Picsart 25 10 02 00 16 24 526 scaled

ಎಲ್‌ಪಿಜಿ ಸಿಲಿಂಡರ್ ಡೆಲಿವರಿ ಗ್ಯಾರಂಟಿ: ದೇಶಾದ್ಯಂತ ಜಾರಿಗೆ ಬರಲಿದೆ ಏಕೀಕೃತ ವಿತರಣಾ ವ್ಯವಸ್ಥೆ

Categories:
WhatsApp Group Telegram Group

ಇಂದಿನ ಕಾಲದಲ್ಲಿ ಅಡುಗೆ ಅನಿಲವು (Cooking gas) ಪ್ರತಿಯೊಬ್ಬರ ಮನೆಯ ಅವಿಭಾಜ್ಯ ಅಗತ್ಯವಾಗಿದೆ. ದೇಶದ ಕೋಟ್ಯಾಂತರ ಜನರು ದಿನನಿತ್ಯದ ಅಡುಗೆಗಾಗಿ ಎಲ್‌ಪಿಜಿ ಸಿಲಿಂಡರ್‌ಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಸಿಲಿಂಡರ್‌ಗಳನ್ನು ಬುಕ್ (Cylinder book) ಮಾಡಿದ ನಂತರ ಮನೆಗೆ ತಲುಪಲು ಸಮಯ ತೆಗೆದುಕೊಳ್ಳುವುದು, ಕೆಲವೊಮ್ಮೆ ವಿಳಂಬವಾಗುವುದು, ಕೆಲವೊಮ್ಮೆ ತುರ್ತು ಸಂದರ್ಭಗಳಲ್ಲಿ ಸಿಲಿಂಡರ್ ಲಭ್ಯವಾಗದಿರುವುದು ಜನರಲ್ಲಿ ಅಸಮಾಧಾನ ಉಂಟುಮಾಡುತ್ತದೆ. ಈ ಸಮಸ್ಯೆಗಳನ್ನು ಪರಿಹರಿಸಿ, ಎಲ್‌ಪಿಜಿ (LPG) ವಿತರಣೆಯನ್ನು ಮತ್ತಷ್ಟು ವೇಗವಾದ ಮತ್ತು ಪಾರದರ್ಶಕಗೊಳಿಸಲು ಕೇಂದ್ರ ಸರ್ಕಾರ ದೊಡ್ಡ ಮಟ್ಟದ ಬದಲಾವಣೆಗಳನ್ನು ಕೈಗೊಂಡಿದೆ. ಆ ಬದಲಾವಣೆಯಾವುದು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ ಗೆ ಈ ಕೂಡಲೇ ಜಾಯಿನ್ ಆಗಲು ಇಲ್ಲಿ ಕ್ಲಿಕ್ ಮಾಡಿ

ಏಕೀಕೃತ ವಿತರಣಾ ವ್ಯವಸ್ಥೆ :

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ (PNGRB) ದೇಶಾದ್ಯಂತ ಹೊಸ ‘ಎಲ್‌ಪಿಜಿ ಇಂಟರ್‌ಆಪರೇಬಲ್ ಸರ್ವಿಸ್ ಡೆಲಿವರಿ ಪ್ರೇಮ್‌ವರ್ಕ್’ ಜಾರಿಗೊಳಿಸಲು ತೀರ್ಮಾನಿಸಿದೆ. ಇದರ ಅಡಿಯಲ್ಲಿ ಈಗಾಗಲೇ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಪ್ರಮುಖ ಸರ್ಕಾರಿ ಕಂಪನಿಗಳು,
ಇಂಡೇನ್ (IOC)
ಭಾರತ್ ಗ್ಯಾಸ್ (BPCL)
ಎಚ್‌ಪಿ (HPCL)
ಇನ್ನು ಮುಂದೆ ಒಂದೇ ರಾಷ್ಟ್ರೀಯ ನೆಟ್‌ವರ್ಕ್‌ನ ಭಾಗವಾಗಿ ಕಾರ್ಯನಿರ್ವಹಿಸಲಿವೆ.

ಈ ವ್ಯವಸ್ಥೆಯ ಅಡಿಯಲ್ಲಿ, ಗ್ರಾಹಕರು ಯಾವುದೇ ಕಂಪನಿಯ ಸಿಲಿಂಡರ್ ಬುಕ್ ಮಾಡಿದರೂ, 24 ಗಂಟೆಗಳೊಳಗೆ (24 Hour’s) ಆರ್ಡರ್ ಪೂರೈಸುವ ಗ್ಯಾರಂಟಿ ದೊರೆಯಲಿದೆ. ನಿರ್ದಿಷ್ಟ ಕಂಪನಿಯ ವಿತರಕರು ಆ ಅವಧಿಯಲ್ಲಿ ಸಿಲಿಂಡರ್ ಪೂರೈಸಲು ವಿಫಲರಾದರೆ, ಆ ಆರ್ಡರ್ ಸ್ವಯಂಚಾಲಿತವಾಗಿ ಹತ್ತಿರದ ಇತರ ಕಂಪನಿಯ ಡೀಲರ್‌ಗೆ ವರ್ಗಾವಣೆಯಾಗುತ್ತದೆ. ಇಂತಹ ಮಾದರಿಯನ್ನು ಹಲವಾರು ದೇಶಗಳು ಈಗಾಗಲೇ ಅನುಸರಿಸುತ್ತಿದ್ದು, ಅದೇ ಮಾದರಿಯನ್ನು ಭಾರತದಲ್ಲೂ ಜಾರಿಗೆ ತರುವುದಾಗಿದೆ.

ಈ ಮೂಲಕ ಗ್ರಾಹಕರು ಕಂಪನಿ ಬದಲಿಸುವ ಸ್ವಾತಂತ್ರ್ಯವನ್ನು ಪಡೆಯಲಿದ್ದಾರೆ. ಅಂದರೆ, ಗ್ರಾಹಕರು ಮುಂದೆ ಯಾವ ಕಂಪನಿಯಿಂದ ಸಿಲಿಂಡರ್ (Cylinder) ಬರುತ್ತದೆ ಎಂಬುದರ ಬಗ್ಗೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಇದರ ಮುಖ್ಯ ಉದ್ದೇಶ ಸಮಯಕ್ಕೆ ಸರಿಯಾಗಿ ಸಿಲಿಂಡರ್ ತಲುಪಿಸುವುದು.

ಉಜ್ವಲ ಯೋಜನೆಗೆ ಹೊಸ ಬೂಸ್ಟ್ :

ನವ ರಾತ್ರಿಯ ಶುಭ ಸಂದರ್ಭದಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್‌ದೀಪ್ ಸಿಂಗ್ ಪುರಿ ಅವರು ಮತ್ತೊಂದು ಮಹತ್ವದ ಘೋಷಣೆ ಮಾಡಿದ್ದಾರೆ. ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ 2025-26 ರಲ್ಲಿ ಹೆಚ್ಚುವರಿ 25 ಲಕ್ಷ ಉಚಿತ ಎಲ್‌ಪಿಜಿ (free LPG) ಸಂಪರ್ಕಗಳನ್ನು ಒದಗಿಸಲು ಅನುಮೋದನೆ ನೀಡಲಾಗಿದೆ. ಇದರಿಂದ ಬಡತನ ರೇಖೆಗಿಂತ ಕೆಳಗಿನ ಕುಟುಂಬಗಳ ಮಹಿಳೆಯರು ಸ್ವಚ್ಛ ಇಂಧನವನ್ನು ಬಳಸಲು ಸಾಧ್ಯವಾಗಲಿದೆ.

ಈಗಾಗಲೇ ಉಜ್ವಲ ಯೋಜನೆಯಡಿ ಫಲಾನುಭವಿಗಳಿಗೆ ನೀಡಲಾಗುತ್ತಿರುವ ₹300 ಸಬ್ಸಿಡಿ (Subsidy) ಮುಂದುವರಿಯಲಿದೆ. ಅಂದರೆ, 14.2 ಕೆಜಿ ಗೃಹ ಬಳಕೆಯ ಸಿಲಿಂಡರ್ ದರದಲ್ಲಿ ಬಡ ಕುಟುಂಬಗಳಿಗೆ ಕಡಿತ ಲಭ್ಯವಾಗುತ್ತದೆ.

ಸಿಲಿಂಡರ್ ದರ ಬದಲಾವಣೆಗಳು:

ವಾಣಿಜ್ಯ ಬಳಕೆ: ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ₹51.50 ಇಳಿಸಿ, ಈಗಿನ ಬೆಲೆಯನ್ನು ₹1580ಕ್ಕೆ ತಂದಿವೆ.
ಗೃಹ ಬಳಕೆ: ಕೇಂದ್ರ ಸರ್ಕಾರ (Central Government) ಗೃಹ ಬಳಕೆಯ 14.2 ಕೆಜಿ ಎಲ್‌ಪಿಜಿ ಸಿಲಿಂಡರ್ ದರವನ್ನು ₹50 ಹೆಚ್ಚಿಸಿದ್ದು, ಈಗ ಹೊಸ ದರ ₹853 ಆಗಿದೆ. ಈ ಏರಿಕೆ ಉಜ್ವಲ ಹಾಗೂ ಉಜ್ವಲೇತರ ಇಬ್ಬರಿಗೂ ಅನ್ವಯವಾಗಲಿದೆ.
ಸಚಿವರ ಪ್ರಕಾರ, ಸಿಲಿಂಡರ್ ದರವನ್ನು ಪ್ರತಿ 15 ದಿನಗಳಿಗೊಮ್ಮೆ ಅಥವಾ ತಿಂಗಳಿಗೆ ಒಮ್ಮೆ ಪರಿಶೀಲಿಸಲಾಗುತ್ತದೆ.

ಒಟ್ಟಾರೆಯಾಗಿ, ಹೊಸ ಏಕೀಕೃತ ಎಲ್‌ಪಿಜಿ ವಿತರಣಾ ವ್ಯವಸ್ಥೆ(Unified LPG distribution system) ಭಾರತದಲ್ಲಿ ಗ್ರಾಹಕರ ಅನುಭವವನ್ನು ಸಂಪೂರ್ಣವಾಗಿ ಬದಲಾಯಿಸುವ ನಿರೀಕ್ಷೆಯಿದೆ. 48 ಗಂಟೆಗಳ ಬದಲು 24 ಗಂಟೆಗಳೊಳಗೆ ಸಿಲಿಂಡರ್ ತಲುಪುವ ಗ್ಯಾರಂಟಿ, ಕಂಪನಿಗಳ ನಡುವಿನ ಪರಸ್ಪರ ಸಹಕಾರ ಮತ್ತು ಉಜ್ವಲ ಯೋಜನೆಯ ವಿಸ್ತರಣೆ (Cooperation and expansion of Ujjwala scheme) ಇವೆಲ್ಲವೂ ಸಾಮಾನ್ಯ ಗ್ರಾಹಕರಿಗೆ ಖಂಡಿತವಾಗಿಯೂ ಖುಷಿ ಕೊಡುವ ಸುದ್ದಿ ಆಗಿದೆ.

WhatsApp Image 2025 09 05 at 10.22.29 AM 13

ಈ ಮಾಹಿತಿಗಳನ್ನು ಓದಿ

ದಯವಿಟ್ಟು ಗಮನಿಸಿ: ನೀಡ್ಸ್ ಆಫ್ ಪಬ್ಲಿಕ್ ತನ್ನ ಓದುಗರಿಗೆ ನಿಖರವಾದ ಮತ್ತು ಅಧಿಕೃತ ಮಾಹಿತಿಗಳನ್ನು ಮಾತ್ರ ಪ್ರಕಟಿಸುತ್ತದೆ. ಇಲ್ಲಿ ನಾವು ಯಾವುದೇ ಅನಧಿಕೃತ ಮತ್ತು ಸುಳ್ಳು ಮಾಹಿತಿಯನ್ನು ಬಿತ್ತರಿಸುವುದಿಲ್ಲ.

WhatsApp Group Join Now
Telegram Group Join Now

Popular Categories