New PAN Card: ಹೊಸ ಪಾನ್ ಕಾರ್ಡ್ ಕೇವಲ ಹತ್ತು ನಿಮಿಷದಲ್ಲಿ ಮೊಬೈಲ್ ನಲ್ಲೆ ಪಡೆಯಿರಿ, ಹೀಗೆ ಅರ್ಜಿ ಸಲ್ಲಿಸಿ

new e pan kannada

ಪ್ಯಾನ್‌ ಕಾರ್ಡ್‌ಗೆ ಅರ್ಜಿಯನ್ನು ಉಚಿತವಾಗಿ ಸಲ್ಲಿಸುವುದು ಹೇಗೆ?, ಮತ್ತು ಅದನ್ನು ಡೌನ್ಲೋಡ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಕೆಳಗೆ ನೀಡಲಾಗಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಉಚಿತ e – PAN ಪಡೆಯಿರಿ – Get Free e-PAN Card 

ಆದಾಯ ತೆರಿಗೆ ಇಲಾಖೆಯಿಂದ  ಎಲ್ಲಾ ನಾಗರಿಕರಿಗೆ ಉಚಿತವಾಗಿ ಪ್ಯಾನ್ ಕಾರ್ಡ್ ಗಳನ್ನು ಒದಗಿಸುತ್ತಿದೆ, ನಿಮ್ಮ ಹತ್ತಿರ ಇನ್ನೂ ಪ್ಯಾನ್ ಕಾರ್ಡ್ ಇಲ್ಲ ಎಂದರೆ ನೀವು ಸುಲಭವಾಗಿ ಮೊಬೈಲ್ ಫೋನ್ ಮೂಲಕ ಸ್ವತಃ ನೀವೇ ಅರ್ಜಿ ಸಲ್ಲಿಸಿ  ಉಚಿತವಾಗಿ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳ ಬಹುದು. ಪ್ಯಾನ್ ಕಾರ್ಡ್ 10 ಆಲ್ಫಾನ್ಯೂಮರಿಕ್(Alphanumeric) ಸಂಖ್ಯೆಗಳಿಂದ ಮಾಡಲ್ಪಟ್ಟಿದೆ, ಇದು ಹಣಕಾಸಿನ ವಹಿವಾಟುಗಳಿಗಾಗಿ ಭಾರತದ ಪ್ರತಿಯೊಬ್ಬ ನಾಗರಿಕನಿಗೆ(citizen) ಅಗತ್ಯವಾಗಿರುತ್ತದೆ. ಪ್ಯಾನ್ ಕಾರ್ಡ್ ನಮಗೆ ಬಹಳ ಮುಖ್ಯವಾದ ದಾಖಲೆಯಾಗಿ ಕೆಲಸ ಮಾಡುತ್ತದೆ. ತ್ವರಿತ(Instant) ಇ-ಪ್ಯಾನ್ ಕಾರ್ಡ್ ಮಾಡಲು ಸರಳವಾದ ಪ್ರಕ್ರಿಯೆಯ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ , ಇದನ್ನು ಯಾವುದೇ ಶುಲ್ಕ(fee)ವನ್ನು ಪಾವತಿಸದೆ ಮಾಡಬಹುದು. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ತ್ವರಿತ ಪ್ಯಾನ್ ಕಾರ್ಡ್ ಆನ್‌ಲೈನ್‌ನಲ್ಲಿ ಲಭ್ಯವಿದೆ.

ಏಕೆ ಪ್ಯಾನ್ ಕಾರ್ಡ್ ನಮಗೆ ಬೇಕು?:

ಪ್ಯಾನ್ ಕಾರ್ಡ್ ಒಂದು ಮುಖ್ಯವಾದ ದಾಖಲೆಯಂತೆ ಕಾರ್ಯನಿರ್ವಹಿಸುತ್ತದೆ, ಪ್ಯಾನ್ ಕಾರ್ಡ್ ಇಲ್ಲದೇ ಇದ್ದರೆ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ.
ಪ್ಯಾನ್ ಕಾರ್ಡ್ ಗುರುತಿನ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ನೀವು ಇನ್ನೂ ಪ್ಯಾನ್ ಕಾರ್ಡ್ ಮಾಡದಿದ್ದರೆ, ಈಗ ನೀವು ಮನೆಯಲ್ಲಿ ಕುಳಿತು ಇನ್‌ಸ್ಟಂಟ್ ಇ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು .

ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ :

ಹಂತ 1: ಮೊದಲನೆಯದಾಗಿ, ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ನ ಅಧಿಕೃತ ವೆಬ್‌ಸೈಟ್ ಗೆ ಹೋಗಬೇಕು, ಅದಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ.

011

ಹಂತ 2: ನಂತರ ಪುಟ ತೆರೆಯುತ್ತದೆ ಅದರ Get New e-PANಎಂಬ ಆಯ್ಕೆಯನ್ನು ಮಾಡಿ, ನಂತರ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಹಂತ 3: ಮುಂದುವರೆದು, ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಬೇಕು, ಕ್ಯಾಪ್ಚಾ ಕೋಡ್ ಅನ್ನು ಭರ್ತಿ ಮಾಡಬೇಕು ಮತ್ತು ದೃಢೀಕರಣದ ಮೇಲೆ ಚೆಕ್ ಮಾಡಬೇಕು.

ಹಂತ 4: ನಂತರ ಗೆಟ್ ಓಟಿಪಿ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ಇದರ ನಂತರ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಗೆ OTP ಬರುತ್ತದೆ, OTP ಅನ್ನು ನಮೂದಿಸಿ.

ಹಂತ 5: ನಂತರ ನಿಮಗೆ ಆಧಾರ್ ಕಾರ್ಡಿನ ಮಾಹಿತಿಯು ದೊರೆಯುತ್ತದೆ, ಅಲ್ಲಿ ನೀವು ನಿಮ್ಮ ಮಾಹಿತಿಗಳನ್ನು ಪರಿಶೀಲಿಸಿಕೊಂಡ ನಂತರ ದೃಢೀಕರಿಸುವ ಬಾಕ್ಸ್ ಮೇಲೆ ಚೆಕ್ ಮಾಡಿ.

ಹಂತ 6: ನಂತರ, ಸಲ್ಲಿಸು ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.

E PAN ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿದ ನಂತರ 10 ನಿಮಿಷಗಳ ಬಳಿಕ ಅಥವಾ ಗರಿಷ್ಠ 24 ಗಂಟೆಗಳ ನಂತರ ನೀವು ನಿಮ್ಮ PAN ಕಾರ್ಡ್ ಅನ್ನು ಡೌನ್‌ಲೋಡ್ ಮಾಡಬಹುದು. ಹೀಗೆ ನೀವು ಉಚಿತವಾಗಿ ಮನೆಯಲ್ಲಿಯೇ ಕುಳಿತುಕೊಂಡು ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು ಅಷ್ಟೇ ಅಲ್ಲದೆ ಅದನ್ನು ನೀವು ಡೌನ್ಲೋಡ್ ಮಾಡಿಕೊಂಡು ಉಪಯೋಗಿಸಬಹುದು. ಇಂತಹ ಉತ್ತಮವಾದ ಮಾಹಿತಿಯನ್ನು ಹೊಂದಿರುವ ಈ ಲೇಖನವನ್ನು ಕೂಡಲೇ ನಿಮ್ಮ ಎಲ್ಲಾ ಸ್ನೇಹಿತ ಮಿತ್ರರಿಗೆ ಹಾಗೂ ಬಂಧುಗಳಿಗೆ ಶೇರ್ ಮಾಡಿ, ಧನ್ಯವಾದಗಳು.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ 👉 WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ

tel share transformed

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ..

WhatsApp Group Join Now
Telegram Group Join Now

Related Posts

Leave a Reply

Your email address will not be published. Required fields are marked *

error: Content is protected !!