Picsart 25 10 06 23 46 18 198 scaled

PM Kisan: ಸರ್ಕಾರದ ಹೊಸ ನಿಯಮ, ಪಿಎಂ ಕಿಸಾನ್ 21ನೇ ಕಂತಿನ ₹2000/- ಹಣ ಈ ರೈತರಿಗೆ ಇಲ್ಲ..! 

Categories:
WhatsApp Group Telegram Group

ಭಾರತದಲ್ಲಿ ಕೃಷಿ ಕ್ಷೇತ್ರವು (Agricultural Field) ಕೇವಲ ಉದ್ಯೋಗವಲ್ಲ, ಅದು ಕೋಟಿ ಕೋಟಿ ರೈತರ ಜೀವನಾಧಾರ, ದೇಶದ ಆರ್ಥಿಕತೆಗೆ ಬಹಳ ಮುಖ್ಯ ಮತ್ತು ಆಹಾರ ಭದ್ರತೆಗೆ ಬುನಾದಿ. ಹವಾಮಾನ ಬದಲಾವಣೆ, ಮಳೆ ಕೊರತೆ, ಬೆಲೆ ಏರಿಳಿತ, ಕೀಟ-ರೋಗಗಳು ಮುಂತಾದ ಅನೇಕ ಸವಾಲುಗಳ ನಡುವೆ ರೈತರು ದಿನನಿತ್ಯ ಹೋರಾಡುತ್ತಿದ್ದಾರೆ. ಈ ಹಿನ್ನೆಲೆಗಳಲ್ಲಿ, ರೈತರ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು  ಹಾಗೂ ಅವರ ಬದುಕಿಗೆ ಆರ್ಥಿಕ ರಕ್ಷಣೆಯನ್ನು ನೀಡುವ ನಿಟ್ಟಿನಲ್ಲಿ ಭಾರತ ಸರ್ಕಾರವು ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಅದರಲ್ಲಿ ಪ್ರಮುಖವಾದದ್ದು “ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PM-KISAN)”. ಈ ಯೋಜನೆಯಡಿ ರೈತರಿಗೆ ವರ್ಷಕ್ಕೆ ನೇರ ನಗದು ಸಹಾಯವನ್ನು ನೀಡಲಾಗುತ್ತದೆ. ಪ್ರತಿ ವರ್ಷ 3 ಕಂತುಗಳಲ್ಲಿ ₹6,000 ಹಣವನ್ನು ರೈತರ ಬ್ಯಾಂಕ್ ಖಾತೆಗಳಿಗೆ (Farmers bank account) ನೇರವಾಗಿ ಜಮೆ ಮಾಡಲಾಗುತ್ತದೆ. 2019ರಲ್ಲಿ ಆರಂಭವಾದ ಈ ಯೋಜನೆಯಡಿ ಈಗಾಗಲೇ ಲಕ್ಷಾಂತರ ರೈತರು ಪ್ರಯೋಜನ ಪಡೆಯುತ್ತಿದ್ದಾರೆ.

ಇತ್ತೀಚೆಗೆ 20ನೇ ಕಂತು ಯಶಸ್ವಿಯಾಗಿ ವಿತರಣೆಗೊಂಡಿದ್ದು, ಈಗ 21ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ ರೈತರು. ಆದರೆ ಎಲ್ಲರಿಗೂ ಈ ಬಾರಿ ಹಣ ಸಿಗುವುದಿಲ್ಲ. ಸರ್ಕಾರ (Government) ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿದ್ದು, ನಿಯಮ ಉಲ್ಲಂಘಿಸಿದ ಅಥವಾ ದಾಖಲೆಗಳಲ್ಲಿ ತಪ್ಪುಗಳಿರುವ ರೈತರಿಗೆ 21ನೇ ಕಂತು ತಡೆಹಿಡಿಯಲಾಗುತ್ತಿದೆ.

ಪಿಎಂ ಕಿಸಾನ್ 21ನೇ ಕಂತಿನ ಹಣ ಬಿಡುಗಡೆ ದಿನಾಂಕ:

ಇಲ್ಲಿಯವರೆಗೆ ಯೋಜನೆಯ 20 ಕಂತುಗಳನ್ನು ವಿತರಿಸಲಾಗಿದೆ. 20ನೇ ಕಂತು 2025ರ ಆಗಸ್ಟ್ 2 ರಂದು ಬಿಡುಗಡೆಗೊಂಡಿದ್ದು, 9 ಕೋಟಿಗೂ ಹೆಚ್ಚು ರೈತರಿಗೆ ಪ್ರಯೋಜನ ತಲುಪಿದೆ. ವಿಶೇಷ ಸಂದರ್ಭಗಳಲ್ಲಿ, ಪಂಜಾಬ್, ಉತ್ತರಾಖಂಡ ಮತ್ತು ಹಿಮಾಚಲ ಪ್ರದೇಶದ ಸುಮಾರು 2.7 ಮಿಲಿಯನ್ ರೈತರಿಗೆ 21ನೇ ಕಂತು ಮುಂಚಿತವಾಗಿ ನೀಡಲಾಗಿದೆ. ಏಕೆಂದರೆ ಅಲ್ಲಿ ಪ್ರವಾಹ, ಭೂಕುಸಿತ ಮತ್ತು ಮಳೆಯಿಂದ ದೊಡ್ಡ ಪ್ರಮಾಣದ ನಷ್ಟ ಸಂಭವಿಸಿತ್ತು.

ಮತ್ತಿತರ ರಾಜ್ಯಗಳ ರೈತರು ಇನ್ನೂ 21ನೇ ಕಂತಿನ ನಿರೀಕ್ಷೆಯಲ್ಲಿದ್ದಾರೆ. ಯೋಜನೆಯ ಪ್ರತಿ ಕಂತು ಸಾಮಾನ್ಯವಾಗಿ ನಾಲ್ಕು ತಿಂಗಳಿಗೊಮ್ಮೆ (4 Month’s) ಬಿಡುಗಡೆಯಾಗುತ್ತದೆ. ಈ ಲೆಕ್ಕಾಚಾರದ ಪ್ರಕಾರ, 21ನೇ ಕಂತು 2025ರ ನವೆಂಬರ್ ತಿಂಗಳಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆ. ಆದರೆ ಅಧಿಕೃತ ದಿನಾಂಕವನ್ನು ಸರ್ಕಾರ ಇನ್ನೂ ಘೋಷಿಸಿಲ್ಲ.

ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳು:

ಸರ್ಕಾರ ಈ ಬಾರಿ ಯೋಜನೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಕಠಿಣವಾಗಿ ಅನುಸರಿಸುತ್ತಿದ್ದು, ಈ ಕೆಳಗಿನ ರೈತರಿಗೆ 21ನೇ ಕಂತು ದೊರೆಯುವುದಿಲ್ಲ

ಅನರ್ಹ ರೈತರು:
ಯೋಜನೆಗೆ ತಪ್ಪಾಗಿ ಸೇರಿಕೊಂಡಿರುವವರನ್ನು ಗುರುತಿ ಅವರ ದಾಖಲೆಗಳನ್ನು (Documents) ರದ್ದುಗೊಳಿಸಲಾಗುತ್ತದೆ ಮತ್ತು ಮುಂದಿನ ಎಲ್ಲಾ ಕಂತುಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ಇ-ಕೆವೈಸಿ (e-KYC) ಪೂರ್ಣಗೊಳಿಸದವರು:
ಇ-ಕೆವೈಸಿ ಮಾಡದೇ ಇದ್ದರೆ ಕಂತು ಪಾವತಿಯಲ್ಲಿ ತೊಂದರೆ ಉಂಟಾಗುತ್ತದೆ. ಸರ್ಕಾರ ಈಗ ಇ-ಕೆವೈಸಿ ಅನ್ನು ಕಡ್ಡಾಯಗೊಳಿಸಿದೆ.

ಭೂ ಪರಿಶೀಲನೆ ಪ್ರಕ್ರಿಯೆ ಪೂರ್ಣಗೊಳಿಸದವರು:
ರೈತರ ಭೂಮಿಯ ದಾಖಲೆಗಳನ್ನು (Land Documents) ಪರಿಶೀಲಿಸಿ ದೃಢೀಕರಿಸುವ ಪ್ರಕ್ರಿಯೆ ಪೂರ್ಣಗೊಳ್ಳದೇ ಇದ್ದರೆ, ಕಂತು ಬಿಡುಗಡೆ ವಿಳಂಬವಾಗಬಹುದು ಅಥವಾ ತಡೆಹಿಡಿಯಬಹುದು.

ಆಧಾರ್ ಮತ್ತು ಬ್ಯಾಂಕ್ ಖಾತೆ ಲಿಂಕ್ ಮಾಡದವರು / DBT ಸಕ್ರಿಯವಿಲ್ಲದವರು:
ರೈತರ ಆಧಾರ್ ಕಾರ್ಡ್(Farmer’s Adhar Card) ಬ್ಯಾಂಕ್ ಖಾತೆಗೆ ಲಿಂಕ್ ಆಗಿರಬೇಕು ಮತ್ತು ಡೈರೆಕ್ಟ್ ಬೆನೆಫಿಟ್ ಟ್ರಾನ್ಸ್ಫರ್ (DBT) ಆಯ್ಕೆಯು ಸಕ್ರಿಯವಾಗಿರಬೇಕು. ಇಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ.

ಒಟ್ಟಾರೆಯಾಗಿ, ರೈತರು ತಮ್ಮ ದಾಖಲೆಗಳು, ಇ-ಕೆವೈಸಿ ಹಾಗೂ ಬ್ಯಾಂಕ್ ಲಿಂಕ್ ಪ್ರಕ್ರಿಯೆಗಳನ್ನು(Bank Link Process) ತಕ್ಷಣ ಪೂರ್ಣಗೊಳಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಈ ಬಾರಿ ಸರ್ಕಾರದಿಂದ ಬರುವ 21ನೇ ಕಂತಿನ ಹಣ ಕೈ ತಪ್ಪುವ ಸಾಧ್ಯತೆ ಇದೆ.

WhatsApp Image 2025 09 05 at 11.51.16 AM 12

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories