Picsart 25 10 11 23 41 28 275 scaled

JioPC ಮೂಲಕ AI ಶಿಕ್ಷಣದಲ್ಲಿ ಕ್ರಾಂತಿ.! 4 ವಾರಗಳಲ್ಲಿ ಆರಂಭದಿಂದ ಪ್ರಾಯೋಗಿಕ ಜ್ಞಾನ

Categories:
WhatsApp Group Telegram Group

ಇಂದಿನ ಡಿಜಿಟಲ್ ಯುಗದಲ್ಲಿ ಕೃತಕ ಬುದ್ಧಿಮತ್ತೆ (Artificial Intelligence – AI) ಕೇವಲ ತಂತ್ರಜ್ಞಾನದ ವಿಷಯವಲ್ಲ, ಇದು ಶಿಕ್ಷಣ, ಉದ್ಯೋಗ, ಸೃಜನಾತ್ಮಕತೆ ಮತ್ತು ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿದೆ. ವಿದ್ಯಾರ್ಥಿಗಳಿಂದ ಪ್ರೊಫೆಷನಲ್‌ಗಳವರೆಗೆ ಎಲ್ಲರೂ ಎಐ(AI) ಬಗ್ಗೆ ತಿಳಿದಿರಬೇಕಾದ ಕಾಲ ಬಂದಿದೆ. ಈ ಹಿನ್ನೆಲೆಯಲ್ಲಿ ಭಾರತದಲ್ಲಿಯೂ ಎಐ ಶಿಕ್ಷಣವನ್ನು ಜನಸಾಮಾನ್ಯರಿಗೇ ತಲುಪಿಸುವ ಉದ್ದೇಶದಿಂದ ರಿಲಯನ್ಸ್ ಜಿಯೋ ಹೊಸ ಹೆಜ್ಜೆ ಇಟ್ಟಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ.

ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ತಂದ ಜಿಯೋ ಇದೀಗ ತಂತ್ರಜ್ಞಾನ ಶಿಕ್ಷಣ ಕ್ಷೇತ್ರಕ್ಕೂ ಕಾಲಿಡುತ್ತಿದೆ. ಇದೀಗ ಜಿಯೋ ಉಚಿತವಾಗಿ ಲಭ್ಯವಿರುವ ಎಐ ಕ್ಲಾಸ್ ರೂಮ್ ಕೋರ್ಸ್ ಆರಂಭಿಸಿದೆ. ಈ ಕೋರ್ಸ್‌ನ ಉದ್ದೇಶ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾಮಾನ್ಯ ನಾಗರಿಕರು ಎಐ ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳಬಹುದು.

ಉಚಿತ ಮತ್ತು ಆರಂಭಿಕರಿಗೆ ಸೂಕ್ತವಾದ ಎಐ ಕೋರ್ಸ್:

ರಿಲಯನ್ಸ್ ಜಿಯೋ ಈಗಾಗಲೇ ದೂರಸಂಪರ್ಕ ಮತ್ತು ಡಿಜಿಟಲ್ ಸೇವೆಗಳ ಕ್ಷೇತ್ರದಲ್ಲಿ ಅನೇಕ ಆವಿಷ್ಕಾರಗಳ ಮೂಲಕ ತನ್ನದೇ ಆದ ಸ್ಥಾನ ನಿರ್ಮಿಸಿಕೊಂಡಿದೆ. ಈಗ ಅದೇ ದೃಷ್ಟಿಕೋನವನ್ನು ಮುಂದುವರಿಸಿ, ಎಐ ಕ್ಲಾಸ್ ರೂಮ್ ಎಂಬ ಉಚಿತ ಹಾಗೂ ಆರಂಭಿಕ ಜನಸ್ನೇಹಿ ಕೋರ್ಸ್‌ ಅನ್ನು ಎಲ್ಲರಿಗೂ ತೆರೆದಿದೆ. ಈ ಪ್ರೋಗ್ರಾಂ ಪ್ರತಿ ಕಲಿಕಾರ್ಥಿಯನ್ನು AI-Ready ಆಗಿಸಲು ವಿನ್ಯಾಸಗೊಳಿಸಲಾಗಿದೆ.

