ಟಿಸಲ್ಪಡುವ ನಿರೀಕ್ಷೆಯಿದೆ ಎಂದು ಉತ್ಸಾಹದಿಂದ ಹೇಳಿದರು. ಈ ಯೋಜನೆಯು ದೇಶದಲ್ಲಿ ಸೌರ ಶಕ್ತಿಯ ಬಳಕೆಯನ್ನು ಹೆಚ್ಚಿಸಲು ಮತ್ತು ಕಾರ್ಬನ್ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

whatss

ಸರ್ಕಾರದಿಂದ ಭರ್ಜರಿ ಸಬ್ಸಿಡಿ :

ಸೂರ್ಯನ ಬೆಳಕಿನ ಶಕ್ತಿಯನ್ನು ವಿದ್ಯುತ್ ಉತ್ಪಾದಿಸುವ ಗುರಿಯೊಂದಿಗೆ ಭಾರತ ಸರ್ಕಾರವು PM ಸೂರ್ಯ ಘರ್ ಯೋಜನೆ ಪ್ರಾರಂಭಿಸಿದ್ದು. ಈ ಯೋಜನೆಯಡಿ, ನಿಮ್ಮ ಮನೆಯ Roof top ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಳ್ಳಲು ಸರ್ಕಾರದಿಂದ ಸಬ್ಸಿಡಿ(Subsidy )ಪಡೆಯಬಹುದು.

ಕೇಂದ್ರ ಸರ್ಕಾರ ಘೋಷಿಸಿದಂತೆ, 75,021 ಕೋಟಿ ರೂಪಾಯಿ ವೆಚ್ಚದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೇಲ್ಛಾವಣಿಯ ಸೌರಶಕ್ತಿ ವ್ಯವಸ್ಥೆಗಳನ್ನು ಅಳವಡಿಸುವ ಈ ಯೋಜನೆಯು ಪ್ರತಿ ಕುಟುಂಬಕ್ಕೆ 1 kW ಸಿಸ್ಟಮ್‌ಗೆ ₹ 30,000, 2 kW ಸಿಸ್ಟಮ್‌ಗೆ ₹ 60,000 ಮತ್ತು 3 kW ಅಥವಾ ಹೆಚ್ಚಿನ ಸಿಸ್ಟಮ್‌ಗಳಿಗೆ ₹ 78,000 ಕೇಂದ್ರ ಹಣಕಾಸು ನೆರವು ನೀಡುತ್ತದೆ.

ಯೋಜನೆಯ ಘೋಷಣೆಯ ಸಂದರ್ಭದಲ್ಲಿ, ಪ್ರಧಾನ ಮಂತ್ರಿ, ಸಬ್ಸಿಡಿಗಳನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗುವುದು. ಯೋಜನೆಯು ಜನರ ಮೇಲೆ ಯಾವುದೇ ಹೆಚ್ಚುವರಿ ವೆಚ್ಚದ ಹೊರೆ ಉಂಟುಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರವು ಖಚಿತಪಡಿಸಿಕೊಳ್ಳುತ್ತದೆ ಎಂದು ಭರವಸೆ ನೀಡಿದ್ದಾರೆ.

ಅರ್ಜಿ ಸಲ್ಲಿಸುವ ವಿಧಾನ:

ಹಂತ 1: pmsuryaghar.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.

ಹಂತ 2: “ಮೇಲ್ಛಾವಣಿಯ ಸೌರ ಅನ್ವಯಿಸು” ಕ್ಲಿಕ್ ಮಾಡಿ.

ಹಂತ 3: “ಇಲ್ಲಿ ನೋಂದಾಯಿಸಿ” ಕ್ಲಿಕ್ ಮಾಡಿ.

ಹಂತ 4: ನಿಮ್ಮ ರಾಜ್ಯ, ಜಿಲ್ಲೆ ಮತ್ತು ಇತರ ವೈಯಕ್ತಿಕ

ಹಂತ 5: ಮಾಹಿತಿಯನ್ನು ಭರ್ತಿ ಮಾಡಿ. ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮತ್ತು ಕ್ಯಾಪ್ಚಾ ಕೋಡ್ ನಮೂದಿಸಿ, ಲಾಗಿನ್ ಮಾಡಿ.

ಹಂತ 6: ಫಾರ್ಮ್‌ನಲ್ಲಿ ನಿಮ್ಮ ವಿವರಗಳನ್ನು ಭರ್ತಿ ಮಾಡಿ ಮತ್ತು ಸಲ್ಲಿಸಿ.

ಹಂತ 7: ನಿಮ್ಮ ವಿದ್ಯುತ್ ವಿತರಣಾ ಕೇಂದ್ರದಿಂದ ಅನುಮೋದನೆ ಪಡೆಯಿರಿ.

ಹಂತ 8: ಸೋಲಾರ್ ಪ್ಯಾನೆಲ್‌ಗಳನ್ನು ಸ್ಥಾಪಿಸಿ.ಸೋಲಾರ್ ಪ್ಲಾಂಟ್ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸಿ.

ಹಂತ 9: ವಿದ್ಯುತ್ ಕಂಪನಿಯ ಪರಿಶೀಲನೆಗೆ ಕಾಯಿರಿ.
ಪರೀಶೀಲನೆ ನಂತರ commissioning certificate ಪಡೆಯುತ್ತಿರಿ .

ಹಂತ 10 : ತದನಂತರ ಬ್ಯಾಂಕ್ ಮತ್ತು ಚೆಕ್(Cheque)ಡೀಟೇಲ್ಸ್ ಗಳನ್ನು ಸಲ್ಲಿಸಿ.

ಹಂತ 11:  30 ದಿನಗಳಲ್ಲಿ ನಿಮ್ಮ ಖಾತೆಗೆ ಸಬ್ಸಿಡಿ ಜಮೆಯಾಗುತ್ತದೆ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!