ಇತ್ತೀಚಿನ ಕಾಲದಲ್ಲಿ ನಗರ ಜೀವನಶೈಲಿ, ಸಕ್ಕರೆ ಹಾಗೂ ಸಂಸ್ಕರಿಸಿದ ಆಹಾರಗಳ ಅಧಿಕ ಸೇವನೆ, ಸ್ಮಾರ್ಟ್‌ಫೋನ್(Smart phone) ಮತ್ತು ಕಂಪ್ಯೂಟರ್ ಮುಂದೆ ಹೆಚ್ಚು ಸಮಯ ಕಳೆಯುವುದು ಮತ್ತು ದೈಹಿಕ ವ್ಯಾಯಾಮದ ಕೊರತೆಯಿಂದಾಗಿ ಮಧುಮೇಹ (Diabetes) ಸಮಸ್ಯೆ ದೇಶಾದ್ಯಾಂತ ಹೆಚ್ಚುತ್ತಿದೆ. ಆಹಾರ ಪದ್ಧತಿಯಲ್ಲಿನ ಈ ಬದಲಾವಣೆ ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಹಾಗೂ ರಕ್ತದಲ್ಲಿ ಸಕ್ಕರೆ ಪ್ರಮಾಣದ ನಿಯಂತ್ರಣದಲ್ಲಿ ವ್ಯತ್ಯಯಗಳನ್ನು ಉಂಟುಮಾಡುತ್ತಿದೆ. ಈ ಪರಿಸ್ಥಿತಿಯಲ್ಲಿ ಹಾಗಲಕಾಯಿ (Bitter Gourd) ಎಂಬ ತರಕಾರಿ ಮಧುಮೇಹ ನಿರ್ವಹಣೆಯಲ್ಲಿ ಸಹಾಯಕವಾದ ಪ್ರಕೃತಿ ಆಧಾರಿತ ಪರಿಹಾರವೆಂದು ಪರಿಗಣಿಸಲಾಗಿದೆ. ಹಾಗಿದ್ದರೆ ಮಧುಮೇಹ ನಿರ್ವಹಣೆಗೆ ಹಾಗಲಕಾಯಿ ಹೇಗೆ ಸಹಾಯ ಮಾಡುತ್ತದೆ ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ..
ಹಾಗಲಕಾಯಿಯು ಮೆದುಳಿನ ಗ್ರಂಥಿ ಮತ್ತು ಇನ್ಸುಲಿನ್(Insulin) ಉತ್ಪಾದನೆ ಮೇಲೆ ಧನಾತ್ಮಕ ಪರಿಣಾಮ ಬೀರುತ್ತದೆ. ಇದರಲ್ಲಿರುವ ಪೊಟ್ಯಾಸಿಯಮ್, ವಿಟಮಿನ್ ಎ, ಬಿ, ಸಿ ಮತ್ತು ರಿಬೋಫ್ಲಾವಿನ್ ಮೆದುಳಿನ ಬೀಟಾ ಕೋಶಗಳನ್ನು ಬಲಪಡಿಸುತ್ತವೆ, ಇದರಿಂದ ದೇಹ ಸರಿಯಾದ ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದಿಸಲು ಸಹಾಯವಾಗುತ್ತದೆ. ಪಾಲಿಪೆಪ್ಟೈಡ್-ಪಿ ಮತ್ತು ಚರಂಟಿನ್ ಮುಂತಾದ ಹೈಪೊಗ್ಲಿಸಿಮಿಕ್ (Hypoglycemic) ಗುಣಲಕ್ಷಣಗಳು ರಕ್ತದಲ್ಲಿ ಸಕ್ಕರೆಯನ್ನು ನಿಯಂತ್ರಿಸಲು ಶಕ್ತಿಶಾಲಿಯಾದ ನೆರವನ್ನ ನೀಡುತ್ತವೆ.
ಹಾಗಲಕಾಯಿ ರಸ ತಯಾರಿಸುವುದು ಹೇಗೆ?:
ಸಾಮಗ್ರಿಗಳು,
2 ಹಾಗಲಕಾಯಿ(2 bitter gourds)
1 ಸೌತೆಕಾಯಿ1 (cucumber)
3 ಟೊಮೆಟೊ(3 tomatoes)
ವಿಧಾನ,
ಎಲ್ಲಾ ತರಕಾರಿಗಳನ್ನು ಚೆನ್ನಾಗಿ ತೊಳೆಯಿರಿ.
ತೊಳೆದ ತರಕಾರಿಗಳನ್ನು ಮಿಕ್ಸಿಗೆ ಹಾಕಿ ಜ್ಯೂಸ್ ಮಾಡಿಕೊಳ್ಳಿ.
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.(ರುಚಿಗೆ ನಿಂಬೆ ರಸ ಕೂಡ ಸೇರಿಸಬಹುದು).
ಅಗತ್ಯ ಸೂಚನೆಗಳು:
ಕೇವಲ ಹಾಗಲಕಾಯಿ ರಸ ಮಧುಮೇಹವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಿಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಒತ್ತಡ ನಿಯಂತ್ರಣ ಮತ್ತು ವೈದ್ಯಕೀಯ ಸಲಹೆ ಜೊತೆಗೆ ಇದನ್ನು ಸೇವಿಸುವುದರಿಂದ ಅರೋಗ್ಯ ಕಾಪಾಡಿಕೊಳ್ಳಬಹುದು.
ಹಾಗಲಕಾಯಿ ರಸದ ಪ್ರಯೋಜನಗಳು ಯಾವುವು?:
ಇನ್ಸುಲಿನ್ ಉತ್ಪಾದನೆ ಹೆಚ್ಚಿಸಲು ನೆರವಾಗುತ್ತದೆ.
ಹೊಟ್ಟೆ ನೋವು, ಉರುಳು ಸಮಸ್ಯೆ ಕಡಿಮೆ ಮಾಡುತ್ತದೆ.
ದೇಹದ ಕೊಬ್ಬಿನ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಹೃದಯ ಹಾಗೂ ಚರ್ಮಕ್ಕೆ ಪೋಷಕತತ್ತ್ವಗಳನ್ನು ಒದಗಿಸುತ್ತದೆ.
ಸೋಂಕುಗಳಿಗೆ ಪ್ರತಿರೋಧಶಕ್ತಿ ಹೆಚ್ಚಿಸುತ್ತದೆ.
ಗಮನಿಸಿ:
ಈ ಮಾಹಿತಿಯನ್ನು ಸಾಮಾನ್ಯ ಆರೋಗ್ಯ ಸಲಹೆಯಾಗಿ ನೀಡಲಾಗಿದೆ. ಮಧುಮೇಹದ ಸಮಸ್ಯೆ ಇರುವವರು ಯಾವುದೇ ಹೊಸ ಆಹಾರ ಅಥವಾ ಮನೆಮದ್ದು ಪ್ರಯೋಗಿಸುವ ಮುನ್ನ, ತಜ್ಞ ವೈದ್ಯರ ಸಲಹೆ ಪಡೆಯುವುದು ಅಗತ್ಯ.

ಪ್ರತಿದಿನ ಇದೇ ರೀತಿಯ ಉಪಯುಕ್ತ ಮಾಹಿತಿ ಮತ್ತು ನ್ಯೂಸ್ ಅಲರ್ಟ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ ? WhatsApp Channel ನೀಡ್ಸ್ ಆಫ್ ಪಬ್ಲಿಕ್ ವಾಟ್ಸಾಪ್ ಚಾನೆಲ್ ಸೇರಿಕೊಳ್ಳಿ
ಈ ಮಾಹಿತಿಗಳನ್ನು ಓದಿ
ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

“ಕೃಷ್ಣಸಾಗರಿ ಅವರು NeedsOfPublic.in ನ ‘ಉದ್ಯೋಗ ಮತ್ತು ವೃತ್ತಿ ಮಾರ್ಗದರ್ಶನ’ (Job Updates & Career) ವಿಭಾಗದ ಮುಖ್ಯಸ್ಥರಾಗಿದ್ದಾರೆ. ಉದ್ಯೋಗ ಮಾಹಿತಿ ಕ್ಷೇತ್ರದಲ್ಲಿ 4 ವರ್ಷಗಳ ವೃತ್ತಿಪರ ಅನುಭವ ಹೊಂದಿರುವ ಇವರು, ಸರ್ಕಾರಿ ಉದ್ಯೋಗದ ಅಧಿಸೂಚನೆಗಳು (Govt Job Notifications), ಖಾಸಗಿ ವಲಯದ ನೇಮಕಾತಿಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ಅಪ್ಡೇಟ್ಗಳನ್ನು ಒದಗಿಸುವಲ್ಲಿ ಪರಿಣತಿ ಹೊಂದಿದ್ದಾರೆ. ಉದ್ಯೋಗಾಕಾಂಕ್ಷಿಗಳಿಗೆ ಕೇವಲ ಅಧಿಕೃತ ಮೂಲಗಳಿಂದ ಪರಿಶೀಲಿಸಿದ (verified) ಮತ್ತು ನಿಖರವಾದ ಉದ್ಯೋಗದ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವುದು ಸಾಗರಿ ಅವರ ಪ್ರಮುಖ ಗುರಿಯಾಗಿದೆ.”


WhatsApp Group