ಕೃತಕ ಬುದ್ಧಿಮತ್ತೆ ಮಕ್ಕಳು ಕಲಿಯುವ ರೀತಿಯನ್ನೂ, ಸೃಜನಾತ್ಮಕತೆಯನ್ನೂ ಬದಲಾಯಿಸುತ್ತಿದೆ. ಸರಿಯಾದ ಜ್ಞಾನ, ಕೌಶಲ್ಯ ಮತ್ತು ಉಪಕರಣಗಳು ದೊರೆತಾಗ ಎಐ ಭವಿಷ್ಯವನ್ನು ರೂಪಿಸುವ ಶಕ್ತಿಯಾಗಿದೆ. ಈ ಹಿನ್ನೆಲೆಯಲ್ಲಿ, ಜಿಯೋ ಮತ್ತು ಜಿಯೋ ಇನ್‌ಸ್ಟಿಟ್ಯೂಟ್ ಸಹಯೋಗದಲ್ಲಿ JioPC AI Classroom ಯೋಜನೆ ಆರಂಭಿಸಲಾಗಿದೆ. ಇದು ಪ್ರಮಾಣಿತ, ರಚನಾತ್ಮಕ ಮತ್ತು ಉಚಿತವಾದ ಫೌಂಡೇಶನ್ ಕೋರ್ಸ್ ಆಗಿದೆ.

ಎಲ್ಲೆಂದರಲ್ಲಿ, ಎಲ್ಲರಿಗೂ ಕಲಿಕೆ ಅವಕಾಶ:

ಈ ಕೋರ್ಸ್‌ನಲ್ಲಿ ಭಾಗವಹಿಸಲು ಯಾರಿಗೂ ವಿಶೇಷ ಉಪಕರಣ ಅಗತ್ಯವಿಲ್ಲ.
ಪರ್ಸನಲ್ ಕಂಪ್ಯೂಟರ್ (PC).
ಡೆಸ್ಕ್‌ಟಾಪ್.
ಲ್ಯಾಪ್‌ಟಾಪ್.
ಅಥವಾ Jio Set Top Box ಮೂಲಕ JioPC ಬಳಸಿ ಟೀವಿ ಮೂಲಕವೂ ಕಲಿಯಬಹುದು.
JioPC ಎಂದರೆ ಮುಂದಿನ ತಲೆಮಾರಿನ ಎಐ ಸಿದ್ಧವಾದ ಕಂಪ್ಯೂಟರ್. ಯಾವುದೇ ಸ್ಕ್ರೀನ್ ಅನ್ನು ಸುರಕ್ಷಿತ ಮತ್ತು ಸದಾ ಅಪ್ಡೇಟ್ ಆಗಿರುವ ಕಂಪ್ಯೂಟರ್ ಆಗಿ ಪರಿವರ್ತಿಸುವ ಈ ವ್ಯವಸ್ಥೆ ಕಲಿಕೆಗೆ ಅತ್ಯಂತ ಸೂಕ್ತವಾಗಿದೆ.

JioPC ಬಳಕೆದಾರರಿಗೆ ವಿಶೇಷ ಅನುಕೂಲಗಳು:

JioPC ಬಳಕೆದಾರರಿಗೆ ಕೋರ್ಸ್‌ನಲ್ಲಿ ಹೆಚ್ಚುವರಿ ಪ್ರಯೋಜನಗಳು ಲಭ್ಯ,
ಉನ್ನತ ಮಟ್ಟದ ಎಐ ಸಲಕರಣೆಗಳ ಬಳಕೆ.
ವಿಸ್ತೃತ ಕಲಿಕಾ ರೋಡ್‌ಮ್ಯಾಪ್.
Jio Institute ನಿಂದ ಪ್ರಮಾಣಪತ್ರ.
ಇತರರಿಗೆ ಬ್ಯಾಡ್ಜ್ ನೀಡಲಾಗುತ್ತದೆ.

ನಾಲ್ಕು ವಾರಗಳಲ್ಲಿ ಕಲಿಕೆಗೆ ಅವಕಾಶ:

ಈ ಕೋರ್ಸ್ ಒಟ್ಟು 4 ವಾರಗಳ ಪಠ್ಯಕ್ರಮ ಹೊಂದಿದ್ದು, ಎಐ ನ ಪ್ರಾಥಮಿಕ ತತ್ವಗಳಿಂದ ಪ್ರಾಯೋಗಿಕ ಪ್ರಾಜೆಕ್ಟ್ ತನಕ ಮಾರ್ಗದರ್ಶನ ನೀಡುತ್ತದೆ,
ವಾರ 1: ಎಐ ಬೇಸಿಕ್ಸ್ ಮತ್ತು ಪ್ರಾಂಪ್ಟ್ ಎಂಜಿನಿಯರಿಂಗ್.
ವಾರ 2: ಕಲಿಕೆ ಮತ್ತು ಸೃಜನಾತ್ಮಕತೆಗೆ ಎಐ ಬಳಕೆ.
ವಾರ 3: ಬಿಲ್ಡಿಂಗ್ ಮತ್ತು ಕಮ್ಯುನಿಕೇಷನ್‌ಗೆ ಎಐ ಉಪಯೋಗ.
ವಾರ 4: ಎಐ ಕ್ಯಾಪ್‌ಸ್ಟೋನ್ ಪ್ರಾಜೆಕ್ಟ್ ನೈಜ ಸಮಸ್ಯೆಗಳಿಗೆ ಎಐ ಪರಿಹಾರ.
ಈ ಹಂತಗಳಲ್ಲಿ ಕಲಿಕಾರ್ಥಿಗಳು ಸ್ಟೋರಿ, ಪ್ರೆಸೆಂಟೇಶನ್ ಮತ್ತು ಡಿಸೈನ್ ಸೃಷ್ಟಿಸುವುದನ್ನು ಕಲಿಯುತ್ತಾರೆ. ಜೊತೆಗೆ ನೈಜ ಸಮಸ್ಯೆಗಳಿಗೆ ಎಐ ಉಪಯೋಗಿಸುವ ಮಾರ್ಗಗಳನ್ನು ಕಲಿತುಕೊಳ್ಳುತ್ತಾರೆ.

ಒಟ್ಟಾರೆಯಾಗಿ, ಜಿಯೋ ಆರಂಭಿಸಿರುವ ಈ ಉಚಿತ ಎಐ ಕ್ಲಾಸ್ ರೂಮ್ ಕೋರ್ಸ್ ಭಾರತದ ಡಿಜಿಟಲ್ ಶಿಕ್ಷಣದತ್ತ ಮಹತ್ತರ ಹೆಜ್ಜೆಯಾಗಿದೆ. ಯಾವುದೇ ಹಿನ್ನಲೆಯಿಲ್ಲದವರಿಗೂ ಎಐ ಕಲಿಯಲು ಇದು ಸುಲಭ ಮತ್ತು ಪ್ರಾಯೋಗಿಕ ಮಾರ್ಗವನ್ನು ಒದಗಿಸುತ್ತದೆ. ವಿದ್ಯಾರ್ಥಿಗಳು, ಶಿಕ್ಷಕರು, ಉದ್ಯೋಗಿಗಳು ಅಥವಾ ತಂತ್ರಜ್ಞಾನದಲ್ಲಿ ಆಸಕ್ತಿ ಇರುವ ಯಾರೇ ಆಗಿರಲಿ ಈ ಕೋರ್ಸ್ ಮಾಡಿಕೊಳ್ಳಬಹುದು.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories