Picsart 25 10 16 21 48 00 395 scaled

ಭಾರತದ ಸರ್ಕಾರಿ ಬ್ಯಾಂಕ್‌ಗಳಲ್ಲಿ ಹೊಸ ವಿಲೀನ: ಐಒಬಿ, ಸಿಬಿಐ, ಬಿಒಐ, ಬಿಒಎಂ ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನದ ಸಾಧ್ಯತೆ

Categories:
WhatsApp Group Telegram Group

ಭಾರತದ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಇತ್ತೀಚೆಗೆ ಪ್ರಮುಖ ಬದಲಾವಣೆಗಳು ಆಗುತ್ತಿವೆ. 2017 ರಿಂದ 2020 ರವರೆಗೆ ಕೇಂದ್ರ ಸರ್ಕಾರವು(Central government) ಸಾರ್ವಜನಿಕ ವಲಯದ ಬ್ಯಾಂಕುಗಳ ವಿಲೀನದ ಮೂಲಕ ಬ್ಯಾಂಕಿಂಗ್‌ ವಲಯದಲ್ಲಿ ಭಾರೀ ಪುನರ್‌ಸಂರಚನೆ ನಡೆಸಿತ್ತು. ಈ ಕ್ರಮದ ಫಲವಾಗಿ 27 ಸರ್ಕಾರಿ ಬ್ಯಾಂಕುಗಳು 12 ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನಗೊಂಡವು. ಉದಾಹರಣೆಗೆ, ವಿಜಯಾ ಬ್ಯಾಂಕ್‌, ಸಿಂಡಿಕೇಟ್ ಬ್ಯಾಂಕ್‌, ಕಾರ್ಪೋರೇಷನ್ ಬ್ಯಾಂಕ್‌ಗಳು  ದೊಡ್ಡ ಬ್ಯಾಂಕುಗಳೊಂದಿಗೆ ವಿಲೀನಗೊಂಡವು. ಇದರಿಂದಾಗಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಸಂಖ್ಯೆ 2017 ರಲ್ಲಿ 27 ರಿಂದ 12 ಕ್ಕೆ ಇಳಿದಿತ್ತು ಜೊತೆಯಲ್ಲಿ ಜಾಗತಿಕ ಮಟ್ಟದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಲು ಕೂಡ ಸಹಾಯವಾಗಿತ್ತು. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..

ಆದರೆ, ಇದೀಗ ಕೇಂದ್ರ ಸರ್ಕಾರವು ಮತ್ತೊಂದು ಸುತ್ತಿನ ಸಾರ್ವಜನಿಕ ಬ್ಯಾಂಕ್‌ ವಿಲೀನ ಪ್ರಕ್ರಿಯೆಯನ್ನು ಆರಂಭಿಸಿದೆ. ಈ ಹಂತದಲ್ಲಿ ವಿಶೇಷವಾಗಿ ಐಒಬಿ (Indian Overseas Bank), ಸಿಬಿಐ (Central Bank of India), ಬಿಒಐ (Bank of India) ಮತ್ತು ಬಿಒಎಂ (Bank of Maharashtra) ಬ್ಯಾಂಕುಗಳು ಗಮನಕ್ಕೆ ಬಂದಿವೆ. ಸರ್ಕಾರಿ ಮೂಲಗಳ ಪ್ರಕಾರ, ಈ ನಾಲ್ಕು ಸಣ್ಣ ಪಿಎಸ್‌ಬಿಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಬ್ಯಾಂಕ್ ಆಫ್ ಬರೋಡಾ (BOB), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಂಬ ದೊಡ್ಡ, ಬಲವಾದ ಬ್ಯಾಂಕ್‌ಗಳೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ.

ಈ ಯೋಜನೆಯ ಹಿಂದಿನ ಉದ್ದೇಶವು ಪಿಎಸ್‌ಬಿ (Public Sector Bank) ಲ್ಯಾಂಡ್‌ಸ್ಕೇಪ್ ಸುಧಾರಿಸಲು ಜೊತೆಯಲ್ಲಿ ಕಡಿಮೆ ಹಾಗೂ ಬಲವಾದ ಘಟಕಗಳನ್ನು ನಿರ್ಮಿಸುವ ಮೂಲಕ ಸಾಲ ವಿಸ್ತರಣೆ ಮತ್ತು ಹಣಕಾಸು ವಲಯದಲ್ಲಿ ಸ್ಥಿರತೆಯನ್ನು ಒದಗಿಸುವುದಾಗಿದೆ. ಸರ್ಕಾರವು FY27 (2026-27) ರೊಳಗೆ ಚರ್ಚೆಗಳನ್ನು ಅಂತಿಮಗೊಳಿಸುವ ಉದ್ದೇಶವನ್ನು ಹೊಂದಿದೆ. ಮೊದಲು ಸಂಪುಟ ಮಟ್ಟದಲ್ಲಿ  ಹಿರಿಯ ಅಧಿಕಾರಿಗಳು ಪರಿಶೀಲಿಸುತ್ತಾರೆ ಮತ್ತು ನಂತರ ಪ್ರಧಾನ ಮಂತ್ರಿ ಕಚೇರಿ ಪರಿಶೀಲಿಸುತ್ತದೆ ಎಂದಿದ್ದಾರೆ.

ಇತ್ತೀಚಿನ ವಿಲೀನದ ನವೀಕರಣದ ಹಿನ್ನೆಲೆ ನೀತಿ ಆಯೋಗದ ಶಿಫಾರಸುಗಳ ವಿರುದ್ಧವಾಗಿ, ಐಒಬಿ ಮತ್ತು ಸಿಬಿಐ ಖಾಸಗೀಕರಣಕ್ಕೆ ಅಥವಾ ಪುನರಚನೆಗೆ ತೊಡಗಿಸುವ ಬದಲು, ದೊಡ್ಡ ಬ್ಯಾಂಕ್‌ಗಳೊಂದಿಗೆ ವಿಲೀನ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಬಲವನ್ನು ಹೆಚ್ಚಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಬಲವಾದ, ಸಮರ್ಥ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ಮಿಸಲು ಹೊರಟಿದೆ.

ಒಟ್ಟಾರೆಯಾಗಿ, ಬಲವಾದ ಬ್ಯಾಂಕುಗಳ ರಚನೆ, ಸಾಲ ವಿಸ್ತರಣೆಗೆ ಸುಧಾರಿತ ಸೌಲಭ್ಯ, ಮತ್ತು ಸಾರ್ವಜನಿಕ ಹಣಕಾಸು ವ್ಯವಸ್ಥೆಯಲ್ಲಿ ಸ್ಥಿರತೆ ಒದಗಿಸುವ ಗುರಿ ಈ ವಿಲೀನದ ಪ್ರಮುಖ ಉದ್ದೇಶಗಳಾಗಿವೆ. FY27 ರೊಳಗೆ ಅಧಿಕೃತ ಘೋಷಣೆಗಳೊಂದಿಗೆ ಈ ಪ್ರಕ್ರಿಯೆ ಜಾರಿಯಾಗುವುದೆಂದು ನಿರೀಕ್ಷಿಸಲಾಗಿದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories