train cancelled

ಬ್ರೇಕಿಂಗ್: ‘ಮೊಂಥಾ’ ಚಂಡಮಾರುತದ ಪ್ರಭಾವ: ಹಲವಾರು ರೈಲುಗಳ ಸಂಚಾರ ಸ್ಥಗಿತ, ಇಲ್ಲಿದೆ ಸಂಪೂರ್ಣ ವಿವರ!

WhatsApp Group Telegram Group

ಮೊಂಥಾ ಚಂಡಮಾರುತದ ಕಾರಣದಿಂದಾಗಿ ದಕ್ಷಿಣ ಮಧ್ಯ ರೈಲ್ವೆ (SCR) ಸೋಮವಾರದಂದು ಕೆಲವು ರೈಲು ಸೇವೆಗಳನ್ನು ರದ್ದುಗೊಳಿಸಿರುವುದಾಗಿ ಘೋಷಿಸಿದೆ. ರದ್ದಾಗಿರುವ ರೈಲುಗಳ ಸಂಪೂರ್ಣ ವಿವರ ಇಲ್ಲಿದೆ.

ಮಂಗಳವಾರ ಬೆಳಗಿನ ಜಾವದಲ್ಲಿ ‘ತೀವ್ರ ಚಂಡಮಾರುತ’ದ ರೂಪಕ್ಕೆ ತೀವ್ರಗೊಂಡಿರುವ ಮೊಂಥಾ ಚಂಡಮಾರುತದ ಹಿನ್ನೆಲೆಯಲ್ಲಿ, ಒಡಿಶಾದ ವಿಶಾಖಪಟ್ಟಣಂ ಮಾರ್ಗವಾಗಿ ಹಾದುಹೋಗುವ ಅನೇಕ ರೈಲುಗಳನ್ನು ರದ್ದುಪಡಿಸಲಾಗಿದೆ. ಈ ಕುರಿತು ಸಂಪೂರ್ಣವಾದ ಮಾಹಿತಿ ಕೆಳಗೆ ಕೊಡಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಭುವನೇಶ್ವರದ ಪೂರ್ವ ಕರಾವಳಿ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ದೀಪಕ್ ರೌತ್, “ಪ್ರಯಾಣಿಕರಿಗೆ ಅನಾನುಕೂಲತೆ ಆಗದಂತೆ ತಡೆಯಲು ನಾವು ವಿಶಾಖಪಟ್ಟಣಂ ಮಾರ್ಗವಾಗಿ ಹೋಗುವ 32 ರೈಲುಗಳನ್ನು ರದ್ದುಗೊಳಿಸಿದ್ದೇವೆ. ನಾಳೆ (ಮಂಗಳವಾರ) ಸಂಜೆ 4 ಗಂಟೆಯ ಒಳಗೆ ರೈಲು ಸಂಚಾರವನ್ನು ಪುನರಾರಂಭಿಸಲು ನಾವು ನಮ್ಮಿಂದ ಸಾಧ್ಯವಾದಷ್ಟು ಪ್ರಯತ್ನಿಸುತ್ತಿದ್ದೇವೆ; ಸ್ಥಳೀಯ ಮೆಮು ರೈಲುಗಳು ಮತ್ತು ನಾಳೆ ಹೊರಡಬೇಕಿದ್ದ ಇತರೆ ರೈಲುಗಳನ್ನು ರದ್ದುಗೊಳಿಸಲಾಗಿದೆ. ರದ್ದಾಗಿರುವ ರೈಲುಗಳ ಪಟ್ಟಿಯನ್ನು ಸಾಮಾಜಿಕ ಜಾಲತಾಣಗಳು ಮತ್ತು ನಮ್ಮ ಡಿಜಿಟಲ್ ವೇದಿಕೆಗಳಲ್ಲಿ ಪ್ರಕಟಿಸಲಾಗಿದೆ…” ಎಂದು ತಿಳಿಸಿದರು.

“ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ, ಟಾಟಾನಗರ-ಎರ್ನಾಕುಲಂ ಎಕ್ಸ್‌ಪ್ರೆಸ್‌ನ ಮಾರ್ಗವನ್ನು ಬದಲಾಯಿಸಲಾಗಿದೆ. ಹಾಗೆಯೇ, ಭುವನೇಶ್ವರ-ಜಗದಲ್‌ಪುರ ಎಕ್ಸ್‌ಪ್ರೆಸ್ ಮತ್ತು ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಆಗಿರುವ ರೂರ್ಕೆಲಾ-ಜಗದಲ್‌ಪುರ ಎಕ್ಸ್‌ಪ್ರೆಸ್ – ಈ ಎರಡು ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ” ಎಂದೂ ದೀಪಕ್ ರೌತ್ ಅವರು ಮಾಹಿತಿ ನೀಡಿದರು.

WhatsApp Image 2025 09 05 at 11.51.16 AM 1

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

 

WhatsApp Group Join Now
Telegram Group Join Now

Popular Categories